ಭೂಮಿಯ ಪ್ರಮುಖ ಭೂಸ್ವರೂಪ

  ಭೂಮಿಯ ಮೇಲೆ ಕಂಡುಬರುವ ಶಿಲೆಗಳು ಮತ್ತು ಶಿಲಾವಸ್ತುಗಳಿಂದ ನೈಸರ್ಗಿಕವಾಗಿ ನಿರ್ಮಾಣವಾದ ಯಾವುದೇ ಸ್ವರೂಪಕ್ಕೆ ಭೂಸ್ವರೂಪವೆನ್ನುವರು. ಭೂಸ್ವರೂಪಗಳು ಪರ್ವತಾವಳಿಯಷ್ಟು ದೊಡ್ಡದಾಗಿರಲೂಬಹುದು ಅಥವಾ ಒಂದು ಗುಡ್ಡದಷ್ಟು ಚಿಕ್ಕದಾಗಿರಲೂಬಹುದು. ಭೂಸ್ವರೂಪಗಳು ಪರಿಸರದಲ್ಲಿ ಕಂಡುಬರುವ ನೈಸರ್ಗಿಕ ಲಕ್ಷಣಗಳಾಗಿವೆ. ಇವುಗಳು ಭೂಮಿಯ ಮೇಲೆ ಕಂಡುಬರುವ ಪ್ರಾಕೃತಿಕ ಸ್ವರೂಪಗಳಾಗಿವೆ. ಉದಾ : ಕಣಿವೆಗಳು, ಪ್ರಸ್ಥಭೂಮಿಗಳು, ಪರ್ವತಗಳು, ಮೈದಾನಗಳು, ಗುಡ್ಡಗಳು, ಲೋಯಸ್ ಮೈದಾನಗಳು ಇತ್ಯಾದಿ.


ಭೂಮಿಯ ಪ್ರಮುಖ ಭೂಸ್ವರೂಪಗಳೆಂದರೆ : 1) ಪರ್ವತಗಳು 2) ಪ್ರಸ್ಥಭೂಮಿಗಳು ಹಾಗೂ


3) ಮೈದಾನಗಳು, ಉಳಿದ ಚಿಕ್ಕಗಾತ್ರದ ಭೂಸ್ವರೂಪಗಳೆಂದರೆ ಗುಡ್ಡಗಳು, ದಿನ್ನೆಗಳು, ಕಣಿವೆಗಳು (ತಗ್ಗುಗಳು ಇತ್ಯಾದಿ. ಭೂವಿಜ್ಞಾನಿಗಳ ಅಭಿಪ್ರಾಯದಂತೆ ಭೂಸ್ವರೂಪಗಳು ಭೂಮಿಯ ಆಂತರಿಕ ಶಕ್ತಿ ಹಾಗೂ ಬಾಹ್ಯ ಶಕ್ತಿಗಳಿಂದ ಉತ್ಪತ್ತಿಯಾಗಿರುತ್ತವೆ.


4.1 ಭೂರಚನಾ ಪ್ರಕ್ರಿಯೆಗಳು


ಅನೇಕ ಪ್ರಕಾರದ ನೈಸರ್ಗಿಕ ಕರ್ತೃಗಳ ಕಾರ್ಯಾಚರಣೆಯಿಂದ ಭೂಮಿಯ ಮೇಲೆ ನಿರಂತರವಾದ ಬದಲಾವಣೆಗಳು ಉಂಟಾಗುತ್ತವೆ. ಭೂಮಿಯ ಮೇಲ್ದಾಗದಲ್ಲಿ ಪ್ರಭಾವ ಬೀರುವ ಕರ್ತೃಗಳಿಗೆ ಬಾಹ್ಯ ಶಕ್ತಿಗಳೆಂದು ಕರೆಯುವರು ಹಾಗೂ ಭೂಮಿಯ ಒಳಭಾಗದಲ್ಲಿ ಪ್ರಭಾವ ಬೀರುವ ಕರ್ತೃಗಳಿಗೆ ಆಂತರಿಕ ಶಕ್ತಿಗಳೆನ್ನುವರು. ಬಾಹ್ಯ ಹಾಗೂ ಆಂತರಿಕ ಶಕ್ತಿಗಳ ಕಾರ್ಯಕ್ಕೆ ಭೂನಿರ್ಮಾಣದ ಪ್ರಕ್ರಿಯೆಗಳೆನ್ನುವರು.


ಆಂತರಿಕ (ಅಂತರ್ಜನಿತ) ಶಕ್ತಿಗಳು : ಇವುಗಳು ಭೂಮಿಯ ಒಳಭಾಗದ ಶಕ್ತಿಗಳಾಗಿವೆ. ಇವುಗಳು ಭೂಭಾಗಗಳನ್ನು ನಿರ್ಮಿಸುವ ಶಕ್ತಿಗಳಾಗಿವೆ. ಭೂರಚನಾ ಕಾರ್ಯವು ಭೂಮಿಯ ಮೇಲ್ಪದರಿನಲ್ಲಿ ಚಲನೆಯನ್ನು ಉಂಟುಮಾಡುವ (ಭೂವಿರೂಪಣೆ), ಅದರ ಕೆಲವು ಭಾಗಗಳನ್ನು ಮೇಲಕ್ಕೆತ್ತುವ ಪ್ರಕ್ರಿಯೆಯಾಗಿರುತ್ತದೆ. ಇದು ಪರ್ವತಗಳನ್ನು ನಿರ್ಮಿಸುವ (ಪರ್ವತ ರಚನಾಕ್ರಿಯೆ) ಹಾಗೂ ಭೂಖಂಡಗಳನ್ನು (ಭೂರಚನಾಕ್ರಿಯೆ) ನಿರ್ಮಿಸುವ ಪ್ರಕ್ರಿಯೆಗಳನ್ನು ಒಳಗೊಂಡಿರುತ್ತದೆ. ಭೂಮಿಯ ಮೇಲ್ಪದರಿನಲ್ಲಿ ಹಾನಿ ಉಂಟು ಮಾಡುವ ಜ್ವಾಲಾಮುಖಿಗಳು ಹಾಗೂ ಭೂಕಂಪಗಳು ಆಂತರಿಕ ಶಕ್ತಿಗಳಾಗಿವೆ.


ಬಾಹ್ಯ (ಬಹಿರ್ಜನಿತ) ಶಕ್ತಿಗಳು : ಇವುಗಳು ಭೂಮಿಯ ಮೇಲ್ಬಾಗದಲ್ಲಿ ಕಾರ್ಯ ನಿರ್ವಹಿಸುವ ಶಕ್ತಿಗಳಾಗಿವೆ. ಇವುಗಳಿಂದ ಸವಕಳಿ ಹಾಗೂ ಸಂಚಯನ ಕ್ರಿಯೆಗಳು ಉಂಟಾಗುತ್ತವೆ. ಮುಖ್ಯವಾದ ಬಾಹ್ಯ ಶಕ್ತಿಗಳೆಂದರೆ ನದಿ, ಹಿಮನದಿ, ಗಾಳಿ, ಸಮುದ್ರದ ಅಲೆಗಳು ಇತ್ಯಾದಿ.


