ದೇಶಿಯ ಮತ್ತು ವಿದೇಶಿಯ ಸಮಾಜಶಾಸ್ತ್ರಜ್ಞರು

  ಆರಂಭಿಕ ವಿದೇಶಿ ಸಮಾಜಶಾಸ್ತ್ರಜ್ಞರು


1. ಆಗಸ್ಟ್ ಕಾಯ್ದೆ (1798-1857) : ಆಗಸ್ಟ್ ಕಾಮ್ಯ ಫಾನ್ಸ್ನ ಒಬ್ಬಮಹಾನ್ ಚಿಂತಕ, ಮೊದಲ ಸಾಮಾಜಿಕ ತತ್ವಜ್ಞಾನಿ, ಸಮಾಜಶಾಸ್ತ್ರದ ಪಿತಾಮಹ' ಎಂದು ಆಗಸ್ಟ್ ಕಾಯ್ದೆ ಅವರನ್ನು ಕರೆಯಲಾಗುತ್ತದೆ. ಆಗಸ್ಟ್ ಕಾಯ್ದೆಸಮಾಜವನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಸಮಾಜಶಾಸ್ತ್ರಕ್ಕೆ ವಿಜ್ಞಾನದ ಸ್ಥಾನ ಸಿಗುವಂತೆ ಮಾಡಿದ್ದಾರೆ. ಆಗಸ್ಟ್ ಕಾಯ್ದೆ ಅವರ ಪ್ರಯತ್ನವನ್ನು ಬಲವಾಗಿ ಸಮರ್ಥನೆ ಮಾಡಿದವರಲ್ಲಿ ಹರ್ಬಟ್ ಸೆನ್ಸರ್, ಎಮಿಲಿ ರ್ಡಂ, ಮ್ಯಾಕ್ಸವೇಬರ್ ಪ್ರಮುಖರು, ಸಾ.ಶ. 1839 ರಲ್ಲಿ 'ಪೊಸಿಟಿವ್ ಫಿಲಾಸಫಿ' ಎಂಬ ವಿಷಯದ ಕುರಿತಾಗಿ ಸಾರ್ವಜನಿಕ ಉಪನ್ಯಾಸ ನೀಡುವಾಗ ಆಗಸ್ಟ್ ಕಾಯ್ದೆ ಮೊದಲಬಾರಿಗೆ ಸಮಾಜಶಾಸ್ತ್ರ ಎಂಬ ಪದವನ್ನು ಬಳಸಿದರು. ಇವರ ಪೂರ್ಣ ಹೆಸರು-ಇಸಿಡೂರ ಆಗಸ್ಟ್ ಮೇರಿ ಫ್ರಾಂಕಾಯಿಸ್ಝೇವಿಯರ್ ಕಾಯ್ದೆ ಸಾಮಾನ್ಯವಾಗಿ ಆಗಸ್ಟ್ ಕಾಯ್ದೆ ಎಂದು ಪರಿಚಿತರಾಗಿದ್ದಾರೆ. ಇವರು ದಕ್ಷಿಣ ಫ್ರಾನ್ಸ್‌ನ ಮೋಂಟ್ ಪೆಲಿಯರ್ ಎಂಬಲ್ಲಿ 1798 ಜನವರಿ 19 ರಂದು ಕ್ಯಾಥೋಲಿಕ್ ಸಮುದಾಯದಲ್ಲಿ ಜನಿಸಿದ್ದಾರೆ. ಇವರು ಇಂಪಿರಿಯಲ್ ಶಾಲೆಯಲ್ಲಿ ತನ್ನ ಆರಂಭಿಕ ಶಿಕ್ಷಣ ಮುಗಿಸಿದರು. ಮುಂದೆ ಇಕೋಲ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಅಧ್ಯಾಪಕರಾದರು.


* ಇವರ ಪ್ರಮುಖ ಕೊಡುಗಗಳು : 

ಪೊಸಿಟಿವ್ ಫಿಲಾಸಫಿ-1839, 

ಪೊಸಿಟಿವ್ ಪಾಲಿಟಿ-1851.


ಮಾನವತಾ ಧರ್ಮ- 1857. ಮೂರು ಹಂತಗಳ ಸೂತ್ರ ಹೀಗೆ ಇವರು ಹಲವು ಸಮಾಜಶಾಸ್ತ್ರ ಗ್ರಂಥಗಳನ್ನು ಬರೆದಿದ್ದಾರೆ. ಆಗಸ್ಟ್ ಕಾಯ್ದೆ ಅವರು ಸೆಪ್ಟೆಂಬರ್ 5, 1857 ತಮ್ಮ 59 ನೇ ವರ್ಷದಲ್ಲಿ ಮರಣ ಹೊಂದಿದರು.


2. ಕಾರ್ಲ್‌ಮಾರ್ಕ್ಸ್ (1818-1883): 19ನೇ ಶತಮಾನದ ವಿಶ್ವಮಾನ್ಯ ಸಾಮಾಜಿಕ ಚಿಂತಕ, ಕಾರ್ಲ್ ಮಾರ್ಕ್ಸ್  ಸಂಘಟಕ ಮತ್ತು ಒಬ್ಬ ರಾಜಕೀಯ ಬರಹಗಾರ,ಕ್ರಾಂತಿಕಾರಿ,ಚತುರಕಾರ್ಲ್‌ಮಾರ್ಕ್‌ರನ್ನು ಸಂಘರ್ಷ ಸಿದ್ಧಾಂತದ ಪ್ರವರ್ತಕನೆಂದು

ಕರೆಯಲಾಗುತ್ತದೆ. ಇವರು ದುಡಿಯುವ ವರ್ಗಗಳು ಮತ್ತು ಕಾರ್ಮಿಕರನ್ನು ಕುರಿತು ನಡೆಸಿದ ಚಿಂತನೆ, ಅಧ್ಯಯನ ಮತ್ತು ಬರವಣಿಗೆಗಳು ಕಾರ್ಮಿಕರ

ಹೋರಾಟಕ್ಕೆ ಹೊಸ ದಿಕ್ಕನ್ನು ನೀಡಿದೆ.


