Karnataka revenue division's
1. ಕರ್ನಾಟಕದಲ್ಲಿ ಆಡಳಿತ ವಿಭಾಗಗಳು
ನಮ್ಮ ನಾಡು ಕರ್ನಾಟಕ, ನಮ್ಮ ರಾಜ್ಯಕ್ಕೆ ಸುಮಾರು ಎರಡು ಸಾವಿರ ವರ್ಷಗಳ ಚರಿತ್ರೆಯಿದೆ ಎಂದು ಹೇಳಲಾಗಿದೆ. ನಮ್ಮ ರಾಜ್ಯದ ಅನೇಕ ಭಾಗಗಳಲ್ಲಿ ಪ್ರಾಚೀನ ಶಿಲಾಯುಗದ ಕೇಂದ್ರಗಳಿವೆ. ಚರಿತೆಕಾರರು ಅಂತಹ ಸ್ಥಳಗಳನ್ನು ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಗುರುತಿಸಿದ್ದಾರೆ. ನಮ್ಮ ರಾಜ್ಯದ ಭವ್ಯ ಚರಿತ್ರೆಯ ಬಗ್ಗೆ ಮುಂದಿನ ತರಗತಿಗಳಲ್ಲಿ ನಾವು ಅಧ್ಯಯನ ಮಾಡುತ್ತೇವೆ. ಈ ಅಧ್ಯಾಯದಲ್ಲಿ ನಮ್ಮ ರಾಜ್ಯದ ನಾಲ್ಕು ವಿಭಾಗಗಳ ಬಗ್ಗೆ ಮತ್ತು ಅವುಗಳ ವಿಶೇಷತೆಗಳ ಬಗ್ಗೆ ತಿಳಿದುಕೊಳ್ಳೋಣ. ಪ್ರತಿ ವಿಭಾಗದಲ್ಲಿನ ಜಿಲ್ಲೆಗಳು, ವಿಭಾಗಗಳಲ್ಲಿನ ಪ್ರಾಕೃತಿಕ ಸಂಪನ್ಮೂಲ, ಕೃಷಿ, ಉದ್ದಿಮೆ, ಶಿಕ್ಷಣ, ಸಾಹಿತ್ಯ, ಕಲೆ, ಪ್ರವಾಸಿ ತಾಣಗಳು ಮುಂತಾದ ವಿಷಯಗಳ ಬಗ್ಗೆ ಚರ್ಚೆ ಮಾಡೋಣ, ಬ್ರಿಟಿಷರ ಆಡಳಿತ ಕಾಲದಲ್ಲಿ ವಿವಿಧ ಜಿಲ್ಲೆಗಳನ್ನು ರೂಪಿಸಲಾಯಿತು. ಅನೇಕ ಸಂದರ್ಭಗಳಲ್ಲಿ ಜಿಲ್ಲಾ ಕೇಂದ್ರಗಳು ಬದಲಾಗಿವೆ. ಕೆಲವು ಜಿಲ್ಲೆಗಳು ಚಿಕ್ಕದಾಗಿವೆ ಮತ್ತು ಕೆಲವು ವಿಸ್ತರಣೆಗೊಂಡಿವೆ. ಉದಾಹರಣೆಗೆ ಇಂದು ಯಾವುದನ್ನು ವಿಜಯಪುರ ಎಂದು ಕರೆಯುತ್ತಿದ್ದೇವೆಯ ಅದರ ಜಿಲ್ಲಾ ಕೇಂದ್ರ ಕಲಾದಗಿಯಾಗಿತ್ತು. ಮತ್ತೆ ಅದನ್ನು ವಿಜಯಪುರಕ್ಕೆ ಬದಲಾಯಿಸಲಾಯಿತು. ಸ್ವಾತಂತ್ರ್ಯಾ ನಂತರ ಹೊಸ ಜಿಲ್ಲೆಗಳನ್ನು ರಚಿಸಲಾಗಿದೆ. ದೊಡ್ಡ ಜಿಲ್ಲೆಗಳನ್ನು ಎಭಜಿಸಿ ಎರಡು ಜಿಲ್ಲೆಗಳನ್ನು ಮಾಡಲಾಗಿದೆ. ನಮ್ಮ ರಾಜ್ಯದಲ್ಲಿ ಆಡಳಿತದ ಅನುಕೂಲಕ್ಕೆ ನಾಲ್ಕು ಕಂದಾಯ ವಿಭಾಗಗಳನ್ನು ರೂಪಿಸಲಾಗಿದೆ. ಅವುಗಳು ಹೀಗಿವೆ: ಬೆಂಗಳೂರು ವಿಭಾಗ (ಒಂಬತ್ತು ಜಿಲ್ಲೆಗಳು), ಮೈಸೂರು ವಿಭಾಗ (ಎಂಟು ಜಿಲ್ಲೆಗಳು), ಬೆಳಗಾವಿ ವಿಭಾಗ (ಏಳು ಮತ್ತು ಕಲಬುರಗಿ ವಿಭಾಗ (ಆರು ಜಿಲ್ಲೆಗಳು). ಅದೇ ರೀತಿಯಲ್ಲಿ ವಿಭಾಗಕ್ಕೆ ವಿಭಾಗೀಯ ಅಧಿಕಾರಿಯಿರುತ್ತಾರೆ (ಡಿವಿಜನಲ್ ಕಮೀಷನರ್), ಈ ಭಾಗದಲ್ಲಿ ನಾಲ್ಕು ವಿಭಾಗಗಳಲ್ಲಿರುವ ಜಿಲ್ಲೆಗಳು, ಅವುಗಳ ವಿಶಿಷ್ಟತೆಗಳು, ಪ್ರಾಕೃತಿಕ ಸಂಪನ್ಮೂಲ ಕೃಷಿ, ಉದ್ದಿಮೆ, ನದಿಗಳು, ಬೆಳೆಗಳು, ಅರಣ್ಯಗಳು, ವಾಯುಗುಣ, ಕಲೆ, ಸಾಹಿತ್ಯ, ಜಾನಪದ, ಕ್ರೀಡೆ,
ಉತ್ಸವಗಳು ಮುಂತಾದ ಸಂಗತಿಗಳ ಬಗ್ಗೆ ತಿಳಿದುಕೊಳ್ಳೋಣ.
ಬೆಂಗಳೂರು ವಿಭಾಗ
ಈ ವಿಭಾಗದಲ್ಲಿ 9 ಜಿಲ್ಲೆಗಳಿವೆ. ಅವುಗಳ ಹೆಸರುಗಳು ಹೀಗಿವೆ: ಬೆಂಗಳೂರು ನಗರ, ಬೆಂಗಳೂರು ಗ್ರಾಮೀಣ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು, ಚಿತ್ರದುರ್ಗ, ದಾವಣಗೆರೆ ಮತ್ತು ಶಿವಮೊಗ್ಗ (ಭೂಪಟ ನೋಡಿ), ನಮ್ಮ ರಾಜ್ಯದ ದಕ್ಷಿಣ ಭಾಗದಲ್ಲಿ ಇವು ನೆಲೆಗೊಂಡಿದೆ.
