91 ವರ್ಷ ಪೂರೈಸಿದ ಅಂಕೋಲಾ ಉಪ್ಪಿನ ಸತ್ಯಾಗ್ರಹ

2021ರ ಏಪ್ರಿಲ್ 13ಕ್ಕೆ ಅಂಕೋಲಾ ಉಪ್ಪಿನ ಸತ್ಯಾಗ್ರಹವು ನಡೆದು 91 ವರ್ಷ ಪೂರೈಸಿದೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ಜರುಗಿದ ಉಪ್ಪಿನ ಸತ್ಯಾಗ್ರಹವು ಭಾರತದ ಸ್ವಾತಂತ್ರ ಹೋರಾಟದಲ್ಲ ಅವಿಸ್ಮರಣೀಯ ಘಟನೆಯಾಗಿದೆ, ಮಹಾತ್ಮ ಗಾಂಧೀಜಿಯವರು ಬ್ರಿಟೀಷರು ಉಪ್ಪಿನ ಮೇಲೆ ಹಾಕಿದ್ದ ತೆರಿಗೆಯನ್ನು ವಿರೋಧಿಸಿ 1930ರ ಏಪ್ರಿಲ್ 6ರಂದು ನಡೆಸಿದ ದಂಡಿ ಸತ್ಯಾಗ್ರಹದಿಂದ ಪ್ರೇರಣೆಗೊಂಡು ದೇಶಾದ್ಯಂತ ಉಪ್ಪಿನ ಸತ್ಯಾಗ್ರಹಗಳು ಆರಂಭಗೊಂಡವು. ಅಂತಹ ಚಳುವಆಯಲ್ಲಿ ಅಂಕೋಲಾದಲ್ಲಿ ಜರುಗಿದ ಉಪ್ಪಿನ ಸತ್ಯಾಗ್ರಹವು ದೇಶಾದ್ಯಂತ ಗಮನ ಸೆಳೆದಿತ್ತು. 1930ರ ಏಪ್ರಿಲ್ 13ರಂದು ಉತ್ತರ ಕನ್ನಡದ ಅಂಕೋಲಾದ ಐಆಯ ಉಪ್ಪಿಗೇರಿ ಹಳ್ಳದಲ್ಲಿ ಉಪ್ಪಿನ ಸತ್ಯಾಗ್ರಹ ಜರುಗಿತು. ಇದು ಮಹಾತ್ಮಗಾಂಧೀಜಿಯವರು ಕೈಗೊಂಡ ಉಪ್ಪಿನ ಸತ್ಯಾಗ್ರಹದ ಮುಂದುವರಿದ ಮತ್ತು

ಬೆಂಬಅತ ಹೋರಾಟವಾಗಿತ್ತು. ಇಲ್ಲಿನ ಸ್ವಾತಂತ್ರ್ಯ ಹೋರಾಟಗಾರರ ಹೋರಾಟ ಗಾಂಧಿ ನಿಷ್ಠೆಗೆ ಸಾಕ್ಷಿಯಾಗಿತ್ತು.

