2020 ನೇ ಸಾಲಿನ ಭುವನ ಸುಂದರಿ ಆಂಡ್ರಿಯಾ ಮೇಜ

2021ರ ಮೇ 16 ರಂದು ಅಮೆರಿಕದ ಫ್ಲೋರಿಡಾದಲ್ಲಿ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ ಮೆಕ್ಸಿಕೊದ ಆಂಡ್ರಿಯಾ ಮೆಜಾ (Andrea Meza) ಅವರು 2020ರ ಸಾಲನ ಭುವನ ಸುಂದರಿ (Miss Universe) ಯಾಗಿ ಆಯ್ಕೆಯಾಗಿದ್ದಾರೆ. 2019ರ ಸಾಲಿನ ಭುವನ ಸುಂದರಿ ದಕ್ಷಿಣ ಆಫ್ರಿಕಾದ ಜೊಜಜನಿ ತುಂt (Zozibini Tunzi) ಅವರು ಭುವನ ಸುಂದರಿ ಕಿರೀಟವನ್ನು ಆಂಡ್ರಿಯಾ ಅವರಿಗೆ ತೊಡಿಸಿದರು. ಆಂಡ್ರಿಯಾ ಅವರು 2017 ರಲ್ಲಿ ಮಿಸ್ ಮೆಕ್ಸಿಕೋ, 2020 ರಲ್ಲಿ ಮೆಕ್ಸಿಕೋದ ಯೂನಿವರ್ಸಲ್ ಮತ್ತು 2017ರಲ್ಲಿ ಮಿಸ್‌ವರ್ಲ್ಡ್ ಸ್ಪರ್ಧೆಯಲ್ಲಿ ಮೊದಲ ರನ್ನರ್ ಅಪ್ ಆಗಿದ್ದರು. 2020ರ ಭುವನ ಸುಂದರಿ ಸ್ಪರ್ಧೆಯಲ್ಲಿ ಬ್ರೆಜಲ್‌ನ ಅಯಾ ಗಾಮಾ ಅವರು ಮೊದಲನೇ ರನ್ನರ್ ಅಪ್ ಹಾಗೂ ಪೆರುವಿನ ಜಾನಿಕ್ ಮೆಸಿಟಾ ಅವರು 2ನೇ ರನ್ನರ್ ಅಪ್ ಆಗಿ ಆಯ್ಕೆಯಾಗಿದ್ದಾರೆ.

3ನೇ ರನ್ನರ್ ಅಪ್: ಆಡ್ಲಿನಾ ಕ್ಯಾಸ್ಟೋಅನಾ

ಅಮೆರಿಕಾದ ಫ್ಲೋರಿಡಾದಲ್ಲಿ ನಡೆದ 69ನೇ ಭುವನ ಸುಂದರಿ ಸ್ಪರ್ಧೆಯಲ್ಲಿ ಆಡಿನ್‌ ಕ್ಯಾಸ್ಟಲಿನೋ (Adline Castelino) ಅವರು 3ನೇ ರನ್ನರ್ ಅಪ್ ಪ್ರಶಸ್ತಿ ಪಡೆದರು. ಇವರು 2020ರ ಅವಾ ಮಿಸ್‌ ದಿವಾ ಯೂನಿವರ್ಸ್ (Miss Diva Universe) ಸರ್ಧೆಯಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. ಕರ್ನಾಟಕದ ಉಡುಪಿ ಜಿಲ್ಲೆಯ ಉದ್ಯಾವರ ಮೂಲದ ಆಡ್ಡಿನಾ ಅವರು 1998ರ ಜುಲೈ 24 ರಂದು ಕುವೈತ್‌ನಲ್ಲಿ ಜನಿಸಿದ್ದರು. 15ನೇ ವಯಸ್ಸಿನಲ್ಲಿ ಭಾರತಕ್ಕೆ ಮರಳಿದ ಇವರು ಮುಂಬೈನಲ್ಲಿ ತಂದೆ ತಾಯಿಯ ಜೊತೆ ನೆಲೆಸಿದ್ದಾರೆ. ಇವರು ಮಾಡೆಲಿಂಗ್‌ನಲ್ಲಿ ಬ್ಯಾಂಪ್ ಮೇಲೆ ಹಜ್ಜೆ ಹಾಕುವುದು, ಸಾಮಾಜಿಕ ಕಳಕಳಿಯನ್ನು ಹೊಂದಿದ್ದು, ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ರೈತರ ಆತ್ಮಹತ್ಯೆ ವಿರುದ್ಧ ಹೋರಾಟ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಣ ಸಂಗ್ರಹ, ಮಹಿಳೆಯರ ಸಬಲೀಕರಣ, ಕೊರೋನಾ ಜಾಗೃತಿ ಮತ್ತು ಅಕ್ಷಯ ಪಾತ್ರ ಫೌಂಡೇಷನ್‌ನ ಕಾರ್ಯಕ್ರಮ ಸೇರಿದಂತೆ ಹಲವು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಆಡ್ಡಿನಾ ಅವರು ಕಿಂಗ್ ಫಿಷರ್ ಕ್ಯಾಲೆಂಡರ್: ದ ಮೇಕಿಂಗ್' ಎಂಬ ಡಾಕ್ಯುಮೆಂಟರಿ ಸೀರಿಸ್‌ನಲ್ಲಿ ನಟಿಸಿದ್ದಾರೆ. ಜೊತೆಗೆ ಇವರು ಮೇರೆ ದಿಲ್ ವಿಚ್ ತೇರ ಬಿನಾ ಮ್ಯೂಸಿಕ್ ಆಲ್ಬಂಗಳಲ್ಲೂ ನಟಿಸಿದ್ದಾರೆ.

