ಸುಂದರಲಾಲ್ ಬಹುಗುಣ ನಿಧನ

ನೆನಪಿರಂ: 2021ರ ಏಪ್ರಿಲ್ 5ರಂದು ಪ್ರಧಾನಿ ನರೇಂದ್ರ ಮೋದಿ ಅವರು ಚಿನಾಬ್ ನದಿಗೆ ಅಡ್ಡಲಾಗಿ ವಿಶ್ವದ ಅತಿ ಎತ್ತರದ ಕಮಾನು ಆಕಾರದ ಸೇತುವೆಯನ್ನು ಜಮ್ಮು-ಕಾಶ್ಮೀರದಲ್ಲಿ ಭಾರತೀಯ ರೈಲ್ವೆಯು ಪೂರ್ಣಗೊಳಿಸಿರುವುದಕ್ಕಾಗಿ ಶ್ಲಾಘಿಸಿದರು. 395 ಮೀ. ಎತ್ತರದಲ್ಲಿರುವ ಮತ್ತು 1315 ಮೀ. ಉದ್ದದ ಈ ಸೇತುವೆಯು ಉದಂಪುರ-ಶ್ರೀನಗರ-ಬಾರಾಮುಲ್ಲಾ ರೈಲ್ವೆ ಮಾರ್ಗವನ್ನು ಸಂಪರ್ಕಿಸುತ್ತದೆ. ಚಿನಾಬ್ ಸೇತುವೆಯು ವಿಶ್ವದ ಅತಿದೊಡ್ಡ ರೈಲ್ವೆ ಸೇತುವೆಯಾಗಿದೆ. ಇದು ಪ್ಯಾರಿಸ್‌ನ ಐಫೆಲ್ ಟವರ್‌ಗಿಂತ 35 ಮೀ. ಎತ್ತರದಲ್ಲಿದೆ. ಅತ್ಯಾಧುನಿಕ ಟೆಕ್ಲಾಸ್ ತಂತ್ರಾಂಶದ ಮೂಲಕ ರಚನಾತ್ಮಕ ಚೌಕಟ್ಟಿನಿಂದ ನಿರ್ಮಾಣವಾಗಿದೆ. ಈ ಕಾಮಗಾರಿ ಪೂರ್ಣಗೊಂಡಿರುವುದರಿಂದ ಬನಿಹಾಲ್-ಕಾತ್ರಾ ನಡುವಿನ 111 ಕಿ.ಮೀ. ಉದ್ದದ ಅಂಕುಡೊಂಕು ಮಾರ್ಗದ ಹಾದಿ ಸುಗಮಗೊಂಡಿದೆ.

ಗುಜರಾತ್‌ನ ವಡೋದರದಲ್ಲಿ ರಾಷ್ಟ್ರೀಯ ರೈಲು ಮತ್ತು ಸಾರಿಗೆ ಸಂಸ್ಥೆ ಇದ್ದು, ಇದನ್ನು ರೈಲ್ವೆ ವಿಶ್ವವಿದ್ಯಾಲಯ ಎನ್ನುವರು.

ಸುಂದರ್‌ಲಾಲ್ ಅವರ ಜೀವನದ ಹೆಜ್ಜೆ: 1927ರ ಜನವರಿ 9ರಂರು ಉತ್ತರಾಖಂಡದ ತಹರಿ ಜಿಲ್ಲೆಯ ಮರೋಡಾ ಗ್ರಾಮದಲ್ಲಿ ಜನಿಸಿದ ಸುಂದರ್‌ಲಾಲ್ ಅವರು 1980ರ ದಶಕದಲ್ಲಿ ಪರಿಸರ ಸಂರಕ್ಷಣಾ ಕಾರ್ಯಕರ್ತರಾದ ಗೌರಾದೇವಿ ಹಾಗೂ ಹಲವು ಪರಿಸರ ಸಂರಕ್ಷಣಾ ಹೋರಾಟಗಾರರ ಜತೆ ಚಿಸ್ಕೋ ಚಳುವಳಿಯನ್ನು ಆರಂಭಿಸಿದ್ದರು. 1980ರಲ್ಲಿ ಕೀನ್ಯಾದ ನೈರೋಬಿಯಲ್ಲಿ ವಿಶ್ವಸಂಸ್ಥೆಯು ಏರ್ಪಡಿಸಿದ್ದ ಶಕ್ತಿ ಸಮ್ಮೇಳನದಲ್ಲಿ ಇವರು ಹಾಜರಾಗಿದ್ದರು.