ಅಂಕೋಲಾದಲ್ಲಿ ಉಪ್ಪಿನ ಸತ್ಯಾಗ್ರಹ

ಬಳ್ಳಾರಿಯಲ್ಲಿ ಸಭೆ ಸೇರಿದ್ದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕರ್ನಾಟಕದಲ್ಲಿ ಉಪ್ಪಿನ ಸತ್ಯಾಗ್ರಹ ನಡೆಸಲು ಅಂಕೋಲಾವನ್ನು ಆಯ್ಕೆ ಮಾಡಿತ್ತು. ಬಾರ್ಡೋಲಿ ಕರ್ನಾಟಕದ ಎಂದೇ ಖ್ಯಾತವಾದ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಸತ್ಯಾಗ್ರಹಿಗಳು ಬರಲಾರಂಭಿಸಿದರು. 1930 ಏಪ್ರಿಲ್ 12ರಂದೇ ಅಂಕೋಲಾ ಸೇರುವ ಎಲ್ಲಾ ರಸ್ತೆಗಳನ್ನು ಪೊಲೀಸರು ನಾಕಾಬಂಧಿ ಮಾಡಿ ಚಳುವಳಿಗಾರರು ಪಟ್ಟಣವನ್ನು ಪ್ರವೇಶಿಸದಂತೆ ನಿರ್ಬಂಧಿಸಿದ್ದರು. ಆದರೆ ಉಪ್ಪು ತಯಾರಿಸಲು ಕಟಿಬದ್ಧರಾಗಿದ್ದ ಚಳವಳಿಗಾರರು ಕವಲು ದಾರಿಗಳನ್ನು ಬಳಸಿಕೊಂಡು ಪೂರ್ವ ನಿರ್ಧಾರಿತವಾಗಿದ್ದ

ಸ್ವಾತಂತ್ರ್ಯ ಹೋರಾಟಗಾರರ ಮನೆಯ ಮೇಲೆ ಪೊಲೀಸರ ದಾಳಿ

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಶ್ಯಾಮರಾವ್‌ ಶೇಣೈರವರ ನಿವಾಸದಲ್ಲಿ ಬೀಡುಬಿಟ್ಟಿದ್ದ ಹೋರಾಟಗಾರರ ಮೇಲೆ 1930ರ ಏಪ್ರಿಲ್ 12ರ ಮಧ್ಯರಾತ್ರಿ ಪೊಲೀಸರು ಹಠಾತ್ ದಾಳಿ ನಡೆಸಿದರು. ಅಲ್ಲಿಂದ ಚದುರಿದ ಹೋರಾಟಗಾರರು ಆನಂದೀಬಾಯಿ ನಾರ್ವೇಕರ್‌ ಅವರ ಮನೆಯಲ್ಲಿ ಆಶ್ರಯ ಪಡೆದು ಏಪ್ರಿಲ್ 13ರ ಬೆಳಗಿನ ಜಾವವೇ ಹೊರಟು ಸಮೀಪದ ಪೂಜಗೇರಿ ಹಳ್ಳಕ್ಕೆ ಮುನ್ನುಗ್ಗಿದರು. ಈ ಹೋರಾಟದ ನಾಯಕತ್ವಕ್ಕೆ ನಿಯೋಜಿತರಾಗಿದ್ದ ನಾ.ಸು. ಹರ್ಡೀಕರ್ ಕಾರಣಾಂತರಗಳಿಂದ ಅಂಕೋಲಾ ತಲುಪಲಾಗಲಿಲ್ಲ. ಸ್ಥಳೀಯರಾದ ಎಂ.ಪಿ.ನಾಡಕರ್ಣಿ ಅವರು ಅಂಕೋಲಾ ಉಪ್ಪಿನ ಸತ್ಯಾಗ್ರಹದ ನೇತೃತ್ವವನ್ನು ವಹಿಸಿದ್ದರು. ಇವರೊಂದಿಗೆ ನಾಯಕ ಮಾಸ್ತರ, ಹರಿ ಪೈ ಹಾಗೂ ಮಹಿಳೆಯರು ಉಮಾಬಾಯಿ ಕುಂದಾಪುರ ರವರ ನೇತೃತ್ವದಲ್ಲಿ ಉತ್ಸಾಹದಿಂದ ಚಳವಳಿಯಲ್ಲಿ ಭಾಗವಹಿಸಿ ಅಂಕೋಲಾದ ಕೀರ್ತಿಯನ್ನು ಅಜರಾಮರ (ಕರ್ನಾಟಕದ ದಂಡಿ/ಬಾರ್ಡೋಲಿ-ಅಂಕೋಲಾ)
33 ರೂಪಾಯಿಗಳಿಗೆ ಉಪ್ಪು ಖರೀದಿ: ಪೂಜಗೇರಿ ಹಳ್ಳದಿಂದ ಉಪ್ಪು ನೀರನ್ನು ತಂದು ತಾಲ್ಲೂಕು ಕಚೇರಿ ಎದುರು ಉಪ್ಪು ಉತ್ಪಾದಿಸಿ ಮಾರಾಟಕ್ಕಿಟ್ಟರು. ಬ್ರಿಟೀಷರಿಗೆ ಸೆಡ್ಡು ಹೊಡೆದ ದೇವು ಹೊನ್ನಪ್ಪ ನಾಯ್ಕ ಎಂಬವರು ಅಂದಿನ ಕಾಲದಲ್ಲಿಯೇ ಅಂದಿನ ಕಾಲಕ್ಕೆ 33 ರೂ. ನೀಡಿ ಖರೀದಿಸುವ ಮೂಲಕ ಉಪ್ಪಿನ ಮೇಲೆ ತೆರಿಗೆ ಹೇರಿದ್ದ ಬ್ರಿಟೀಷರ ಶಾಸನವನ್ನು ಭಂಗಗೊಳಿಸಿದರು. ದೇವು ಹೊನ್ನಪ್ಪನು ಸೇರಿದಂತೆ ಹಲವರನ್ನು ಬ್ರಿಟಿಷರು ಬಂಧಿಸಿ ಜೈಲಿಗೆ ಹಾಕಿದ್ದರು.