ಚಾರಿತ್ರಿಕ ಹಿನ್ನೆಲೆ
ಕರ್ನಾಟಕದಷ್ಟೇ ಪ್ರಾಚೀನ ಚಾರಿತ್ರಿಕ ಹಿನ್ನೆಲೆ ಬೆಂಗಳೂರು ವಿಭಾಗಕ್ಕಿದೆ. ಈ ಭಾಗವನ್ನು
ಮೊದಲು ಆಳಿದ ಅರಸರೆಂದರೆ ಕುವಲಾಲಪುರವನ್ನು (ಈಗಿನ ಕೋಲಾರ) ರಾಜಧಾನಿಯನ್ನಾಗಿ ಮಾಡಿಕೊಂಡಿದ್ದ ಗಂಗರ ಮನೆತನದ ಅರಸರು, ಅವರ ಆಳ್ವಿಕೆ ಆಳಿದ ಮೇಲೆ ಈ ಪ್ರದೇಶವು ಚೋಳರ, ಹೊಯ್ಸಳರ, ವಿಜಯನಗರ, ಮರಾಠರ, ಮೈಸೂರು ಒಡೆಯರ ಮತ್ತು ವಿಜಯಪುರದ | ಆದಿಲ್‌ಶಾಹಿ ಮನೆತನದ ಅರಸರ ಆಳ್ವಿಕೆಗೆ ಒಳಗಾಯಿತು. ವಿಜಯನಗರ ಅರಸರ ಆಳ್ವಿಕೆಯಲ್ಲಿ ಅನೇಕ ಪಾಳೆಗಾರರು ವಿವಿಧ ಭಾಗಗಳಲ್ಲಿ ಆಳ್ವಿಕೆ ನಡೆಸುತ್ತಿದ್ದರು. ಅವರು ಆಳುತ್ತಿದ್ದ ಪ್ರದೇಶವನ್ನು ಪಾಳೆಪಟ್ಟು ಎಂದು ಕರೆಯಲಾಗುತ್ತಿತ್ತು. ಈ ಪಾಳೆಗಾರರಿಗೆ ನಾಯಕರೆಂಬ ಹೆಸರಿತ್ತು. ಈ ಪಾಳೆಗಾರರು ವಿಜಯನಗರ ಅರಸರಿಗೆ ವಿಧೇಯರಾಗಿದ್ದರು. ಅವರಿಗೆ ಪಾಳೆಗಾರರು ಕಪ್ಪ ಮತ್ತು ಕಾಣಿಕೆ ನೀಡುತ್ತಿದ್ದರು. ಪ್ರಮುಖ ಪಾಳೆಪಟ್ಟುಗಳೆಂದರೆ ಕೆಳದಿ, ಚಿತ್ರದುರ್ಗ, ಯಲಹಂಕ, ಚಿಕ್ಕಬಳ್ಳಾಪುರ
ಪ್ರಾಕೃತಿಕ ಸಂಪನ್ಮೂಲ
ಪ್ರಕೃತಿದತ್ತವಾದ ಸಂಗತಿಗಳನ್ನು ಪ್ರಾಕೃತಿಕ ಸಂಪನ್ಮೂಲ ಎಂದು ಕರೆಯುತ್ತೇವೆ. ನದಿ, ಕಾಡು, ಕಣಿವೆ, ಜಲಪಾತಗಳು, ಖನಿಜ ಗಣಿಗಳು, ವನ್ಯಮೃಗಗಳು, ಮಣ್ಣು ಮುಂತಾದವೆಲ್ಲ ಪ್ರಕೃತಿಯು
11
ನಮಗೆ ನೀಡಿರುವ ಸಂಪತ್ತು. ಈ ವಿಭಾಗವು ಉಷ್ಣವಲಯದ ಮಾನ್ಸೂನ್ ವಾಯುಗುಣವನ್ನು ಹೊಂದಿದೆ. ಆದರೆ ವಿಭಾಗದ ಎಲ್ಲ ಜಿಲ್ಲೆಗಳಲ್ಲಿ ಏಕರೂಪದ ಹವಾಮಾನವಿಲ್ಲ. ಕೋಲಾರ ಜಿಲ್ಲೆ ಅತಿ ಉಷ್ಣವಲಯಕ್ಕೆ ಸೇರಿದ್ದರೆ, ಶಿವಮೊಗ್ಗ ಅತಿಯಾದ ಮಳೆ ಬೀಳುವ ಪ್ರದೇಶವಾಗಿದೆ. ಆದರೆ ಚಿತ್ರದುರ್ಗ ಅತಿ ಕಡಿಮೆ ಮಳೆ ಬೀಳುವ ಜಿಲ್ಲೆಯಾಗಿದೆ. ಉಳಿದ ಜಿಲ್ಲೆಗಳಾದ ತುಮಕೂರು, ದಾವಣಗೆರೆ, ರಾಮನಗರ, ಚಿಕ್ಕಬಳ್ಳಾಪುರ ಮುಂತಾದವು ಸಾಧಾರಣ ಮಳೆ ಬೀಳುವ ಜಿಲ್ಲೆಗಳಾಗಿವೆ.
