ವಿಶ್ವಭೂದಿನ ಎಪ್ರಿಲ್ 22

2021 ಏಪ್ರಿಲ್ 22ರಂದು 51ನೇ ಆವೃತ್ತಿಯ ವಿಶ್ವ, ಪೃಥ್ವಿ ಅಥವಾ ಭೂ ದಿನವನ್ನು Restore our Earth ಧೈಯವಾಕ್ಯದಲ್ಲಿ ಆಚರಿಸಲಾಯಿತು. 2021ರ ವಿಶ್ವ ಭೂ ದಿನದ ಅಂಗವಾಗಿ ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಅವರು 2021ರ ಏಪ್ರಿಲ್ 22 ಮತ್ತು 23 ರಂದು ವರ್ಚುವಲ್ ಆಗಿ ಜಾಗತಿಕ ನಾಯಕರ ಹವಾಮಾನ ಶೃಂಗಸಭೆಯನ್ನು ಆಯೋಜಿಸಿದ್ದರು. ಈ ಸಭೆಯಲ್ಲಿ ತಾಪಮಾನ ಬದಲಾವಣೆಯ ನಿಯಂತ್ರಣಕ್ಕಾಗಿ ಕೈಮೆಟ್ ಆಕ್ಷನ್ ಟ್ರ್ಯಾಕರ್ ಕ್ರಮವನ್ನು ಕೈಗೊಳ್ಳಲು ನಿರ್ಧರಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ ಅವರು ಕೂಡಾ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಜತೆಗೆ 2030ರ ಭಾರತ-ಅಮೆರಿಕ ತಾಪಮಾನ ಮತ್ತು ಶುದ್ಧ ಇಂಧನ ಕಾರ್ಯತಂತ್ರದ ಸಹಭಾಗಿತ್ವ ಅಜೆಂಡಾದ ಬಗ್ಗೆ ಚರ್ಚಿಸಿದರು.

ಪ್ರಮುಖ ಗುರಿ: 2016-2030ರ ಅವಧಿಯ ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ 13ನೇ ಗುರಿಯು ಹವಾಮಾನ ಬದಲಾವಣೆ ನಿಯಂತ್ರಣ ಹಾಗೂ 14ನೇ ಗುರಿಯು ಸುಸ್ಥಿರ ಜಲಸಂಪನ್ಮೂಲ ರಕ್ಷಣೆ, 15ನೇ ಗುರಿಯು ಭೌಗೋಳಿಕ ಪರಿಸರ ವ್ಯವಸ್ಥೆಯ ರಕ್ಷಣೆ ಮತ್ತು ಜೈವಿಕ ವೈವಿಧ್ಯತೆಯ ನಷ್ಟವನ್ನು ತಡೆಯುವುದುಕ್ಕೆ ಸಂಬಂಧಿಸಿದೆ. 2020ರ ಏಪ್ರಿಲ್ 22 ರಂದು ಭೂ ದಿನವು Climate Action ಎಂಬ ಧೈಯವಾಕ್ಯದಲ್ಲಿ ಆಚರಣೆಯಾಗಿತ್ತು.

ಆಚರಣೆಯ ಹಿನ್ನೆಲೆ: 1969ರ ಏಪ್ರಿಲ್ 22 ರಂದು ಜಾನ್ ಮ್ಯಾಕ್ ಕೊನೆಲ್ ಅವರು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಜರುಗಿದ ಯುನೆಸ್ಕೋ ಸಮ್ಮೇಳನದಲ್ಲಿ ವಿಶ್ವ ಭೂ ದಿನವನ್ನು ಆಚರಿಸುವ ಪ್ರಸ್ತಾಪ ಮಾಡಿದ್ದರು. ಆದರೆ 1970 ಏಪ್ರಿಲ್ 22 ರಂದು ವಿಶ್ವದಾದ್ಯಂತ ಮೊದಲ ಬಾರಿ ಆಚರಿಸಲಾಯಿತು. ವಿಶ್ವ ಭೂ ದಿನ ನೆಟ್‌ವರ್ಕ್ (ಜಗತ್ತಿನ ಅತಿ ದೊಡ್ಡ ಪರಿಸರ ಹೋರಾಟ ಸಂಬಂಧಿಸಿದ ಸಂಸ್ಥೆಯಲ್ಲಿ ಒಂದು) ವತಿಯಿಂದ ಪ್ರತಿ ವರ್ಷ ಭೂ ದಿನವನ್ನು ವಿಶ್ವ ಸಂಸ್ಥೆಯ 193 ಸದಸ್ಯ ರಾಷ್ಟ್ರಗಳು ಆಚರಿಸುತ್ತಿವೆ. ಅಮೆರಿಕಾದ ಸೆನೆಟರ್ ಜಿ, ನೆಲ್ಸನ್ ಮತ್ತು ಪರಿಸರ ಹೋರಾಟಗಾರ ಡೆಸ್ ಆಯಸ್ ಅವರು ವಿಶ್ವ ಭೂ ದಿನದ ಪರಿಕಲ್ಪನೆಯ ಮರು ನಾಮಕರಣ ಮಾಡಿದರು. 2009ರ ಏಪ್ರಿಲ್ 22ರಂದು ಸಾಮಾನ್ಯ ಸಭೆಯು ಅಂತಾರಾಷ್ಟ್ರೀಯ ಮಾತೃ ಭೂಮಿ ದಿನವನ್ನಾಗಿ ಆಚರಿಸಲು ನಿರ್ಧರಿಸಿತು.