ಭಗ್ನಾವಶೇಷಗಳ ಚಲನೆ


ಭಗ್ನಾವಶೇಷಗಳ ಚಲನೆಯು ನೇರವಾಗಿ ಗುರುತ್ವಾಕರ್ಷಣ ಬಲವನ್ನು ಅವಲಂಬಿಸಿರುತ್ತದೆ. ಈ ಕ್ರಿಯೆಯಲ್ಲಿ ಶಿಲಾ ಭಗ್ನಾವಶೇಷಗಳು ಇಳಿಜಾರಿಗನುಗುಣವಾಗಿ ಸ್ಥಳಾಂತರಗೊಳ್ಳುತ್ತವೆ. ಇದು ಭೂವಸ್ತುಗಳ ಪೋಲಾಗುವಿಕೆಯಾಗಿರುತ್ತದೆ. ಆದರೆ ಇದು ಹರಿಯುವ ನೀರು, ಗಾಳಿ, ಹಿಮನದಿ ಮುಂತಾದವುಗಳಿಂದ ನಡೆಯುವ ಸಾಗಾಣಿಕೆಯ ಕಾರ್ಯವನ್ನು ಒಳಗೊಂಡಿರುವುದಿಲ್ಲ.


ಭಗ್ನಾವಶೇಷಗಳ ಚಲನೆ ಹಾಗೂ ಅವುಗಳಿಂದ ಉತ್ಪತ್ತಿಯಾಗುವ ಭೂಸ್ವರೂಪಗಳು ವೈವಿಧ್ಯತೆಯಿಂದ ಕೂಡಿರುತ್ತವೆ. ಶಿಲಾಭಗ್ನಾವಶೇಷಗಳ ಚಲನೆಯು ಈ ಕೆಳಗಿನ ಅಂಶಗಳನ್ನು ಅವಲಂಬಿಸಿರುತ್ತದೆ. ಆ) ಚಲನೆಗೆ ಒಳಪಟ್ಟ ವಿವಿಧ ಭೂ ವಸ್ತುಗಳ ಪ್ರಕಾರ ಬ) ಉಂಟಾಗುವ ವಿವಿಧ ಚಲನೆಗಳು ಮತ್ತು ಕ) ಭೂ ವಸ್ತುಗಳ ಭೌತಿಕ ಗುಣಧರ್ಮಗಳು, ಭಗ್ನಾವಶೇಷಗಳ ಚಲನೆಯ ವಿವಿಧ ಪ್ರಕಾರಗಳೆಂದರೆ ಬಂಡೆಗಳು ಉರುಳುವುದು, ಕಲ್ಲುಹರಳು, ಭೂಭಾಗ ಜರುಗುವುದು, ಮಣ್ಣುಹರಿದು ಬರುವುದು, ಭೂಕುಸಿತ, ಶಿಲಾಕುಸಿತ ಇತ್ಯಾದಿ.


ಬಾಹ್ಯ ಹಾಗೂ ಆಂತರಿಕ ಶಕ್ತಿಗಳು ಭೂಮಿಯ ಮೇಲೆ ಅನೇಕ ಬದಲಾವಣೆಗಳನ್ನು ಉಂಟುಮಾಡುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಭೂನಿರ್ಮಾಣದ ಪ್ರಕ್ರಿಯೆಗಳು ಪರ್ವತ, ಭೂಖಂಡ ಹಾಗೂ ಉಳಿದ ಭೂ ಸ್ವರೂಪಗಳನ್ನು ನಿರ್ಮಿಸುತ್ತವೆ, ಭೂಮಿಯ ಮೇಲೆಗೆ ವಿವಿಧ ಆಕಾರಗಳು ಬರಲು ಅಗತ್ಯವಾದ ಕೊರೆಯುವ, ರೂಪ ನೀಡುವ ಕಾರ್ಯವನ್ನು ಭೂ ನಿರ್ಮಾಣದ ಪ್ರಕ್ರಿಯೆಗಳು ನಡೆಸುತ್ತವೆ. ಈ ಎಲ್ಲ ಕ್ರಿಯೆಗಳ ಅಂತಿಮ ಪರಿಣಾಮವೆಂದರೆ ಪ್ರಾಕೃತಿಕ ಸ್ವರೂಪಗಳು ಮತ್ತು ಮಣ್ಣಿನ ನಿರ್ಮಾಣ ಹಾಗೂ ಇವುಗಳು ಭೂ ಬಳಕೆ, ಸಸ್ಯವರ್ಗ, ಜೀವಸಮೂಹಗಳು, ವನಸತಿ, ಸೂಕ್ಷ್ಮ ಜೀವಿಗಳು ಹಾಗೂ ಜೈವಿಕ ವೈವಿಧ್ಯತೆಗಳ ಮೇಲೆ ಪ್ರಭಾವ ಬೀರುವುದು.


ಶಿಥಿಲೀಕರಣ


ಶಿಲೆಗಳು ಒಡೆದು ಚೂರಾಗುವ ಮತ್ತು ವಿಭಜನೆಗೊಂಡು ಕ್ಷೀಣಿಸುವ ಪ್ರಕ್ರಿಯೆಯನ್ನು “ಶಿಥಿಲೀಕರಣ” ಎನ್ನುವರು. ಉಷ್ಣಾಂಶ, ಒತ್ತಡ, ಮಳೆ, ಹಿಮ, ಗಾಳಿ, ಸಸ್ಯಗಳು, ಪ್ರಾಣಿಗಳು ಮತ್ತು ಮಾನವ ಶಿಥಿಲೀಕರಣಕ್ಕೆ ಕಾರಣವಾದ ಪ್ರಮುಖ ಅಂಶಗಳಾಗಿವೆ.


ಶಿಲೆಗಳ ಗುಣಲಕ್ಷಣಗಳಾದ ರಾಸಾಯನಿಕ ಸಂಯೋಜನೆ, ಕಾಠಿಣ್ಯತೆ, ಕಣರಚನೆ, ಬಿರುಕುಗಳು ಮತ್ತು ವ್ಯಾಪ್ಯತೆಗಳು ಶಿಥಿಲೀಕರಣದ ಮೇಲೆ ಪ್ರಮುಖ ಪಾತ್ರವನ್ನು ವಹಿಸುತ್ತವೆ.


