ವಿಶ್ವ ಆಹಾರ ಪ್ರಶಸ್ತಿ 20201

2021ರ ಸಾಲಿನ ವಿಶ್ವ ಆಹಾರ ಪ್ರಶಸ್ತಿ (World Food Prize) ಯನ್ನು 2021ರ ಮೇ 11 ರಂದು ಘೋಷಣೆ ಮಾಡಲಾಗಿದೆ. ಭಾರತೀಯ ಮೂಲದ ಡಾ. ಶಕುಂತಲ ಎಚ್ಐ ಅವರು ಜಲವಾಸಿ ಆಹಾರ ವ್ಯವಸ್ಥೆ ಕ್ಷೇತ್ರಕ್ಕೆ

ನೀಡಿದ ಕೊಡುಗೆಗಾಗಿ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರು 2,50,000 ಡಾಲರ್ ಮೊತ್ತದ ಪ್ರಶಸ್ತಿ ಮೊತ್ತವನ್ನು ಪಡೆಯಲಿದ್ದಾರೆ. ಈ ಮೂಲಕ ಆಹಾರ ಪ್ರಶಸ್ತಿಗೆ ಭಾಜನರಾದ ಏಷ್ಯಾದ ಪರಂಪರೆಯನ್ನು ಹೊಂದಿರುವ ಮೊದಲ ಮಹಿಳೆ ಎಂಬ ಕೀರ್ತಿಗೆ ಶಕುಂತಲ ಅವರು ಪಾತ್ರರಾಗಿದ್ದಾರೆ. ಜಾಗತಿಕ ಮಟ್ಟದಲ್ಲಿ ಆಹಾರ ಪೂರೈಕೆ ಗುಣಮಟ್ಟ, ಲಭ್ಯತೆ, ಕೃಷಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಅನ್ವಯಿಕೆ ಆಯಾಮಗಳಲ್ಲಿ ಗಣನೀಯ ಸೇವೆಸಲ್ಲಿಸಿದವರನ್ನು ಗುರುತಿಸಿ ಆಹಾರ ಮತ್ತು ಕೃಷಿ ಕ್ಷೇತ್ರದ ನೊಬೆಲ್ (Nobel Prize for Food and Agriculture) ಎನಿಸಿದ ವಿಶ್ವ ಆಹಾರ ಪ್ರಶಸ್ತಿಯನ್ನು 1987ರಿಂದ ಪ್ರತಿವರ್ಷ ನೀಡಲಾಗುತ್ತಿದೆ.

2020ರ ಅಕ್ಟೋಬರ್ 16ರ ವಿಶ್ವ ಆಹಾರ ದಿನದಂದು ಭಾರತೀಯ ಮೂಲದ ಡಾ. ರತನ್‌ಲಾಲ್‌ ಅವರಿಗೆ 2020ರ ಸಾಲಿನ ವಿಶ್ವ ಆಹಾರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. (ರತನ್‌ಲಾಲ್ ಅವರು ಮಣ್ಣು ಕೇಂದ್ರಿತ ವಿಧಾನ ಕ್ಷೇತ್ರದಲ್ಲಿ ಹೆಚ್ಚು ಕೊಡುಗೆ ನೀಡಿದ್ದಾರೆ).