ಕೋಪ್ ಸಮ್ಮೇಳನ: ಭೂಮಿಯ ಮೇಲಿನ ತಾಪಮಾನ ನಿಯಂತ್ರಣಕ್ಕೆ ಸಂಬಂಧಿಸಿದಂತೆ ವಿವಿಧ ರಾಷ್ಟ್ರಗಳ ನಡುವೆ 1995 ರಿಂದ ನಡೆಯುವ ಸಭೆಯನ್ನು ಕೋಪ್ ಸಮ್ಮೇಳನಗಳು ಎನ್ನುವರು. 2019ರ ಡಿಸೆಂಬರ್‌ನಲ್ಲಿ ಕೋಪ್-25ನೇ ಸಮ್ಮೇಳನವು ಸ್ಪೇನ್‌ನ ಮ್ಯಾಡ್ರಿಡ್‌ನಲ್ಲಿ ಚಿಲಿ ದೇಶದ ಆತಿಥ್ಯದಲ್ಲಿ ಜರುಗಿತ್ತು. 2021ರ ನವೆಂಬರ್ ರಿಂದ 12 ರವರೆಗೆ ಕೋಪ್-26ನೇ ಸಮ್ಮೇಳನವು ಸ್ಕಾಟ್‌ಲ್ಯಾಂಡ್‌ನ ಗ್ಲಾಸ್ಕೋನಲ್ಲಿ ಜರುಗಲಿದೆ.

Earth Hour: ಸ್ವಿಟ್ಟರ್‌ಲ್ಯಾಂಡ್‌ನ ಸ್ಟ್ಯಾಂಡ್‌ನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ WWF-World Wide Fund for Nature ಸಂಸ್ಥೆಯು 2021ರ ಮಾರ್ಚ್ 27ರಂದು ಭೂ ಗಂಟೆ ಅಥವಾ ಅರ್ತ್ ಅವರ್ ಅನ್ನು Climate Change to Save Earth ಧೈಯವಾಕ್ಯದಲ್ಲಿ ಆಚರಿಸಿತು.

ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಪ್ರಮುಖ ಒಪ್ಪಂದಗಳು: ಇರಾನ್‌ನ ರಾಮಾರ್ ಒಪ್ಪಂದ (1971ರ ಫೆಬ್ರವರಿ 2-ಚೌಗು ಭೂಮಿ ಸಂರಕ್ಷಣೆ), ಸ್ಟಾಕ್ ಹೋಂ ಒಪ್ಪಂದ (1972ರ ಜೂನ್ 5-ಮಾನವ ಪರಿಸರದ ಅಭಿವೃದ್ಧಿ ಸಮ್ಮೇಳನ), ಮಾಂಟ್ರಿಯಾಲ್ ಒಪ್ಪಂದ (1987ರ ಸೆಪ್ಟೆಂಬರ್ 16-ಓರೋನ್ ಪದರದ ಸಂರಕ್ಷಣೆ), ಕ್ಯೋಟೋ ಒಪ್ಪಂದ (1997-ತಾಪಮಾನ ನಿಯಂತ್ರಣ ಮತ್ತು ಕಾರ್ಬನ್ ಕ್ರೆಡಿಟ್ ಪರಿಕಲ್ಪನೆ), ಪ್ಯಾರಿಸ್ ಒಪ್ಪಂದ (2015: ಕೋಪ್ 21ರ ಸಮ್ಮೇಳನ, ತಾಪಮಾನ ಬದಲಾವಣೆ ನಿಯಂತ್ರಣ)

ಪರಿಸರ ಕ್ಷೇತ್ರ ನೊಬೆಲ್ ಪ್ರಶಸ್ತಿ: ಕ್ಯಾಲಿಫೋರ್ನಿಯಾ ವಿವಿಯು ನೀಡುವ ಟೈಲರ್‌ ಪ್ರಶಸ್ತಿಯನ್ನು ಪರಿಸರ ಕ್ಷೇತ್ರದ ನೊಬೆಲ್ ಎನ್ನುವರು. 2020ರ ಪರಿಸರ ಕ್ಷೇತ್ರದ ನೊಬೆಲ್ ಪ್ರಶಸ್ತಿಗೆ ಭಾರತದ ಪವನ್ ಸುಖದೇವ್ ಭಾಜನರಾಗಿದ್ದರು. 2021ರ ಜಾಗತಿಕ ಇಂಧನ ಮತ್ತು ಪರಿಸರ ನಾಯಕತ್ವ ಪ್ರಶಸ್ತಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಆಯ್ಕೆಯಾಗಿದ್ದರು.

ಹಸಿರು ಮನೆ ಅನಿಲಗಳು (Green House Gases): ನೀರಾವಿ (H,೦), ಕಾರ್ಬನ್ ಡೈ ಆಕ್ಸೆಡ್ (CO), ಮಿಥೇನ್ (CH), ನೈಟ್ರಸ್ ಆಕ್ಸೆಡ್ (NO), ಓಝೇನ್ ಅನಿಲ (0). ಅಮ್ಲ ಮಳೆ (Acid Rain) ಗೆ ಕಾರಣವಾದ ಅನಿಲಗಳು : ಸಲ್ಫರ್ ಡೈ ಆಕ್ಸೆಡ್ (SO) ಮತ್ತು ನೈಟ್ರೋಜನ್ ಆಕ್ಸೆಡ್ (NO).

Post a Comment (0)
Previous Post Next Post