ಭಾರತದ ಉಪ್ಪಿನ ಸತ್ಯಾಗ್ರಹ ಅಥವಾ ದಂಡಿಸತ್ಯಾಗ್ರಹ: ಬ್ರಿಟೀಷ್ ಸರ್ಕಾರವು ಉಪ್ಪಿನ ಮೇಲೆ ವಿಧಿಸಿದ ಕರವನ್ನು ವಿರೋಧಿಸಿ ಮಹಾತ್ಮ ಗಾಂಧೀಜಿಯವರು ನಡೆಸಿದ ಸತ್ಯಾಗ್ರಹವಾಗಿದ್ದು, ಇದನ್ನು ಉಪ್ಪಿನ ಸತ್ಯಾಗ್ರಹ, ದಂಡಿಯಾತ್ರೆ ಸತ್ಯಾಗ್ರಹ ಮತ್ತು ಕಾನೂನು ಭಂಗ ಚಳುವಳಿ ಎಂದು ಕರೆಯಲಾಗುತ್ತದೆ. 1930 ಮಾರ್ಚ್ 12ರಂದು ಮಹಾತ್ಮಾ ಗಾಂಧೀಜಿಯವರು ಗುಜರಾತ್‌ನ ಸಬರಮತಿ ಆಶ್ರಮದಿಂದ ತನ್ನ 78 ಮಂದಿ ಅನುಯಾಯಿಗಳೊಂದಿಗೆ ದಂಡಿ ಸತ್ಯಾಗ್ರಹವನ್ನು ಆರಂಭಿಸಿದರು. ಸುಮಾರು 240 ಮೈಲಿ ದೂರ ಕಾಲ್ನಡಿಗೆಯಲ್ಲಿ ನಡೆದು 1930 ರ ಮಾರ್ಚ್ 6ರಂದು ಬೆಳಿಗ್ಗೆ 6-30ರಲ್ಲಿ ದಂಡಿಯಲ್ಲಿ ಬ್ರಿಟಿಷರ ಕಾನೂನಿಗೆ ವಿರುದ್ಧವಾಗಿ ಉಪ್ಪನ್ನು ತಯಾರಿಸಿದರು.