ಶಿಥಿಲೀಕರಣದ ವಿಧಗಳು : ಶಿಥಿಲೀಕರಣ ಪ್ರಕ್ರಿಯೆಯಲ್ಲಿ ಮೂರು ವಿಧಗಳಿವೆ. 1) ಭೌತಿಕ ಶಿಥಿಲೀಕರಣ ii) ರಾಸಾಯನಿಕ ಶಿಥಿಲೀಕರಣ iii) ಜೈವಿಕ ಶಿಥಿಲೀಕರಣ



1. ಭೌತಿಕ ಶಿಥಿಲೀಕರಣ : ಯಾವುದೇ ರಾಸಾಯಿನಿಕ ಬದಲಾವಣೆಯಿಲ್ಲದೇ, ಭೌತಿಕ ವಿಧಾನದಿಂದ ಶಿಲೆಗಳು ಒಡೆದು ಚೂರಾಗುವ ಕ್ರಿಯೆಗೆ ಭೌತಿಕ ಶಿಥಿಲೀಕರಣ"ವೆಂದು ಕರೆಯುವರು. ಭೌತಿಕ ಶಿಥಿಲೀಕರಣವು ಮುಖ್ಯವಾಗಿ ಉಷ್ಣಾಂಶ, ಹಿಮ, ಗಾಳಿ, ಸಮುದ್ರದ ಅಲೆಗಳ ಪ್ರಭಾವಕ್ಕೆ ಒಳಪಟ್ಟಿರುತ್ತದೆ. ಭೌತಿಕ ಶಿಥಿಲೀಕರಣದ ಕರ್ತೃಗಳೆಂದರೆ :


ಅ) ಉಷ್ಣಾಂಶ : ಭೂಮಿಯ ಮೇಲ್ಬಾಗದಲ್ಲಿ ಅಧಿಕ ಉಷ್ಣಾಂಶದಿಂದ ಶಿಲೆಗಳು ವಿಕಾಸಗೊಂಡು, ಕಡಿಮೆ ಉಷ್ಣಾಂಶದಿಂದ ಅವು ಸಂಕುಚಿತಕ್ಕೆ ಒಳಪಡುತ್ತವೆ. ಹಗಲಿನ ವೇಳೆಯಲ್ಲಿ ಅಧಿಕ ಉಷ್ಣಾಂಶದಿಂದ ಶಿಲೆಗಳು ವಿಕಾಸ ಹೊಂದುತ್ತವೆ ಮತ್ತು ರಾತ್ರಿ ವೇಳೆಯಲ್ಲಿ ಕಡಿಮೆ ಉಷ್ಣಾಂಶದ ಪರಿಣಾಮವಾಗಿ ಸಂಕುಚಿಸಲ್ಪಡುತ್ತವೆ. ಇಂತಹ ಪ್ರಕ್ರಿಯೆಯು ನಿರಂತರವಾಗಿ ನಡೆಯುವುದರಿಂದ ಶಿಲೆಗಳು ಒಡೆದು ಚೂರಾಗುತ್ತವೆ ಅಥವಾ ಛಿದ್ರಗೊಳ್ಳುತ್ತದೆ.


ಆ) ಹಿಮ (ಕಾವಳ) : ಭೂಮಿಯ ಮೇಲಿನ ಶೀತ ಪ್ರದೇಶಗಳಲ್ಲಿ ರಾತ್ರಿವೇಳೆ ಕಡಿಮೆ ಉಷ್ಣಾಂಶದಿಂದಾಗಿ ನೀರು ಹಿಮವಾಗಿ ಹೆಚ್ಚು ಗಟ್ಟುತ್ತದೆ ಮತ್ತು ಹಗಲಿನ ವೇಳೆಯಲ್ಲಿ ಆ ಹಿಮವು ಕರಗುತ್ತದೆ. ಈ ರೀತಿಯ ಹೆಪ್ಪುಗಟ್ಟವಿಕೆ ಮತ್ತು ಕರಗುವಿಕೆಯು ನಿರಂತರವಾಗಿದ್ದು, ಶಿಲೆಗಳಲ್ಲಿ ಹಿಗ್ಗುವಿಕೆ ಮತ್ತು ಕುಗ್ಗುವಿಕೆ ನಿರಂತರವಾಗಿ ಉಂಟಾಗುವುದರ ಪರಿಣಮವಾಗಿ ಶಿಲೆಗಳು ಒಡೆದು ಚೂರಾಗುತ್ತವೆ.


ಇ) ಗಾಳಿಯಿಂದ : ಮರುಭೂಮಿಯಲ್ಲಿ ಗಾಳಿಯು ಮರಳಿನ ಕಣಗಳನ್ನು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸಾಗಿಸುವುದು ಹಾಗೂ ಇದರಿಂದಾಗಿ ಶಿಲಾ ಮೇಲೆ ಮೇಲೆ ಆ ಕಣಗಳು ಉಜ್ಜಿ ಘರ್ಷಣೆಯನ್ನು ಉಂಟುಮಾಡುತ್ತವೆ. ಇದರ ಪರಿಣಾಮವಾಗಿ ಶಿಲೆಗಳಲ್ಲಿ ಗೀಚುವಿಕೆ ಉಂಟಾಗಿ ಒಡೆದು ಚೂರಾಗುತ್ತವೆ.


ಈ) ಗುರುತ್ವಾಕರ್ಷಣೆ : ಭೂಮಿಯ ಗುರುತ್ವಾಕರ್ಷಣಾ ಶಕ್ತಿಯು ಬೃಹದಾಕಾರದ ಶಿಲೆಗಳನ್ನು ಇಳಿಜಾರಿಗನುಗುಣವಾಗಿ ಉರುಳುವಂತೆ ಮಾಡುತ್ತದೆ. ಈ ರೀತಿ ಉರುಳುವ ಶಿಲೆಗಳು ತಳಭಾಗದ ಶಿಲೆಗಳೊಡನೆ ಪರಸ್ಪರ ಘರ್ಷಿಸುವುದರಿಂದ, ಅವು ಒಡೆದು ಚೂರಾಗುತ್ತವೆ.


ಉ) ಸಮುದ್ರದ ಅಲೆಗಳು : ಸಮುದ್ರದ ಅಲೆಗಳು ತೀರ ಪ್ರದೇಶದ ಬ೦ಡೆಗಳಿಗೆ ರಭಸವಾಗಿ ಅಪ್ಪಳಿಸುತ್ತವೆ. ಇದರ ಪರಿಣಾಮವಾಗಿ ತೀರ ಪ್ರದೇಶದ ಶಿಲೆಗಳು ಒಡೆದು ಚೂರಾಗುತ್ತವೆ.


ಶಿಲೆಗಳ ಪ್ರಕಾರಕ್ಕನುಣವಾಗಿ ಭೌತಿಕ ಶಿಥಿಲೀಕರಣ ಪ್ರಕ್ರಿಯೆಯು ಹಲವಾರು ರೀತಿಯಲ್ಲಿ ನಡೆಯುತ್ತವೆ. ಅವುಗಳೆಂದರೆ : 1. ಶಿಲಾ ವಿಭಜನೆ : ಉಷ್ಣಾಂಶದ ವ್ಯತ್ಯಾಸದಿಂದಾಗಿ ಶಿಲೆಗಳಲ್ಲಿ


ನಿರಂತರವಾದ ಹಿಗ್ಗುವಿಕೆ (ಪ್ರಸರಣ) ಮತ್ತು ಕುಗ್ಗುವಿಕೆ (ಸಂಕುಚನ) ಉಂಟಾಗಿ, ಒತ್ತಡ ನಿರ್ಮಾಣಗೊಳ್ಳುತ್ತದೆ. ಇದರ ಪರಿಣಾಮವಾಗಿ ಕಾಲಕ್ರಮೇಣ ಶಿಲೆಗಳು ಒಡೆದು ತುಂಡು ತುಂಡುಗಳಾಗಿ ವಿಭಜನೆ ಹೊಂದುತ್ತವೆ. ಇದನ್ನೇ “ಶಿಲಾ ವಿಭಜನೆ" ಎಂದು ಕರೆಯುವರು.



