ವಿಶ್ವ ಪರಿಸರ ದಿನ (World Environment Day) - ಜೂನ್ 5

2021ರ ಜೂನ್ 5 ರಂದು “Eco System Restoration (Reimagine, Recreate & Restore)" ಎಂಬ ಧೈಯವಾಕ್ಯದಲ್ಲಿ ವಿಶ್ವ ಪರಿಸರ ದಿನವನ್ನು ಪಾಕಿಸ್ತಾನದ ಆತಿಥ್ಯದಲ್ಲಿ ಆಚರಿಸಲಾಗಿದೆ. ಸರ್ಕಾರ, ಉದ್ಯಮ ವಲಯ, ನಾಗರಿಕರು ಹಾಗೂ ವಿವಿಧ ಕ್ಷೇತ್ರಗಳ ಸೆಲೆಬ್ರಿಟಿಗಳು ಪರಿಸರಕ್ಕೆ ಸಂಬಂಧಿಸಿದ ವಿಚಾರಗಳನ್ನು ಉತ್ತೇಜಿಸಲು ಹಲವು ಕಾರ್ಯಕ್ರಮಗಳನ್ನು ವರ್ಚುವಲ್ ಆಗಿ ನೆರವೇರಿಸಿದರು. ಭಾರತದಲ್ಲಿ ಕೇಂದ್ರ ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಹಾಗೂ ಪೆಟ್ರೋಲಿಯಂ ನೈಸರ್ಗಿಕ ಅನಿಲ ಸಚಿವಾಲಯಗಳು ಜಂಟಿಯಾಗಿ ವಿಶ್ವ ಪರಿಸರ ದಿನದಂದು ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದ್ದವು. ಇವುಗಳ ಮುಖ್ಯ ಉದ್ದೇಶ ಉತ್ತಮ ಪರಿಸರಕ್ಕಾಗಿ ಜೈವಿಕ ಇಂಧನಗಆಗೆ ಉತ್ತೇಜನ” (Promotion of Bio Engergy for a better Environment)

ಪ್ರಧಾನಿ ನರೇಂದ್ರ ಮೋದಿ ಭಾಷಣ: ವಿಶ್ವ ಪರಿಸರ ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಸರೆನ್ಸ್ ಮೂಲಕ ಈ ಸಭೆಯಲ್ಲಿ ಮಾತನಾಡಿದರು. 2025ರ ವೇಳೆಗೆ ಪೆಟ್ರೋಲ್‌ನಲ್ಲಿ ಶೇ. 20ರಷ್ಟು ಎಥೆನಾಲ್ ಮಿಶ್ರಣದ ಗುರಿಯನ್ನು 2025ರ ವೇಳೆಗೆ ಸಾಧಿಸುವುದು, ಮರು ಬಳಕೆಯ ಮೂಲಕ ಸಂಪನ್ಮೂಲವನ್ನು ಉತ್ತಮವಾಗಿ ಬಳಸಿಕೊಳ್ಳುವುದು. ಒಂದು ಸೂರ್ಯ, ಒಂದು ವಿಶ್ವ, ಒಂದು ಗ್ರಿಡ್ ಮತ್ತು ವಿರ್ಪ ಸ್ಥಿತಿ ಸ್ಥಾಪಕ ಮೂಲಸೌಕರ್ಯ ಒಕ್ಕೂಟದ ದೃಷ್ಟಿಕೋನವನ್ನು ಸಾಕಾರಗೊಳಿಸಲು ಭಾರತ ಮತ್ತು ಫ್ರಾನ್ಸ್‌ಗಳ ಸಹಭಾಗಿತ್ವದಲ್ಲಿ ಗುರುಗ್ರಾಮದಲ್ಲಿ ಅಂತಾರಾಷ್ಟ್ರೀಯ ಸೌರ ಒಕ್ಕೂಟವನ್ನು ಸ್ಥಾಪನೆ ಮಾಡಿರುವ ಹಿನ್ನೆಲೆಯನ್ನು ಸ್ಮರಿಸಿಕೊಂಡರು. ಆತ್ಮನಿರ್ಭರ ಭಾರತ ಅಭಿಯಾನದ ಬಹಳ ಮುಖ್ಯವಾದ ಭಾಗಗಳು ಸ್ವಚ್ಛ ಮತ್ತು ದಕ್ಷ ಇಂಧನ ವ್ಯವಸ್ಥೆ, ಸ್ಥಿತಿಸ್ಥಾಪಕ ನಗರ ಮೂಲಸೌಕರ್ಯ ಮತ್ತು ಯೋಜಿತ ಪರಿಸರ ಪುನರ್‌ಸ್ಥಾಪನೆ, ಗುಜರಾತ್‌ನ ಕೆವಾಡಿಯವನ್ನು ಎಲೆಕ್ಟಿಕ್ ವಾಹನ ನಗರವನ್ನಾಗಿ ಅಭಿವೃದ್ಧಿಪಡಿಸುವ ಯೋಜನೆ, ಅಟಲ್ ಭೂ ಜಲ ಮತ್ತು ಕ್ಯಾಚ್ ದಿ ರೇನ್ ನಂತಹ ಅಭಿಯಾನಗಳ ಬಗ್ಗೆ ಪ್ರಸ್ತಾಪಿಸಿದರು. ಆಧುನಿಕ ತಂತ್ರಜ್ಞಾನದ ಮೂಲಕ ಸಂಪನ್ಮೂಲವನ್ನು ಮರುಬಳಕೆ ಮಾಡಲು 11 ವಲಯಗಳನ್ನು ಗುರುತಿಸಿದ್ದು, ಕಸದಿಂದ ರಸ ಅಭಿಯಾನವನ್ನು ಮಿಷನ್ ಮೋಡ್ ಆಗಿ ಕೈಗೊಳ್ಳುತ್ತಿರುವುದರ ಬಗ್ಗೆ ಪ್ರಸ್ತಾಪಿಸಿದರು.


