ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಅಧ್ಯಕ್ಷ

ನ್ಯಾಯಮೂರ್ತಿ ಅರುಣ್ ಕುಮಾರ್
ಮಿಶ್ರಾ

2021ರ ಜೂನ್ 2 ರಂದು ರಾಷ್ಟ್ರೀಯ ಮಾನವ ಹಕ್ಕು ಆಯೋಗದ (NHRC) ನೂತನ ಮತ್ತು 8ನೇ ಅಧ್ಯಕ್ಷರಾಗಿ ಅರುಣ್ ಕುಮಾರ್ ಮಿಶ್ರಾ (Arun Kumar Mishra) ಅವರು ಅಧಿಕಾರ ಸ್ವೀಕರಿಸಿದರು. 2014ರ ಜುಲೈ 7 ರಿಂದ 2020ರ ಸೆಪ್ಟೆಂಬರ್ 2 ರವರೆಗೆ ಅರುಣ್ ಕುಮಾರ್ ಮಿಶ್ರಾ ಅವರು ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳಾಗಿ ಕಾರ್ಯನಿರ್ವಹಿಸಿದ್ದರು. 2016ರ ಫೆಬ್ರವರಿ 29 ರಿಂದ 2020ರ ಡಿಸೆಂಬರ್ 2 ರವರೆಗೆ ಈ ಆಯೋಗದ 7ನೇ ಅಧ್ಯಕ್ಷರಾಗಿ ನ್ಯಾ. ಎಚ್.ಎಲ್ ದತ್ತು ಅವರು ಅಧಿಕಾರದಲ್ಲಿದ್ದರು. ನಿರ್ಗಮಿತ ಅಧ್ಯಕ್ಷರಾಗಿರುವ ಎಚ್.ಎಲ್. ದತ್ತು ಅವರು 2014-15 ರವರೆಗೆ ಸುಪ್ರೀಂಕೋರ್ಟ್‌ನ 42ನೇ ಸಿಜೆ ಆಗಿ ಕಾರ್ಯನಿರ್ವಹಿಸಿದ್ದರು. 2021ರ ಮೇ 2 ರಿಂದ 2021ರ ಜೂನ್ 1 ರವರೆಗೆ ಆಯೋಗದ ಹಂಗಾಮಿ ಅಧ್ಯಕ್ಷರಾಗಿ ನ್ಯಾ|| ಪಿ.ಸಿ ಪಂತ್ ಕಾರ್ಯನಿರ್ವಹಿಸಿದ್ದರು. ಎನ್‌ಎಚ್‌ಆರ್‌ಸಿಯು ಸಾಂವಿಧಾನಿಕವಲ್ಲದ ಶಾಸನಬದ್ಧ ಸಂಸ್ಥೆಯಾಗಿ ಮಾನವ ಹಕ್ಕುಗಳ ಸಂರಕ್ಷಣೆ ಮತ್ತು ಉತ್ತೇಜನಕ್ಕೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸುತ್ತಿರುವ ರಾಷ್ಟ್ರೀಯಮಟ್ಟದ ಘಟಕವಾಗಿದೆ.

ಅರುಣ್ ಕುಮಾರ್ ಮಿಶ್ರಾ: 1955ರ ಸೆಪ್ಟೆಂಬರ್ 3 ರಂದು ಜನಿಸಿದ ಅರುಣ್ ಮಿಶ್ರಾ ಅವರು ರಾಜಸ್ಥಾನ್ ಹೈಕೋರ್ಟ್ (2010-12), ಕಲ್ಕತ್ತಾ ಹೈಕೋರ್ಟ್ (2012-14)ನ ಮುಖ್ಯ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದಾರೆ. ಇದಕ್ಕೂ ಮುನ್ನ 1999ರಿಂದ 2010ರವರೆಗೆ ಮಧ್ಯಪ್ರದೇಶ ಹೈಕೋರ್ಟ್‌ನ ನ್ಯಾಯಾಧೀಶರಾಗಿಯೂ ಸೇವೆ ಸಲ್ಲಿಸಿದ್ದರು. 1998-99ರಲ್ಲಿ ಭಾರತದ ಬಾರ್ ಕೌನ್ಸಿಲ್‌ನ ಅಧ್ಯಕ್ಷರಾಗಿ ನೇಮಕವಾಗಿದ್ದರು.

