ಅಂತಾರಾಷ್ಟ್ರೀಯ ಇನಿ (Eni) ಪ್ರಶಸ್ತಿ ಪುರಸ್ಕೃತರು

 ವಿಜ್ಞಾನಿ ಪ್ರೊ. ಸಿ.ಎನ್.ಆರ್. ರಾವ್

ನವೀಕರಿಸಬಹುದಾದ ಇಂಧನ ಮೂಲಗಳು ಮತ್ತು ಇಂಧನ ಶೇಖರಣೆಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಮಹತ್ವದ ಕೊಡುಗೆಯನ್ನು ನೀಡಿರುವ ಭಾರತದ ಖ್ಯಾತ ರಸಾಯನಶಾಸ್ತ್ರಜ್ಞ, ಸಿ.ಎನ್.ಆರ್. ರಾವ್ ಅವರಿಗೆ 2020ರ ಸಾಲಿನ ಅಂತಾರಾಷ್ಟ್ರೀಯ ಇನಿ (Interna tional Eni Award) ಪ್ರಶಸ್ತಿ ಭಾಜನವಾಗಿದೆ. ಈ ಪ್ರಶಸ್ತಿಯನ್ನು ಎನರ್ಜಿ ಫ್ರಾಂಟಿಯರ್ ಎಂದೂ ಕರೆಯುವರು. 2021ರ ಅಕ್ಟೋಬರ್ 14 ರಂದು ಇಟಲಿಯ ರೋಮ್‌ನ ಕ್ವಿರಿನಲ್ ಪ್ಯಾಲೆಸ್‌ನಲ್ಲಿ ನಡೆಯುವ ಅಧಿಕೃತ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಇನಿ ಪ್ರಶಸ್ತಿ ಪಡೆದ ಏಷ್ಯಾದ ಮತ್ತು ಭಾರತದ ಮೊದಲ ವಿಜ್ಞಾನಿ ಎಂಬ ಹಿರಿಮೆಗೆ ಸಿ.ಎನ್.ಆರ್. ರಾವ್ ಅವರು ಪಾತ್ರರಾಗಿದ್ದಾರೆ. ಈ ಪ್ರಶಸ್ತಿಯು ಮುದ್ರಿತ ಚಿನ್ನದ ಪದಕ ಮತ್ತು ನಗದನ್ನು ಒಳಗೊಂಡಿದೆ. ಇಂಧನ ಕ್ಷೇತ್ರದ ಮುಂಚೂಣಿ ಮತ್ತು ಅತ್ಯುನ್ನತ ಪ್ರಶಸ್ತಿಯಾಗಿರುವ ಇನಿ(Eni) ಪ್ರಶಸ್ತಿಯನ್ನು ಇಂಧನ ಸಂಶೋಧನೆಯ ನೊಬೆಲ್ ಪ್ರಶಸ್ತಿ (Nobel Prize of Energy Research) ಎಂದೇ ಪರಿಗಣಿಸಲಾಗಿದೆ.

Award

2020

ಸಿ.ಎನ್.ಆರ್. ರಾವ್ ರವರ ಬಗ್ಗೆ ಮಾಹಿತಿ: ಖ್ಯಾತ ಭಾರತೀಯ ವಿಜ್ಞಾನಿಗಳಾದ ಚಿಂತಾಮಣಿ ನಾಗೇಶ್ ರಾಮಚಂದ್ರ ರಾವ್ ಅವರಿಗೆ 2013ರ ಭಾರತರತ್ನ ಪ್ರಶಸ್ತಿ ಲಭಿಸಿತ್ತು. 1985ರಲ್ಲಿ ಪದ್ಮ ವಿಭೂಷಣ, 1974 ರಲ್ಲಿ ಪದ್ಮಶ್ರೀ ಗೌರವವನ್ನು ಪಡೆದಿದ್ದಾರೆ. ಫ್ರಾನ್ಸ್ ಸರ್ಕಾರದ ಲೆಜಿಯನ್ ಹಾನರ್ ಗೌರವ 2005 ರಲ್ಲಿ ಲಭಿಸಿದೆ. ಕರ್ನಾಟಕ ಸರ್ಕಾರ ಇವರಿಗೆ 2000 ದಲ್ಲಿ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಿತ್ತು. ಈ ಮೂಲಕ ಕರ್ನಾಟಕ ರತ್ನ ಮತ್ತು ಭಾರತ ರತ್ನ ಪ್ರಶಸ್ತಿ ಪಡೆದ ಏಕೈಕ ವಿಜ್ಞಾನಿ ಎಂಬ ಕೀರ್ತಿಗೆ ರಾವ್ ಅವರು ಭಾಜನರಾಗಿದ್ದಾರೆ.