ಈ ವಲಯದ ಅನೇಕ ಮುಖ್ಯ ನದಿಗಳು ಪಶ್ಚಿಮಘಟ್ಟದಲ್ಲಿ ಹುಟ್ಟುತ್ತವೆ. ಈ ವಿಭಾಗದ ಪ್ರಮುಖ ನದಿಗಳೆಂದರೆ ಉತ್ತರ ಪಿನಾಕಿನಿ, ದಕ್ಷಿಣ ಪಿನಾಕಿನಿ, ವೇದಾವತಿ, ಶಿಂಷಾ, ತುಂಗಭದ್ರಾ, ಶರಾವತಿ, ವರದಾ ಮುಂತಾದವು. ಶರಾವತಿಯು ಪಶ್ಚಿಮ ದಿಕ್ಕಿಗೆ ಹರಿಯುವ ನದಿ, ಇದರಿಂದ ನಿರ್ಮಾಣವಾದ ವಿಶ್ವವಿಖ್ಯಾತ ಜೋಗಜಲಪಾತ ಶಿವಮೊಗ್ಗ ಜಿಲ್ಲೆಯಲ್ಲಿದೆ. ಮುತ್ಯಾಲಮಡು ಎಂಬ ಜಲಾಶಯ ಬೆಂಗಳೂರು ನಗರ ಜಿಲ್ಲೆಯಲ್ಲಿದೆ. ಗಾಜನೂರು ಆಣೆಕಟ್ಟೆ ಮತ್ತು ತುಂಗಾ ಅಣೆಕಟ್ಟೆ ಶಿವಮೊಗ್ಗ ಜಿಲ್ಲೆಯಲ್ಲಿವೆ. ಈ ವಿಭಾಗದಲ್ಲಿ ನೂರಾರು ಪ್ರಸಿದ್ದ ಕೆರೆಗಳಿವೆ. ಮೈಸೂರು ಅರಸರು ಅನೇಕ ಅಣೆಕಟ್ಟೆಗಳನ್ನು ಕಟ್ಟಿಸಿದ್ದರು. ವಾಣಿವಿಲಾಸ ಅಣೆಕಟ್ಟೆ ಅಂತಹ ಒಂದು ನೀರಾವರಿ ಯೋಜನೆಯಾಗಿದೆ. ಇದು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನಲ್ಲಿದೆ. ಅದೇ ರೀತಿಯಲ್ಲಿ ಮಾರ್ಕೋನಹಳ್ಳಿ ಜಲಾಶಯ ತುಮಕೂರು ಜಿಲ್ಲೆಯಲ್ಲಿದೆ.
