ಮಣ್ಣು ಮಾಲಿನ್ಯ (Soil pollution):

   ಭೂಮಿಯ ಮೇಲೆ ಪದರದಲ್ಲಿ ಸಾವಯವ ಮತ್ತು ಆಸಾವಯವ ವಸ್ತುಗಳಿಂದ ಕೂಡಿದ ಒಂದು ಪದರವಿದೆ ಇದನ್ನು ಮಣ್ಣು ಎಂದು ಕರೆಯಲಾಗುತ್ತದೆ. ಭೂಮಿಯ ಮೇಲೆ ಮಣ್ಣಿನ ಪದರವು ನೈಸರ್ಗಿಕ ಕ್ರಿಯೆಗಳಿಂದ ಕೋಟ್ಯಾಂತರ ವರ್ಷಗಳ ಅವಧಿಯಲ್ಲಿ ನಿರ್ಮಿತವಾಗಿದೆ. ಇದು ಸಸ್ಯಗಳ ಬೆಳವಣಿಗೆಗೆ ಅಗತ್ಯವಾದ ಪೋಷಕಾಂಶಗಳನ್ನು ಪೂರೈಸುವುದು. ಸಸ್ಯಗಳನ್ನು ಪೋಷಿಸುವ ಮಣ್ಣು ಜೈವಿಕ ಮಂಡಲದ ಅಸ್ಥಿತ್ವಕ್ಕೆ ಕಾರಣವಾಗಿರುವುದು.

ಮಾನವನ ಅನೇಕ ಕಾರ್ಯಗಳಿಂದ ಮಣ್ಣಿನಲ್ಲಿ ಉಂಟಾಗುವ ಹಲವಾರು ಬದಲಾವಣೆ ಹಾಗೂ ಗುಣಮಟ್ಟದಲ್ಲಿ ಹಾಳಾಗಿರುವಿಕೆಯನ್ನು ಮಣ್ಣಿನ ಮಾಲಿನ್ಯವೆಂದು ಕರೆಯುವರು. ಮಣ್ಣಿನ ಮಾಲಿನ್ಯವು ಉತ್ಪಾದನಾ ಶಕ್ತಿಯನ್ನು ಕುಂಠಿತಗೊಳಿಸಿ, ಅದರಲ್ಲಿನ ಜೀವಿಗಳನ್ನು ನಾಶಗೊಳಿಸಿ ಅದರ ಮುನರ್‌ನಿರ್ಮಾಣ ಕ್ರಿಯೆಯನ್ನು ಹಾಳು ಮಾಡುವುದು.

ಮಣ್ಣು ಮಾಲಿನ್ಯಕ್ಕೆ ಕಾರಣಗಳು :
ಮಣ್ಣಿನ ಸವೆತ, ಹೆಚ್ಚುವರಿ ನೀರಿನ ಬಳಕೆ, ಜೈವಿಕ ವ್ಯವಸ್ಥೆಯ ನಾಶ, ವಾಯುಮಾಲಿನ್ಯ, ರಾಸಾಯನಿಕ ಗೊಬ್ಬರ, ಔಷಧಿ ಮತ್ತು ಕೀಟನಾಶಕಗಳ ಬಳಕೆ, ಕೈಗಾರಿಕಾ ತ್ಯಾಜ್ಯಗಳು ಮತ್ತು ಕೃಷಿಯ ತ್ಯಾಜ್ಯಗಳು ಮಣ್ಣಿನ ಮಾಲಿನ್ಯವನ್ನು ಉಂಟು ಮಾಡುತ್ತವೆ.

ಪರಿಣಾಮಗಳು (Impact of Soll pollution):

ಪ್ರಕೃತಿಯು ಒಳಗೊಂಡಿರುವ ಅತಿ ಮುಖ್ಯ ಸಂಪನ್ಮೂಲಗಳಲ್ಲಿ ಮಣ್ಣು ಒಂದಾಗಿದೆ. ಇದರ ಮಾಲಿನ್ಯವು ಅನೇಕ ದುಷ್ಪರಿಣಾಮಗಳನ್ನುಂಟು ಮಾಡುತ್ತದೆ.

1. ಬೆಳೆಗಳ ಉತ್ಪಾದನೆ ಕಡಿಮೆಯಾಗುತ್ತದೆ.

2. ಕಲುಷಿತವಾದ ಮಣ್ಣಿನಿಂದ ಉತ್ಪಾದಿಸಿದ ಆಹಾರವು ಮಾನವನ ಆರೋಗ್ಯವನ್ನು ಹಾಳು ಮಾಡುತ್ತದೆ. 3. ಮಣ್ಣಿನ ಮಾಲಿನ್ಯದಿಂದ ಕೆಲವು ಪ್ರದೇಶಗಳಲ್ಲಿ ನೀರಿನ ಕೊರತೆ ಉಂಟಾಗಿ ಪಾಣಿಸಂಕುಲಗಳು ಸಾವನ್ನಪುತ್ತವೆ.

