ಭಾರತೀಯ ರೈಲ್ವೆ

ವಿಶ್ವದ ಅತಿದೊಡ್ಡ ಹಸಿರು ರೈಲ್ವೆಯಾಗಲಿರುವ ಭಾರತೀಯ ರೈಲ್ವೆ

ಭಾರತೀಯ ರೈಲ್ವೆಯು ವಿಶ್ವದ ಅತಿ ದೊಡ್ಡ ಹಸಿರು ರೈಲ್ವೆ (Largest Green Railway in the world with Zero carbon Emission)ಯಾಗಿ ಪರಿವರ್ತನೆ ಹೊಂದಲು ಕಾರ್ಯನಿರ್ವಹಿಸುತ್ತಿದೆ. 2030ರ ವೇಳೆಗೆ ಶೂನ್ಯ ಇಂಗಾಲ ಹೊರ ಹಾಕುವ ಸಂಸ್ಥೆಯಾಗುವ ನಿಟ್ಟಿನಲ್ಲಿ ಮುನ್ನಡೆದಿದ್ದು, ನವಭಾರತದ ಹೆಚ್ಚುತ್ತಿರುವ ಅಗತ್ಯಗಳನ್ನು ಪೂರೈಸುವ ಸಲುವಾಗಿ ಪರಿಸರ ಸ್ನೇಹಿ, ದಕ್ಷ, ಕಡಿಮೆ ವೆಚ್ಚದ, ಸಮಯ ಪ್ರಜ್ಞೆ ಮತ್ತು ಪ್ರಯಾಣಿಕರಿಗೆ ಆಧುನಿಕ ಸೇವೆಗಳನ್ನು ಒದಗಿಸುವ ಮೂಲಕ ಸಮಗ್ರ ಮಾರ್ಗದರ್ಶನಗಳನ್ನು ನೀಡುತ್ತಿದೆ.

ನೂತನ ಕ್ರಮಗಳು: ಭಾರತೀಯ ರೈಲ್ವೆಯು ಬೃಹತ್ ಪ್ರಮಾಣದ ವಿದ್ಯುದೀಕರಣ, ನೀರು ಮತ್ತು ಕಾಗದ ಸಂರಕ್ಷಣೆ, ರೈಲು ಮಾರ್ಗದಲ್ಲಿ ಪ್ರಾಣಿಗಳು ಗಾಯಗೊಳ್ಳುವುದನ್ನು ತಡೆಯಲು ಸೇರಿದಂತೆ ಪರಿಸರಕ್ಕೆ ಸಹಾಯಕವಾಗುವ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ.

ರೈಲ್ವೆ ವಿದ್ಯುದೀಕರಣವು ಪರಿಸರ ಸ್ನೇಹಿ ಕ್ರಮವಾಗಿದ್ದು, ಇಂಗಾಲ ಹೊರಸೂಸುವಿಕೆ ಪ್ರಮಾಣವನ್ನು ತಗ್ಗಿಸಲಿದೆ. ಮುಂದಿನ ಪೀಳಿಗೆಗೆ ಬೇಕಾದ ಆಧುನಿಕ ವ್ಯವಸ್ಥೆಗಳು, ಜೈವಿಕ ಶೌಚಾಲಯಗಳು, ಎಲ್‌ಇಡಿ ದೀಪಗಳನ್ನು ಅಳವಡಿಸುವ ಮೂಲಕ ಇತರೆ ಪ್ರಯಾಣಗಳಿಗೆ ಹೋಲಿಸಿದರೆ ಅತ್ಯಂತ ಆನಂದದಾಯಕವಾಗಿರುವ ರೈಲ್ವೆ ಪ್ರಯಾಣವನ್ನು ಪರಿಸರ ಸೃಷ್ಟಿಸುವುದು.

