ಚುನಾವಣಾ ಆಯೋಗ

  


ನಮ್ಮ ಸಂವಿಧಾನದ 15ನೇ ಭಾಗದಲ್ಲಿನ 124ನೇ ವಿಧಿಯು ಸ್ವತಂತ್ರ ಮತ್ತು ನಿರ್ಭೀತ ಚುನಾವಣಾ ಆಯೋಗದ ರಚನೆಗೆ ಅವಕಾಶ ಮಾಡಿಕೊಟ್ಟಿದೆ. ಚುನಾವಣಾ ಆಯೋಗದ ಸಂಸತ್ತಿನ, ರಾಜ್ಯ ಶಾಸನ ಸಭೆಗಳ, ರಾಜ್ಯಾಧ್ಯಕ್ಷ ಹಾಗೂ ಉಪರಾಷ್ಟ್ರಾಧ್ಯಕ್ಷರ ಚುನಾವಣೆಗಳ ಮೇಲ್ವಿಚಾರಣೆ, ನಿರ್ದೇಶನ ಹಾಗೂ ನಿಯಂತ್ರಣಾಧಿಕಾರವನ್ನು ಹೊಂದಿದೆ. ಭಾರತದಲ್ಲಿ ಕೇಂದ್ರ ಹಾಗೂ ರಾಜ್ಯಗಳು ಒಂದೇ ಚುನಾವಣೆ ಆಯೋಗವನ್ನು ಹೊಂದಿವೆ. ಭಾರತದ ಚುನಾವಣಾ ಆಯೋಗವು ಸ್ಥಳೀಯ ಸರ್ಕಾರಗಳಿಗೆ ಚುನಾವಣೆ ನಡೆಸುವುದಿಲ್ಲ. ಪ್ರತ್ಯೇಕ ರಾಜ್ಯ ಚುನಾವಣಾ ಆಯೋಗಗಳು ಸ್ಥಳೀಯ ಸರ್ಕಾರಗಳಿಗೆ ಚುನಾವಣೆ ನಡೆಸುತ್ತವೆ.


ರಚನೆ : ಸಂವಿಧಾನದ 324ನೇ ವಿಧಿಯು ಚುನಾವಣಾ ಆಯೋಗದ ರಚನೆಯನ್ನು ವಿವರಿಸುತ್ತದೆ. ಚುನಾವಣಾ ಆಯೋಗವು ಮುಖ ಆಯುಕ್ತರು ಹಾಗೂ ರಾಷ್ಟ್ರಾಧ್ಯ ಕರು ಕಾಲಕಾಲಕ್ಕೆ ನಿಗದಿಪಡಿಸಬಹುದಾದ ತರ ಚುನಾವಣಾ ಆಯುಕ್ತರುಗಳನ್ನು ಹೊಂದಿರುತ್ತದೆ. ಚುನಾವಣಾ ಆಯೋಗಪ್ಪ 1950ರಿಂದ 1999ರವರೆಗೆ ಏಕ ಸದಸ್ಯ ಆಯೋಗವಾಗಿ ಕಾರ್ಯ ನಿರ್ವಹಿಸಿತು. ಈ ಸಂದರ್ಭದಲ್ಲಿ ಆಯೋಗವು ಮುಖ್ಯ ಚುನಾವಣಾ ಆಯುಕ್ತರನ್ನು ಮಾತ್ರ ಹೊಂದಿತ್ತು. ಮೊದಲ ಬಾರಿಗೆ ರಾಷ್ಟ್ರಾಧ್ಯಕ್ಷರು ಆಕ್ಟೋಬರ್ 16, 1989ರಂದು ಎಸ್.ಎಸ್. ಧನೋವಾ ಮತ್ತು ಐ.ಎಸ್, ಸೀಗೆಲ್ ಎಂಬ ಇಬ್ಬರು ವ್ಯಕ್ತಿಗಳನ್ನು ಚುನಾವಣಾ ಆಯುಕ್ತರನ್ನಾಗಿ ನೇಮಕ ಮಾಡಿದರು. ಜನವರಿ 11, 1990ಗಂಡು ರಾಜ್ಯಾಧ್ಯಕ್ಷರು ಹೊಸದಾಗಿ ನೇಮಕವಾಗಿದ್ದ ಇಬ್ಬರು ಆಯುಕ್ತರ ಯುದ್ದೆಗಳನ್ನು ರದ್ದುಪಡಿಸಿದರು. ಪ್ರಧಾನಿ ಪಿ.ವಿ. ನರಸಿಂಹರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಕ್ಟೋಬರ್ 1, 1993ರಂದು ತ್ರಿಸದಸ್ಯ ಚುನಾವಣಾ ಆಯೋಗವನ್ನು ರಚಿಸಿತು. ಅಂದಿನಿಂದ ಇಂದಿನವರೆಗೆ ಚುನಾವಣಾ ಆಯೋಗವು ಒಬ್ಬರು ಮುಖ್ಯ ಚುನಾವಣಾ ಆಯುಕ್ತರು ಹಾಗೂ ಇತರ ಇಬ್ಬರು ಚುನಾವಣಾ ಆಯುಕ್ತರನ್ನು ಒಳಗೊಂಡಿದೆ. ಆಯೋಗದ ಮೂವರು ಸದಸ್ಯರ ಅಧಿಕಾರ, ವೇತನ ಮತ್ತು ಇತರೆ ಸೌಲಭ್ಯಗಳು ಸಮನಾಗಿರುತ್ತವೆ. ಮುಖ್ಯ ಆಯುಕ್ತರು ಹಾಗೂ ಇತರೆ ಆಯುಕ್ತರ ನಡುವೆ ಭಿನ್ನಾಭಿಪ್ರಾಯದಂಟಾವಾಗ ಬಹಮತ ತತ್ವದ ಆಧಾರದ ಮೇಲೆ ನಿರ್ಧಾರ ಕೈಗೊಳ್ಳಲಾಗುತ್ತದೆ. ತ್ರಿಸದಸ್ಯ ಆಯೋಗದಲ್ಲಿ ಮುಖ್ಯ ಚುನಾವಣಾ ಆಯುಕ್ತರು ಅಧ್ಯಕ್ಷ (Chairman) ರಂತೆ ಕೆಲಸ ಮಾಡುತ್ತಾರೆ. 


