ರಾಷ್ಟ್ರೀಯ ಪಂಚಾಯತ್ ರಾಜ್ ದಿನ ಏಪ್ರಿಲ್ 24
2021 ಏಪ್ರಿಲ್ 24ರಂದು 12ನೇ ರಾಷ್ಟ್ರೀಯ ಪಂಚಾಯತ್ ರಾಜ್ (National Panchayath Raj Day) ದಿನದ ಆಚರಣೆಯನ್ನು ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಾಲಯ ವರ್ಚುವಲ್ ರೂಪದಲ್ಲಿ ಆಯೋಜಿಸಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಪಂಚಾಯತ್ ರಾಜ್ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ವಿವಿಧ ವಿಭಾಗಗಳಲ್ಲಿ ಪಂಚಾಯತ್ ರಾಜ್ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಪಂಚಾಯತ್ ರಾಜ್ ಇಲಾಖೆ ಸಚಿವ ಕೆ.ಎಸ್. ಈಶ್ವರಪ್ಪ ಅವರು ಸಹ ಈ ವರ್ಚುವಲ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಪ್ರಧಾನಿಗಳು ಮೊದಲ ಬಾರಿ ಪಂಜಾಂಕುತಿಗಳ ಬ್ಯಾಂಕ್ ಖಾತೆಗಳಿಗೆ ನಿಗದಿತ ಅವಧಿಗನುಗುಣವಾಗಿ ಅನುದಾನದ ಹಣವನ್ನು ನೇರವಾಗಿ ಇಲಾಖೆಯಿಂದ ವರ್ಗಾಯಿಸಲಾಗುವ ಉಪಕ್ರಮವನ್ನು ಪ್ರಸ್ತಾಪಿಸಿದರು.
2021ರ ಏಪ್ರಿಲ್ 24 ರಂದು 30 ಗ್ರಾಮ ಪಂಚಾಯಿತಿಗಳಿಗೆ ಮಕ್ಕಳ ಸ್ನೇಹಿ ಗ್ರಾಮ ಪಂಚಾಯಿತಿ ಪುರಸ್ಕಾರ, 29 ಗ್ರಾಮ ಪಂಚಾಯಿತಿಗಳಿಗೆ ಗ್ರಾಮ ಪಂಚಾಯಿತಿ ಯೋಜನಾ ಅಭಿವೃದ್ಧಿ ಪ್ರಶಸ್ತಿ, 30 ಗ್ರಾಮ ಪಂಚಾಯಿತಿಗಳಿಗೆ ನಾನಾಜಿ ದೇಶ್‌ಮುಖ ರಾಷ್ಟ್ರೀಯ ಗೌರವ ಗ್ರಾಮ ಸಭಾ ಸ್ವರಾಜ್ ಪುರಸ್ಕಾರ, 224 ಪಂಚಾಯಿತಿಗಳಿಗೆ ದೀನ ದಯಾಳ್ ಉಪಾಧ್ಯಾಯ ಪಂಚಾಯತ್ ಸಶಕ್ತಿಕರಣ ಪುರಸ್ಕಾರ, 12 ರಾಜ್ಯಗಳಿಗೆ ಇ-ಪಂಚಾಯತ್ ಪುರಸ್ಕಾರ ನೀಡಲಾಗಿದೆ.