ಡಾ. ಶಕುಂತಲ ಅವರ ಬಗ್ಗೆ ಮಾಹಿತಿ

ಭಾರತೀಯ ಮೂಲದ ಶಕುಂತಲ ಅವರು ಜಾಗತಿಕ ಪೌಷ್ಠಿಕತೆ ವಿಭಾಗದ ಪರಿಣಿತ ವಿಜ್ಞಾನಿ ಅಕ್ವಾಕಲ್ಟರ್ ಮತ್ತು ಆಹಾರ ವ್ಯವಸ್ಥೆಗೆ ಸಂಬಂಧಿಸಿದ ಪೌಷ್ಠಿಕಯುಕ್ತ ಸೂಕ್ಷ್ಮ ವಿಧಾನಗಳ ಕ್ಷೇತ್ರದಲ್ಲಿ ನಡೆಸಿದ ಸಂಶೋಧನೆಗಾಗಿ 2021ರ ಸಾಲಿನ ಆಹಾರ ಪ್ರಶಸ್ತಿಯು ಲಭಿಸಿದೆ. ಜಗತ್ತಿನ ಬಹು ಸಮುದಾಯದ ಜನರಿಗೆ ಆಹಾರದ ಪ್ರಮಾಣ, ಗುಣಮಟ್ಟ, ಲಭ್ಯತೆ, ಹೆಚ್ಚು ಲಭ್ಯವಾಗುವಂತಹ ಕ್ಷೇತ್ರದಲ್ಲಿ ತೊಡಗಿರುವವರನ್ನು ಪ್ರಶಸ್ತಿ ಆಯ್ಕೆಯ ನಿಯಮಾವಳಿಗಳಲ್ಲಿ ಪರಿಗಣಿಸಲಾಗುವುದು. ಇವರು ಪ್ರಸ್ತುತ ಮಲೇಷ್ಯಾದಲ್ಲಿ ಕೇಂದ್ರ ಕಚೇರಿ ಹೊಂದಿರುವ ಸಿಜಿಐಎಆರ್‌ ಸಂಶೋಧನಾ ಕೇಂದ್ರವಾದ ವರ್ಲ್ಡ್ ಫಿಶ್‌ನಲ್ಲಿ ಸೇವೆಸಲ್ಲಿಸುತ್ತಿದ್ದಾರೆ. (Aquaculture & Nutrition Expert).

ಶಕುಂತಲ ಅವರು ಟ್ರಿನಿಡಾಡ್‌ನಲ್ಲಿ ಜನಿಸಿದ್ದು, ಪ್ರಸ್ತುತ ಡೆನ್ಮಾರ್ಕ್‌ನಲ್ಲಿ ವಾಸಿಸುತ್ತಿದ್ದಾರೆ. ಇವರ ಕುಟುಂಬದ ಮೂಲವು ಭಾರತವಾಗಿದೆ. ಕೃಷಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಲು ಕೃಷಿ ಕಾರ್ಮಿಕರನ್ನು ಬಳಸಿಕೊಂಡು ಅವರಿಗೆ ದಿನನಿತ್ಯ ಊಟದ ವ್ಯವಸ್ಥೆಯನ್ನು ಶಕುಂತಲ ಅವರ ಅಜ್ಜಿ ಸಿದ್ಧಪಡಿಸಿ ನೀಡುತ್ತಿದ್ದುದ್ದನ್ನು ಬಾಲಕಿಯಾಗಿದ್ದ ಶಕುಂತಲ ಅವರು ಗಮನಿಸಿದ್ದರು. ಪೌಷ್ಠಿಕ ಆಹಾರದ ನೀಡಿಕೆ ಹೇಗೆ ಜನರ ಆರೋಗ್ಯದ ಮೇಲೆ ಪರಿಣಾಮವನ್ನು ಬೀರಲಿದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿ ಮುಂದೆ ಟೊಬಾಗೋ ದ್ವೀಪದಲ್ಲಿ ಮೊದಲ ಬಾರಿಗೆ ಶಕುಂತಲ ಅವರು ಕೃಷಿ, ಭೂಮಿ ಮತ್ತು ಮೀನುಗಾರಿಕೆ ಸಚಿವಾಲಯದಲ್ಲಿ ವೃತ್ತಿಯನ್ನು ಆರಂಭಿಸಿದರು. ಡೆನ್ಮಾರ್ಕ್‌ನಲ್ಲಿ ಆಹಾರದ ಭದ್ರತೆ ಮತ್ತು ಜೀವನೋಪಾಯದ ಹೆಚ್ಚು ಮೂಲವಾಗಿರುವ ಮೀನು ಮತ್ತು ಇತರೆ ಜಲವಾಸಿ ಉತ್ಪನ್ನಗಳ ಪೂರೈಕೆಯನ್ನು ಹೆಚ್ಚಿಸುವುದು ಈ ಮೂಲಕ | ಮಿಲಿಯನ್ ಪ್ರಮಾಣದ ಜನರ ಅಪೌಷ್ಠಿಕತೆಯ ನಿವಾರಣೆಗೆ ಇವರು ಕೈಗೊಂಡ ಕ್ರಮಗಳು ನೆರವಾಗಿವೆ. 2021ರ ವಿಶ್ವ ಆಹಾರ ವ್ಯವಸ್ಥೆಯ ಸಭೆಯಲ್ಲಿ ಶಕುಂತಲ ಅವರು ಉಪಾಧ್ಯಕ್ಷ ಸ್ಥಾನವನ್ನು ಹೊಂದಲಿದ್ದು ಮುಂದುವರೆದ ಸಮತೋಲಿತ ಜೀವನೋಪಾಯದ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸುವಿಕೆಯಲ್ಲಿ ನಿರತರಾಗಿದ್ದಾರೆ. ಶಕುಂತಲ ಅವರಿಗೆ 2020ರಲ್ಲಿ ಸ್ವೀಡಿಶ್ ಕೃಷಿ ವಿಜ್ಞಾನ ವಿವಿಯು ಕೃಷಿ ವಿಜ್ಞಾನ ವಿಭಾಗದಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.