ಭಾರತೀಯ ರೈಲ್ವೆಯು ನಿರ್ದಿಷ್ಟ ಸರಕು ಕಾರಿಡಾರ್‌ಗಳನ್ನು ಅಭಿವೃದ್ಧಿ ಪಡಿಸಿದ್ದು, ಅವು ಕಡಿಮೆ ಇಂಗಾಲ ಹಸಿರು ಸಾಗಣೆ ಜಾಲವಾಗಿದೆ ಹಾಗೂ ದೀರ್ಘಾವಧಿಯಲ್ಲಿ ಕಡಿಮೆ ಇಂಗಾಲ ನೀಲ ನಕ್ಷೆಯನ್ನು ಹೊಂದಲಾಗಿದೆ. ಇದರಿಂದಾಗಿ ಹೆಚ್ಚಿನ ಇಂಧನ ಕ್ಷಮತೆ ಮತ್ತು ಇಂಗಾಲ ಸ್ನೇಹಿ ತಂತ್ರಜ್ಞಾನಗಳ ಸಂಸ್ಕರಣೆ ಮತ್ತು ಪದ್ಧತಿಯನ್ನು ಅಳವಡಿಸಲು ಸಾಧ್ಯವಾಗುತ್ತದೆ.

ಭಾರತದಲ್ಲಿ ಲೂಧಿಯಾನದಿಂದ ಡಂಕುನಿವರೆಗೆ 1875 ಕಿ.ಮೀ. ಉದ್ದ ಪೂರ್ವ ಕಾರಿಡಾರ್ (EDFC), ದಾದ್ರಿಯಿಂದ ಜವಾಹರಲಾಲ್ ನೆಹರು ಫೋರ್ಟ್ ಟ್ರಸ್ಟ್‌ವರೆಗಿನ 1506 ಕಿ.ಮೀ. ಉದ್ದದ ಪಶ್ಚಿಮ ಕಾರಿಡಾರ್‌ಗಳು(WDFC) ನಿರ್ದಿಷ್ಟ ಯೋಜನೆಗಳಾಗಿದ್ದು, ಅನುಷ್ಠಾನಗೊಳ್ಳುತ್ತಿದೆ. ಸರಕು ಕಾರಿಡಾರ್

ಕೋವಿಡ್-19ರ ಸಂದರ್ಭದಲ್ಲಿ 2021ರ ಏಪ್ರಿಲ್ ಮತ್ತು ಮೇನಲ್ಲಿ ಭಾರತೀಯ ರೈಲ್ವೆಯು ಹಸಿರು ತರಕಾರಿ ಸೇರಿದಂತೆ 73 ಲಕ್ಷ ಆಹಾರ ಧಾನ್ಯಗಳನ್ನು ಸಾಗಣೆ ಮಾಡಿದೆ. ಜೊತೆಗೆ 241 ಭರ್ತಿಯಾದ ಆಕ್ಸಿಜನ್ ಎಕ್ಸ್‌ಪ್ರೆಸ್ ರೈಲ್ವೆಗಳ ಮೂಲಕ 922 ಟ್ಯಾಂಕರ್‌ಗಳಲ್ಲಿ 15046 ಆಕ್ಸಿಜನ್ ಅನ್ನು ದೇಶದ ನಾನಾ ಭಾಗಗಳಿಗೆ ತಲುಪಿಸಿದೆ.

ಭಾರತೀಯ ರೈಲ್ವೆ(IR) ಮತ್ತು ಭಾರತೀಯ ಕೈಗಾರಿಕಾ ಒಕ್ಕೂಟ(CII)ಗಳ ನಡುವೆ ರೈಲ್ವೆ ವಲಯದಲ್ಲಿ ಕೈಗೊಳ್ಳುವ ಹಸಿರು ಉಪಕ್ರಮಗಳಿಗೆ ಪೂರಕ ಬೆಂಬಲ ನೀಡಲು ಒಪ್ಪಂದ ಮಾಡಿಕೊಂಡಿವೆ. 39 ಕಾರ್ಯಾಗಾರಗಳು 7 ಉತ್ಪಾದನಾ ಘಟಕಗಳು, 8 ಲೋಕೋಷೆಡ್‌ಗಳು, 1 ಉಗ್ರಾಣ ನಿಗಮಕ್ಕೆ ಗ್ರೀನ್ ಕೋ ಪ್ರಮಾಣೀಕರಣ ನೀಡಲಾಗಿದ್ದು, ಇದರಲ್ಲಿ 2 ಪ್ರಾಟಿನಂ, 15 ಚಿನ್ನ ಮತ್ತು 18 ಬೆಳ್ಳಿ ರೇಟಿಂಗ್ ಒಳಗೊಂಡಿದೆ.

asd gabaddesde (Green Certification)