ಪ್ರಶಸ್ತಿ ಆಯ್ಕೆಗೆ ಪರಿಗಣಿಸಲಾದ ಪ್ರಮುಖಾಂಶಗಳು
ಗ್ರಾಮಗಳ ಪರಿಸರ ಕಾಳಜಿ ಸ್ವಚ್ಛತೆ ಕಸದ ವೈಜ್ಞಾನಿಕ ನಿರ್ವಹಣೆ, ನೀರು ಸರಬರಾಜು, ಪಂಚಾಯಿತಿ ವ್ಯವಸ್ಥೆಗಳಲ್ಲಿ ಸೌರಶಕ್ತಿ ಬಳಕೆಗೆ ಕ್ರಮ ಪಂಚಾಯಿತಿ ಆಸ್ತಿಗಳ ಡಿಜಿಟಲೀಕರಣ, ಮಳೆನೀರು ಸಂಗ್ರಹಣಾ ಕ್ರಮಗಳು, ಬೀದಿ ದೀಪ ನಿರ್ವಹಣೆ, ಡಿಜಿಟಲ್ ಗ್ರಂಥಾಲಯ, ಗ್ರಾಮ ಪಂಚಾಯಿತಿ ಕೈಗೊಂಡಿರುವ ಜನಪರ ಯೋಜನೆಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾರ್ಯಕ್ರಮಗಳ ಅನುಷ್ಠಾನ, ಅಂಗನವಾಡಿಗಳ ಉನ್ನತೀಕರಣ, ಗ್ರಾಮೀಣ ಮಟ್ಟದಲ್ಲಿ ಶೈಕ್ಷಣಿಕ ಅಭಿವೃದ್ಧಿ, ಸಾವಯವ ಕೃಷಿಗೆ ಉತ್ತೇಜನ.
ಸ್ವಾಮಿತ್ವ ಯೋಜನೆಯಡಿ ಇ-ಆಸ್ತಿ ಕಾರ್ಡ್‌ಗಳ ವಿತರಣೆ (Distribution of e-Property Cards) | 2021ರ ರಾಷ್ಟ್ರೀಯ ಪಂಚಾಯತ್ ರಾಜ್ ಪ್ರಶಸ್ತಿಗಳನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿದ Maping and ನಂತರ ಸ್ವಾಮಿತ್ವ ಯೋಜನೆ (SVAMITVA-Survey of Villages with improvised technology in village areas)o@ ದೇಶದ 5,002 ಹಳ್ಳಿಗಳಲ್ಲಿನ 4,09,945 ಆಸ್ತಿ ಮಾಲೀಕರಿಗೆ ಇ-ಆಸ್ತಿಕಾರ್ಡ್‌ಗಳನ್ನು ವಿತರಿಸಿದರು. ಕೋವಿಡ್ ನಿರ್ವಹಣೆಯಲ್ಲಿ ಪಂಚಾಯಿತಿಗಳ ಕಾರ್ಯವನ್ನು ಶ್ಲಾಘಿಸಿದರು. ಕರ್ನಾಟಕದ 410 ಗ್ರಾಮಗಳು ಈ ಯೋಜನಾ ವ್ಯಾಪ್ತಿಗೆ ಒಳಪಟ್ಟಿವೆ. ಗ್ರಾಮೀಣ ಭಾರತದಲ್ಲಿ ಡೋನ್ ತಂತ್ರಜ್ಞಾನದ (DroneServicing) ಮೂಲಕ ಆಸ್ತಿ ಮೌಲ್ಯಮಾಪನ ಪರಿಹಾರಕ್ಕೆ ಸ್ವಾಮಿತ್ವ ಯೋಜನೆಯು ಸಂಬಂಧಿಸಿದೆ. ಈ ಯೋಜನೆಯು 2020ರ ಏಪ್ರಿಲ್ 24ರಂದು ಉದ್ಘಾಟನೆಯಾಗಿದ್ದು 2020-25ರ 5 ವರ್ಷಗಳ ಅನುಷ್ಠಾನದ ಅವಧಿಯನ್ನು ಹೊಂದಿದೆ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ ಪ್ರತಿ ಬಡವರಿಗೂ 2021ರ ಮೇ ಮತ್ತು ಜೂನ್ ತಿಂಗಳಿನಲ್ಲಿ ಉಚಿತ ಪಡಿತರ ನೀಡಲಾಗುವುದೆಂದು ಪ್ರಧಾನಿ ತಿಳಿಸಿದರು. 2020-21ರ ಅವಧಿಯಲ್ಲಿ ಮೊದಲ ಹಂತದಲ್ಲಿ ಇ-ಆಸ್ತಿಗೆ ಕಾರ್ಡ್ ಜಾರಿಗೆ ತರುವ ಮುನ್ನ ವಿವಿಧ ರಾಜ್ಯಗಳಲ್ಲಿ ಆಸ್ತಿ ಕಾರ್ಡ್‌ಗಳ ಹೆಸರುಗಳು: Sodoro (Title Deed), F (RPOR-Rural Property Ownership Records) es (Adhikar Abhilekh), ಮಹಾರಾಷ್ಟ್ರ (Sannad), ರಾಜಸ್ಥಾನ (Patta), ಉತ್ತರಾಖಂಡ (Svamitva Abhilekh), ಉತ್ತರ ಪ್ರದೇಶ (Gharauni).
