ಜಲಮಾಲಿನ್ಯ (Water Pollution):

  ನೀರು ಎಲ್ಲಾ ಬಗೆಯ ಜೀವ ಸಂಕುಲಕ್ಕೆ ಅತ್ಯಗತ್ಯ ಭೂಮಿಯು 2/3 ರಷ್ಟು ಭಾಗ ನೀರಿನಿಂದ ಕೂಡಿದೆ. ಭೂಮಿಯ 97.2 ರಷ್ಟು ನೀರು ಅವಕಾಂಶಗಳಿಂದ ಕೂಡಿದ್ದು ಉಳಿದ 2.8% ರಷ್ಟು ಮಾತ್ರ ಸಿಹಿ ನೀರಿನಿಂದ ಕೂಡಿದೆ. ಸಮುದ್ರದ ನೀರು ಆವಿಯಾಗಿ ಲವಣಾಂಶ ಬೇರ್ಪಟ್ಟು ಮಳೆಯ ರೂಪದಲ್ಲಿ ಸಿಹಿ ನೀರು ನಮಗೆ ತಲುಪುತ್ತದೆ. ಜನಸಂಖ್ಯಾ ಸ್ಫೋಟ, ಆನಿಯಂತ್ರಿತ ಕೈಗಾರಿಕೀಕರಣ, ನಗರೀಕರಣಗಳೇ ಜಲಮಾಲಿನ್ಯಕ್ಕೆ ಪ್ರಮುಖ ಕಾರಣಗಳು, ಮಾನವನ ಯಾವುದೇ ಚಟುವಟಿಕೆಯಿಂದ ನೀರಿನ ಗುಣಮಟ್ಟ ಏರುಪೇರಾದಲ್ಲಿ ಅದನ್ನು ಜಲಮಾಲಿನ್ಯ ಎಂದು ಕರೆಯಲಾಗಿದೆ.

ನೀರು ಕಲುಷಿತಗೊಳ್ಳವುದೇ ಜಲಮಾಲಿನ್ಯ ನೀರು ವಿಷಕಾರಿ ಪದಾರ್ಥಗಳಿಂದ ಕಲುಷಿತಗೊಂಡು ಜೀವಿಗಳ ಆರೋಗ್ಯವನ್ನು ಹಾಳು ಮಾಡುತ್ತದೆ. ಜಲಮಾಲಿನ್ಯದ ಮೂರು ಮುಖ್ಯ ಪ್ರಕಾರಗಳೆಂದರೆ, ಒಳನಾಡಿನ ಮಾಲಿನ್ಯ, ಅಂತರ್ಜಲ ಮಾಲಿನ್ಯ ಹಾಗೂ ಸಾಗರಗಳ ಮಾಲಿನ್ಯ

ಜಲಮಾಲಿನ್ಯಕ್ಕೆ ಕಾರಣಗಳು (Causes of Water Pollution):

ಜಲಮಾಲಿನ್ಯವು ಮಾನವನ ಹಲವು ಬಗೆಯ ಕಾಯ ಉಂಟಾಗುವುದು. ಕೈಗಾರಿಕಾ ತ್ಯಾಜ್ಯಗಳು,

ಗೃಹ ಬಳಕೆಯ ತ್ಯಾಜ್ಯಗಳು ಮತ್ತು ಕ್ರಿಮಿನಾಶಕಯುಕ್ತ ಕೃಷಿ ಭೂಮಿಯಿಂದ ಹರಿದು ಬರುವ ನೀರು ಮುಂತಾದವುಗಳು

ಜಲಮಾಲಿನ್ಯಕ್ಕೆ ಕಾರಣವಾಗಿವೆ. ಜೈವಿಕ ಮೂಲದ ವಸ್ತುಗಳಾದ ಚರಂಡಿಯ ನೀರು, ಆಹಾರ ಸಂಸ್ಕರಣೆಯ

ಕೈಗಾರಿಕೆಗಳು, ಚರ್ಮ ಹದಗೊಳಿಸುವ ಕೈಗಾರಿಕೆ, ಕ್ರಿಮಿನಾಶಕಗಳು, ಔಷಧಿಗಳು, ವಿವಿಧ ರಾಸಾಯನಿಕಯುಕ್ತ ಬಣ್ಣಗಳು ಜಲಭಾಗಗಳೊಡನೆ ಬೆರೆತು ಕಲುಷಿತಗೊಳಿಸುವುದು. ಅಜೈವಿಕ ವಸ್ತುಗಳಾದ ವಿವಿಧ ಆಮ್ಲಗಳು, ಲೋಹದ ಕಣಗಳು, ಸಯನೈಡ್, ಸಲ್ವೇಟ್ ಮೊದಲಾದವು ನೀರಿನೊಡನೆ ಸೇರಿ ಮಲಿನಗೊಳಿಸುತ್ತವೆ. ಗಣಿಗಾರಿಕೆ ವಿಕಿರಣ ವಸ್ತುಗಳಾದ ಯುರೇನಿಯಂ ಮತ್ತು ಥೋರಿಯಂ

ಹಾಗೂ ಸಮುದ್ರಕ್ಕೆ ಸೇರುವ ತೈಲ ಮುಂತಾದವುಗಳು ಜಲಮಾಲಿನ್ಯಕ್ಕೆ ಕಾರಣವಾಗಿವೆ.