4. ಮಣ್ಣಿನ ಮಾಲಿನ್ಯವು ಜಲಮಾಲಿನ್ಯಕ್ಕೆ ಕಾರಣವಾಗಿ ಮಣ್ಣಿನ ಸವೆತದಿಂದ ಜಲಾಶಯಗಳಲ್ಲಿ ಹೂಳು ತುಂಬುವುದು.

ತಡೆಗಟ್ಟುವ ವಿಧಾನ (Preventine methods): ಭೂ ಮಾಲಿನ್ಯದ ನಿಯಂತ್ರಣ ಮಾಡಲು ಕೈಗಾರಿಕೆಗಳಿಂದ ಬರಲಾದ ತ್ಯಾಜ್ಯಗಳನ್ನು ಸಂಸ್ಕರಿಸಿ ಅವು ನೆಲವನ್ನು ಸೇರದಂತೆ ಮಾಡಬೇಕು. ಹಾಗೆಯೇ ಜೈವಿಕ ಮೂಲದಿಂದ ಬಂದ ಜೈವಿಕ ಕೀಟ ನಾಶಕಗಳು, ಜೈವಿಕ ಗೊಬ್ಬರಗಳನ್ನು ಬಳಸಲು ಉತ್ತೇಜಿಸಿ, ಮಣ್ಣಿನ ಮಾಲಿನ್ಯವನ್ನು ಕಡಿಮೆ ಮಾಡಬಹುದು. ಮಲಿನಯುಕ್ತ ಮಣ್ಣಿನ ಸಂಸ್ಕರಣೆಗಾಗಿ ಜೈವಿಕ ಪರಿಹಾರ ಕಾರ್ಯವನ್ನು ಕೈಗೊಳ್ಳಬಹುದು.

1. ಅರಣ್ಯ ನಾಶವನ್ನು ತಡೆಗಟ್ಟುವುದು.

2. ರಾಸಾಯನಿಕ ಗೊಬ್ಬರಗಳಿಗೆ ಬದಲಾಗಿ ಜೈವಿಕ ಗೊಬ್ಬರಗಳ ಬಳಕೆ,

3, ದುಷ್ಪರಿಣಾಮ ಬೀರುವಂತಹ ಡಿಡಿಟಿ ಎಂಡೋಸಲ್ಫಾನ್‌ಗಳಂತಹ ಕೀಟನಾಶಕಗಳನ್ನು ಬಳಸದಿರುವುದು.

4. ಯೋಜಿತ ಪ್ರಮಾಣದಲ್ಲಿ ನೀರನ್ನು ಬಳಸುವುದು.

5. ಮಣ್ಣಿನ ಸವೆತವನ್ನು ನಿಯಂತ್ರಿಸಲು, ಅಡ್ಡಗಟ್ಟೆಗಳನ್ನು ನಿರ್ಮಿಸಿ, ಫಲವತ್ತತೆಯನ್ನು ಕಾಪಾಡಲು ಬೆಳೆಗಳ ಪರ್ಯಾಯ ಪದ್ಧತಿಯನ್ನು ಅನುಸರಿಸುವುದು.

ಭಾರತದಲ್ಲಿ ಮಣ್ಣಿನ ಮಾಲಿನ್ಯವನ್ನು ತಡೆಗಟ್ಟಲು ಮತ್ತು ಅದರ ಫಲವತ್ತತೆಯನ್ನು ಕಾಪಾಡಲು ಮಣ್ಣು
ಸಂರಕ್ಷಣಾ ಮಂಡಳಿ ಮತ್ತು ಒಣ ಪ್ರದೇಶಗಳ ಅಭಿವೃದ್ಧಿ ಮಂಡಳಿಗಳನ್ನು ಸ್ಥಾಪಿಸಲಾಗಿದೆ. 8.2.5. ಮಾಲಿನ್ಯದ ಮೂಲಗಳು (Sources of pollution):
umaids and (Automic Radiation pollution):
ಕೆಲವು ಮೂಲ ವಸ್ತುಗಳು ತಾವೇ ತಾವಾಗಿ ಚೈತನ್ಯವನ್ನು ಹೊರ ಚೆಲ್ಲುತ್ತವೆ. ಈ ಗುಣವನ್ನು
ವಿಕಿರಣಶೀಲತೆ
Post a Comment (0)
Previous Post Next Post