ವಿಶ್ವ ಆಹಾರ ಪ್ರಶಸ್ತಿ (World Food Prize)

* ಸ್ಥಾಪನೆ: 1987 (ಮೊದಲ ಪುರಸ್ಕೃತರು: ಡಾ.ಎಂ.ಎಸ್.ಸ್ವಾಮಿನಾಥನ್)

ಸ್ಥಾಪಕರು: ಡಾ. ನಾರ್ಮನ್ ಬೋರ್ಲಾದ್ (ವಿಶ್ವದ ಹಸಿರು ಕ್ರಾಂತಿ ಹರಿಕಾರ, 1972ರಲ್ಲಿ ನೊಬೆಲ್ ಶಾಂತಿ ವಿಭಾಗದ ಪುರಸ್ಕೃತರಾಗಿದ್ದಾರೆ). *ಪ್ರಶಸ್ತಿ ಮೊತ್ತ: 2.50 ಲಕ್ಷ ಅಮೆರಿಕನ್ ಡಾಲರ್ *ಪ್ರದಾನ ಮಾಡುವವರು: ವಿಶ್ವ ಆಹಾರ ಪ್ರಶಸ್ತಿ ಫೌಂಡೇಷನ್ (ಅಮೆರಿಕ)

*ಪ್ರಶಸ್ತಿ ನೀಡುವ ಸ್ಥಳ: ಅಮೆರಿಕಾದ ಡೆಸ್ಕೋಯಿನ್ಸ್ *ವಿಶೇಷತೆ: ಅಂತರಾಷ್ಟ್ರೀಯ ಮಟ್ಟದಲ್ಲಿ ಆಹಾರ, ಕೃಷಿ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ನೀಡಲಾಗುವ ಪ್ರಶಸ್ತಿ. ಇತ್ತೀಚಿನ ಪ್ರಶಸ್ತಿ ಪುರಸ್ಕೃತರು: ಡಾ.ರತನ್‌ಲಾಲ್ (2020), ಸೈಮನ್

ಗ್ರೂಟ್ಸ್ (2019), ಲಾರೆನ್ಸ್ ಅದಾಡ್& ಡೇವಿಡ್ ನಬರೊ (2018).