2. ಕಣ ವಿಭಜನೆ : ಶಿಲೆಗಳು ಹಲವಾರು ಬಗೆಯ ಖನಿಜಗಳಿಂದ ಕೂಡಿದೆ ಹಗೂ ಈ ಖನಿಜಗಳು ವಿಭಿನ್ನ ಸಮಾಜದ ಶಾಖದಿಂದಾಗಿ ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸುತ್ತವೆ. ಇದರ ಪರಿಣಾಮವಾಗಿ ಶಿಲೆಗಳು ವಿವಿಧ ಖನಿಜ ಕಣಗಳಾಗಿ ಛಿದ್ರಗೊಳ್ಳುವ ಅಥವಾ ಒಂದು ಚೂರಾಗುವಿಕೆಯನ್ನೇ "ಕಣ ವಿಭಜನೆ, ಎನ್ನುವರು.


3. ಪದರು ವಿಭಜನೆ : ಸೂರ್ಯನ ಶಾಖದ ಪರಿಣಾಮವಾಗಿ, ಶಿಲಾ ಹೊರಮೈ ಉಷ್ಣಾಂಶವನ್ನು ಪಡೆದರೆ, ಒಳಭಾಗವು ಬಹುತೇಕವಾಗಿ ತಂಪಾಗಿಯೇ ಇರುತ್ತದೆ. ಇದು ಶಿಲೆಗಳನ್ನು ವಿಕಾಸವಾಗುವಂತೆ ಮತ್ತು ಬಿರುಕು ಬಿಡುವಂತೆ ಮಾಡುತ್ತದೆ. ಇದರ ಪರಿಣಾಮವಾಗಿ ಶಿಲೆಗಳ ತೆಳು ಪದರಗಳು ಸುಲಿದು ಬರುತ್ತವೆ. ಅಂದರೆ ಈರುಳ್ಳಿಯ ಹೊರ ಪದರಗಳನ್ನು ಸುಲಿಯಲ್ಪಟ್ಟಂತಾಗುತ್ತದೆ. ಈ ಪಕ್ರಿಯೆಯನ್ನು “ಸದರು ವಿಭಜನೆ" ಎಂದು ಕರೆಯುವರು.


i. ರಾಸಾಯನಿಕ ಶಿಥಿಲೀಕರಣ : ಶಿಲೆಗಳು ರಾಸಾಯನಿಕ ಪ್ರಕ್ರಿಯೆಗೆ ಒಳಪಟ್ಟು ಒಡೆದು ಚೂರಾಗುವ ಹಾಗು ನಶಿಸುವಿಕೆಯನ್ನೇ “ರಾಸಾಯನಿಕ ಶಿಥಿಲೀಕರಣ” ಎಂದು ಕರೆಯುತ್ತಾರೆ. ಈ ಪ್ರಕ್ರಿಯೆಯಲ್ಲಿ ಶಿಲೆಗಳಲ್ಲಿರುವ ಮೂಲ ಖನಿಜಗಳಿಂದ ದ್ವಿತೀಯ ಅಥವಾ ಹೊಸ ಖನಿಜಗಳ


ಬೆಳವಣಿಗೆ ಉಂಟಾಗುವುದು, ಮಳೆಯ ನೀರು ಮತ್ತು ವಾಯುಮಂಡಲದ ಅನಿಲಗಳು ರಾಸಾಯನಿಕ ಶಿಥಿಲೀಕರಣದ


ಮುಖ್ಯ ಕರ್ತೃಗಳಾಗಿವೆ. ಇದು ತೇವಯುತ ವಾಯುಗುಣ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಂಡು ಬರುವುದು.


ರಾಸಾಯನಿಕ ಶಿಥಿಲೀಕರಣದ ವಿಧಗಳು : ರಾಸಾಯನಿಕ ಶಿಥಿಲೀಕರಣದ ಪ್ರಕ್ರಿಯೆಯಲ್ಲಿ ನಾಲ್ಕು ವಿಧಗಳಿವೆ. ಆವುಗಳೆಂದರೆ : ಆ) ಆಮ್ಲಜನಕ ಸಂಯೋಜನೆ ಆ) ಇಂಗಾಲ ಸಂಯೋಜನೆ ಇ) ಜಲಜನಕ ಸಂಯೋಜನೆ ಮತ್ತು ಈ) ದ್ರಾವಣೀಕರಣ


ಆ) ಆಮ್ಲಜನಕ ಸಂಯೋಜನೆ : ಆಮ್ಲಜನಕವನ್ನೊಳಗೊಂಡ ಮಳೆಯ ನೀರು ಕಬ್ಬಿಣಾಂಶವುಳ್ಳ ಶಿಲೆಗಳೊಡನೆ ಸಂಪರ್ಕ ಹೊಂದಿದಾಗ ಆಕ್ಸಿಡಾಗಿ ಪರಿವರ್ತನೆಗೊಳ್ಳುವುದು, ಇಂತಹ ರಾಸಾಯನಿಕ ಪ್ರಕ್ರಿಯೆಯನ್ನೇ "ಆಮ್ಲಜನಕ ಸಂಯೋಜನೆ" ಎನ್ನುತ್ತಾರೆ. ಸಾಮಾನ್ಯವಾಗಿ ಕಬ್ಬಿಣವು ತುಕ್ಕು ಹಿಡಿಯುವಿಕೆ ಪ್ರಕ್ರಿಯೆಯೇ ಆಮ್ಲಜನಕ ಸಂಯೋಜನೆಗೆ ಉದಾಹರಣೆಯಾಗಿದೆ.


ಆ) ಇಂಗಾಲ ಸಂಯೋಜನೆ : ಇಂಗಾಲದ ಡೈಆಕ್ಟ್ಡಿನಿಂದ ಕೂಡಿರುವ ಮಳೆಯ ನೀರು, ಕ್ಯಾಲ್ಸಿಯಂ


ಕಾರ್ಬೋನೆಟ್ ಅಥವಾ ಸುಣ್ಣಕಲ್ಲಿನ ಸಂಪರ್ಕ ಹೊಂದಿದಾಗ ಕ್ಯಾಲ್ಸಿಯಂ ಬೈಕಾರ್ಬೋನೆಟ್ ಆಗಿ


ಪರಿವರ್ತನೆಗೊಂಡು, ದ್ರಾವಣ ರೂಪದಲ್ಲಿ ಸುಲಭವಾಗಿ ಕರಗುವುದು. ಈ ಪ್ರಕ್ರಿಯೆಯನ್ನೇ “ಇಂಗಾಲ


ಸಂಯೋಜನೆ" ಎನ್ನುತ್ತೇವೆ. ಸುಣ್ಣಕಲ್ಲು ಪ್ರದೇಶದಲ್ಲಿ ಇದು ಬಹಳ ಕ್ರಿಯಾಶೀಲವಾಗಿರುತ್ತದೆ.