ಜಲಮಾಲಿನ್ಯದಿಂದ ಉಂಟಾಗುವ ಪರಿಣಾಮಗಳು (Impact of Water Pollution):

ಜಲಮಾಲಿನ್ಯವು ಹಲವಾರು ಅಡ್ಡ ಪರಿಣಾಮಗಳನ್ನುಂಟು ಮಾಡುತ್ತದೆ. ಅವುಗಳೆಂದರೆ : 1. ಮಾಲಿನ್ಯಗೊಂಡ ನೀರು ಹಲವಾರು ಜಲ ಆಧಾರಿತ ರೋಗಗಳು ಮತ್ತು ಸಾಂಕ್ರಾಮಿಕ ರೋಗಗಳಾದ ಕಾಲರಾ, ಟೈಫಾಯಿಡ್, ಡೈಯೆರಿಯಾ, ಬೇಧಿ, ಕಾಮಾಲೆ ಮುಂತಾದವುಗಳಿಗೆ ಕಾರಣವಾಗಿವೆ.

2. ಮಾಲಿನ್ಯಗೊಂಡ ನೀರು ದ್ಯುತಿಸಂಶ್ಲೇಷಣಾ ಪ್ರಕ್ರಿಯೆಯನ್ನು ತಡೆಗಟ್ಟಿ ಸಸ್ಯಗಳು ಮತ್ತು ಮರಗಳ ಬೆಳವಣಿಗೆಯ ಮೇಲೆ ಕೆಟ್ಟ ಪರಿಣಾಮವನ್ನುಂಟು ಮಾಡಿದೆ.

3. ಜಲಮಾಲಿನ್ಯ ಮತ್ತು ಸಮುದ್ರದಲ್ಲಿ ತೈಲ ಸೋರುವಿಕೆಯಿಂದ ಜಲಚರ ಸಸ್ಯಗಳು ಮತ್ತು ಪ್ರಾಣಿಗಳು, ಪಕ್ಷಿಗಳು ಸಾವನ್ನಪ್ಪುತ್ತವೆ. ಪ್ರತಿವರ್ಷ ತೈಲಮಾಲಿನ್ಯದಿಂದ ಸುಮಾರು 50,000 ದಿಂದ 2,50,000 ರಷ್ಟು ಪಕ್ಷಿಗಳು ಸಾವನ್ನಪ್ಪುತ್ತವೆ.

- ಜಲಮಾಲಿನ್ಯವು ಓಜೋನ್ ಅನಿಲದ ನಾಶಕ್ಕೆ ಕಾರಣವಾಗಿದೆ.

ಅಧಿಕ ಪ್ರಮಾಣದಲ್ಲಿ ಮಲಿನಗೊಂಡ ನೀರನ್ನು ಕೃಷಿಯಲ್ಲಿ ಬಳಸಿದರೆ ಆಹಾರ ಉತ್ಪನ್ನಗಳಲ್ಲಿ ಅಪಾಯಕಾರಿ ಘಟಕಗಳು ಸೇರಿಕೊಳ್ಳುತ್ತವೆ. ಕಲುಷಿತ ನೀರನ್ನು ವ್ಯವಸಾಯಕ್ಕೆ ಬಳಸುವುದರಿಂದ ಬೆಳೆಯ ಇಳುವರಿ ಶೇ 17 ರಿಂದ ಶೇ 30ರ ವರೆಗೆ ಕಡಿಮೆಯಾಗುತ್ತದೆ.

ಜಲಮಾಲಿನ್ಯದ ನಿಯಂತ್ರಣಾ ಕ್ರಮಗಳು (Measures to control Water Pollution : ಪ್ರಪಂಚದ ಅನೇಕ ರಾಷ್ಟ್ರಗಳಲ್ಲಿ ಜಲಮಾಲಿನ್ಯವು ಈಗಾಗಲೇ ಬೃಹತ್ ಸಮಸ್ಯೆಯಾಗಿ ಪರಿಣಮಿಸಿದೆ, ಬಹುತೇಕ ನದಿಗಳು ಕಲುಷಿತಗೊಂಡಿವೆ. ಸಾಗರಗಳೂ ಮಲಿನತೆಗೀಡಾಗಿವೆ. ಜಲಮಾಲಿನ್ಯವನ್ನು ತಡೆಗಟ್ಟುವ ಮುಖ್ಯ ವಿಧಾನಗಳೆಂದರೆ :

1. ಒಳಚರಂಡಿಯ ನೀರಿನ ಶುದ್ದೀಕರಣ (Purification of seweage water):