ಪರಿಸರ ಮಾಲಿನ್ಯ, ಅರಣ್ಯ ನಾಶ, ಅತಿಯಾದ ನಗರೀಕರಣ ಮುತಾದ ಕಾರಣಗಳಿಂದ ನಮ್ಮ ಅನೇಕ ನದಿಗಳು ಬತ್ತಿ ಹೋಗುತ್ತಿವೆ. ಬೆಂಗಳೂರು ನಗರ ಜಿಲ್ಲೆಯ ಅನೇಕ ನದಿಗಳು ನಾಶದ ಅಂಚನ್ನು ತಲುಪಿವೆ. ಅನೇಕ ಕೆರೆಗಳು ಭೂ ಆಕ್ರಮಣದಿಂದ ನಾಶವಾಗುತ್ತಿವೆ. ಇದರಿಂದಾಗಿ ನೀರಿನ ತೀವ್ರ ಅಭಾವ ಉಂಟಾಗುತ್ತಿದೆ. ಕೆರೆಗಳ, ಜಲಮೂಲಗಳ ಮತ್ತು ಅಂತರ್ಜಲದ ರಕ್ಷಣೆಗೆ ನಾವೆಲ್ಲರೂ ಗಮನ ನೀಡುವ ಅಗತ್ಯವಿದೆ. ಈ ವಿಭಾಗದಲ್ಲಿ ಅನೇಕ ಖನಿಜ ನಿಕ್ಷೇಪಗಳಿವೆ. ಇಡೀ ದೇಶದಲ್ಲಿ ಸಮೃದ್ಧವಾದ ಚಿನ್ನದ ಗಣಿಗಳು
ಕರ್ನಾಟಕ ರಾಜ್ಯದಲ್ಲಿದ್ದು, ಕೋಲಾರ ಚಿನ್ನದ ಗಣಿ ಪ್ರಸಿದ್ಧವಾಗಿತ್ತು. ಆದರೆ ಅಲ್ಲಿನ ಚಿನ್ನದ ಅದಿರು
ಮುಗಿದು ಹೋಗಿದೆ. ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಕಬ್ಬಿಣದ ಅದಿರು ನಿಕ್ಷೇಪಗಳಿವೆ
ಮತ್ತು ಚಿತ್ರದುರ್ಗದಲ್ಲಿ ತಾಮ್ರದ
ಗಣಿಗಳಿವೆ. ಪರಮಾಣು ಶಕ್ತಿ ಉತ್ಪಾದನೆಗೆ ಅಗತ್ಯವಾದ
ಚಿತ್ರದುರ್ಗದಲ್ಲಿ ದೊರೆಯುತ್ತದೆ ಎಂದು ಹೇಳಲಾಗಿದೆ.
ಅರಣ್ಯಗಳು, ವನ್ಯಪ್ರಾಣಿಗಳು, ರಾಷ್ಟ್ರೀಯ ಉದ್ಯಾನವನಗಳು
ಬೆಂಗಳೂರು ವಿಭಾಗದ ಶಿವಮೊಗ್ಗ ಜಿಲ್ಲೆಯಲ್ಲಿ ದಟ್ಟ ಅರಣ್ಯವಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಅರಣ್ಯ ಪ್ರದೇಶದ ವಿಸ್ತೀರ್ಣ ಕಡಿಮೆ, ಈ ವಿಭಾಗದ ಜಿಲ್ಲೆಗಳಲ್ಲಿ ನಿತ್ಯ ಹರಿದ್ವರ್ಣ ಅರಣ್ಯದಿಂದ ಎಲೆ ಉದುರುವ ಅರಣ್ಯದವರೆಗೆ ವಿವಿಧ ಬಗೆಯ ಅರಣ್ಯಗಳಿವೆ, ಸಹ್ಯಾದ್ರಿ ಪರ್ವತ ಶ್ರೇಣಿಯು ಶಿವಮೊಗ್ಗ ಜಿಲ್ಲೆಯ ಗಡಿ ಭಾಗದಲ್ಲಿ ಹಾದು ಹೋಗುತ್ತದೆ. ಬಿದಿರು, ಆಲದ ಮರಗಳು,
12
ಹುಣಿಸೆ ಮರಗಳು, ಶ್ರೀಗಂಧ, ದಂಡಿಗೆ, ತೇಗ, ಜಾಲಿ, ಮಾವಿನಮರಗಳು, ಬೇವಿನಮರಗಳು ಮುಂತಾದವು ಇಲ್ಲಿನ ಅರಣ್ಯಗಳಲ್ಲಿ ಬೆಳೆಯುತ್ತವೆ. ಕಿರು ಅರಣ್ಯ ಉತ್ಪನ್ನಗಳು ಅನೇಕರಿಗೆ ವರಮಾನದ ಮೂಲಗಳಾಗಿವೆ.