ಮಾರ್ಕ್ಸ್ ಅವರು ಸಾ.ಶ. 1818 ಮೇ 5 ರಂದು ಜರ್ಮನಿಯ ಟಿಯರ್ ಎಂಬಲ್ಲಿ ಜನಿಸಿದರು. ತಂದೆ-ತಾಯಿ ಹೀನಿಚ್ ಮತ್ತು ಹೆನ್ರಿಯಟ್ ಮಾರ್ಕ್ಸ್ ಹಾಗೂ ಹೆಂಡತಿ ಜೆನ್ಸಿವಾನ್ ವೆಸ್ಟ್ ಪೆಲೀನ್, ಹೆಗಲನ್ ಕಾರ್ಲ್‌ಮಾರ್ಕ್ಸ್

ಅವರ ನೆಚ್ಚಿನ ಗುರುವಾಗಿದ್ದರು. 1841 ರಲ್ಲಿ ಕಾನೂನು ವಿಷಯದ ಪಿಎಚ್.ಡಿ ಪದವಿ ಪಡೆದು ವೃತ್ತಿ ಜೀವನ ಆರಂಭಿಸಿದರು. * ಇವರ ಪ್ರಮುಖ ಕೂಡುಗೆಗಳು ದಾಸ್ ಕ್ಯಾಪಿಟಲ್-1865 ಹೋಲಿ ಫ್ಯಾಮಿಲಿದಿ ಜರ್ಮನ್ ಐಡಿಯಾಲಜಿ-1845, ದಿ ಮೈನಿಫೆಸ್ಟ್ ಆಫ್ ದಿ ಕಮ್ಯೂನಿಸ್ಟ್ ಪಾರ್ಟಿ-1848 ಅವರು ಮಾರ್ಚ್ 14, 1883ರಲ್ಲಿ ಮರಣ ಹೊಂದಿದರು. ಇವರು ಮರಣ ಹೊಂದಿ ಒಂದು   ಅವರ ವಿಚಾರಗಳು, ಸಿದ್ಧಾಂತಗಳು ಇಂದಿಗೂ ಜೀವಂತವಾಗಿದೆ.


3, ಎಮಿಲಿ ಡರ್ಖಂ (1858-1917) : ಎಮಿಲಿ ಡರ್ಬಿ 19ನೇ ಶತಮಾನದ ಫಾನ್ಸ್‌ನ ಪ್ರಮುಖ ಸಮಾಜಶಾಸ್ತ್ರಜ್ಞ ಸಮಾಜಶಾಸ್ತ್ರ ಅಧ್ಯಯನ ಎಂದು ಸಾಬೀತುಪಡಿಸಿದ ವಿಶ್ಲೇಷಣಾತ್ಮಕ ಬರಹಗಾರ. ಆಗಸ್ಟ್ ಕಾಯ್ದೆ ಸಮಾಜಶಾಸ್ತ್ರದ ಪಿತಾಮಹನಾದರೆ, ಅವರನ್ನು ಸಮಾಜಶಾಸ್ತ್ರದ ಬೆಳವಣಿಗೆಯ ಪಿತಾಮಹ ಕರೆಯಲಾಗುತ್ತದೆ. ಎಮಿಲಿ ಡರ್ಬಿಂ ಅವರು ಫ್ರಾನ್ಸಿನ ಲೋರೋಯಿನ್ ಪ್ರಾಂತದ ಎಪಿನಾಲ್ ಎಂಬಲ್ಲಿ 1858 ಏಪ್ರಿಲ್, 15 ರಂದು ಜನಿಸಿದರು. ಯಾಹೂದಿ ಸಮುದಾಯಕ್ಕೆಸೇರಿದ ಇವರು ಫ್ರಾನ್ಸಿನ ಡಿ ಎಫಿನಾಲೆಂಬ ಶಾಲೆಯಲ್ಲಿ ಪ್ರತಿಭಾವಂತ ಎಮಿಲಿ ವಿದ್ಯಾರ್ಥಿಯಾಗಿ, ಪ್ರಾಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿದರು.


• ಡರ್ಖಂ ಇವರ ಪ್ರಮುಖ ಕೊಡುಗೆಗಳು :) ದಿ ಡಿವಿಜನ್ ಆಫ್ ಲೇಬರ್ ಇನ್ ಸೊಸೈಟಿ -1893, ಸೂಸೈಡ್(ಆತ್ಮಹತ್ಯೆ) - 1897, ದಿ ರೂಲ್ ಆಫ್ ಸೋಸಿಯಲಾಜಿಕಲ್ ಮೆಥಡ್-1895, ದಿ ಎಲಿಮೆಂಟರಿಫಾರ್ಮ್ ಆಫ್ ರಿಲಿಜಿಯಸ್ ಲೈಫ್ - 1912 ಇತ್ಯಾದಿ. ಇವರು ತಮ್ಮ 59ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು.