ಇಂಧನ ಸಂರಕ್ಷಣ ವಿಧಾನಗಳು, ನವೀಕರಿಸಬಹುದಾದ ಇಂಧನ ಬಳಕೆ, ಹಸಿರು ಮನೆ ಅನಿಲ ಹೊರಸೂಸುವಿಕೆ ತಗ್ಗಿಸುವುದು, ಜಲ ಸಂರಕ್ಷಣೆ, ತ್ಯಾಜ್ಯ ನಿರ್ವಹಣೆ, ಸಾಮಗ್ರಿಗಳ ಸಂರಕ್ಷಣೆ ಮುಂತಾದವು ಪರಿಸರದ ಮೇಲೆ ನೇರ ಪರಿಣಾಮ ಬೀರುವಂತಹ ಮಾನದಂಡಗಳ ಮೌಲ್ಯಮಾಪನವನ್ನು ಹಸಿರು ಪ್ರಮಾಣೀಕರಣ ಹೊಂದಿದೆ. ದೇಶದಲ್ಲಿ 19 ರೈಲ್ವೆ ನಿಲ್ದಾಣಗಳು ಹಸಿರು ಪ್ರಮಾಣೀಕರಣವನ್ನು ಸಾಧಿಸಿದ್ದು, ಇವುಗಳಲ್ಲಿ 3 ಪ್ಲಾಟಿನಂ, 6 ಚಿನ್ನ ಮತ್ತು 6 ಬೆಳ್ಳಿ ರೇಟಿಂಗ್ ಪಡೆದಿದೆ. ಕಳೆದ 2 ವರ್ಷಗಳಲ್ಲಿ ಪರಿಸರ ನಿರ್ವಹಣಾ ವ್ಯವಸ್ಥೆ (Environment Management System)ಯನ್ನು ಅನುಷ್ಠಾನಗೊಳಿಸುವ ಮೂಲಕ 600 ರೈಲು ನಿಲ್ದಾಣಗಳು, ಐಎಸ್‌ಒ:14001 ಪ್ರಮಾಣೀಕರಣವನ್ನು ಗಳಿಸಿದ್ದು, ಒಟ್ಟಾರೆ 718 ನಿಲ್ದಾಣಗಳಿಗೆ ಐಎಸ್‌ಒ ಪ್ರಮಾಣ ಪತ್ರ ಲಭಿಸಿದೆ. ಭಾರತೀಯ ರೈಲ್ವೆಯು ಪ್ರತಿವರ್ಷ ಪ್ರಕಟಿಸುವ ಪರಿಸರ ಸುಸ್ಥಿರ ವರದಿ (Environment Sustainability Report) ಯಲ್ಲಿ ಹವಾಮಾನ ಬದಲಾವಣೆ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳನ್ನು ಸೂಚಿಸುತ್ತದೆ.

ಹವಾಮಾನ ಬದಲಾವಣೆ ಕುರಿತ ಪ್ಯಾರಿಸ್ ಒಪ್ಪಂದ, ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳು ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಯೋಜನೆಗಳಿಗೆ ಸರ್ಕಾರ ತನ್ನ ಬದ್ಧತೆಯನ್ನು ಬೆಂಬಲಿಸಲು ರೈಲ್ವೆ ವಲಯದ ಪರಿಸರ ಸ್ನೇಹಿ ವಿಧಾನಗಳಿಗೆ ಸಹಕಾರಿಯಾಗಿದೆ.