ಆಚರಣೆ ಹಿನ್ನೆಲೆ: 1972ರ ಜೂನ್ 5 ರಂದು ಸ್ವೀಡನ್‌ನ ಸ್ಟಾಕ್ ಹೋಂನಲ್ಲಿ ನಡೆದ ಪರಿಸರಕ್ಕೆ ಸಂಬಂಧಿಸಿದ | ಮೊಟ್ಟ ಮೊದಲ ಮಾನವ ಸಮ್ಮೇಳನದ ಹಿನ್ನೆಲೆಯಲ್ಲಿ ಪ್ರತಿವರ್ಷ ಜೂನ್ 5 ರಂದು ವಿಶ್ವಪರಿಸರ ದಿನವನ್ನು ಆಚರಿಸಲಾಗುತ್ತದೆ. 1972ರ ಡಿಸೆಂಬರ್‌ನಲ್ಲಿ ಸಾಮಾನ್ಯ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಮೊದಲ ಬಾರಿ ವಿಶ್ವ ಪರಿಸರ ದಿನಾಚರಣೆಯನ್ನು 1974ರ ಜೂನ್ 5ರಂದು 'ಒಂದೇ ಒಂದು ಭೂಮಿ' (ಅಮೆರಿಕಾ ಅತಿಥ್ಯ) | ಧೈಯವಾಕ್ಯದಲ್ಲಿ ಆಚರಿಸಲಾಗಿತ್ತು.

2020ರ ಜೂನ್ 5ರಂದು "Time for Nature, Celebrate Biodiversity" ಧೈಯವಾಕ್ಯದಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲಾಗಿತ್ತು. (ಕೊಲಂಬಿಯಾ),

United Nation Decade on Eco System Restoration: 2021-2030: ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆ ಹಾಗೂ ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ ಸಂಸ್ಥೆಗಳು 2021-2030ರ ದಶಕವನ್ನು ಆರ್ಥಿಕ ವ್ಯವಸ್ಥೆಯ ಮನಶ್ವೇತನ ದಶಕ ಎಂದು ಘೋಷಣೆ ಮಾಡಿವೆ ಈ ಮೂಲಕ ಭೂಗ್ರಹದ ಮೇಲಿನ ಭೂಖಂಡ ಮತ್ತು ಜಲಸಂಪನ್ಮೂಲ ಭಾಗವವನ್ನು ಸಂರಕ್ಷಿಸುವುದು, ಕೋವಿಡ್-19ರ ಹಿನ್ನೆಲೆಯಲ್ಲಿ ಜಾಗತಿಕ ಮಟ್ಟದಲ್ಲಿ ತಾಪಮಾನ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವುದು. dana w 3: United Nations Environment Programme. ಸ್ಥಾಪನೆ-1972ರ ಜೂನ್ 5, ಕೇಂದ್ರ ಕಚೇರಿ: ಕೀನ್ಯಾದ ನೈರೋಬಿ, ನೀಡುವ ಪ್ರಶಸ್ತಿಗಳು: ಚಾಂಪಿಯನ್ಸ್ ಆಫ್ ಅರ್ಥ್, ಪರಿಸರ ಔಟ್‌ಲುಕ್ ವರದಿ.