ರಾಷ್ಟ್ರೀಯ ಪಂಚಾಯತ್ ರಾಜ್ ಪ್ರಶಸ್ತಿಗೆ ಭಾಜನವಾದ ಕರ್ನಾಟಕದ ಪಂಚಾಯಿತಿಗಳು-2021
2019-20ರ ಸಾಲಿನ ಕಾರ್ಯ ಪ್ರಗತಿ ಆಧಾರದ ಮೇಲೆ ಕೇಂದ್ರ ಅಧಿಕಾರಿಗಳ ತಂಡವು ಭೇಟಿ ನೀಡಿ ಪರಿಶೀಲಿಸಿ ನಂತರ ರಾಷ್ಟ್ರೀಯ ಪಂಚಾಯತ್ ರಾಜ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. 2021ರಲ್ಲಿ ಈ ಪ್ರಶಸ್ತಿಗೆ ಭಾಜನವಾದ ಕರ್ನಾಟಕದ ಪಂಚಾಯಿತಿಗಳು.
1) ದೀನ್ ದಯಾಳ್ ಪಂಚಾಯಿತಿ ಸಶಕ್ತಿಕರಣ ಪುರಸ್ಕಾರ (Deen Dayal Upadhyay Panchayath Sashaktikaran Puraskar ಎ) ಹಾಸನ ಜಿಲ್ಲಾ ಪಂಚಾಯಿತಿ, ಬಿ) ಬೆಂಗಳೂರು ಪೂರ್ವ ತಾಲ್ಲೂಕು ಪಂಚಾಯಿತಿ, ಸಿ) ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕು ಪಂಚಾಯಿತಿ, ಡಿ) ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲ್ಲೂಕಿನ ತುಮ್ಮಿನಕಟ್ಟೆ, ಇ) ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಯಡಗನಹಳ್ಳಿ, ಎಫ್) ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಕರ್ಣಕುಪ್ಪೆ ಗ್ರಾಮ ಪಂಚಾಯಿತಿ, 2) ಮಕ್ಕಳ ಸ್ನೇಹಿ ಗ್ರಾಮ ಪಂಚಾಯಿತಿ ಪ್ರಶಸ್ತಿ (Child Friendly Gram Panchayath Award): ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ
ತಾಲ್ಲೂಕಿನ ಮುನುಗನಹಳ್ಳಿ ಗ್ರಾಮ ಪಂಚಾಯಿತಿ,
3) ನಾನಾಜಿ ದೇಶ್‌ಮುಖ್ ಪ್ರಶಸ್ತಿ (Nanaji Deshmukh Rashtriya Gaurava Gram Sabha Puraskara): ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಹೆಮ್ಮನಹಳ್ಳಿ ಗ್ರಾಮ ಪಂಚಾಯಿತಿ. (ಸಾಮಾಜಿಕ ಸುಧಾರಕ ನಾನಾಜಿ ದೇಶ್‌ಮುಖ್-2019ರ ಸಾಲಿನ ಭಾರತ ರತ್ನ ಪ್ರಶಸ್ತಿ ಗೌರವ),
²) ನಮ್ಮ ಗ್ರಾಮ ನಮ್ಮ ಯೋಜನೆ (Grampanchayath Development Plan Award): ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲ್ಲೂಕಿನ ಹೆಸರಘಟ್ಟ ಹೋಬಳಿಯ ರಾಜಾನುಕುಂಟೆ ಗ್ರಾಮ ಪಂಚಾಯಿತಿ (ಗ್ರಾಮ ಪಂಚಾಯಿತಿ ಅಭಿವೃದ್ಧಿ ಯೋಜನೆ ಪ್ರಶಸ್ತಿ),