ಬಸವಶ್ರೀ ಪ್ರಶಸ್ತಿ

ಚಿತ್ರದುರ್ಗದ ಮುರುಘಾ ಮಠದ ಬಸವಶ್ರೀ ಪ್ರಶಸ್ತಿ ಪುರಸ್ಕೃತರು:

ಕೆ. ಕಸ್ತೂರಿ ರಂಗನ್ ಮತ್ತು ರಾಜೀವ್ ತಾರಾನಾಥ್

ಚಿತ್ರದುರ್ಗದ ಮುರುಘಾ ಮಠದ ವತಿಯಿಂದ ಪ್ರದಾನ ಮಾಡುವ ಬಸವಶ್ರೀ ಪ್ರಶಸ್ತಿಯ 2019ರ ಸಾಲಿಗೆ ಪಂಡಿತ್ ರಾಜೀವ್ ತಾರಾನಾಥ್ ಹಾಗೂ 2020ರ ಸಾಲಿನ ಪ್ರಶಸ್ತಿಗೆ ಇಸ್ರೋ ಮಾಜಿ ಅಧ್ಯಕ್ಷರಾದ ಕೆ. ಕಸ್ತೂರಿ ರಂಗನ್ ಅವರು ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಯು ತಲಾ 5 ಲಕ್ಷ ರೂ. ನಗದು ಮತ್ತು ಫಲಕವನ್ನು ಒಳಗೊಂಡಿದೆ.
ಇಸ್ರೋ ಮಾಜಿ ಅಧ್ಯಕ್ಷ ಕೆ. ಕಸ್ತೂರಿ ರಂಗನ್ ಬಾಹ್ಯಾಕಾಶ ವಿಜ್ಞಾನಿಯಾಗಿರುವ ಡಾ. ಕೃಷ್ಣಸ್ವಾಮಿ ಕಸ್ತೂರಿ ರಂಗನ್ ಅವರು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)ಯಲ್ಲಿ 9 ವರ್ಷಗಳ (1984-2003) ಅಧ್ಯಕ್ಷರಾಗಿದ್ದರು. ರಾಷ್ಟ್ರೀಯ ಯೋಜನಾ ಆಯೋಗದ ಸದಸ್ಯರಾಗಿಯೂ ಇವರು ಸೇವೆ ಸಲ್ಲಿಸಿದ್ದಾರೆ. ಇವರಿಗೆ ಭಾರತ ಸರ್ಕಾರ ನೀಡುವ ನಾಗರಿಕ ಪ್ರಶಸ್ತಿಗಳಾದ ಪದ್ಮಶ್ರೀ (1982), ಪದ್ಮ ಭೂಷಣ (1992), ಪದ್ಮ ವಿಭೂಷಣ (2000) ಗೌರವಗಳು ಲಭಿಸಿವೆ. ಆಧುನಿಕ ಯುಗದ ಬಾಹ್ಯಾಕಾಶ ನೌಕೆ ಇನ್‌ಸ್ಯಾಟ್-2 ಮತ್ತು ಭಾರತೀಯ ದೂರಗ್ರಾಹಿ ಉಪಗ್ರಹಗಳಾದ ಐಆರ್‌ಎಸ್ 1ಎ & 1ಬಿ ಹಾಗೂ ಭಾರತದ ಮೊದಲ ಎರಡು ಪ್ರಾಯೋಗಿಕ ಭೂ ವೀಕ್ಷಣೆಯ ಉಪಗ್ರಹಗಳಾದ ಭಾಸ್ಕರ 1 & 2 ರ ಯೋಜನಾ ನಿರ್ದೇಶಕರಾಗಿದ್ದರು. ಇವರಿಗೆ 2002ರಲ್ಲಿ ಫ್ರಾನ್ಸ್ ದೇಶದ ಆಫೀಸರ್ ಆಫ್ ಲೀಜನ್ ಆಫ್ ದಿ ಹಾನರ್ ಪ್ರಶಸ್ತಿ ಲಭಿಸಿದೆ. 2008ರಲ್ಲಿ ಕರ್ನಾಟಕ ಸರ್ಕಾರ ಇವರ ಅಧ್ಯಕ್ಷತೆಯಲ್ಲಿ ಮೊದಲ ಬಾರಿಗೆ ಕರ್ನಾಟಕ ಜ್ಞಾನ ಆಯೋಗವನ್ನು ನೇಮಿಸಿತ್ತು. ಕೆ. ಕಸ್ತೂರಿ ರಂಗನ್ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಸಮಿತಿಯು ರಚಿಸಿದ 2020ರ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಕರಡಿಗೆ ಕೇಂದ್ರ ಕ್ಯಾಬಿನೆಟ್ 2020ರ ಜುಲೈ 29ರಂದು ಅನುಮೋದನೆ ನೀಡಿದೆ.