ಸಿ.ಎನ್.ಆರ್. ರಾವ್ ಅವರು ಜಲಜನಕ ಆಧಾರಿತ ಇಂಧನದ ಮೇಲೆ ಅಧ್ಯಯನ ನಡೆಸಿದ್ದಾರೆ. ಈ ಇಂಧನ ಮೂಲ ಮಾತ್ರ ಇಡೀ ಮನುಕುಲಕ್ಕೆ ಉಪಯೋಗವಾಗಬಲ್ಲ ಏಕೈಕ ಮೂಲವಾಗಿ ಹೊರ ಹೊಮ್ಮಿದೆ. ಜಲಜನಕದ ಶೇಖರಣೆ ಅಥವಾ ಜಲಜನಕದ ಸಂಗ್ರಹಣೆ ದ್ಯುತಿ ರಸಾಯನ ವಿಜ್ಞಾನ, ಎಲೆಕ್ಟೋ ಕೆಮಿಕಲ್ ಉತ್ಪಾದನೆ ಅಥವಾ ವಿದ್ಯುತ್‌ ರಸಾಯನ ಕ್ರಿಯೆಯಿಂದಲೂ ಜಲಜನಕ ಉತ್ಪಾದನೆ, ಸೌರ ಶಕ್ತಿಯಿಂದ ಜಲಜನಕ ಉತ್ಪಾದನೆ, ಲೋಹವಲ್ಲದ ವೇಗ ವರ್ಧನೆ ಇವರ ಪ್ರಮುಖ ಕಾರ್ಯಸಾಧನೆಗಳಾಗಿವೆ.

ಪ್ರಶಸ್ತಿ ಆಯ್ಕೆಗೆ ಪರಿಗಣಿತವಾದ ಪ್ರಮುಖ ಅಂಶಗಳು: ರಾವ್ ಅವರು ಸಮಸ್ತ ಮಾನವ ಕುಲದ ಹಿತದೃಷ್ಟಿಯಿಂದ ಏಕೈಕ ಶಕ್ತಿಯ ಮೂಲವಾಗಿ ಜಲಜನಕ ಶಕ್ತಿಯ ಮೇಲೆ ಹೆಚ್ಚು ಕಾರ್ಯ ನಿರ್ವಹಿಸುತ್ತಿದ್ದಾರೆ. ಲೋಹದ ಆಕ್ಸೆಡ್, ಕಾರ್ಬನ್ ನ್ಯಾನೋ ಟ್ಯೂಬ್‌ಗಳು, ಗ್ರಾಫೆನ್, ಬೊರಾನ್, ನೈಟ್ರೋಜನ್, ಕಾರ್ಬನ್ ಹೈಬ್ರಿಡ್ ವಸ್ತುಗಳು, ಮಾಲಿನಂ ಸಡ್ ಇವುಗಳನ್ನು ಇಂಧನ ಕ್ಷೇತ್ರದಲ್ಲಿ ಅನ್ವಯಗೊಳಿಸಿದ್ದು, ಜೊತೆಗೆ ಹಸಿರು ಜಲಜನಕ ಉತ್ಪಾದನೆಗೆ ರಾವ್ ಅವರು ಉತ್ತಮ ಕೊಡುಗೆ ನೀಡಿದ್ದಾರೆ.

ಪ್ರಶಸ್ತಿ ಬಗ್ಗೆ ಮಾಹಿತಿ: ಅಂತರರಾಷ್ಟ್ರೀಯ ಮಟ್ಟದಲ್ಲಿ ಇಂಧನ ಮತ್ತು ಪರಿಸರ ಸಂಶೋಧನಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರಿಗೆ ನೀಡಲಾಗುವ ಅತ್ಯುನ್ನತ ಪ್ರಶಸ್ತಿ, ಇಂಧನ ಮೂಲಗಳ ಉತ್ತಮ ಬಳಕೆಯನ್ನು ಉತ್ತೇಜಿಸುವ ಮತ್ತು ಭವಿಷ್ಯದ ಪೀಳಿಗೆಯ ಸಂಶೋಧಕರನ್ನು ತಮ್ಮ ಕೆಲಸದಲ್ಲಿ ಪ್ರೋತ್ಸಾಹಿಸುವ ಗುರಿಯನ್ನು ಹೊಂದಿದೆ. ಇನಿ ಪ್ರಶಸ್ತಿಯು ವೈಜ್ಞಾನಿಕ ಸಂಶೋಧನೆ ಮತ್ತು ನಾವೀನ್ಯತೆಗಳ ಮೇಲೆ ಸೇವೆ ಸಲ್ಲಿಸಿದವರಿಗೆ ಇಟಲಿ ದೇಶದ ತೈಲ ಮತ್ತು ಅನಿಲ ಕಂಪನಿಯಾದ ಇನಿ ವತಿಯಿಂದ ನೀಡಲಾಗುವುದು. ಇನಿ ಸಂಸ್ಥೆಯು ಇಟಲಿ ದೇಶದ ಬಹು ರಾಷ್ಟ್ರೀಯ ತೈಲ ಮತ್ತು ಅನಿಲ ಕಂಪನಿಯಾಗಿದ್ದು, 1953ರ ಫೆಬ್ರವರಿ 10 ರಂದು ಸ್ಥಾಪನೆಯಾಗಿದ್ದು, ಇಟಲಿಯ ರೋಮ್‌ನಲ್ಲಿ ಕೇಂದ್ರ ಕಛೇರಿ ಹೊಂದಿದೆ.