ಇ) ಜಲ ಸಂಯೋಜನೆ : ಶಿಲೆಗಳಲ್ಲಿನ ಕೆಲವು ಖನಿಜಗಳು ನೀರನ್ನು ಹೀರುತ್ತವೆ. ಪರಿಣಾಮವಾಗಿ ಗಾತ್ರದಲ್ಲಿ ಹಿಗ್ಗಲ್ಪಟ್ಟು ಶಿಲೆಯಲ್ಲಿ ಭೌತಿಕ ಒತ್ತಡ ಉಂಟಾಗುತ್ತದೆ. ಇದರ ಪರಿಣಾಮವಾಗಿ ಕೆಲವು ಖನಿಜಗಳಾದ ಫೆಲ್ಸ ಸ್ಟಾರ್ ಮತ್ತು ಜಿಪ್ಪಂಗಳು ಪಡಿಯಾಕಾರದಲ್ಲಿ ಕ್ಷೀಣಿಸಲ್ಪಡುತ್ತವೆ. ಈ ಪ್ರಕ್ರಿಯೆಯನ್ನೇ "ಜಲ ಸಂಯೋಜನೆ" ಎನ್ನುತ್ತಾರೆ.


ಈ) ದಾವಣೀಕರಣ : ಮಳೆಯ ನೀರು ಕೆಲವು ಕರಗಬಲ್ಲಂತಹ ಖನಿಜಗಳಾದ ಕಲ್ಲುಪ್ಪು, ಜಿಪಂ, ಮೊಟ್ಯಾಷ್‌ಗಳನ್ನು ಸಂಪೂರ್ಣವಾಗಿ ಕರಗಿಸುತ್ತದೆ. ಈ ಪ್ರಕ್ರಿಯೆಯನ್ನೇ “ದ್ರಾವಣೀಕರಣ" ಎಂದುಕರೆಯುವರು.


iii. ಜೈವಿಕ ಶಿಥಿಲೀಕರಣ : ಸಸ್ಯಗಳು, ಪ್ರಾಣಿಗಳು ಮತ್ತು ಮಾನವನ ಚಟುವಟಿಕೆಗಳಿಂದಾಗಿ ಶಿಲೆಗಳು ಒಡೆದು ಚೂರಾಗುವ ಅಥವಾ ಛಿದ್ರಗೊಳ್ಳುವಿಕೆಯನ್ನು “ಜೈವಿಕ ಶಿಥಿಲೀಕರಣ" ಎಂದು ಕರೆಯುವರು.


ಆ) ಸಸ್ಯಗಳು : ಸಸ್ಯಗಳು ಮಣ್ಣಿನಲ್ಲಿ ಬೆಳೆಯಲು, ತಮಗೆ ಅಗತ್ಯವಾಗಿ ಬೇಕಾದ ನೀರು ಮತ್ತು ಖನಿಜಾಂಶಗಳಿಗಾಗಿ ಶಿಲಾಬಿರುಕುಗಳ ಮೂಲಕ, ಅವುಗಳ ಬೇರುಗಳು ಒಳಗಿಳಿಯುತ್ತವೆ. ಕ್ರಮೇಣ ಬೇರುಗಳು ಆಳಕ್ಕೆ ಇಳಿದಂತೆ ಅವುಗಳ ಗಾತ್ರ ದೊಡ್ಡದಾಗುತ್ತಾ ಶಿಲಾಬಿರುಕುಗಳು ಆಗಲವಾಗಿ ಶಿಲೆಗಳನ್ನು ಛಿದ್ರಗೊಳಿಸುತ್ತವೆ. ಇಂತಹ ಪ್ರಕ್ರಿಯೆಯು ದಟ್ಟ ಅರಣ್ಯ ಮತ್ತು ಸಸ್ಯ ವರ್ಗಗಳಿರುವ ಪ್ರದೇಶಗಳಲ್ಲಿ ಪ್ರಧಾನವಾಗಿ ಕಂಡು ಬರುತ್ತದೆ.


ಆ) ಪ್ರಾಣಿಗಳು : ಭೂಮಿಯನ್ನು ತೋಡುವ ಅಥವಾ ಬಿಲಗಳನ್ನು ನಿರ್ಮಿಸುವ ಪಾಣಿಗಳಾದ ಇಲಿ-ಹೆಗ್ಗಣಗಳು, ಮೊಲಗಳು, ಇರುವೆಗಳು, ಎರೇಹುಳುಗಳು ಮತ್ತು ಗೆದ್ದಿಲುಗಳು ಶಿಲೆಗಳ ಚೂರಾಗುವಿಕೆಯ ಮೇಲೆ ಪ್ರಭಾವ ಬೀರುತ್ತವೆ ಮತ್ತು ಭೂಮಿಯ ಆಳಭಾಗದವರೆಗೂ ರಂಧ್ರ ಮಾಡುತ್ತವೆ. ಇಂತಹ ರಂಧ್ರಗಳ ಮೂಲಕ ಗಾಳಿ ಮತ್ತು ನೀರು ಪ್ರವೇಶಿಸುವುದರಿಂದ ಶಿಲೆಗಳು ತಂತವಾಗಿ ಶಿಥಿಲೀಕರಣಕ್ಕೆ ಒಳಪಡುತ್ತವೆ.


೮) ಮಾನವನ ಚಟುವಟಿಕೆಗಳು : ಶಿಥಿಲೀಕರಣದಲ್ಲಿ ಮಾನವನ ಪಾತ್ರ ಪ್ರಮುಖವಾದುದ್ದು. ಇವನು ಕೈಗೊಳ್ಳುವ ಚಟುವಟಿಕೆಗಳಾದ ಕೃಷಿ ಗಣಿಗಾರಿಕೆ, ಬಂಡೆಗಳನ್ನು ಸಿಡಿಸುವಿಕೆ, ತೈಲ ಬಾವಿಗಳ ಕೊರೆಯುವಿಕೆ, ಆರಣ್ಯನಾಶ ಮುಂತಾದವುಗಳಿಂದ ಶಿಲೆಗಳ ಶಿಥಿಲೀಕರಣ ಉಂಟಾಗುವುದು,


ಶಿಥಿಲೀಕರಣದ ಪ್ರಾಮುಖ್ಯತೆ


1. ಮಣ್ಣಿನ ನಿರ್ಮಾಣ ಪ್ರಕ್ರಿಯೆಯಲ್ಲಿ ಶಿಥಿಲೀಕರಣವು ಪ್ರಮುಖವಾದದ್ದಾಗಿದ್ದು, ಸ್ವಾಭಾವಿಕ ಸಸ್ಯವರ್ಗ ಹಾಗು ಕೃಷಿಗೆ ಸಹಾಯಕವಾಗಿದೆ.