ವಿಶ್ವ ಆಹಾರ ಪ್ರಶಸ್ತಿಗೆ ಭಾಜನರಾದ ಭಾರತೀಯರು: ಭಾರತದ ನಾರ್ಮನ್ ಬೊರ್ಲಾಗ್ ಖ್ಯಾತಿಯ ಡಾ.ಎಂ.ಎಸ್ ಸ್ವಾಮಿನಾಥನ್ (1987), ಡಾ. ವರ್ಗೀಸ್ ಕುರಿಯನ್ (1989), ಡಾ. ಗುರುದೇವ್ ಕುಶ್ (1996), ಡಾ.ಬಿ.ಆರ್‌. ಬರವಾಲೆ (1998), ಡಾ. ಸುರೀಂದರ್ .ಕೆ ವಸಾಲ್ (2000), ಡಾ.ಎಂ. ವಿಜಯ್ ಗುಪ್ತಾ (2005), ಡಾ. ಸಂಜಯ್ ರಾಜ ರಾಮ್ (2014).

ವಿಶ್ವ ಆಹಾರ ಮತ್ತು ಕೃಷಿ ಸಂಸ್ಥೆ (FAO-Food and Agriculture Organisation) ಯು ವಿಶ್ವ ಸಂಸ್ಥೆಯ ವಿಶೇಷ ಘಟಕಗಳಲ್ಲಿ ಒಂದಾಗಿದ್ದು, 1945ರ ಅಕ್ಟೋಬರ್ 16 ರಂದು ಸ್ಥಾಪನೆಗೊಂಡಿತು. ವಿಶ್ವ ಆಹಾರ ದಿನವಾದ ಅಕ್ಟೋಬರ್ 16 ರಂದು ವಿಶ್ವ ಆಹಾರ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ. (ಕೇಂದ್ರ ಕಚೇರಿ: ರೋಮ್)

Food Planet Prize: ವಿಶ್ವ ಆಹಾರ ಪ್ರಶಸ್ತಿ ಮತ್ತು ವಿಶ್ವ ಪ್ಲಾನೆಟ್

ಪ್ರಶಸ್ತಿಗೆ ವ್ಯತ್ಯಾಸವಿದ್ದು, ಸ್ವೀಡನ್ ದೇಶದ ಕರ್ಟ್ ಬರ್ಗ್ ಫೋರ್ಸ್ ಫೌಂಡೇಷನ್‌ನ ವತಿಯಿಂದ ನೀಡಲಾಗುವ ವಿಶ್ವಪ್ಲಾನೆಟ್ ಪ್ರಶಸ್ತಿಯು ಜಾಗತಿಕ ಮಟ್ಟದಲ್ಲಿ ಆಹಾರ ವಿಭಾಗದಲ್ಲಿ ನೀಡಲಾಗುವ ಅತ್ಯಂತ ದೊಡ್ಡ ಪ್ರಶಸ್ತಿಗಳಲ್ಲಿ ಒಂದಾಗಿದೆ. 2020ರ ಡಿಸೆಂಬರ್‌ನಲ್ಲಿ ವಿಶ್ವ ಪ್ಲಾನೆಟ್ ಪ್ರಶಸ್ತಿಗೆ ದಿ ಲ್ಯಾಂಡ್ ಇನ್‌ಸ್ಟಿಟ್ಯೂಟ್ ಆಯ್ಕೆಯಾಗಿತ್ತು. ಈ ಪ್ರಶಸ್ತಿಯನ್ನು 1) ಸುಸ್ಥಿರ ಆಹಾರಕ್ಕಾಗಿ ಪರಿಹಾರ 2) ಜಾಗತಿಕ ಆಹಾರ ವಲಯದಲ್ಲಿ ನಾವೀನ್ಯತಾ ಕ್ರಮಗಳ ಅಳವಡಿಕೆ ವಿಭಾಗಗಳಲ್ಲಿ ನೀಡಿಕೆ.
Post a Comment (0)
Previous Post Next Post