ಈ ವಿಭಾಗದಲ್ಲಿ ಅನೇಕ ವಿಧದ ವನ್ಯಪ್ರಾಣಿಗಳಿವೆ. ಕಾಡುಬೆಕ್ಕು, ಹುಲಿ, ಚಿರತೆ, ಕಾಡೆಮ್ಮೆ, ಕಾಡಹಂದಿ, ಜಿಂಕೆಗಳು, ಕರಡಿ, ತೋಳ ಮುಂತಾದವು. ಅರಣ್ಯ ರಕ್ಷಣೆಗಾಗಿ ಮತ್ತು ವನ್ನಪಾಣಿಗಳ ಪೋಷಣೆಗಾಗಿ ಅನೇಕ ಅರಣ್ಯಧಾಮಗಳನ್ನು, ವನ್ಯಪ್ರಾಣಿ ಧಾಮಗಳನ್ನು, ರಾಷ್ಟ್ರೀಯ ಉದ್ಯಾನವನಗಳನ್ನು ಸ್ಥಾಪಿಸಲಾಗಿದೆ. : ಬೆಂಗಳೂರು ವಿಭಾಗದಲ್ಲಿರುವ ಪ್ರಮುಖ ಧಾಮಗಳು ಹೀಗಿವೆ
ಜೋಗಿಮಟ್ಟಿ ಅರಣ್ಯಧಾಮ, ಚಿತ್ರದುರ್ಗ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ, ಬೆಂಗಳೂರು, ಭದ್ರಾ ವನ್ಯಮೃಗ ಧಾಮ- ಶಿವಮೊಗ್ಗ, ಶರಾವತಿ ವನ್ಯಮೃಗೆ ಧಾಮ ವನ್ಯಮೃಗಧಾಮ- ಶಿವಮೊಗ್ಗ, ಗುಡವಿ ಪಕ್ಷಿಧಾಮ- ಶಿವಮೊಗ್ಗ ಜಿಲ್ಲೆ, ಮಂಡಗದ್ದೆ ಪಕ್ಷಿಧಾಮ - ಶಿವಮೊಗ್ಗ, ಶೆಟ್ಟಿಹಳ್ಳಿ ಶಿವಮೊಗ್ಗ ಜಿಲ್ಲೆ, ಕಗ್ಗಲಡು ಪಕ್ಷಿ ಧಾಮ- ತುಮಕೂರು ಜಿಲ್ಲೆ, ರಾಮದೇವರಬೆಟ್ಟ ರಣಹದ್ದು ಪಕ್ಷಿಧಾಮ- ರಾಮನಗರ, ಜಯಮಂಗಲಿ ಕೃಷ್ಣಮೃಗ ವನ್ಯಧಾಮ, ತುಮಕೂರು,
ಮಕ್ಕಳೆ, ನೀವು ವನ್ಯಮೃಗಗಳಾದ ಹುಲಿ, ಕರಡಿ, ಚಿರತೆ, ಆನೆ, ಜಿಂಕೆ ಮುಂತಾದವುಗಳನ್ನು ಅರಣ್ಯ
ಪ್ರದೇಶದಲ್ಲಿ ನೋಡಲು ಬಯಸುವಿರಾ? ಹಾಗಾದರೆ ನಿಮ್ಮ ವಿಭಾಗದಲ್ಲಿರುವ ವನ್ಯಮೃಗಧಾಮಗಳಿಗೆ
ಪಕ್ಷಿಧಾಮಗಳಿಗೆ ಭೇಟಿ ನೀಡಿ, ಅರಣ್ಯದಲ್ಲಿರುವ ಪ್ರಾಣಿಗಳನ್ನು ನೋಡಿ ಸಂತೋಷಪಡಿ,