ಸರೋದ್ ವಾದಕ ರಾಜೀವ್ ತಾರಾನಾಥ್

ಸರೋದ್ ವಾದಕದಲ್ಲಿ ರಾಜೀವ್
ತಾರಾನಾಥ್ ಅಗ್ರಗಣ್ಯರಾಗಿದ್ದು
ಸಾಂಪ್ರದಾಯಿಕ ಹಿಂದೂಸ್ಥಾನಿ
ಸಂಗೀತದಲ್ಲಿನ
ಭಾವನಾಲೋಕದ
ಹಾಗೂ
ತೀಕ್ಷ್ಯತೆಯನ್ನು
ತಮ್ಮ ವಾದನದಲ್ಲಿ ಸಮ್ಮಿಶ್ರಗೊಳಿಸಿಸುವ
ಲೋಕದ
ಸಾಧಕರಾಗಿದ್ದಾರೆ. ಸಂಗೀತ
ಧ್ರುವತಾರೆ ಎನಿಸಿರುವ ರಾಜೀವ್ ಅವರು ಕ್ಯಾಲಿಫೋರ್ನಿಯಾ
ವಿವಿಯ ಕಲಾ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ.
ಕನ್ನಡದ ಚಿತ್ರಗಳಾದ ಸಂಸ್ಕಾರ, ಪಲ್ಲವಿ, ಶೃಂಗಾರಮಾಸ,
ಅನುರೂಪ ಚಿತ್ರಗಳಿಗೆ ಸಂಗೀತ ನಿರ್ದೇಶನ ನೀಡಿದ್ದಾರೆ.
ಟಿ. ಚೌಡಯ್ಯ ಪ್ರಶಸ್ತಿ, ಅಖಿಲ ಭಾರತ ಸಂಗೀತ ನಾಟಕ
ಅಕಾಡೆಮಿ ಗೌರವ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ,
ಹಂಪಿಯ ನಾಡೋಜ ಪ್ರಶಸ್ತಿ, ಪದ್ಮಶ್ರೀ ಗೌರವ (2019)
ಲಭಿಸಿವೆ. ಇವರ ಜೀವನ ಮತ್ತು ಸಾಧನೆಗಳ ಕುರಿತು
'ಸರೋದ್ ಮಾಂತ್ರಿಕ' ಎಂಬ ಪುಸ್ತಕವನ್ನು ಲೇಖಕಿ
ಸುಮಂಗಲ ಅವರು ಬರೆದಿದ್ದಾರೆ


ಬಸವಶ್ರೀ ಪ್ರಶಸ್ತಿ (Basavashree Award): * ಪ್ರಶಸ್ತಿ ನೀಡಿಕೆ: ಚಿತ್ರದುರ್ಗದ ಮುರುಘಾ ಮಠ

ಪ್ರಶಸ್ತಿ ಮೊತ್ತ: 5 ಲಕ್ಷ ರೂ. ಮೊದಲ ಪ್ರಶಸ್ತಿ: ಸಿದ್ಧರಾಮ ಶರಣ ಬೆಳದಾಲ್ (1997).

ಉದ್ದೇಶ:) ಬಸವ ತತ್ತ್ವವನ್ನು ಪ್ರತಿಪಾದಿಸುವವರು ಮತ್ತು ಅಳವಡಿಸಿಕೊಂಡಿರುವವರ ಸೇವೆಯನ್ನು ಗುರುತಿಸಿ ನೀಡಲಾಗುವುದು

ಪ್ರಶಸ್ತಿ ಪುರಸ್ಕೃತ ಪ್ರಮುಖರು: ದಲೈಲಾಮ (2002), ಮಲಾಲಾ ಯುಸಫ್ (2014), ಪಿ.ಟಿ. ಉಷಾ (2008), ಕಿರಣ್‌ ಬೇಡಿ (2007), ಅಣ್ಣಾ ಹಜಾರೆ (2000).

ಬಸವಣ್ಣನವರ ಹೆಸರಿನಲ್ಲಿ ನೀಡುವ

ಪ್ರಶಸ್ತಿಗಳು: ಬಸವ ಕೃಷಿ ಪ್ರಶಸ್ತಿ (ಕೂಡಲಸಂಗಮದ ಪಂಚಮಸಾಲಿ ಪೀಠ), ರಾಷ್ಟ್ರೀಯ ಬಸವ ಪುರಸ್ಕಾರ (ಕರ್ನಾಟಕ ಸರ್ಕಾರ), ಗುರುಬಸವ ಪುರಸ್ಕಾರ (ಬೀದರ್‌ನ ಬಸವಸೇನಾ ಪ್ರತಿಷ್ಠಾನ).