ಮಿಸ್ ಯೂನಿವರ್ಸ್ ಸ್ಪರ್ಧೆಯ ಮಾಹಿತಿ:

ಪ್ರಶಸ್ತಿ ನೀಡುವ ದೇಶ: ಅಮೆರಿಕಾ, ಪ್ರಾರಂಭ: 1952 ಮಿಸ್ ಯೂನಿವರ್ಸ್ ಆಗಿದ್ದ ಭಾರತೀಯರು: ಲಾರಾದತ್ತ (2000), ಸುಫಾ ಸೇನ್ (1994) 2020ರ ಮಿಸ್ ಯೂನಿವರ್ಸ್‌: ಆಂಡ್ರಿಯಾ ಮಜಾ.

69ನೇ ಆವೃತ್ತಿಯಲ್ಲಿ ವಿಶೇಷ ಪ್ರಶಸ್ತಿ ಪಡೆದ ಸ್ಪರ್ಧಿಗಳು:

Best National Costume (Thuzar wint Lwin: Myanmar), Spirit of the Carmival Award (Kimberly Jinez-Dominican Republic), Social Impact Award (Lenka Nemer-Bolivia)

2020ರ ಡಿಸೆಂಬರ್‌ನಲ್ಲಿ ನಡೆಯಬೇಕಾಗಿದ್ದ ಭುವನ ಸುಂದರಿ ಸ್ಪರ್ಧೆಯನ್ನು ಕೋವಿಡ್-19ರ ಕಾರಣದಿಂದ 2021ರ ಮೇ ತಿಂಗಳಿಗೆ ಮುಂದೂಡಲಾಗಿತ್ತು. ಹಾಲಿವುಡ್‌ನ ಸಮಿನೋಲ್ ಹಾರ್ಡ್‌ನಾಕ್ ಹೋಟೆಲ್ ಮತ್ತು ಕ್ಯಾಸಿನೋದಲ್ಲಿ ನಡೆದ 69ನೇ ಆವೃತ್ತಿಯ ಸಭೆಯಲ್ಲಿ 74 ದೇಶಗಳ ಸ್ಪರ್ಧಿಗಳು ಭಾಗವಹಿಸಿದ್ದರು.