ಇಂಡೋ ಫ್ರೆಂಚ್ ಪರಿಸರ ವರ್ಷ 2021 ಭಾರತದ ಅರಣ್ಯ, ಪರಿಸರ & ಹವಾಮಾನ ಬದಲಾವಣೆ ಸಚಿವಾಲಯ ಹಾಗೂ ಫ್ರಾನ್ಸ್‌ನ ವಿದೇಶಾಂಗ ವ್ಯವಹಾರಗಳ ಸಚಿವಾಲಯಗಳು 2021ಅನ್ನು ಇಂಡೋ-ಫ್ರೆಂಚ್ ಪರಿಸರ ವರ್ಷ ಎಂದು ಘೋಷಣೆ

E 100 Project: 2021ರ ಜೂನ್ 5ರ ವಿಶ್ವ ಪರಿಸರ ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರು ಮನೆಯಲ್ಲಿ ಇ-100 ಹೆಸರಿನ ಪೈಲಟ್ ಯೋಜನೆಗೆ ಚಾಲನೆ ನೀಡಿದರು. ಈ ಯೋಜನೆಯು ಭಾರತದಲ್ಲಿ ಎಥನಾಲ್ ಉತ್ಪಾದನೆ ಮತ್ತು ಹಂಚಿಕೆಗೆ ಸಂಬಂಧಿಸಿದ ನೆಟ್‌ವರ್ಕ್ ಅನ್ನು ರೂಪಿಸುವ ಉದ್ದೇಶ ಹೊಂದಿದೆ. ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು 2020-25ರ ಅವಧಿಯ ಭಾರತದಲ್ಲಿ ಎಥನಾಲ್ ಉತ್ಪಾದನೆಯ ಮತ್ತು ಮಿಶ್ರಣಕ್ಕಾಗಿ ಮಾರ್ಗಸೂಚಿ ಕುರಿತ ಪರಿಣಿತರ ಸಮಿತಿಯ ವರದಿಯನ್ನು ಪ್ರಕಟಿಸಿದರು. ಇದು ಭಾರತದಲ್ಲಿನ ಪರಿಸರ ದಿನಾಚರಣೆಯ ಹೇಳಿಕೆಯಾದ 'ಉತ್ತಮ ಪರಿಸರಕ್ಕಾಗಿ ಜೈವಿಕ ಇಂಧನ ಉತ್ತೇಜನ' ಎಂಬ ನೀತಿಯಡಿಯಲ್ಲಿ ರೂಪಿತವಾಗಿದೆ. ಭಾರತದಲ್ಲಿ ಎಥೆನಾಲ್ ಉತ್ಪಾದನಾ ವಲಯದ ಅಭಿವೃದ್ಧಿಗಾಗಿ ಸರ್ಕಾರವು ಹಲವು ಕ್ರಮಗಳನ್ನು ಕೈಗೊಂಡಿದೆ.

Oxi-Van: ಹರಿಯಾಣ ರಾಜ್ಯದ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್ ಅವರು ರಾಜ್ಯದ ಕರ್ನಾಲ್ ಜಿಲ್ಲೆಯಲ್ಲಿ 80 ಎಕರೆ ಭೂ ಪ್ರದೇಶದಲ್ಲಿ ಆಕ್ಸಿ-ವ್ಯಾನ್ (ಅರಣ್ಯ) ಸೃಷ್ಟಿಸುವ ಯೋಜನೆಯನ್ನು ಘೋಷಣೆ ಮಾಡಿದರು. ಈ ಸಂದರ್ಭದಲ್ಲಿ ಹರಿಯಾಣ ಸರ್ಕಾರವು ಪ್ರಾಣವಾಯು ದೇವತಾ ಪಿಂಚಣಿ ಯೋಜನೆ, ಕರ್ನಾಲ್ ಮತ್ತು ಪಂಚಕುಲದಲ್ಲಿ ಆಕ್ಸಿ-ವ್ಯಾನ್ ಹಾಗೂ ಹರಿಯಾಣದಲ್ಲಿ ಪಂಚವಟಿ ಪ್ಲಾಂಟೇಶನ್ ನಿರ್ಮಿಸುವ ಪ್ರಮುಖ ಯೋಜನೆಗಳನ್ನು ಘೋಷಣೆ ಮಾಡಿದರು.

ಭಾರತದ ಚಲನಚಿತ್ರ ಉದ್ಯಮ ವಿಭಾಗವು 2021ರ ಜೂನ್ 5 & 6 ರಂದು ವಿಶ್ವ ಪರಿಸರ ದಿನಾಚರಣೆಯ ಹಿನ್ನೆಲೆಯಲ್ಲಿ Oasis of Hope ಹೆಸರಿನ ಆನ್‌ಲೈನ್ ಫಿಲಂ ಫೆಸ್ಟಿವಲ್ ಅನ್ನು ವೆಬ್‌ಸೈಟ್ ಮತ್ತು ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರ ಮಾಡಿತ್ತು.
Post a Comment (0)
Previous Post Next Post