1980ರ ಆರಂಭದಲ್ಲಿ ಕಾಶ್ಮೀರದಿಂದ ನಾಗಾಲ್ಯಾಂಡ್‌ನ ಕೊಹಿಮಾದವರೆಗೆ 2 ವರ್ಷಗಳ ಪಾದಯಾತ್ರೆ ನಡೆಸಿದ್ದು, ಸುಂದರಲಾಲ್ ಅವರು ಪರಿಸರ ಸಂತ ಎಂದು ಪ್ರಸಿದ್ದಿ ಪಡೆದಿದ್ದರು. ಈ ಪಾದಯಾತ್ರೆಯಲ್ಲಿ ಜೊತೆಯಾಗಿದ್ದ ಶಿರಸಿಯ ಪಾಂಡುರಂಗ ಹೆಗಡೆ ಯವರ ಆಹ್ವಾನದ ಮೇರೆಗೆ ಸುಂದರ್‌ಲಾಲ್ ಅವರು ಬಂದು ಬೇಡ್ತಿ ಚಳುವಳಿಗೆ ಕೈ ಜೋಡಿಸಿದರು.

ಶ್ರೀ ದೇವಸುಮನ್ ಮಾರ್ಗದರ್ಶನದಲ್ಲಿ ತಮ್ಮ ಸಾಮಾಜಿಕ ಚಟುವಟಿಕೆಗಳನ್ನು ಪ್ರಾರಂಭಿಸಿದ್ದ ಸುಂದರ್‌ಲಾಲ್ ಅವರು ತಮ್ಮ ಜೀವನದಲ್ಲಿ ಗಾಂಧೀವಾದಿ ತತ್ವಗಳನ್ನು ಅಳವಡಿಸಿಕೊಂಡಿದ್ದರು. ಗಾಂಧಿ ಅವರ ಪ್ರೇರಣೆಯಿಂದ 4,700 ಕಿ.ಮೀ.ನಷ್ಟು ಹಿಮಾಲಯದ ಕಾಡು ಮತ್ತು ಬೆಟ್ಟಗಳ ನಡುವೆ ಪಾದಯಾತ್ರೆ ಮಾಡಿ ಹಿಮಾಲಯದ ಪರಿಸರಕ್ಕೆ ಆದ ಹಾನಿಯನ್ನು ಗಮನಿಸಿದ್ದರು.

ಕರ್ನಾಟಕದ ಅಪ್ಪಿಕೊ ಚಳುವಳಿಗೆ ಪ್ರೇರಣಾಕರ್ತ-ಸುಂದರ್‌ಲಾಲ್ ಸುಂದರ್‌ಲಾಲ್ ಬಹುಗುಣ ಎಂದರೆ ಕರ್ನಾಟಕ ರಾಜ್ಯದ ಮಟ್ಟಿಗೆ ಹಿಮಾಲಯದಿಂದ ಬಂದ ಬೆಳಕು. ಕಾರಣ ರಾಜ್ಯದಲ್ಲಿ ಅಪ್ಪಿಕೊ ಚಳುವಳಿಯನ್ನು ಚಿಗುರಿಸಿದ ಸಂತ. 1983ರ ಸೆಪ್ಟೆಂಬರ್ 8ರಂದು ಕರ್ನಾಟಕದ ಪರಿಸರವಾದಿ ಡಾ. ಪಾಂಡುರಂಗ ಹೆಗಡೆ ಅವರು ಅಪ್ಪಿಕೋ (ಚಿಸ್ಕೋ ಪದದ ಕನ್ನಡಾನುವಾದ) ಚಳುವಳಿಯನ್ನು ಆರಂಭಿಸಲು ಸುಂದರ್‌ಲಾಲ್‌ ಪ್ರೇರಣೆಕರ್ತ ವ್ಯಕ್ತಿಯಾಗಿದ್ದಾರೆ.