2. ಶಿಥಿಲೀಕರಣದ ಪ್ರಕ್ರಿಯೆಯಿಂದ ಹೊಸ ಭೂವಿನ್ಯಾಸ ಹಾಗು ವೈವಿಧ್ಯಮಯ ಭೂ ಸಾದೃಶ್ಯಗಳು ನಿರ್ಮಾಣಗೊಳ್ಳುತ್ತವೆ.


3. ಈ ಪ್ರಕ್ರಿಯೆಯು ಭೂನಗೀಕರಣದ ವಿವಿಧ ಕರ್ತೃಗಳ ಕಾರ್ಯಕ್ಕೆ ಭೂಭಾಗವನ್ನು ಅಣಿಗೊಳಿಸುತ್ತದೆ.


4,3 ಮನಗೀಕರಣದ ಕರ್ತೃಗಳು


ಡೆನುಡೇಷನ್ (Denudation) ಎಂಬ ಪದವು "ಡೆನುಡೇ‌" (Dermudare) ಎಂಬ ಲ್ಯಾಟಿನ್ ಪದದಿಂದ ಬಳಕೆಗೆ ಬಂದಿದೆ. ಇದು ಭೂ ಮೇಲ್ಬಾಗವನ್ನು ನಗ್ನಗೊಳಿಸು ಅಥವಾ ಸವೆಸು ಎಂಬ ಅರ್ಥ ಕೊಡುವುದು, ಭೂಮಿಯ ಮೇಲ್ಪದರದ ಶಿಲಾಭಾಗಗಳನ್ನು ನಗ್ನಗೊಳಿಸುವ ಅಥವಾ ಸವೆತಕ್ಕೆ ಒಳಪಡಿಸುವ ಕ್ರಿಯೆಯೇ ಭೂನಗೀಕರಣವಾಗಿದೆ. ಭೂಮಿಯ ಮೇಲ್ಬಾಗವು ಹಲವಾರು ನೈಸರ್ಗಿಕ ಕರ್ತೃಗಳ ಪ್ರಭಾವದಿಂದಾಗಿ ನಿರಂತರವಾಗಿ ಬದಲಾವಣೆಗೊಳ್ಳುತ್ತಾ ಹೋಗುವುದು. ಅವುಗಳೆಂದರೆ ಆಂತರಿಕ ಮತ್ತು ಬಾಹ್ಯ ಶಕ್ತಿಗಳು,


ಭೂನನ್ನೀಕರಣದ ಕರ್ತೃಗಳು


ಭೂಮಿಯ ಮೇಲ್ಬಾಗವನ್ನು ಸವೆಸುವ ಅಥವಾ ವಿನ್ಯಾಸಗೊಳಿಸಲು ಕಾರಣವಾಗಿರುವ ನೈಸರ್ಗಿಕ ಕರ್ತೃಗಳನ್ನೇ 'ಭೂನಗೀಕರಣದ ಕರ್ತೃ'ಗಳೆಂದು ಕರೆಯುತ್ತಾರೆ. ಪ್ರಮುಖ ಕರ್ತೃಗಳೆಂದರೆ


1. ನದಿ - ಇದರ ಚಟುವಟಿಕೆಯು ಸಾಮಾನ್ಯವಾಗಿ ನದಿ ವ್ಯೂಹಗಳು ಕಂಡು ಬರುವ ಪ್ರದೇಶಗಳಲ್ಲಿ


ಪ್ರಧಾನವಾಗಿರುತ್ತದೆ.


2, ಅಂತರ್ಜಲ – ಇದರ ಚಟುವಟಿಕೆಯು ವಿಶೇಷವಾಗಿ ಸುಣ್ಣಕಲ್ಲು ಪ್ರದೇಶಕ್ಕೆ ಸೀಮಿತವಾಗಿರುತ್ತದೆ.


3. ಹಿಮನದಿಗಳು - ಇವುಗಳ ಚಟುವಟಿಕೆಯು ಸಾಮಾನ್ಯವಾಗಿ ಧ್ರುವೀಯ ಹಾಗೂ ಎತ್ತರದ ಪರ್ವತ


ಪ್ರದೇಶಗಳಲ್ಲಿ ಹಂಚಿಕೆಯಾಗಿರುತ್ತದೆ.


4. ಗಾಳಿ - ಇದರ ಕ್ರಿಯಾಶೀಲತೆಯು ಶುಷ್ಕ ಪ್ರದೇಶಗಳಲ್ಲಿ ಸಾಮಾನ್ಯವಾಗಿರುತ್ತದೆ.


5. ಅಲೆಗಳು – ಇದರ ಕಾರ್ಯಚರಣೆಯು ವಿಶೇಷವಾಗಿ ತೀರ ಪ್ರದೇಶಕ್ಕೆ ಮಾತ್ರ ಸೀಮಿತವಾಗಿದೆ.


ಭೂನಗೀಕರಣದ ಕರ್ತೃಗಳು ಮೂರು ಪ್ರಮುಖ ಕಾರ್ಯಗಳನ್ನು ನಿರ್ವಹಿಸುತ್ತವೆ. ಅವುಗಳೆಂದರೆ:


i ಸವೆತ – ಭೂಮಿಯ ಮೇಲ್ಬಾಗವನ್ನು ಸವೆಸುವಿಕೆ. ii. ಸಾಗಾಣಿಕೆ - ಸವಸಲ್ಪಟ್ಟ ಶಿಲಾ ವಸ್ತುಗಳನ್ನು ಬೇರೆ ಪ್ರದೇಶಕ್ಕೆ ಸಾಗಿಸುವುದು,


iii, ಸಂಚಯನ - ಸವೆಸಿ, ಸಾಗಿಸಲ್ಪಟ್ಟ ವಸ್ತುಗಳನ್ನು ಸಂಗ್ರಹಣೆ ಅಥವಾ ಸಂಚಯಿಸುವುದು.


ನದಿಯ ಕಾರ್ಯಗಳು


ಭೂಮಿಯ ಮೇಲ್ಪದರವನ್ನು ನಿರಂತರವಾಗಿ ಸವೆಸಿ, ಬದಲಾವಣೆಗೆ ಕಾರಣವಾದ ಬಾಹ್ಯ ಭೂ ನಗ್ನ ಕರಣ ಕರ್ತೃಗಳಲ್ಲಿ ನದಿಯು ಅತಿ ಪ್ರಮುಖವಾಗಿದೆ. ಇದರ ಕಾರ್ಯವು ಮುಖ್ಯವಾಗಿ ನದಿವ್ಯೂಹ ಅಥವಾ ನದಿ ಪಾತ್ರಗಳಿರುವ ಪ್ರದೇಶಗಳಲ್ಲಿ ಕಂಡು ಬರುತ್ತದೆ. ನದಿಯ ಕಾರ್ಯವು ಪ್ರಪಂಚದ ಎಲ್ಲಾ ಪ್ರದೇಶಗಳಲ್ಲಿಯು ಸಾಮಾನ್ಯವಾಗಿ ಕಂಡುಬರುತ್ತದೆ.