ನೇಮಕ : ಚುನಾವಣಾ ಆಯೋಗದ ಸದಸ್ಯರನ್ನು ರಾಜ್ಯಾಧ್ಯಕ್ಷರು ಮಂತ್ರಿಮಂಡಲದ ಸಲಹೆಯ ಮೇರೆಗೆ ನೇಮಕ ಮಾಡುತ್ತಾರೆ. ಚುನಾವದ ಆಯೋಗಕ್ಕೆ ಸಹಾಯ ಮಾಡಲು ರಾಜ್ಯಾಧ್ಯಕ್ಷರು ಪ್ರಾದೇಶಿಕ ಆಯುಕ್ತರುಗಳನ್ನು ನೇಮಿಸುತ್ತಾರೆ. ಪ್ರಾದೇಶಿಕ ಆಯುಕ್ತರುಗಳನ್ನು ನೇಮಕ ಮಾಡುವ ಸಂದರ್ಭದಲ್ಲಿ ರಾಜ್ಯಾಧ್ಯಕರು ಚುನಾವಣಾ ಆಯೋಗದೊಂದಿಗೆ ಸಮಾಲೋಚನೆ ನಡೆಸುತ್ತಾರೆ.


ಅಧಿಕಾರಾವಧಿ : ಚುನಾವಣಾ ಆಯೋಗದ ಸದಸ್ಯರ ಅವಧಿ 6 ವರ್ಷಗಳು, ಆದರೆ ಅವಧಿ ಮುಗಿಯುವುದಕ್ಕೆ ಮೊದಲು 61 ವರ್ಷಗಳು ಕಂದರೆ ಹುದ್ದೆಯಿಂದ ನಿವೃತ್ತಿ ಯಾಗಬೇಕಾಗುತ್ತದೆ. ಅಧಿಕಾರಾವಧಿಗೆ ಸಂಬಂಧಿಸಿದ ಈ ನಿಯಮ ಜನವರಿ 1, 1996ರಿಂದ ಜಾರಿಗೆ ಬಂದೆ, ಪ್ರಾದೇಶಿಕ ಆಯುಕ್ತರ ಅಧಿಕಾರಾವಧಿಯನ್ನು ರಾಷ್ಟ್ರಾಧ್ಯಕ್ಷರು ನಿರ್ಧರಿಸುತ್ತಾರೆ.