ಬೃಹತ್ ನಗರ ಹಾಗೂ ಕೈಗಾರಿಕೆಗಳಿಂದ ಹೊರಬೀಳುವ ಕಲುಷಿತ ನೀರು ಯಾವುದೇ ನದಿ, ಸರೋವರವನ್ನು

ಸೇರಿದರೂ ಅವುಗಳು ಸಹ ಮಲಿನಗೊಳ್ಳುತ್ತವೆ. ಇದರ ಇಂಗುವಿಕೆಯು ಅಂತರ್ಜಲವನ್ನು ಕಲುಷಿತಗೊಳಿಸುವುದು, ಇದರಿಂದ ಚರಂಡಿಯ ನೀರನ್ನು ಶುದ್ದೀಕರಿಸಿ ನದಿಗೆ ಬಿಡುವುದು ಸೂಕ್ತವಾದ ವಿಧಾನವಾಗಿದೆ. 2. ಕೈಗಾರಿಕೆ ತ್ಯಾಜ್ಯ ವಸ್ತುಗಳ ಸಂಸ್ಕರಣೆ (Treatment of Industrial discharge):ಕೈಗಾರಿಕೆಗಳಿಂದ ಹೊರಬೀಳುವ ರಾಸಾಯನಿಕ ಮಿಶ್ರಣವನ್ನು ಒಳಗೊಂಡಿರುವ ನೀರನ್ನು ಸಂಸ್ಕರಿಸಿ, ರಾಸಾಯನಿಕಗಳನ್ನು

ನೀರಿನಿಂದ ಬೇರ್ಪಡಿಸುವುದು ಅಗತ್ಯ.

3. ಜೈವಿಕವಾಗಿ ವಿಘಟನೆಗೊಳ್ಳದ ಕ್ರಿಮಿನಾಶಕಗಳನ್ನು ನಿಷೇಧಿಸುವುದು ಅಗತ್ಯ. ಇದರ ಬದಲಿಗೆ ಸಸ್ಯಗಳಿಂದ

ತಯಾರಿಸಲ್ಪಟ್ಟ ಜೈವಿಕ ಕೀಟನಾಶಕಗಳನ್ನು ಉಪಯೋಗಿಸುವುದು ಸೂಕ್ತ.

1. ಶಾಖೋತ್ಪನ್ನ ಕೇಂದ್ರ ಮತ್ತು ವಿದ್ಯುತ್ ಕೇಂದ್ರಗಳಿಂದ ಹೊರ ಬರುವ ಬಿಸಿ ನೀರು ಜಲಮೂಲಗಳನ್ನು ಸೇರದಂತೆ ಹರಿಯ ಬಿಡುವುದು.

ನೀರಿನ ಮನರ್‌ ಬಳಕೆ : ಚರಂಡಿ ನೀರನ್ನು ಸಂಸ್ಕರಿಸಿ ಅದನ್ನು ಬೇಸಾಯಕ್ಕಾಗಿ ಬಳಕೆ ಮಾಡಿಕೊಳ್ಳಬೇಕು. ಈ ಪ್ರಯತ್ನವು ಈಗಾಗಲೇ ಕೆಲವು ನಗರ ಪ್ರದೇಶಗಳಲ್ಲಿ ಯಶಸ್ವಿಯಾಗಿದೆ. ಆದರೆ ಇನ್ನೂ ವ್ಯಾಪಕಗೊಳಿಸುವ ಅವಶ್ಯಕತೆಯಿದೆ.

ಸತ್ತ ಜೀವಿಗಳನ್ನು ನದಿಗೆ ವಿಸರ್ಜಿಸುವುದನ್ನು ನಿರ್ಬಂಧಿಸಬೇಕು.

ಭಾರತ ಸರ್ಕಾರವು ಜಾರಿಗೊಳಿಸಿರುವ 1974 ಜಲ ರಕ್ಷಣೆ ಮತ್ತು ಜಲಮಾಲಿನ್ಯ ನಿಯಂತ್ರಣ ಕಾಯಿದೆ, 1986 ರ ಪರಿಸರ ಕಾಯ್ದೆಗಳನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಬೇಕು.

ಇವೆಲ್ಲವುಗಳಿಂತಲೂ ಜನರಲ್ಲಿ ಜಲಮಾಲಿನ್ಯದ ಬಗ್ಗೆ ತಿಳುವಳಿಕೆ ಮೂಡಿಸುವುದು. ಸಂಘ-ಸಂಸ್ಥೆಗಳು ಜಲಮಾಲಿನ್ಯದ ಬಗ್ಗೆ ಕಾಳಜಿ ವಹಿಸುವಂತೆ ಅರಿವು ಮೂಡಿಸುವುದರ ಮೂಲಕ ಜಲಮಾಲಿನ್ಯವನ್ನು ನಿಯಂತ್ರಿಸಬಹುದು.
Post a Comment (0)
Previous Post Next Post