4. ಮ್ಯಾಕ್ಸ್‌ವೇಬರ್ [1864-1920] : ಮ್ಯಾಕ್ಸ್‌ವೇಬರ್ ಅವರದು ಸಮಾಜವಿಜ್ಞಾನ ಕ್ಷೇತ್ರದಲ್ಲಿ ಅವಿಸ್ಮರಣೀಯ ವ್ಯಕ್ತಿತ್ವ ಇವರು ಜರ್ಮನಿಯ ಒಬ್ಬ ಪ್ರಭಾವಿ ಬರಹಗಾರ ಮತ್ತು ಪ್ರತಿಭಾವಂತ ರಾಜಕಾರಣಿಯೂ ಹೌದು. ವೇಬರ್ ಕಾನೂನು, ಅರ್ಥಶಾಸ್ತ್ರ, ಧರ್ಮ, ಕಲೆ, ಇತಿಹಾಸ, ಸಮಾಜಶಾಸ್ತ್ರದಲ್ಲಿ ಹೆಚ್ಚಿನ ಆಸಕ್ತಿ ಮತ್ತು ಅಭಿರುಚಿಯನ್ನು ಹೊಂದಿದ್ದರು. ಮ್ಯಾಕ್ಸ್‌ವೇಬರ್‌ ಪಶ್ಚಿಮ ಜರ್ಮನಿಯ ಏರಫರ್ಟ್ ಎಂಬಲ್ಲಿ ಏಪ್ರಿಲ್ 21ರ. 1864 ರಂದು ಪ್ರೊಟೆಸ್ಟಂಟ್ ಕುಟುಂಬವೊಂದರಲ್ಲಿ ಜನಿಸಿದರು. ವೇಬರ್ 18ನೇ ವಯಸ್ಸಿನಲ್ಲಿ ಜರ್ಮನಿಯ ಹೀಡಲ್ ಬರ್ಗ್ ವಿಶ್ವವಿದ್ಯಾಲಯದಲ್ಲಿ ಕಾನೂನು ವಿದ್ಯಾರ್ಥಿಯಾಗಿ, ಕಾನೂನುಶಾಸ್ತ್ರದಲ್ಲಿ ಪಿಎಚ್.ಡಿ ಪದವಿ ಪಡೆದು ಬರ್ಲಿನ್ ವಿಶ್ವವಿದ್ಯಾಲಯದಲ್ಲಿ ಬೋಧಕರಾಗಿ ಸೇವೆ ಸಲ್ಲಿಸಿದರು. ಹೊಂದಿದರು. ಇವರು 56ನೇ ವಯಸ್ಸಿನಲ್ಲಿ ಮರಣ


ಮ್ಯಾಕ್ಸ್‌ವೇಬರ್

ಇವರ ಪ್ರಮುಖ ಕೊಡುಗೆಗಳು: ದಿ ಜರ್ಮನ್ ಸೋಸಿಯಾಲಾಜಿಕಲ್ ಸೊಸೈಟಿ-1910, ದಿ ಪ್ರೊಟೆಸ್ಟಂಟ್ ಎಥಿಕ್ ಅಂಡ್ ದಿ ಸ್ಪಿರಿಟ್ ಆಫ್ ಕ್ಯಾಪಿಟಲಿಸಂ, ದಿ ಸಿಟಿ, ಬ್ಯೂರೋಕ್ರಸಿ, ಎಕೊನಮಿ ಅಂಡ್ ಇತ್ಯಾದಿ.


ಭಾರತದ ಪ್ರಮುಖ ಸಮಾಜಶಾಸ್ತ್ರಜ್ಞರು


ಡಾ. ಬಿ.ಆರ್. ಅಂಬೇಡ್ಕರ್‌ (1891-1956) : ಆಧುನಿಕ ಭಾರತದ ನಿರ್ಮಾಪಕರ ಶ್ರೇಣಿಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್‌ರವರ ಕೊಡುಗೆ ಅತ್ಯಂತ ಮಹತ್ವದ್ದು. ಇವರ ಪೂರ್ಣ ಹೆಸರು ಭೀಮರಾವ್, ರಾಮ್‌ಜಿ ಅಂಬೇಡ್ಕರ್, ಇವರು ಜಗತ್ತಿನ ಪ್ರಮುಖ ಸಮಾಜ ಸುಧಾರಕ ನ್ಯಾಯಶಾಸ್ತ್ರಜ್ಞ ಭಾರತದಲ್ಲಿ ದಲಿತರು ಎದುರಿಸುತ್ತಿರುವ ಅಸ್ಪಶ್ಯತೆ ಸೇರಿದಂತೆ ಹಲವು ಸಾಮಾಜಿಕ ಭೇದ ಭಾವನೆಗಳ ವಿರುದ್ಧ ಹೋರಾಡಿದರು. ದಲಿತರು, ಮಹಿಳೆಯರ ಹಕ್ಕುಗಳಿಗಾಗಿ ಸಾಮಾಜಿಕ ಹೋರಾಟಗಳನ್ನು ಸಂಘಟಿಸಿ ಜಾಗೃತಿ ಮೂಡಿಸಿದರು.