2008ರ ಸೆಪ್ಟೆಂಬರ್ 8ರಂದು ಅಪ್ಪಿಕೋ ಚಳುವಳಿಗೆ 25 ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಶಿರಸಿ ತಾಲ್ಲೂಕಿನ ಸಾಲ್ಕಣಿ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಂದರ್‌ಲಾಲ್‌ ಅವರು ಭಾಗವಹಿಸಿದ್ದು, ಮಕ್ಕಳಿಗೆ ಪರಿಸರ ಪಾಠವನ್ನು ಮಾಡಿದ್ದರು. ಈ ಸಂದರ್ಭದಲ್ಲಿ ಸೆಪ್ಟೆಂಬರ್ 8 ಅನ್ನು ಸಹ್ಯಾದ್ರಿ ದಿನ ಎಂದು ಆಚರಿಸಲಾಗಿದೆ.

ಚಿಷ್ಟೋ ಮಹಿಳೆಯರ ಸಾಹಸಗಳನ್ನು ಇಲ್ಲಿಯ ಹಳ್ಳಿಯ ಯುವಕರಿಗೆ ಬಣ್ಣಿಸಿದ್ದು, ರಾಜ್ಯದಲ್ಲಿ ಅಪ್ಪಿಕೋ ಚಳುವಳಿ ಆರಂಭವಾಯಿತು. “ಅರಣ್ಯ ಎಂದರೆ ಕೇವಲ ಫರ್ನಿಚರ್ ಮಾಡುವ ದಿಮ್ಮಿಗಳಲ್ಲ, ಅರಣ್ಯಗಳೆಂದರೆ ಪೃಥ್ವಿಯ ಶ್ವಾಸಕೋಶ, ನದಿಗಳ ಜನ್ಮದಾಯಿನಿ, ಮಣ್ಣಿನ ರಕ್ಷಣೆಯ ಖಜಾನೆ” ಎಂದು ಪುರಾತನ ಋಷಿಮುನಿಯಂತೆ ಪ್ರವಚನ ನೀಡುವ ಪರಿಸರ ಸಂತನಾಗಿದ್ದರು. ಪರಿಸರವು ಶಾಶ್ವತ ಆರ್ಥಿಕತೆ ಎಂಬ ಚಿಕ್ಕೋ ಘೋಷಣೆಯನ್ನು ಸುಂದರ್‌ಲಾಲ್ ಅವರು ರಚಿಸಿದ್ದರು.

ಚಿಪ್ಲೋ ಚಳುವು: ಮಹಾತ್ಮ ಗಾಂಧಿಯವರ ಮೂಲಮಂತ್ರಗಳಾದ ಸತ್ಯಾಗ್ರಹ ಮತ್ತು ಅಹಿಂಸೆ ತತ್ವಗಳ ಆಧಾರದಲ್ಲಿ ಮರಗಳನ್ನು ಅಪ್ಪಿಕೊಳ್ಳುವುದರ ಮೂಲಕ ಮರ ಕಡಿಯುವುದರ ಬಗ್ಗೆ ಅಸಹಕಾರ ತೋರಿಸಿದ ಚಳುವಳಿಯನ್ನು ಚಿಮ್ಮೋ ಆಂದೋಲನ ಎನ್ನಬಹುದು.