ನೆನಪಿರಅ: 2021ರ ಫೆಬ್ರವರಿಯಲ್ಲಿ ನಡೆದ ಫೆಮಿನಾ ಮಿಸ್ ಇಂಡಿಯಾ-2020 ಸ್ಪರ್ಧೆಯಲ್ಲಿ ತೆಲಂಗಾಣದ ಮಾನಸ ವಾರಣಾಸಿ ಮಿಸ್ ಇಂಡಿಯಾ ವರ್ಲ್ಡ್ ಆಗಿದ್ದರು. 2021ರ ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಇವರು ಭಾರತದ ಪ್ರತಿನಿಧಿಯಾಗಲಿದ್ದಾರೆ ಹಾಗೂ ಮಿಸ್ ಗ್ರಾಂಡ್ ಇಂಡಿಯಾ ಆಗಿ ಹರಿಯಾಣದ ಮಣಿಕಾ ಶಿಯೋಕಂದರ್‌ ಅವರು ಆಯ್ಕೆಯಾಗಿದ್ದು ಇವರು 2021ರ ಮಿಸ್ ಗ್ರಾಂಡ್ ಇಂಟರ್ ನ್ಯಾಷನಲ್ ಸ್ಪರ್ಧೆಯಲ್ಲಿ ಭಾರತದ ಪ್ರತಿನಿಧಿಯಾಗಲಿದ್ದಾರೆ ಮತ್ತು ರನ್ನರ್ಸ್ ಅಪ್ ಆಗಿ ಉತ್ತರ ಪ್ರದೇಶದ ಮಾನ್ಯ ಸಿಂಗ್ ಅವರು ಆಯ್ಕೆಯಾಗಿದ್ದಾರೆ.

2021ರ ದಾದಾ ಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ: ಅತ್ಯುತ್ತಮ ಸಿನಿಮಾ ಪ್ರಶಸ್ತಿ-ಜಂಗಲ್ ಕ್ರೌ (Jungle Cry) JUNGLE 2021ರ 11ನೇ ಆವೃತ್ತಿಯ ದಾದಾ ಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (Dada Saheb Phalke Internation al Film Festival) ಹಿಂದಿ ಭಾಷೆಯ ಜಂಗಲ್ ಕೈ ಚಿತ್ರವು ಅತ್ಯುತ್ತಮ ಚಿತ್ರ (ಜ್ಯೂರಿ) ಆಗಿ ಹೊರಹೊಮ್ಮಿದೆ. ಈ ಚಿತ್ರವು ಬುಡಕಟ್ಟು ಜನಾಂಗದ ಅನಾಥ ಮಕ್ಕಳ ಜೀವನದ ಕಥೆಯನ್ನು ಆಧರಿಸಿದ ಸಿನಿಮಾವಾಗಿದೆ. ಒಡಿಶಾ ರಾಜ್ಯದ ಸೋಶಿಯಲ್ ಸೈನ್ಸ್ ಸಂಸ್ಥೆಯ ಆದಿವಾಸಿ ಮಕ್ಕಳು ಯುಕೆಯಲ್ಲಿ ನಡೆದ ರಗ್‌ಬಿ ಆಟದಲ್ಲಿ (U14 Rugby World Cup) ಚಾಂಪಿಯನ್ ಆದ ಘಟನೆಯನ್ನು ಆಧರಿಸಿ ಜಂಗಲ್ ಕ್ರೈ ಸಿನಿಮಾ ನಿರ್ಮಾಣಗೊಂಡಿದೆ. ಹಾವೇರಿ ಜಿಲ್ಲೆಯ ಸಾಗರ್ ಬಳ್ಳಾರಿ ಅವರು ಈ ಚಿತ್ರದ ನಿರ್ದೇಶಕರಾಗಿದ್ದಾರೆ. ಕಳಿಂಗ ಸಂಸ್ಥೆಯು ಸುಮಾರು 30,000 ಬುಡಕಟ್ಟು ವಿದ್ಯಾರ್ಥಿಗಳನ್ನು ಶಿಕ್ಷಣದ ಮೂಲಕ ಸಬಲೀಕರಣಗೊಳಿಸುವ ಜತೆಗೆ ಕ್ರೀಡಾ ಕ್ಷೇತ್ರಕ್ಕೂ ಆದ್ಯತೆಯನ್ನು ನೀಡುತ್ತಿದೆ. ಈ ಸಂಸ್ಥೆಯ ಸ್ಥಾಪಕ ಡಾ. ಅಚ್ಯುತ ಸಮಂತಾ 2005ರಲ್ಲಿ ರಗ್‌ಬಿ ಕ್ರೀಡೆಯನ್ನು ಸಂಸ್ಥೆಯಲ್ಲಿ ಪರಿಚಯಿಸಿದರು.



Post a Comment (0)
Previous Post Next Post