ಇದೆಲ್ಲಕ್ಕಿಂತಲೂ ಮುಖ್ಯವಾಗಿ ಭಾರತದ ಸಾಂಸ್ಕೃತಿಕ ಅಸಮಾನತೆ ಸೇರಿದಂತೆ ಎಲ್ಲಾ ಬಗೆಯ ಶ್ರೇಣೀಕೃತ ಶೋಷಣೆ, ತಾರತಮ್ಯ ಮತ್ತು ದೌರ್ಜನ್ಯಗಳನ್ನು ಶಿಕ್ಷಣದ ಮೂಲಕ ಸರಿಪಡಿಸುವ ಭರವಸೆಯನ್ನು ಸಾಧಿಸಿ ತೋರಿಸಿದ ಮೊದಲಿಗರು ಡಾ. ಬಿ.ಆರ್. ಅಂಬೇಡ್ಕರ್, ಶಿಕ್ಷಣ ಕುರಿತು ಡಾ.ಬಿ.ಆರ್.ಅಂಬೇಡ್ಕರ್ ಅವರ ನಿಲುವು ಹಲವು ತತ್ವಶಾಸ್ತ್ರೀಯ ನಿಲುವುಗಳಿಗಿಂತ ಭಿನ್ನವಾದುದು. ಬಿ.ಆರ್.ಅಂಬೇಡ್ಕರ್ ಅವರು ಶಿಕ್ಷಣವು ಸಾಮಾಜಿಕ ಬದಲಾವಣೆಯ ಪ್ರಮುಖ ಸಾಧನ ಮಾಧ್ಯಮ ಎಂದು ಪ್ರತಿಪಾದಿಸುತ್ತಾರೆ. ಅಂಬೇಡ್ಕರ್‌ ಅವರ ಪ್ರಕಾರ ಶಿಕ್ಷಣ ಎನ್ನುವುದು ತರ್ಕ ಸಮ್ಮತವಾದ ಮತ್ತು ವಿಮರ್ಶಾತ್ಮಕವಾದ ವಿಶ್ಲೇಷಣೆ ಮಾಡಲು ಬೇಕಾಗುವ ಸಂಪನ್ಮೂಲಗಳನ್ನು ಗಳಿಸಿಕೊಳ್ಳಲು ಇರುವ ಮಾರ್ಗ, ವಿಶೇಷವಾಗಿ ಭಾರತೀಯ ಸಾಮಾಜಿಕ ಸಂದರ್ಭದಲ್ಲಿ ಪೂರ್ವಾಗ್ರಹಗಳ ಅಪಾಯಗಳು ಮತ್ತು ಪೂರ್ವಾಗ್ರಹಗಳಿಂದ ರೂಪ ಪಡೆಯುವ ಸಾಮಾಜಿಕ ತೇಜೋವಧೆಗಳನ್ನು ಕಾರಣಗಳನ್ನು ತರ್ಕ ಸಮ್ಮತವಾಗಿ ಚರ್ಚಿಸಲು ಶಿಕ್ಷಣ ಅಗತ್ಯ ಎಂದು ಡಾ. ಬಿ.ಆರ್. ಅಂಬೇಡ್ಕರ್‌ ಹೇಳುತ್ತಾರೆ.


ಡಾ. ಬಿ.ಆರ್. ಅಂಬೇಡ್ಕರ್‌


ಶಿಕ್ಷಣವನ್ನು ಎಲ್ಲರಿಗೂ ಕಡ್ಡಾಯ ಮತ್ತು ಉಚಿತವಾಗಿ ನೀಡಬೇಕು. ಏಕೆಂದರೆ ಶಿಕ್ಷಣ ಸಾರ್ವಜನಿಕವಾಗಿ ಸಮಾಜದ ಸಾಮಾಜಿಕ ಬದಲಾವಣೆಗೆ ಲಾಭಕರವಾದ ಗುಣಗಳನ್ನು ಹೊಂದಿದೆ ಎಂದು ತಿಳಿದ ಅಂಬೇಡ್ಕರ್ ಶಿಕ್ಷಣ ಸಾರ್ವಜನಿಕ ಸ್ವತ್ತಾಗಬೇಕು ಎಂದು ಪ್ರತಿಪಾದಿಸುತ್ತಾರೆ. ಈ ರೀತಿಯಾದ ಕ್ರಾಂತಿಕಾರಿ ಚಿಂತನೆಗಳಿಂದಲೇ ಅಂಬೇಡ್ಕರ್‌ ಅವರು ಸಂವಿಧಾನ ಕರಡು ರಚನೆಯಲ್ಲಿ ಅತ್ಯಂತ ರಚನಾತ್ಮಕವಾದ ಪಾತ್ರವನ್ನು ನಿರ್ವಹಿಸಿದ್ದಾರೆ.


ಪ್ರಾಯಶಃ ಈ ಕಾರಣದಿಂದಲೇ ಇಂಡಿಯಾದ ಸಂವಿಧಾನವು ವಿಶ್ವದಲ್ಲಿಯೇ ವಿಶಿಷ್ಟವಾದ ನ್ಯಾಯ ಮತ್ತು ಸಮಾನತೆಯನ್ನು ನೀಡುವ ದಿಕ್ಕಿನಲ್ಲಿ ಮಹತ್ವವನ್ನು ಪಡೆದಿದೆ.


ಜೀವನ ಮತ್ತು ಶಿಕ್ಷಣ : ಬಿ.ಆರ್.ಅಂಬೇಡ್ಕರ್‌ ಅವರು ಮಹಾರಾಷ್ಟ್ರದ ಅಂಬಾವಾಡೆ ಎಂಬ ಗ್ರಾಮದಲ್ಲಿ ಏಪ್ರಿಲ್ 14, 1891ರಂದು ಜನಿಸಿದರು. ಇವರು ಸತಾರಾದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಆರಂಭಿಸಿದರು.


ಮುಂಬೈನ ಪ್ರಖ್ಯಾತ ಎಲ್ವಿನ್‌ಸ್ಟನ್ ಪ್ರೌಢಶಾಲೆಗೆ ಸೇರಿ 1997 ರಲ್ಲಿ ಮೆಟ್ರಿಕ್ ಹಂತದಲ್ಲಿ ಪ್ರಥಮ ಶ್ರೇಣಿ ಗಳಿಸಿ ತೇರ್ಗಡೆಯಾಗುತ್ತಾರೆ. ರಮಾಬಾಯಿ ಎಂಬ ಕನ್ನೆಯೊಂದಿಗೆ ವಿವಾಹವಾದರು. ಮಹಾರಾಜರಿಂದ ರೂ. 25=00 ವಿದ್ಯಾರ್ಥಿ ವೇತನ ಪಡೆದು ಬಿ.ಎ. ಎಂ.ಎ ಪದವಿ ಪಡೆದು, 1916 ರಲ್ಲಿ ಕೊಲಂಬಿಯ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆಯುತ್ತಾರೆ. 1920 ರಲ್ಲಿ ಮೂಕನಾಯಕ ಎಂಬ ಪಾಕ್ಷಿಕವನ್ನು ಆರಂಭಿಸುತ್ತಾರೆ. ಡಾ. ಬಿ.ಆರ್. ಅಂಬೇಡ್ಕರ್‌ರವರ ಪ್ರಮುಖ ಪುಸ್ತಕಗಳೆಂದರೆ ಜಾತಿ ವಿನಾಶ-1936, ಯಾರು ಶೂದರು-1946, ಬುದ್ಧ ಮತ್ತು ಅವನ ಧಮ್ಮ-1957, ಇತ್ಯಾದಿ, ಇವರ ಎಲ್ಲಾ ಬರವಣಿಗೆಗಳನ್ನು ಕರ್ನಾಟಕ ಸರ್ಕಾರ 26 ಸಂಪುಟಗಳಲ್ಲಿ ಮುದ್ರಿಸಿ ಪ್ರಕಟಿಸಿದೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ಡಿಸೆಂಬರ್ 6, 1956 ರಂದು ನಿಧನರಾದರು.



ಜಿ.ಎಸ್. ಫಾರ್ಯ (1893-1983) : ಭಾರತದ ವಿಶ್ವವಿದ್ಯಾಲಯಗಳ ಹಂತದಲ್ಲಿ ಸಮಾಜಶಾಸ್ತ್ರದ ಅಧ್ಯಯನ ಮತ್ತು ಬೋಧನಾ ವಿಭಾಗಗಳನ್ನು ಪಾರಂಭಿಸುವಲ್ಲಿ ಘಾರ್ಯ ಅವರು ಮುಖ್ಯ ಪಾತ್ರ ವಹಿಸಿದ್ದಾರೆ. ಪೂರ್ಣ ಹೆಸರು ಗೋವಿಂದ ಸದಾಶಿವ ಘುರ್ಯೆ, ಇವರು ಡಿಸೆಂಬರ್ 12, ೨೦೦೨ರಂದು ಮಹಾರಾಷ್ಟ್ರದ ಮಾಲನ್ ಎಂಬಲ್ಲಿ ಜನಿಸಿದರು, ಮುಂಬೈ ವಿಶ್ವವಿದ್ಯಾನಿಲಯದಲ್ಲಿ ಕಾಲೇಜು ಶಿಕ್ಷಣವನ್ನು ಪೂರೈಸಿದರು. ಲಂಡನ್ನಿನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ ಪದವಿ ಪಡೆದು 1924ರಲ್ಲಿ ಭಾರತಕ್ಕೆ ಬಂದು ಬೊಂಬಾಯಿ ವಿಶ್ವವಿದ್ಯಾಲಯದಲ್ಲಿ ಸಮಾಜಶಾಸ್ತ್ರ ಬೋಧನೆ ಮತ್ತು ಅಧ್ಯಯನ ವಿಭಾಗವನ್ನು ಪ್ರಾರಂಭಿಸಿ ಅದರ ಸ್ಥಾಪಕ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದರು. ಇವರ ಪ್ರಮುಖ ಸಂಶೋಧನಾ ಮಸ್ತಕಗಳೆಂದರೆ, ಕಾಸ್ಟ್ ಅಂಡ್ ರೇಸ್ ಇನ್ ಇಂಡಿಯಾ 103: ಶೆಡ್ಯೂಲ್ಸ್ ರಚಿಸಿದ್ದಾರೆ.