ಅಮೆರಿಕನ್ ಕ್ಯಾನ್ಸರ್ ರಿಸರ್ಚ್‌ ಪ್ರಶಸ್ತಿ ಪುರಸ್ಕೃತರು: ಡಾ. ಸೂರ್ಯನಾರಾಯಣ್

2021ರ ಸಾಲಿನ ಪ್ರತಿಷ್ಠಿತ ಅಮೆರಿಕನ್ ಕ್ಯಾನ್ಸರ್ ರಿಸರ್ಚ್ ಅವಾರ್ಡ್‌ಗೆ ಬರ್ಮಿಂಗ್‌ಹ್ಯಾಂನ ಆಲ್ಬಮಾ ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಮೂಲದ ಸಂಶೋಧಕ ಮತ್ತು ಪ್ರಾಧ್ಯಾಪಕರಾದ ಡಾ. ಸೂರ್ಯನಾರಾಯಣ ವಾರಂಬಳ್ಳಿ ಅವರು ಭಾಜನರಾಗಿದ್ದಾರೆ. ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲ್ಲೂಕಿನ ಸೂರ್ಯನಾರಾಯಣ ಅವರು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಪಿ.ಎಚ್‌ಡಿ ಪದವಿಯನ್ನು ಪಡೆದಿದ್ದರು. ಕ್ಯಾನ್ಸರ್‌ ಕಾಯಿಲೆಗೆ ಸಂಬಂಧಿಸಿದಂತೆ ಇವರು ಕಳೆದ 20 ವರ್ಷಗಳಿಂದ ಸಂಶೋಧನೆ ನಡೆಸುತ್ತಿದ್ದು ವಿವಿಧ ನಿಯತಕಾಲಿಕೆಗಳಲ್ಲಿ 130ಕ್ಕೂ ಅಧಿಕ ಲೇಖನಗಳನ್ನು ಪ್ರಕಟಿಸಿದ್ದಾರೆ. ಇವರ ಈ ಸಂಶೋಧನೆಯನ್ನು ಪರಿಗಣಿಸಿ Society of American Asian Scientists in Cancer Research (SAASCR) ಯು ಈ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಈ ಸಂಸ್ಥೆಯು 2004ರಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಆರಂಭವಾದ ಲಾಭೇತರ ಮತ್ತು ರಾಜಕಿಯೇತರ ಸಂಘಟನೆಯಾಗಿದೆ. 2021ರ ಸಾಲನ ಈ ಪ್ರಶಸ್ತಿಗೆ ಭಾಜನರಾದವರು: ಡಾ. ನೀನಾ ಭಾರಧ್ವಜ್, ಡಾ. ಡಿ. ಚೌಧರಿ, ಡಾ. ರಾಜ್‌ವೀರ್ ದಾಹ್ಯ, ಡಾ. ಡಿ.ಪಿ ಚೌಹಾಣ್, ಡಾ. ಸೂರ್ಯನಾರಾಯಣ ವಾರಂಬಳ್ಳಿ, ಡಾ. ಆರತಿ ಶುಕ್ಲ, ಡಾ.ಕೆ. ಕೃಷ್ಣನ್, ಡಾ.ಪಿ.ಕೆ. ದತ್ತ, ರಾಜೇಶ್ .ಕೆ ಸಿಂಗ್ & ಡಾ. ರಾಜ್‌ಗೋಪಾಲ್ ರಮೇಶ್,

ನೆನಪಿರಲಿ: ಅಮೆರಿಕನ್ ಅಸೋಸಿಯೇಶನ್ ಫಾರ್ ಕ್ಯಾನ್ಸರ್ ರಿಸರ್ಚ್ (American Association for Cancer Research) ಸಂಸ್ಥೆಯು ಫಿಲಿಡೆಲಿಯಾದಲ್ಲಿದ್ದು, ಕ್ಯಾನ್ಸರ್‌ ಸಂಶೋಧನೆಗೆ ಸಂಬಂಧಿಸಿದ ಜಗತ್ತಿನ ಅತ್ಯಂತ ಹಳೆಯ ಬೃಹತ್‌ ವೃತ್ತಿಪರ ಸಂಘಟನೆಯಾಗಿದೆ.
Post a Comment (0)
Previous Post Next Post