ಕೃಷಿ ಮತ್ತು ಉದ್ದಿಮೆಗಳ ಬೆಳವಣಿಗೆ
ಕೃಷಿಯು ಬೆಂಗಳೂರು ವಿಭಾಗದ ಜನರ ಪ್ರಧಾನ ಕಸುಬಾಗಿದೆ. ಈ ವಿಭಾಗದಲ್ಲಿ ಹೆಚ್ಚು ಒಣ ಭೂಮಿ ಬೇಸಾಯವಿದೆ. ಮಳೆಯನ್ನು ನಂಬಿಕೊಂಡೇ ಇಲ್ಲಿ ವ್ಯವಸಾಯ ನಡೆಯುತ್ತಿದೆ. ಏಕ ಮಣ್ಣು ಕೆಲವು ಭಾಗದಲ್ಲಿದೆ. ಪ್ರಮುಖ ವಾಣಿಜ್ಯ ಬೆಳೆಗಳೆಂದರೆ ತೆಂಗಿನಕಾಯಿ, ಅಡಕೆ ಹತ್ತಿ, ಕಬ್ಬು ಮುಂತಾದವು. ರೇಷ್ಮೆ ಉದ್ಯಮಕ್ಕೆ ಮೂಲವಾದ ಹಿಪ್ಪುನೇರಳೆಯನ್ನು ಬೆಂಗಳೂರು
ಜಿಲ್ಲೆ, ರಾಮನಗರ ಜಿಲ್ಲೆಗಳಲ್ಲಿ ಬೆಳೆಯುತ್ತಾರೆ. ಸಪೋಟ, ಪಪ್ಪಾಯ, ಹಲಸಿನಹಣ್ಣು, ಕಿತ್ತಲೆಹಣ್ಣು, ಬಾಳೆಹಣ್ಣು ಮುಂತಾದ ಹಣ್ಣುಗಳನ್ನು ಬೆಳೆಯಲಾಗುತ್ತದೆ.
ಈ ವಿಭಾಗದಲ್ಲಿನ ಜನರು ಹೆಚ್ಚಾಗಿ ರಾಗಿ ಮುದ್ದೆ, ಮತ್ತು ಅಕ್ಕಿ ಬಳಸುತ್ತಾರೆ. ರಾಗಿ ಮತ್ತು ಅಕ್ಕಿ ರೊಟ್ಟಿಯನ್ನು ತಿನ್ನುತ್ತಾರೆ. ಇತ್ತೀಚಿಗೆ ಗೋಧಿ ಚಪಾತಿಯನ್ನು ಬಳಸುವುದನ್ನು ರೂಢಿಸಿಕೊಂಡಿದ್ದಾರೆ. ಹಬ್ಬಗಳಲ್ಲಿ ಪಾಯಸ, ಹೋಳಿಗೆ, ಸಿಹಿಕಿಚ್ಚಡಿ, ಶಾವಿಗೆ ಮುಂತಾದ ಸಿಹಿ ತಿನುಸುಗಳನ್ನು ಸೇವಿಸುತ್ತಾರೆ.
ಅಲ್ಲಿ ರೈತರು ತಮ್ಮ ಸರಕುಗಳನ್ನು ಮಾರಾಟ ಮಾಡಬಹುದು, ಸರ್ಕಾರವು ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಉಗ್ರಾಣಗಳನ್ನು ನಿರ್ಮಿಸಿದೆ. ಅಲ್ಲಿ ರೈತರು ತಮ್ಮ ಉತ್ಪನ್ನಗಳನ್ನು ದಾಸ್ತಾನಿಡಬಹುದು.