ಚೈನ್ಸ್ 1943; ಭಾರತೀಯ ಸಾಧುಗಳು 1053; ಮಾತ್ರವಲ್ಲದೆ ಇವರು 30 ಕ್ಕೂ ಹೆಚ್ಚು ಪುಸ್ತಕಗಳನ್ನು


ಎಂ.ಎನ್. ಶ್ರೀನಿವಾಸ್ (1916-1999) : ಎಂ. ಎನ್. ಶ್ರೀನಿವಾಸ್ ಅವರು ಅಂತಾರಾಷ್ಟ್ರೀಯ ಖ್ಯಾತಿಯ ಭಾರತದ ಪ್ರಮುಖ ಸಮಾಜಶಾಸಜ್ವರು, ಕ್ಷೇತ್ರಾಧಾರಿತ ದೃಷ್ಟಿಕೋನ ಎಂಬ ಅಧ್ಯಯನವನ್ನು ಬಳಸಿ ಸಮಾಜ ಸಂಶೋಧನೆಯನ್ನು ಜನಪ್ರಿಯಗೊಳಿಸಿದವರು ಇವರು ಸ್ಪಾರ್ನ್‌ಡ್್ರ ವಿಶ್ವವಿದ್ಯಾಲಯದಲ್ಲಿದ್ದಾಗ ಅಲ್ಲಿ ನಡೆದ ವಿದ್ಯಾರ್ಥಿ ಚಳವಳಿಯಲ್ಲಿ ಇವರ ಕ್ಷೇತ್ರಕಾರ್ಯ ಟಿಪ್ಪಣಿಗಳು ಬೆಂಕಿಗೆ ತುತ್ತಾದ ದುರಂತದ ನಂತರ ಏ ರಿಮೆಂಬರ್ಡ್ ವಿಲೇಜ್' ಎಂಬ ಸಾರ್ವಕಾಲಿಕ ಕೃತಿಯನ್ನು 1976ರಲ್ಲಿ ಮೊದಲು ಪ್ರಕಟಣೆ ಮಾಡಿದ್ದರು. ನಂತರ ಇದು ಅನೇಕ ಮರುಮುರ್ದಣಗಳನ್ನು ಕಂಡಿದೆ. ಇದಕ್ಕೂ ಮೊದಲು 1952ರಲ್ಲಿ ಎಂ.ಎನ್. ಶ್ರೀನಿವಾಸ್ ಅವರ ಗುರುಗಳಾದ ಎ.ಆರ್.ರಾಡಿಕ್ಲಿಪ್ ಡೌನ್ ಮಾರ್ಗದರ್ಶನದಲ್ಲಿ “ದಕ್ಷಿಣ ಭಾರತದ ಕೊಡವರ ಧರ್ಮ ಮತ್ತು ಸಮಾಜ" ಎಂಬ ಪುಸ್ತಕ ಬರೆದರು.


ಎಂ.ಎನ್. ಶ್ರೀನಿವಾಸ್


ಇವರ ಪೂರ್ಣ ಹೆಸರು ಮೈಸೂರು ನರಸಿಂಹಾಚಾರ್ ಶ್ರೀನಿವಾಸ್, ನವೆಂಬರ್ 16, 1916ರಂದು ಮೈಸೂರಿನಲ್ಲಿ, ನರಸಿಂಹಾಚಾರ್ ಮತ್ತು ರುಕ್ಕಿಣಿ ದಂಪತಿಗಳ ಪುತ್ರನಾಗಿ ಜನಿಸಿದರು. ಬೊಂಬಾಯಿ ವಿಶ್ವವಿದ್ಯಾಲಯದಲ್ಲಿ ಎಂ.ಎ., ಎಲ್.ಎಲ್.ಬಿ. ಮತ್ತು ಪಿಎಚ್.ಡಿ ಪದವಿ ಪಡೆದು ಆಕ್ಸ್‌ಫರ್ಡ್‌ನಲ್ಲಿ ಡಿ.ಫಿಲ್ ಪದವಿ ಪಡೆದು, ದೆಹಲಿಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಇವರ ಪ್ರಮುಖ ಕೊಡುಗೆಗಳು: ದಕ್ಷಿಣ ಭಾರತದ ಕೊಡವರ ಧರ್ಮ ಮತ್ತು ಸಮಾಜ-1952, ಇಂಡಿಯನ್ ವಿಲೇಜಸ್, ಸೋಸಿಯಲ್ ಚೇಂಜ್ ಇನ್ ಮಾಡರ್ನ್ ಇಂಡಿಯಾ-1963, ರಿಮೆಂಬರ್ಡ್‌ ವಿಲೇಜ್-1976 ಇತ್ಯಾದಿ.


ಪಾರ್ವತಮ್ಮ ಸಿ: ಪಾರ್ವತಮ್ಮ ಅವರು ಕರ್ನಾಟಕದವರಾಗಿದ್ದು ಸಮಕಾಲೀನ ಭಾರತದ ಪ್ರಮುಖ


ಮಹಿಳಾ ಸಮಾಜಶಾಸ್ತ್ರಜರಲ್ಲಿ ಒಬ್ಬರು. ಸಿ. ಪಾರ್ವತಮ್ಮ ಅವರು ಅತ್ಯಂತ ಕಷ್ಟದಲ್ಲಿ ಬೆಳೆದವರು. ಅವರು ಹುಟ್ಟಿದ ದಿನದಿಂದ ಅನೇಕ ಎಡರು ತೊಡರುಗಳನ್ನು ಎದುರಿಸಿ ಭಾರತದ ಪ್ರಮುಖ ಸಮಾಜಶಾಸ್ತ್ರಜ್ಞರಾಗಿ ಬೆಳೆದವರು. ಪಾರ್ವತಮ್ಮ ಅವರು ದಾವಣಗೆರೆ ಜಿಲ್ಲೆಯ (ಮೊದಲು ಚಿತ್ರದುರ್ಗ ಜಿಲ್ಲೆಯ ದಾವಣಗೆರೆ ತಾಲೂಕಿಗೆ ಸೇರಿದ) ಸ್ಯಾಗಲ್ಲಿ ಎನ್ನುವ ಹಳ್ಳಿಯಲ್ಲಿ ಜೂನ್ 1928 ರಲ್ಲಿ ಜನಿಸಿದರು. ಇವರ ನಿಖರವಾದ ಜನ ದಿನಕ್ಕೆ ದಾಖಲೆಗಳು ದೊರೆಯದ ಕಾರಣ ಶಾಲೆಗೆ ಪ್ರವೇಶ ಪಡೆದ ದಾಖಲೆಯನ್ನು ಮಾತ್ರ ಪರಿಗಣಿಸಲಾಗಿದೆ. ಸಿ.ಪಾರ್ವತಮ್ಮ ಅವರು 9 ತಿಂಗಳ ಮಗುವಾಗಿರುವಾಗಲೇ ಅವರ ತಂದೆ ಮರಣಹೊಂದುತ್ತಾರೆ. ಅವರು ಅಜ್ಜಿಯ ಮನೆಯಲ್ಲಿ ದೊರೆತ ನೈತಿಕ ಮತ್ತು ಭೌತಿಕ ಬೆಂಬಲದಿಂದ ಚಿಕ್ಕ ವಯಸ್ಸಿನ ತಾಯಿಯೊಂದಿಗೆ