ಎನ್‌ಎಚ್‌ಆರ್‌ಸಿ ಅಧ್ಯಕ್ಷರ (Chairman) ಹುದ್ದೆ

ಎನ್‌ಎಚ್‌ಆರ್‌ಸಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರು:

ಎನ್‌ಎಚ್‌ಆರ್‌ಸಿ ಅಧ್ಯಕ್ಷರ (Chairman) ಹುದ್ದೆ

ಎನ್‌ಎಚ್‌ಆರ್‌ಸಿಯು 4 ಜನ ಖಾಯಂ ಸದಸ್ಯರು ಮತ್ತು ಪದನಿಮಿತ್ತ ಸದಸ್ಯರನ್ನು ಒಳಗೊಂಡಿದ್ದು ಈ ಆಯೋಗಕ್ಕೆ ಓರ್ವ ಅಧ್ಯಕ್ಷರಿರುತ್ತಾರೆ. ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಾಧೀಶರು/ ನ್ಯಾಯಾಧೀಶರು ಅಧ್ಯಕ್ಷ ಹುದ್ದೆಗೆ ಅರ್ಹರಾಗಿರುತ್ತಾರೆ.

ನೇಮಕ: ಪ್ರಧಾನಮಂತ್ರಿಗಳ ಅಧ್ಯಕ್ಷತೆಯಲ್ಲಿ ಲೋಕಸಭಾ ಸಭಾಪತಿ, ಕೇಂದ್ರ ಗೃಹ ಸಚಿವ, ಲೋಕಸಭೆ ಮತ್ತು ರಾಜ್ಯಸಭೆಗಳ ವಿರೋಧ ಪಕ್ಷದ ನಾಯಕರು ಹಾಗೂ ರಾಜ್ಯಸಭೆಯ ಉಪಾಧ್ಯಕ್ಷರ ಒಳಗೊಂಡ ಸಮಿತಿಯ ಶಿಫಾರಸ್ಸಿನ ಮೇರೆಗೆ ರಾಷ್ಟ್ರಪತಿಗಳು ಎನ್‌ಎಚ್‌ಆರ್‌ಸಿ ಅಧ್ಯಕ್ಷರನ್ನು ಮತ್ತು ಇಬ್ಬರು ಸದಸ್ಯರನ್ನು ನೇಮಕ ಮಾಡುತ್ತಾರೆ.

ನಿವೃತ್ತಿ/ರಾಜನಾಮೆ: ಆಯೋಗದ ಅಧ್ಯಕ್ಷರು ತಮ್ಮ ರಾಜೀನಾಮೆಯನ್ನು ರಾಷ್ಟ್ರಪತಿಗಳ ಹೆಸರಿಗೆ ಬರೆದು ಖುದ್ದಾಗಿ ಸಲ್ಲಿಸಬೇಕು. ರಾಷ್ಟ್ರಪತಿಗಳ ಆದೇಶದ ಮೇರೆಗೆ ಅಧ್ಯಕ್ಷ ಅಥವಾ ಸದಸ್ಯರು ಅನಪೇಕ್ಷಿತ ವರ್ತನೆಯನ್ನು ತೋರಿಸಿದ್ದು, ಸುಪ್ರೀಂಕೋರ್ಟ್‌ನಲ್ಲಿ ಸಾಬೀತಾಗಿದ್ದರೆ ಅಥವಾ ಮಾನಸಿಕವಾಗಿ ಸ್ಥಿಮಿತತೆಯನ್ನು ಕಳೆದುಕೊಂಡು ತೀರ್ಮಾನ ನೀಡುವಲ್ಲಿ ಅಸಮರ್ಥರಾದಾಗ, ಅಧಿಕಾರವಧಿಯಲ್ಲಿ ಬೇರೆ ಕಚೇರಿಯಲ್ಲಿ ವೇತನಕ್ಕಾಗಿ ಕೆಲಸ ಮಾಡುತ್ತಿದ್ದರೆ ಅಥವಾ ರಾಷ್ಟ್ರಪತಿಗಳ ದೃಷ್ಟಿಯಲ್ಲಿ ನೈತಿಕತೆಯನ್ನು ಕಳೆದುಕೊಂಡಿದ್ದಾರೆ ಎಂದು ಅನಿಸಿದರೆ ಆ ಸಂದರ್ಭಗಳಲ್ಲಿ ಅಧ್ಯಕ್ಷ ಹುದ್ದೆಯಿಂದ ತೆಗೆದು ಹಾಕಬಹುದು.

ಅಧಿಕಾರವಾಧಿ: ಆಯೋಗದ ಅಧ್ಯಕ್ಷರಾಗಿ ನೇಮಕಗೊಂಡು ಪ್ರಮಾಣ ವಚನ ಸ್ವೀಕರಿಸಿದ ದಿನದಿಂದ ಮುಂದಿನ 5 ವರ್ಷ ಅಥವಾ ವೈಯಕ್ತಿಕವಾಗಿ 70 ವರ್ಷಗಳ ವಯೋಮಿತಿಯವರೆಗೆ (ಇವುಗಳಲ್ಲಿ ಯಾವುದು ಮೊದಲು ಅದು ಅನ್ವಯ) ಅಧಿಕಾರದಲ್ಲಿರುತ್ತಾರೆ. ಈ ಹುದ್ದೆಯನ್ನು ಪಡೆದ ನಂತರ ಬೇರೆ ಯಾವುದೇ ಹುದ್ದೆಯನ್ನು ಪಡೆಯುವ ಅರ್ಹತೆಯನ್ನು ಕಳೆದುಕೊಳ್ಳುತ್ತಾರೆ.