ಉದ್ದಿಮೆಗಳು
ನಮ್ಮ ರಾಜ್ಯದ ಕೈಗಾರಿಕಾ ವಲಯದ ನಿರ್ಮಾತೃ ಸರ್. ಎಂ. ವಿಶ್ವೇಶ್ವರಯ್ಯ, ಇವರು ನಾಲ್ವಡಿ ಕೃಷ್ಣರಾಜ ಒಡೆಯರ ಮುಂದಾಲೋಚನೆಗಳನ್ನು ಕಾರ್ಯರೂಪಕ್ಕೆ ಇಳಿಸಿದರು. ಇಂದು
ಕೈಗಾರಿಕೆಗಳನ್ನು ಸ್ಥಾಪಿಸದೆ ಅಭಿವೃದ್ಧಿಯನ್ನು ಸಾಧಿಸಿಕೊಳ್ಳುವುದು ಸಾಧ್ಯವಿಲ್ಲ. ಬೆಂಗಳೂರು, ಭದ್ರಾವತಿ, ತುಮಕೂರು, ಶಿವಮೊಗ್ಗ ಮುಂತಾದ ಸ್ಥಳಗಳಲ್ಲಿ ದೊಡ್ಡ ಕಾರ್ಖಾನೆಗಳನ್ನು ನಿರ್ಮಿಸಲಾಗಿದೆ. ಬೆಂಗಳೂರು ರಾಷ್ಟ್ರದಲ್ಲಿಯೇ ಪ್ರಮುಖ ಕೈಗಾರಿಕಾ ಕೇಂದ್ರವಾಗಿದೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆಯಿದೆ. ಇದನ್ನು 1923ರಲ್ಲಿ ಸ್ಥಾಪಿಸಲಾಗಿದೆ. ಅದನ್ನು ಇಂದು ವಿಶ್ವೇಶ್ವರಯ್ಯ ಕಬ್ಬಿಣ ಸರ್. ಎಂ. ವಿಶ್ವೇಶ್ವರಯ್ಯ ಮತ್ತು ಉಕ್ಕು ನಿಯಮಿತ ಕಾರ್ಖಾನೆ ಎಂದು ಕರೆಯಲಾಗುತ್ತಿದೆ. ಅಲ್ಲಿ ಕಾಗದದ ಕಾರ್ಖಾನೆಯೂ ಇದೆ. ಇದನ್ನು 1936ರಲ್ಲಿ ಸ್ಥಾಪಿಸಲಾಗಿದೆ. ರಾಜ್ಯದ ಮೊದಲ ಸಿಮೆಂಟ್ ಕಾರ್ಖಾನೆಯು ಭದ್ರಾವತಿಯಲ್ಲಿ ಸ್ಥಾಪನೆಗೊಂಡಿತು, ತುಮಕೂರು ಜಿಲ್ಲೆಯ ಅಮ್ಮಸಂದ್ರದಲ್ಲಿ ಬಿರ್ಲಾ ಕಂಪನಿಯ ಸಿಮೆಂಟ್ ಕಾರ್ಖಾನೆಯಿದೆ, ಬೆಂಗಳೂರು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಉದ್ದಿಮೆಗಳಿಗೆ ಪ್ರಸಿದ್ಧಿಯಾಗಿದೆ. ಕೈಗಾರಿಕೆಗಳು ಉದ್ಯೋಗದ ಮೂಲಗಳಾಗಿವೆ.
ಬಟ್ಟೆ ರಫ್ತು ವ್ಯಾಪಾರದಲ್ಲಿ ಕರ್ನಾಟಕವು ದೇಶದಲ್ಲಿ ಎರಡನೆಯ ಸ್ಥಾನದಲ್ಲಿದೆ. ನಮ್ಮ ವಿಭಾಗದ ದೊಡ್ಡಬಳ್ಳಾಪುರ, ಆನೇಕಲ್ ಮುಂತಾದ ನಗರಗಳಲ್ಲಿ ಸರ್ಕಾರ ಸಿದ್ಧ ಉಡುಪಿನ ಪಾರ್ಕುಗಳನ್ನು ಸ್ಥಾಪಿಸಿದೆ. ಬೆಂಗಳೂರಿನಲ್ಲಿ ವಿಮಾನ ಕಾರ್ಖಾನೆ, ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಉದ್ದಿಮೆಗಳು ಕಾರ್ಯ ನಿರತವಾಗಿವೆ. ಕೆಲವು ಉದ್ದಿಮೆಗಳು ಸಾರ್ವಜನಿಕ ವಲಯದಲ್ಲಿದ್ದರೆ ಉಳಿದವು ಖಾಸಗಿ ಮಾಲೀಕತ್ವದಲ್ಲಿವೆ.