ಸಿ. ಪಾರ್ವತಮ್ಮ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ತಮ್ಮ ಹುಟ್ಟೂರಿನಲ್ಲಿದ್ದ ಏಕ ಶಿಕ್ಷಕರ ಶಾಲೆಯಲ್ಲಿ ಮುಗಿಸುತ್ತಾರೆ. ಮಾಧ್ಯಮಿಕ ಶಿಕ್ಷಣವನ್ನು ಅವರು ಪಕ್ಕದ ಲೋಕಿಕೆರೆಯಲ್ಲಿ, ನಂತರ ಸರ್ಕಾರಿ ಪ್ರೌಢಶಾಲೆ ದಾವಣಗೆರೆಯಲ್ಲಿ ತಮ್ಮ ಪ್ರೌಢಶಿಕ್ಷಣವನ್ನು ಪೂರೈಸುತ್ತಾರೆ. 1945 ರಲ್ಲಿ ಅವರು ಇಂಟರ ಮೀಡಿಯಟ್ ಕಾಲೇಜು ದಾವಣಗೆರೆಯಲ್ಲಿ ಇದ್ದರೂ ಸಹ ಪಾರ್ವತಮ್ಮ ಅವರ ಶಿಕ್ಷಕರೊಬ್ಬರು ಇವರ ಶಿಕ್ಷಣ ಮುಂದುವರೆಯಲಿ ಎನ್ನುವ ಕಾಳಜಿಯಿಂದ ಕಾಂತರಾಜುಶೆಟ್ಟಿ ಎನ್ನುವ ಡಿ.ಡಿ.ಪಿ.ಐ. ಸಹಕಾರದೊಂದಿಗೆ ಮೈಸೂರಿನ ಸಮುದಾಯ ವಸತಿ ನಿಲಯದಲ್ಲಿ ವಸತಿ ವ್ಯವಸ್ಥೆ ಮಾಡಿ, ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಇಂಟರ್ ಮೀಡಿಯೇಟ್ ಪ್ರವೇಶ ಪಡೆಯಲು ಅವಕಾಶ ಒದಗಿಸುತ್ತಾರೆ.


ಹಲವಾರು ಸವಾಲುಗಳ ನಡುವೆ ಶಿಕ್ಷಣ ಮುಂದುವರೆಸಿದ ಪಾರ್ವತಮ್ಮ ಅವರು ಕಲಾ ವಿಷಯದಲ್ಲಿ


ಇಂಟರ್ ಮೀಡಿಯಟ್‌ನಲ್ಲಿ ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ, ನಂತರ ಬಿ.ಎ ಆನರ್ಸ್‌ಗೆ ಮಹಾರಾಜ


ಕಾಲೇಜಿನಲ್ಲಿ ಸಾಮಾಜಿಕ ತತ್ವಶಾಸ್ತ್ರಕ್ಕೆ ಪ್ರವೇಶ ಪಡೆದರು. ಆ ಮಾಧ್ಯಮಿಕ ಶಾಲೆಯಿಂದ ಬಿ.ಎ. ಆನರ್ಸ್


ಶಿಕ್ಷಣದವರೆಗೆ ವಿದ್ಯಾರ್ಥಿವೇತನ ಪಡೆದು ಓದಿ ಬಿ.ಎ ಆನರ್ಸ್‌ನಲ್ಲಿ ಪ್ರಥಮ ಬ್ಯಾಂಕ್ ಪಡೆದು ತೇರ್ಗಡೆ ಯಾಗುತ್ತಾರೆ. ನಂತರ ಅವರ ಮುಂದುವರೆಸಲು ಸಲಹೆ ನೀಡಿದರು. ಪ್ರಾಧ್ಯಾಪಕರೊಬ್ಬರು ಉನ್ನತ ಶಿಕ್ಷಣವನ್ನು ವಿದೇಶದಲ್ಲಿ ಸಿ. ಪಾರ್ವತಮ್ಮ ಅವರು ಕರ್ನಾಟಕದಿಂದ ವಿದೇಶಕ್ಕೆ ಹೋಗಿ ಕಲಿತು ಕರ್ನಾಟಕಕ್ಕೆ ಬಂದು ನೆಲೆಸಿ ಸಮಾಜಶಾಸ್ತ್ರವನ್ನು ಇಡೀ ದಕ್ಷಿಣ ಭಾರತದಲ್ಲಿ ವಿಸ್ತರಿಸಲು ನಡೆಸಿದ ಪ್ರಯತ್ನ ಅವರ ಸಾಮಾಜಿಕ ಕಾಳಜಿ ಮತ್ತು ಬದ್ಧತೆಯ ಮಹತ್ವವನ್ನು ತಿಳಿಸುತ್ತದೆ. ಇವರ ಪ್ರಮುಖ ಕೊಡುಗೆಗಳೆಂದರೆ ) ಪಾಲಿಟಿಕ್ ಮತ್ತು ರಿಲಿಜಿಯನ್", ಸೋಷಿಯಲಾಜಿಕಲ್ ಎಸ್ಸೇಸ್ ಆನ್ ವೀರಶೈವ್ಸಮ್, ಪರಿಶಿಷ್ಟ ಜಾತಿ ಮತ್ತು ಪಂಗಡಗಳ


ಸಾಮಾಜಿಕ ಆರ್ಥಿಕ ಪರಿಸ್ಥಿತಿ ಕುರಿತು ಇವರು ನಡೆಸಿದ ಸಂಶೋಧನೆ ಈಗಲೂ ಅತ್ಯಂತ ಮಹತ್ವದ್ದಾಗಿದೆ.