ಸೇವಾ ನಿಯಮಗಳು : ಚುನಾವಣಾ ಆಯೋಗದ ಸದಸ್ಯರು ಹಾಗೂ ಪ್ರಾದೇಶಿಕ ಆಯುಕ್ತರ ಸೇವಾ ನಿಯಮಗಳನ್ನು ಸಂಸತ್ತು ನಿರ್ಧರಿಸುತ್ತದೆ. ಚುನಾವಣಾ ಆಯೋಗದ ಸದಸ್ಯರ ಸೇವಾ ನಿಯಮಗಳನ್ನು ಅನಾನುಕೂಲವಾಗುವಂತೆ ಬದಲಾಯಿಸುವಂತಿಲ್ಲ


ವೇತನ, ಪಿಂಚಣಿ ಮತ್ತು ಇತರೆ ಭತ್ಯೆಗಳು : ಚುನಾವಣಾ ಆಯೋಗದ ಸದಸ್ಯರಿಗೆ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರ ಸ್ಥಾನಮಾನವನ್ನು ನೀಡಲಾಗಿದೆ. ಆದ್ದರಿಂದ ಆಯೋಗದ ಸದಸ್ಯರು ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರಿಗೆ ದೊರೆಯುವ ವೇತನ, ಪಿಂಚಣಿ ಮತ್ತು ಇತರೆ ಸೌಲಭ್ಯಗಳನ್ನು ಪಡೆಯುತ್ತಾರೆ. ಇವರ ವೇತನ, ಪಿಂಚಣಿ ಹಾಗೂ ಇತರೆ ಭತ್ಯೆಗಳನ್ನು ಭಾರತದ ಸಂಚಿತ ನಿಧಿಯಿಂದ


ನೀಡಲಾಗುತ್ತದೆ.


ಪದಚ್ಯುತಿ : ಚುನಾವಣಾ ಆಯೋಗದ ಸದಸ್ಯರನ್ನು ಅತ್ಯಂತ ಸುಲಭವಾಗಿ ಅಧಿಕಾರದಿಂದ ವಜಾ ಮಾಡಲು ಸಾಧ್ಯವಿಲ್ಲ. ಮುಖ್ಯ ಚುನಾವಣಾ ಆಯುಕ್ತರನ್ನು ಪದಚ್ಯುತಿಗೊಳಿಸಲು ಸರ್ವೋಚ್ಛನ್ಯಾಯಾಲಯದ ನ್ಯಾಯಾಧೀಶರನ್ನು ಪದಚ್ಯುತಿಗೊಳಿಸುವ ಆಧಾರ ಮತ್ತು ವಿಧಾನವನ್ನು ಅನುಸರಿಸಬೇಕು. ಮುಖ್ಯ ಚುನಾವಣಾ ಆಯುಕ್ತರ ಶಿಫಾರಸ್ಸಿನ ಮೇರೆಗೆ ಮಾತ್ರ ರಾಷ್ಟ್ರಾಧ್ಯಕ್ಷರು ಇತರೆ ಚುನಾವಣಾ ಆಯುಕ್ತರು ಹಾಗೂ ಪ್ರಾದೇಶಿಕ ಆಯುಕ್ತರುಗಳನ್ನು ಅಧಿಕಾರದಿಂದ ತೆಗೆದು ಹಾಕಬಹುದು.


ಚುನಾವಣಾ ಆಯೋಗದ ಸ್ವಾತಂತ್ರ್ಯ:


ಭಾರತ ಸಂವಿಧಾನದ ನಿರ್ಮಾತೃಗಳು, ಚುನಾವಣಾ ಆಯೋಗವು ಸ್ವತಂತ್ರವಾಗಿದ್ದಾಗ ಮಾತ್ರ ನಿಷಕಪಾತವಾಗಿ ಹಾಗೂ ನಿರ್ಭೀತವಾಗಿ ಕಾರ್ಯನಿರ್ವಹಿಸಬಲ್ಲದು ಎಂಬ ಸತ್ಯವನ್ನು ಅರ್ಥ ಮಾಡಿಕೊಂಡಿದ್ದರು. ಆದ್ದರಿಂದ ಅವರು ಚುನಾವಣಾ ಆಯೋಗದ ಸ್ವಾತಂತ್ರ್ಯವನ್ನು ರಕ್ಷಿಸಲು ಈ ಕೆಳಗಿನ ನಿಯಮಗಳನ್ನು ನಮ್ಮ ಸಂವಿಧಾನಕ್ಕೆ ಅಳವಡಿಸಿದರು.


1. ಸಂವಿಧಾನವು ಮುಖ್ಯ ಚುನಾವಣಾ ಆಯುಕ್ತರಿಗೆ ಸೇವಾ ಭದ್ರತೆಯನ್ನು ಒದಗಿಸುತ್ತದೆ, ಮುಖ್ಯ ಚುನಾವಣಾಧಿಕಾರಿಯನ್ನು ಪದಚ್ಯುತಿಗೊಳಿಸಲು ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರನ್ನು ಪದಚ್ಯುತಿಗೊಳಿಸುವ ವಿಧಾನವನ್ನು ಅನುಸರಿಸಬೇಕು.