1973ರಲ್ಲಿ ಮೊದಲ ಬಾರಿ ಉತ್ತರಾಖಂಡ ರಾಜ್ಯದ ಗರ್ವಾಲ ಪ್ರದೇಶ ಮಂಡಲ್ ಹಳ್ಳಿಯಲ್ಲಿ ಅತಿಯಾಗಿ ನಡೆಯುತ್ತಿದ್ದ ಅರಣ್ಯ ನಾಶದ ಬಗ್ಗೆ ಅರಿವು ಮೂಡಿಸುವುದರ ಮೂಲಕ ಆಂದೋಲನ ಆರಂಭವಾಗಿದ್ದು, 1974 ಮಾರ್ಚ್ 26ರಂದು ಉತ್ತರಾಖಂಡ ರಾಜ್ಯದ ಚಮೋಲಿ ಜಿಲ್ಲೆಯ ಪ್ರದೇಶಗಳಲ್ಲಿ ಹಲವು ಮಹಿಳೆಯರು ತಮ್ಮ ಕಾಡಿನ ಸಾಂಪ್ರದಾಯಿಕ ಹಕ್ಕನ್ನು ಹಿಂಪಡೆಯುವ ಸಲುವಾಗಿ ಮರ ಕಡಿಯುವುದನ್ನು ವಿರೋಧಿಸಿ ಹೋರಾಟ ನಡೆಸಿದರು. ಈ ಘಟನೆ ದೇಶದಲ್ಲಿ ಹಲವಾರು ಪರಿಸರ ಸಂರಕ್ಷಣಾ ಘಟನೆಗಳಿಗೆ ಸ್ಫೂರ್ತಿಯಾಯಿತು. ಗರ್ವಾಲಾದ ಚಿಕ್ಕೋ ಚಳುವಳಿಗೆ ಸ್ಫೂರ್ತಿ ಸೆಲೆಯಾಗಿ ನಿಂತ ನಾಯಕ ಸುಂದರ್‌ಲಾಲ್ ಬಹುಗುಣ.

ಜೆಷ್ಟೋ ಚಳುವಆಯಲ್ಲಿ ಭಾಗವಹಿಸಿದ ಪ್ರಮುಖರು: ಗೌರಾದೇವಿ, ಸುದೇಶದೇವಿ, ಚಾಂಡಿಪ್ರಸಾದ್ ಭಟ್ (ಇವರು 1964ರಲ್ಲಿ ದಶೋಲಿ ಗ್ರಾಮ ಸ್ವರಾಜ್ಯ ಸಂಘವನ್ನು ಗೋಪೇಶ್ವರದಲ್ಲಿ ಸ್ಥಾಪಿಸಿದ್ದು, ಇದು ಮುಂದಿನ ದಿನಗಳಲ್ಲಿ ಚಿಸ್ಕೋ ಚಳುವಳಿಯಲ್ಲಿ ಮಾತೃ ಸಂಸ್ಥೆಯಾಯಿತು.) ಘನಶ್ಯಾಮ್ ರಾವೋರಿ (ಪರಿಸರ ಗೀತೆಗಳ ರಚನೆಯ ಮೂಲಕ ಹಿಮಾಲಯದ ಜನರಲ್ಲಿ ಪರಿಸರ ಪ್ರಜ್ಞೆ ಮೂಡಿಸಿದವರು), ಗೋವಿಂದಸಿಂಗ್ ರಾವತ್ ಮುಂತಾದವರು. ಉತ್ತರಾಖಂಡ ರಾಜ್ಯದಲ್ಲಿ ಆರಂಭವಾದ ಪರಿಸರ ರಕ್ಷಣಾ ಹೋರಾಟದ ಸಂದೇಶವನ್ನು ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಹಾಗೂ ದೇಶಗಳಲ್ಲಿ ಸುಂದರ್‌ಲಾಲ್ ಬಹುಗುಣ ಅವರು ಬಿತ್ತರಿಸಿದರು.

Post a Comment (0)
Previous Post Next Post