ಭಾರತೀಯ ರೈಲ್ವೆ ಬಗ್ಗೆ ಮಾಹಿತಿ: ಭಾರತೀಯ ರೈಲ್ವೆ ವ್ಯವಸ್ಥೆಯನ್ನು ಕೇಂದ್ರ ರೈಲ್ವೆ ಸಚಿವಾಲಯ ನಿರ್ವಹಣೆ ಮಾಡುತ್ತದೆ. ರೈಲ್ವೆ ಸಂಪರ್ಕ ಮಾರ್ಗದ ಆಧಾರದಲ್ಲಿ ಜಗತ್ತಿನ ಅತಿ ಉದ್ದದ ರೈಲ್ವೆ ನೆಟ್‌ವರ್ಕ್ ಹೊಂದಿದ ರಾಷ್ಟ್ರಗಳ ಪಟ್ಟಿಗಳಲ್ಲಿ 4ನೇ ಸ್ಥಾನ ಹೊಂದಿದೆ. 1845ರ ಮೇ 8ರಂದು ಭಾರತೀಯ ರೈಲ್ವೆ ಮೊದಲ ಬಾರಿ ಸ್ಥಾಪನೆಗೊಂಡಿತು. ಭಾರತೀಯ ರೈಲ್ವೆಯು 18 ವಲಯಗಳನ್ನು ಹೊಂದಿದೆ. ದಕ್ಷಿಣ ಕರಾವಳಿ ರೈಲ್ವೆಯು 18ನೇ ರೈಲ್ವೆ ವಲಯವಾಗಿದ್ದು, ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಕೇಂದ್ರ ಕಚೇರಿ ಇದೆ. 1853 ಏಪ್ರಿಲ್ 16ರಂದು ಮುಂಬೈನಿಂದ ಥಾಣೆಯವರೆಗೆ 34 ಕಿ.ಮೀ. ದೂರದಲ್ಲಿ ದೇಶದ ಮೊದಲ ರೈಲು ಸಂಚಾರ ಆರಂಭವಾಯಿತು. ಭಾರತೀಯ ರೈಲ್ವೆ ಪಿತಾಮಹ ಲಾರ್ಡ್ ಡಾಲ್‌ಹೌಸಿ.

ನೆನಪಿರಂ: 2021ರ ಏಪ್ರಿಲ್ 5ರಂದು ಪ್ರಧಾನಿ ನರೇಂದ್ರ ಮೋದಿ ಅವರು ಚಿನಾಬ್ ನದಿಗೆ ಅಡ್ಡಲಾಗಿ ವಿಶ್ವದ ಅತಿ ಎತ್ತರದ ಕಮಾನು ಆಕಾರದ ಸೇತುವೆಯನ್ನು ಜಮ್ಮು-ಕಾಶ್ಮೀರದಲ್ಲಿ ಭಾರತೀಯ ರೈಲ್ವೆಯು ಪೂರ್ಣಗೊಳಿಸಿರುವುದಕ್ಕಾಗಿ ಶ್ಲಾಘಿಸಿದರು. 395 ಮೀ. ಎತ್ತರದಲ್ಲಿರುವ ಮತ್ತು 1315 ಮೀ. ಉದ್ದದ ಈ ಸೇತುವೆಯು ಉದಂಪುರ-ಶ್ರೀನಗರ-ಬಾರಾಮುಲ್ಲಾ ರೈಲ್ವೆ ಮಾರ್ಗವನ್ನು ಸಂಪರ್ಕಿಸುತ್ತದೆ. ಚಿನಾಬ್ ಸೇತುವೆಯು ವಿಶ್ವದ ಅತಿದೊಡ್ಡ ರೈಲ್ವೆ ಸೇತುವೆಯಾಗಿದೆ. ಇದು ಪ್ಯಾರಿಸ್‌ನ ಐಫೆಲ್ ಟವರ್‌ಗಿಂತ 35 ಮೀ. ಎತ್ತರದಲ್ಲಿದೆ. ಅತ್ಯಾಧುನಿಕ ಟೆಕ್ಲಾಸ್ ತಂತ್ರಾಂಶದ ಮೂಲಕ ರಚನಾತ್ಮಕ ಚೌಕಟ್ಟಿನಿಂದ ನಿರ್ಮಾಣವಾಗಿದೆ. ಈ ಕಾಮಗಾರಿ ಪೂರ್ಣಗೊಂಡಿರುವುದರಿಂದ ಬನಿಹಾಲ್-ಕಾತ್ರಾ ನಡುವಿನ 111 ಕಿ.ಮೀ. ಉದ್ದದ ಅಂಕುಡೊಂಕು ಮಾರ್ಗದ ಹಾದಿ ಸುಗಮಗೊಂಡಿದೆ.

ಗುಜರಾತ್‌ನ ವಡೋದರದಲ್ಲಿ ರಾಷ್ಟ್ರೀಯ ರೈಲು ಮತ್ತು ಸಾರಿಗೆ ಸಂಸ್ಥೆ ಇದ್ದು, ಇದನ್ನು ರೈಲ್ವೆ ವಿಶ್ವವಿದ್ಯಾಲಯ ಎನ್ನುವರು.

Post a Comment (0)
Previous Post Next Post