ನದಿಯು ಸಾಮಾನ್ಯವಾಗಿ ಶುದ್ಧ ನೀರನ್ನು ಹೊಂದಿರುವ ಸ್ವಾಭಾವಿಕ ನೀರಿನ ಪಾತ್ರವಾಗಿದ್ದು, ಸಮುದ್ರ


ಅಥವಾ ಸಾಗರದ ಕಡೆಗೆ ಹರಿಯುತ್ತದೆ. ನದಿಯು ತನಗೆ ಬೇಕಾದ ನೀರನ್ನು ಮಳೆ, ಅಂತರ್ಜಲ, ಹಿಮನದಿ


ಇತ್ಯಾದಿ ಮೂಲಗಳಿಂದ ಪಡೆದುಕೊಳ್ಳತ್ತದೆ.


ನದಿಯು ಯಾವ ಸ್ಥಳದಲ್ಲಿ ಹುಟ್ಟುತ್ತದೆಯೋ ಅದನ್ನು ನದಿಯ ಉಗಮ ಸ್ಥಳ' ಅಥವಾ 'ನದಿಯ ಮೂಲ' ಎಂದು ಕರೆಯುತ್ತಾರೆ. ಯಾವ ಪ್ರದೇಶದಲ್ಲಿ ನದಿಯು ಸಮುದ್ರ ಅಥವಾ ಸಾಗರಕ್ಕೆ ಸೇರುತ್ತದೆಯೋ ಅಥವಾ ಸಂಧಿಸುತ್ತದೆಯೋ ಅದನ್ನು ನದಿಮುಖ' ಎನ್ನುತ್ತೇವೆ. ನದಿಯು ತನ್ನ ಮೂಲದಿಂದ ಅದರ ಮುಖಜದವರೆಗೆ ಹರಿಯುವ ಮಾರ್ಗವನ್ನೇ 'ನದಿಯ ಪಾತ್ರ' ಎನ್ನುತ್ತೇವೆ. ಎರಡು ನದಿವ್ಯೂಹಗಳನ್ನು ಪ್ರತ್ಯೇಕಿಸುವ ಉನ್ನತ ಪ್ರದೇಶದ ಶ್ರೇಣಿಯನ್ನು 'ಜಲವಿಭಾಜಕ' ಎಂದು ಕರೆಯಲಾಗುತ್ತದೆ. ನದಿ ವಿವಿಧ ಮೂಲಗಳಿಂದ ನೀರನ್ನು ಪಡೆದುಕೊಳ್ಳುವ ಪ್ರದೇಶವನ್ನು 'ಜಲಾನಯನ ಪ್ರದೇಶ'ವೆಂದು ಕರೆಯುವರು, ಮುಖ್ಯ ನದಿಗೆ ಹಲವಾರು ಚಿಕ್ಕ ನದಿಗಳು ಸೇರುತ್ತವೆ. ಇವುಗಳಿಗೆ ಉಪನದಿ'ಗಳೆಂದು ಕರೆಯುವರು, ಉಪನದಿಯೊಂದು ಮುಖ್ಯ ಅಥವಾ ಬೇರೊಂದು ನದಿಯನ್ನು ಕೂಡಿಕೊಳ್ಳುವ ಸ್ಥಳಕ್ಕೆ ನದಿಗೆ 'ಸಂಗಮ' ಎನ್ನುತ್ತೇವೆ. ನದಿ, ಉಪನದಿಗಳು ಹಾಗೂ ನದಿಶಾಖೆಗಳಿಂದ ಕೂಡಿರುವ ಪ್ರದೇಶವನ್ನು 'ನದಿಯ ಅಚ್ಚುಕಟ್ಟು ಪ್ರದೇಶ' ಎನ್ನುವರು.


ನದಿಯ ಪಾತ್ರ


ನದಿಯ ಸಂಪೂರ್ಣ ಮಾರ್ಗವನ್ನು ಅದರ ಮೂಲದಿಂದ ಮುಖಜದವರೆಗೆ ಮೂರು ಪಾತ್ರಗಳಲ್ಲಿ ವಿಂಗಡಿಸಲಾಗಿದೆ. 1) ಮೇಲಿನ ಪಾತ್ರ 2) ಮಧ್ಯ ಪಾತ್ರ 3) ಕೆಳಗಿನ ಪಾತ್ರ


1) ಮೇಲಿನ ಪಾತ್ರ: ಇದು ನದಿಯ ಮೂಲದ ಸಮಿಪದಲ್ಲಿದ್ದು, ಸಾಮಾನ್ಯವಾಗಿ ಪರ್ವತಮಯ ಪ್ರದೇಶದಲ್ಲಿ


ಕಂಡು ಬರುತ್ತದೆ. ನದಿಯು ಬಹಳ ಕಡಿದಾದ ಇಳಿಜಾರಿನಲ್ಲಿ ಅತಿ ವೇಗದೊಂದಿಗೆ ಹರಿಯುವುದರಿಂದ, ಇಲ್ಲಿ ಸವತದ ಕಾರ್ಯವು ಪ್ರಧಾನವಾಗಿರುತ್ತದೆ. ಈ ಹಂತದ ನದಿಯ ಪಾತ್ರವನ್ನು “ಬಾಲ್ಯಾವಸ್ಥೆ" ಎಂತಲೂ ಕರೆಯುತ್ತಾರೆ.


2) ಮಧ್ಯ ಪಾತ್ರ : ನದಿಯು ಪ್ರಸ್ಥಭೂಮಿ ಮತ್ತು ಮೈದಾನ ಪ್ರದೇಶವನ್ನು ಪ್ರವೇಶಿಸುತ್ತದೆಯೋ, ಅಲ್ಲಿಂದಲೇ ಮಧ್ಯ ಪಾತ್ರವು ಆರಂಭವಾಗುತ್ತದೆ. ಈ ಹಂತದಲ್ಲಿ ಸಾಗಣಿಕೆ'ಯು ನದಿಯ ಪ್ರಮುಖ ಕಾರ್ಯವಾಗಿದ್ದು ಈ ಹಂತವನ್ನು ನದಿಯ 'ಯೌವನಾವಸ್ಥೆ' ಎಂದೂ ಕರೆಯುತ್ತಾರೆ.


3) ಕೆಳಗಿನ ಪಾತ್ರ : ಇದು ನದಿಯ ಮುಖಜ ಭಾಗದಲ್ಲಿನ ಮೈದಾನ ಪಾತ್ರವಾಗಿದೆ. ಈ ಪ್ರದೇಶದಲ್ಲಿ


ಇಳಿಜಾರು ಬಹಳ ಕಡಿಮೆ ಇದ್ದು, ಪಾತ್ರವು ವಿಸ್ತಾರವಾಗಿದ್ದು, ನೀರಿನ ವೇಗ ಬಹಳ ಕಡಿಮೆ ಇರುವುದರಿಂದ ಸಂಚಯನ' ಕಾರ್ಯ ಪ್ರಧಾನವಾಗಿರುತ್ತದೆ. ಈ ಹಂತದ ನದಿಯ ಪಾತ್ರವನ್ನು ವೃದ್ಧಾಪ್ಯ ಹಂತ' ಎಂದು ಕರೆಯುತ್ತಾರೆ.