gel Deaba gaba artrieb: The Energy Transition Prize, Advanced Environmental Solution Prize, Energy Frontier Prize, Young Researcher of the year Prize, The Young Talents Prize.

2021ರ ಸಾಅನ ಯೂರೋಪಿಯನ್ ಪ್ರಶಸ್ತಿ: ಕೆ.ಕೆ. ಶೈಲಜ

ಕೇರಳ ರಾಜ್ಯ ಸರ್ಕಾರದ ಮಾಜಿ ಆರೋಗ್ಯ ಸಚಿವ ಕೆ.ಕೆ. ಶೈಲಜ (K. K. Shailaja) (ಶೈಲಜಾ ಟೀಚರ್) ಅವರಿಗೆ ಪ್ರತಿಷ್ಠಿತ ಸೆಂಟ್ರಲ್ ಯೂರೋಪಿಯನ್ ಯೂನಿವರ್ಸಿಟಿಯ ಓಪನ್ ಸೊಸೈಟಿ (Central European University Open Society Prize) ಪ್ರಶಸ್ತಿ ಲಭಿಸಿದೆ. ಯೂನಿವರ್ಸಿಟಿಯ ವರ್ಚುವಲ್ ಕಾರ್ಯಕ್ರಮದಲ್ಲಿ ಇವರಿಗೆ ಪದವಿ ಪ್ರದಾನ ಮಾಡಲಾಗಿದೆ. ಶೈಲಜ ಅವರು ಸಮುದಾಯ ಆರೋಗ್ಯ ಸೇವೆಗೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. 2016 ರಿಂದ 2021ರ ಮೇ 24 ರವರೆಗೆ ಕೇರಳ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವೆಯಾಗಿ ಶೈಲಜ ಸೇವೆ ಸಲ್ಲಿಸಿದ್ದರು. ಭಾರತದಲ್ಲಿ ಕೋವಿಡ್ ಮೊದಲ ಪ್ರಕರಣ ಕೇರಳ ರಾಜ್ಯದಲ್ಲಿ ದಾಖಲಾಗಿದ್ದು, ನಂತರದ ದಿನಗಳಲ್ಲಿ ಕೋವಿಡ್‌ನ ನಿಯಂತ್ರಣಕ್ಕೆ ಶೈಲಜ ಅವರು ಹಲವು ಕ್ರಮಗಳನ್ನು ಕೈಗೊಂಡು ಪ್ರಶಂಸೆಗೆ ಒಳಗಾಗಿದ್ದರು.

ಸೆಂಟ್ರಲ್ ಯೂರೋಪಿಯನ್ ಯೂನಿವರ್ಸಿಟಿ (CEU-Central European University): 1991ರಲ್ಲಿ ಜಾರ್ಜ್ ಸೋರೋಸ್ ಅವರಿಂದ ಈ ವಿವಿ ಯು ಸ್ಥಾಪನೆಯಾಗಿದ್ದು, ಆಸ್ಟ್ರಿಯಾದ ವಿಯೆನ್ನಾದಲ್ಲಿ ಕೇಂದ್ರ ಕಚೇರಿಯಿದೆ. ಸಾಮಾಜಿಕ ವಿಜ್ಞಾನ & ಮಾನವಿಕ ವಿಷಯಗಳಲ್ಲಿ ಹೆಚ್ಚು ಹೆಸರು ಮಾಡಿದ ಖಾಸಗಿ ಸಂಶೋಧನಾ ವಿವಿ, 1994ರಲ್ಲಿ ಸಿಇಯು ಓಪನ್ ಸೊಸೈಟಿ ಪ್ರಶಸ್ತಿಯನ್ನು ಮೊದಲ ಬಾರಿಗೆ ಕಾರ್ಲ್ ಪಾಪರ್‌ ಅವರಿಗೆ ನೀಡಿತ್ತು.
Post a Comment (0)
Previous Post Next Post