ಕೇಂದ್ರ ಸರ್ಕಾರವು ಎನ್‌ಎಚ್‌ಆರ್‌ಸಿ ಅಧ್ಯಕ್ಷರ ನೇಮಕದ ಸಂದರ್ಭದಲ್ಲಿ ಅವರ ವೇತನವನ್ನು ನಿರ್ಧರಿಸುತ್ತದೆ ಈ ಆಯೋಗವು ತನ್ನ ವಾರ್ಷಿಕ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸುತ್ತದೆ.

ವಿಶ್ವಸಂಸ್ಥೆಯ ಮಾನವ ಹಕ್ಕು ಪರಿಷತ್ UNHRC- United Nations Human Rights Council

1948ರ ಡಿಸೆಂಬರ್ 10 ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಮಾನವ ಹಕ್ಕುಗಳ (30) ಸಾರ್ವತ್ರಿಕ ಘೋಷಣೆಯನ್ನು ಹೊರಡಿಸಿದ ಹಿನ್ನೆಲೆಯಲ್ಲಿ ಡಿಸೆಂಬರ್ 10 ವಿಶ್ವ ಮಾನವ ಹಕ್ಕುಗಳ ದಿನ ಎಂದು ಆಚರಣೆ. (2020ರ ಧೈಯವಾಕ್ಯ: Recover Better Standup for Human Rights).

* ಮಂಡಳಿಯ ಸ್ಥಾಪನೆ: 2006ರ ಮಾರ್ಚ್ 15, ಕೇಂದ್ರ ಕಚೇರಿ: ಸ್ವಿಟ್ಟರ್‌ಲೆಂಡ್‌ನ ಜಿನಿವಾ.

*UNHRC

* ಸದಸ್ಯತ್ವ: 47 ಸದಸ್ಯರು (ವಿಶ್ವ ಸಂಸ್ಥೆಯ ಸಂಸತ್ತು ಎನಿಸಿದ ಸಾಮಾನ್ಯ ಸಭೆಯಿಂದ ಪ್ರತಿ 3 ವರ್ಷಗಳ ಅವಧಿಗೆ ನೇಮಕ). ಸಾಮಾನ್ಯ ಸಭೆಯು 1968 ರಿಂದ ಪ್ರತಿ 5 ವರ್ಷಗಳಿಗೊಮ್ಮೆ

ವಿಶ್ವ ಮಾನವ ಹಕ್ಕು ಪ್ರಶಸ್ತಿಯನ್ನು ನೀಡುತ್ತಿದೆ.

ರಾಷ್ಟ್ರೀಯ ಮಾನವ ಹಕ್ಕು ಆಯೋಗ ಸಂರಚನೆ

ಓರ್ವ ಅಧ್ಯಕ್ಷ, 5 ಮಂದಿ ಖಾಯಂ ಸದಸ್ಯರು, 6 ಮಂದಿ ಪದನಿಮಿತ್ತ ಸದಸ್ಯರು ಹಾಗೂ ಓರ್ವ ಪ್ರಧಾನ ಕಾರ್ಯದರ್ಶಿಯನ್ನು ಈ ಆಯೋಗವು ಒಳಗೊಂಡಿದೆ. 5 ಮಂದಿ ಖಾಯಂ ಸದಸ್ಯರಲ್ಲಿ ಒಬ್ಬರು ಸುಪ್ರೀಂಕೋರ್ಟ್‌ನ ಹಾಲಿ ಅಥವಾ ನಿವೃತ್ತ ನ್ಯಾಯಾಧೀಶರು ಮತ್ತೊಬ್ಬರು ಹೈಕೋರ್ಟ್‌ ಹಾಲಿ ಅಥವಾ ನಿವೃತ್ತ ಮುಖ್ಯ ನ್ಯಾಯಾಧೀಶರು ಉಳಿದ 3 ಸದಸ್ಯರು ಮಾನವ ಹಕ್ಕುಗಳಿಗೆ ಸಂಬಂಧಿಸಿದ ಪ್ರಾಯೋಗಿಕ ಅನುಭವ ಇರುವವರನ್ನು ನೇಮಿಸಲಾಗುತ್ತದೆ.
Post a Comment (0)
Previous Post Next Post