2. ಮುಖ್ಯ ಚುನಾವಣಾ ಆಯುಕ್ತರ ಶಿಫಾರಸ್ಸಿಗನುಗುಣವಾಗಿ ಮಾತ್ರ ಇತರ ಚುನಾವಣಾ ಆಯುಕ್ತರು ಹಾಗೂ ಪ್ರಾದೇಶಿಕ ಅಯುಕ್ತರುಗಳನ್ನು ಸೇವೆಯಿಂದ ತೆಗೆದು ಹಾಕಬಹುದು.


1, ಮುಖ್ಯ ಚುನಾವಣಾಧಿಕಾರಿಯ ನೇಮಕದ ನಂತರ ಇವರ ಸೇವಾ ನಿಯಮಗಳನ್ನು ಅನಾನುಕೂಲವಾಗುವಂತೆ ಬದಲಾಯಿಸುವಂತಿಲ್ಲ. ಚುನಾವಣಾ ಆಯೋಗದ ಸದಸ್ಯರಿಗೆ ಭಾರತದ ಸಂಚಿತ ನಿಧಿಯಿಂದ ವೇತನ, ಪಿಂಚಣಿ ಮತ್ತು ಇತರೆ ಸೌಲಭ್ಯಗಳನ್ನು ನೀಡಲಾಗುತ್ತದೆ.


ಚುನಾವಣಾ ಆಯೋಗದ ಸದಸ್ಯರು ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಸ್ಥಾನಮಾನವನ್ನು ಹೊಂದಿದ್ದಾರೆ 4. ಚುನಾಥಗಳನ್ನು ನಡೆಸಲು ಆಯೋಗಕ್ಕೆ ಅಗತ್ಯವಾದ ಸಿಬ್ಬಂದಿಯನ್ನು ರಾಷ್ಟ್ರಾಧ್ಯಕ್ಷರ ಅಥವಾ ರಾಜ್ಯಪಾಲರು ಒದಗಿಸಬೇಕು,


ಭಾರತದಲ್ಲಿ ಒಂದೇ ಚುನಾವಣಾ ಆಯೋಗ ಅಸ್ತಿತ್ವದಲ್ಲಿದ್ದು, ಇದು ಕೇಂದ್ರ ಹಾಗೂ ರಾಜ್ಯ ಶಾಸಕಾಂಗಗಳ ಚುನಾವಣೆಯನ್ನು ನಡೆಸುತ್ತದೆ. ರಾಜ್ಯ ಶಾಸಕಾಂಗಗಳ ಚುನಾವಣೆಗಳನ್ನು ನಡೆಸಲು ಪ್ರತ್ಯೇಕವಾದ ಚುನಾವಣಾ ಆಯೋಗಗಳು ಅಸ್ತಿತ್ವದಲ್ಲಿಲ್ಲ, ಪ್ರತಿಯೊಂದು ರಾಜ್ಯದಲ್ಲಿ ಮುಖ್ಯ ಚುನಾವಣಾಧಿಕಾರಿಗಳಿದ್ದು, ಚುನಾವಣೆ ನಡೆಯುವಾಗ ಆಯೋಗಕ್ಕೆ ನೆರವಾಗುತ್ತಾರೆ.


ಚುನಾವಣಾ ಆಯೋಗದ ಅಧಿಕಾರ ಮತ್ತು ಕಾರ್ಯಗಳು


ಚುನಾವಣಾ ಆಯೋಗದ ಅಧಿಕಾರ ಮತ್ತು ಕಾರ್ಯಗಳು ಈ ಕೆಳಗಿನಂತಿವೆ. 

1.ಮತದಾರರ ಪಟ್ಟಿಗಳ ಸಿದ್ಧತೆ ಹಾಗೂ ಪರಿಷ್ಕರಣಗಳ ಪರಿಶೀಲನೆ ಮತ್ತು ನಿರ್ದೇಶನ:

2 ಸಂಸತ್ತು, ಉಜ್ಯ ಶಾಸಕಾಂಗ, ರಾಷ್ಟ್ರಾಧ್ಯಕ್ಷರು ಮತ್ತು ಉಪ ರಾಷ್ಟ್ರಾಧ್ಯಕ್ಷರ ಸ್ಥಾನಗಳಿಗೆ ಚುನಾವಣೆಗಳನ್ನು ನಡೆಸುವುದು, 


3.ರಾಜಕೀಯ ಪಕ್ಷಗಳಿಗೆ ಮಾನ್ಯತೆ ನೀಡುವುದು.

Post a Comment (0)
Previous Post Next Post