ನದಿಯ ಕಾರ್ಯವು ಪರಸ್ಪರ ಪೂರಕವಾದ ಮೂರು ಚಟುವಟಿಕೆಗಳನ್ನು ಹೊಂದಿದೆ. ಅವುಗಳೆಂದರೆ: 1. ಸವತ (ಕೊರೆಯುವಿಕೆ) 2. ಸಾಗಾಣಿಕೆ ಮತ್ತು 3. ಸಂಚಯನ


1. ಸವತ ಕಾರ್ಯ : ಶಿಲಾಭಾಗವನ್ನು ಸವೆಸಿ ಮತ್ತು ದೂರಕ್ಕೆ ಸಾಗಿಸಲ್ಪಡುವ ಪ್ರಕ್ರಿಯೆಯನ್ನು “ಸವೆತ" ಎನ್ನುವರು. ಇದು ನದಿಯ ನೀರಿನ ಪ್ರಮಾಣ ಮತ್ತು ವೇಗ, ಇಳಿಜಾರಿನ ಸ್ವರೂಪ ಮತ್ತು ಶಿಲಾಸ್ವರೂಪವನ್ನು ಅವಲಂಬಿಸಿರುತ್ತದೆ.


ನದಿಯ ಸವತದ ಕಾರ್ಯವು ಎರಡು ರೀತಿಯಲ್ಲಿ ಕಂಡು ಬರುವುದು, ಅವುಗಳೆಂದರೆ, ಅ) ಭೌತಿಕ ಸವತ : ಇದು ನೀರಿನ ಒತ್ತಡದ ಕ್ರಿಯೆಯನ್ನು ಒಳಗೊಂಡಿದೆ.


ಆ) ರಾಸಾಯನಿಕ ಸವತ : ಇದು ತುಕ್ಕು ಹಿಡಿಯುವಿಕೆ ಅಥವಾ ದ್ರಾವಣೀಕರಣವನ್ನು ಒಳಗೊಂಡಿರುವುದು. ನದಿಯ ಸವೆತದ ಕಾರ್ಯದಿಂದಾಗಿ ಹಲವಾರು ವಿಶಿಷ್ಟ ಭೂಸ್ವರೂಪಗಳು ಉಂಟಾಗುತ್ತವೆ, ಅವುಗಳೆಂದರೆ V' ಆಕಾರದ ಕಣಿವೆ, ಕಂದರ, 'IP ಆಕಾರದ ಕಣಿವೆ, ಮಹಾಕಂದರ, ಕುಂಭ ಕುಳಿಗಳು, ಜಲಪಾತ, ನದಿಯ ಅಪಹರಣ ಮುಂತಾದವುಗಳು.


ಆ) (V' ಆಕಾರದ ಕಣಿವೆ : ಪರ್ವತ ಪ್ರದೇಶದಲ್ಲಿ ನದಿಯ ನೀರಿನ ಪ್ರಮಾಣ ಕಡಿಮೆ ಇದ್ದು, ವೇಗವು ರಭಸವಾಗಿರುತ್ತದೆ, ನದಿಯ ನೀರು ಕಡಿದಾದ ಇಳಿಜಾರನ್ನು ಅನುಸರಿಸಿ ವೇಗವಾಗಿ ಹರಿಯುವುದರಿಂದ, ಗರಿಷ್ಠ ಪ್ರಮಾಣದ ಊರ್ಧ್ವಮುಖ ಅಥವಾ ಪಾರ್ಶ್ವಸವೆತ ಕಂಡು ಬರುತ್ತದೆ. ಇದರ ಪರಿಣಾಮವಾಗಿ ತೀವ್ರತರವಾದ ಆಳ ಸವೆತ ಅಥವಾ ಊರ್ಧಮುಖ ಸವೆತ ಉಂಟಾಗಿ V' ಆಕಾರದ ಕಣಿವೆಯು ನಿರ್ಮಾಣಗೊಳ್ಳತ್ತದೆ.


ಆ) ಕಂದರ : ನದಿಯ ಪಾತ್ರದಲ್ಲಿ ಕಂಡು ಬರುವ ಕಡಿದಾದ ಶಿಲಾಪಾರ್ಶ್ವಗಳಿಂದ ಕೂಡಿರುವ ಆಳವಾದ ಮತ್ತು ಕಿರಿದಾದ ಕಣಿವೆಯನ್ನೇ “ಕಂದರ” ಎನ್ನುತ್ತೇವೆ. ಇವು ನದಿಗಳ ಕಣಿವೆಯಲ್ಲಿನ ನಿರಂತರ ಊರ್ಧ್ವಮುಖ ಸವೆತದಿಂದ ನಿರ್ಮಾಣವಾಗುತ್ತವೆ. ಉದಾ: ನರ್ಮದ ನದಿಯ ಕಂದರ, ಗಂಗೋತ್ರಿ ಕಂದರ ಇತ್ಯಾದಿ.



ಇ) TP ಆಕಾರದ ಕಣಿವೆ : ನದಿಯು ತನ್ನ ಪಾತ್ರದಲ್ಲಿ ಅತಿ ಕಡಿದಾದ, ಆಳವಾದ ಕಣಿವೆಯನ್ನು ನಿರ್ಮಿಸಿದ್ದು, ನೋಡಲು ಆಂಗ್ಲ ಭಾಷೆಯ 'I' ಅಕ್ಷರವನ್ನು ಹೋಲುವಂತಹ, ಈ ಕಣಿವೆಯನ್ನು '1' ಆಕಾರದ ಕಣಿವೆ' ಎನ್ನುತ್ತೇವೆ. ಕಂದರಗಳಿಗೆ ಹೋಲಿಸಿದರೆ ಇವು ಹೆಚ್ಚು ಆಳವನ್ನು ಹೊಂದಿವೆ.


ಈ) ಮಹಾಕಂದರ : ಶುಷ್ಕ ಮತ್ತು ಅರೆಶುಷ್ಕ ಪ್ರದೇಶಗಳಲ್ಲಿ ಕಂಡು ಬರುವ ಅಗಲ, ಆಳ ಮತ್ತು ಕಡಿದಾದ ಊರ್ಧ್ವ ಮುಖ ಪಾರ್ಶ್ವಗಳಂತಹ ಲಕ್ಷಣವನ್ನು ಹೊಂದಿರುವ ಕಣಿವೆಯನ್ನೇ “ಮಹಾಕಂದರ" ಎಂದು ಕರೆಯುತ್ತಾರೆ. ಉದಾ : ಅಮೇರಿಕಾ ಸಂಯುಕ್ತ ಸಂಸ್ಥಾನದ (USA) ಕೊಲರೆಡೋ ನದಿಯ ಗ್ರಾಂಡ್ ಕ್ಯಾನಿಯನ್


Post a Comment (0)
Previous Post Next Post