ಇರಾವತಿ ಕರ್ವೆ: ಇರಾವತಿ ಕರ್ವೆ ಅವರನ್ನು ಪ್ರಮುಖ ಸಮಾಜಶಾಸ್ತ್ರಜ್ಞರೆಂದು ಗುರುತಿಸಲಾಗಿದೆ. ಇವರು ಜಿ.ಎಸ್. ಘುರ್ಯೆ ಅವರ ಶಿಷ್ಯರಾಗಿದ್ದಾರೆ. ಪ್ರಸಿದ್ಧ ಸುಧಾರಣಾವಾದಿ, ಮಹರ್ಷಿ ಕರ್ವೆಯವರ ಸೊಸೆಯಾಗಿ ಬಂದ ಇರಾವತಿ ಕರ್ವೆಯವರಲ್ಲಿ ಸಾಮಾಜಿಕ, ರಾಷ್ಟ್ರೀಯ ಮತ್ತು ರಾಜಕೀಯ ವಿಚಾರಗಳ ಕಾಳಜಿ ಇತ್ತು. ಇವರು ಬೊಂಬಾಯಿ ವಿಶ್ವವಿದ್ಯಾಲಯದಲ್ಲಿ ಎಂ.ಎ ಪದವಿ ಪಡೆದು ಮತ್ತು ಪೂನಾದ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಇವರ ಕೊಡುಗೆಗಳು : ಕಿನ್‌ಷಿಪ್ ಆರ್ಗನೈಸೇಷನ್ ಇನ್ ಇಂಡಿಯಾ, ಫ್ಯಾಮಿಲಿ ಇನ್ ಇಂಡಿಯಾ, ಭಾರತೀಯ ಸಮಾಜ, ಸಂಸ್ಥೆಗಳು ಮತ್ತು ಬಂಧುತ್ವ ಇತ್ಯಾದಿ


ಕೃತಿಗಳು ಪ್ರಮುಖವಾದವು. ಎ.ಆರ್ ದೇಸಾಯಿ (1915-1994) ಭಾರತೀಯ ಸಮಾಜಶಾಸಜರ


ಸಾಲಿನಲ್ಲಿ ಎ.ಆರ್. ದೇಸಾಯಿ ಪ್ರಮುಖರು, ಯು.ಜಿ.ಸಿ ಯ ನ್ಯಾಷನಲ್ ಫೆಲೋ ಆಗಿ, ಬೊಂಬಾಯಿಯ ವಿಶ್ವವಿದ್ಯಾಲಯ ಸಮಾಜಶಾಸ್ತ್ರದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದರು. ಇವರ ಪೂರ್ಣ ಹೆಸರು ಅಕ್ಷಯ್ ರಮಣಲಾಲ್ ದೇಸಾಯಿ ಇವರು 1915ರಲ್ಲಿ ಜನಿಸಿದರು. ಬೊಂಬಾಯಿಯ ವಿಶ್ವವಿದ್ಯಾಲಯದಲ್ಲಿ ಘುರ್ಯ ಅವರ ವಿದ್ಯಾರ್ಥಿಯಾಗಿದ್ದು, ತದನಂತರ ಅಲ್ಲಿಯೇ ಪ್ರಾಧ್ಯಾಪಕರಾಗಿ, ಇಲಾಖೆ ಮುಖ್ಯಸ್ಥರಾಗಿದ್ದರು. ಇವರು ಸಮಾಜಶಾಸ್ತ್ರೀಯ ಅಧ್ಯಯನದಲ್ಲಿ ಮಾರ್ಕ್ಸವಾದಿ ದೃಷ್ಟಿಕೋನವನ್ನು ಅನುಸರಿಸುತ್ತಿದ್ದುದರಿಂದ ಅವರನ್ನು ಮಾರ್ಕ್ಸ್‌ವಾದಿ ಸಮಾಜಶಾಸ್ತ್ರಜ್ಞನೆಂದು ಕರೆಯಲಾಗುತ್ತದೆ. ಇವರ ದಿ ಸೋಷಿಯಾಲಾಜಿಕಲ್ ಬ್ಯಾಕ್‌ಗೌಂಡ್ ಆಫ್ ಇಂಡಿಯನ್ ನ್ಯಾಷನಲಿಸಂ ಎಂಬುದು ಇವರ ಅತ್ಯುತ್ತಮ ಕೃತಿಯಾಗಿದೆ. ಭಾರತದಲ್ಲಿ ಗ್ರಾಮೀಣ ಸಮಾಜಶಾಸ್ತ್ರ, ಇಂಡಿಯನ್ ಸೋಷಿಯಾಲಾಜಿಕಲ್ ಸೊಸೈಟ್ಟು ಸ ಅಂಡ್ ಅರ್ಬನೈಜೆಷನ್, ಇತ್ಯಾದಿ ಕೃತಿಗಳು ಪ್ರಸಿದ್ಧವಾಗಿವೆ.


Next Post Previous Post
No Comment
Add Comment
comment url