ನಿಮಗಿದು ತಿಳಿದಿರಲ: ಉಪ್ಪಿನ ಸತ್ಯಾಗ್ರಹದ ಸಂದರ್ಭದಲ್ಲಿ ಮಹಾತ್ಮಾಗಾಂಧೀಯವರು ಬಳಸಿದ್ದ ಕೋಲು ಮೂಲತಃ ಕನ್ನಡದ ಖ್ಯಾತ ಕವಿ ಗೋವಿಂದ ಪೈ ಅವರಿಗೆ ಸೇರಿದ್ದು, ಗೋವಿಂದ ಪೈ ಅವರು ಕಾಕಾ ಕಾಲೇಕರ್ ಅವರಿಗೆ 54 ಇಂಚು ಉದ್ದದ ಬಿದಿರಿನ ಕೋಲನ್ನು ನೀಡಿದ್ದರು. ಕಾಕಾ ಕಾಲೇಕರ್‌ ಅವರು ಮಹಾತ್ಮ ಗಾಂಧೀಜಿಯವರಿಗೆ ಕಾಣಿಕೆಯಾಗಿ ಈ ಕೋಲನ್ನು ನೀಡಿದ್ದರು.

ದಂಡಿ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದ ಕನ್ನಡಿಗ ಮೈಲಾರ ಮಹಾದೇವಪ್ಪ: ಮಹಾತ್ಮಾ ಗಾಂಧೀಜಿಯವರು ಕೈಗೊಂಡ ಉಪ್ಪಿನ ಸತ್ಯಾಗ್ರಹದಲ್ಲಿ ಮೈಲಾರ ಮಹಾದೇವಪ್ಪ ರವರು ಕರ್ನಾಟಕದಿಂದ ಪ್ರತಿನಿಧಿಸಿದ್ದ ಏಕೈಕ ವ್ಯಕ್ತಿ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. 2020ರ ನವೆಂಬರ್‌ನಲ್ಲಿ ಹಾವೇರಿಯ ರೈಲ್ವೆ ನಿಲ್ದಾಣಕ್ಕೆ ಮಹದೇವಪ್ಪ ಮೈಲಾರ ರೈಲ್ವೆ ನಿಲ್ದಾಣ ಎಂದು ಮರುನಾಮಕರಣ ಮಾಡಿದೆ.

ನೆನಪಿರಲ: 2021ರ ಮಾರ್ಚ್ 12ರಂದು ಪ್ರಧಾನಿ ನರೇಂದ್ರ ಮೋದಿ ಅವರು ಆಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಗುಜರಾತಿನ ಸಬರಮತಿ ಆಶ್ರಮದಲ್ಲಿ ಚಾಲನೆ ನೀಡಿದರು. ದೇಶದ ಪ್ರಮುಖ 75 ಸ್ಥಳಗಳಲ್ಲಿ ಆಯೋಜನೆಗೊಂಡಿದ್ದ ಈ ಕಾರ್ಯಕ್ರಮಕ್ಕೆ ಕರ್ನಾಟಕದ ಬೆಳಗಾವಿ ಜಿಲ್ಲೆಯ ಕಿತ್ತೂರು, ಮಂಡ್ಯ ಜಿಲ್ಲೆಯ ಶಿವಪುರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ವಿದುರಾಶ್ವತ್ಥ ಸ್ಥಳಗಳು ಆಯ್ಕೆಯಾಗಿದ್ದವು. 2021ರ ಏಪ್ರಿಲ್ 13 ರಂದು 102ನೇ ಜಲಿಯನ್ ವಾಲಾಭಾಗ್ ಹತ್ಯಾಕಾಂಡದ ಸ್ಮರಣಾದಿನದ ಅಂಗವಾಗಿ ಗೌರವ ವಂದನೆ ಸಲ್ಲಿಸಿ ಹುತಾತ್ಮರ ಧೈರ್ಯ, ಸಾಹಸ, ಬಲಿದಾನವನ್ನು ಸ್ಮರಿಸಿದರು. 1919ರ ಏಪ್ರಿಲ್ 13 ರಂದು ಪಂಜಾಬ್‌ನ ಅಮೃತಸರದ ಜಲಿಯನ್ ವಾಲಾಬಾಗ್‌ನಲ್ಲಿ ಹತ್ಯಾಕಾಂಡ ಜರುಗಿತ್ತು.
Post a Comment (0)
Previous Post Next Post