ಪರಿಸರ ಮಾಲಿನ್ಯದ ಪ್ರಕಾರಗಳು

ಪರಿಸರ ಗಳು ಪರಸ್ಪರ ಸಂಬಂಧ ಹೊಂದಿವೆ ಹಾಗೂ ಇಡೀ ಪ್ರಪಂಚವೇ ಒಂದು ಮನೆಯಂತಿದೆ ಎಂಬುದನ್ನು ಈ ಪರಿಕಲ್ಪನೆ ಸಂಕೇತಿಸುವುದು.

ಕ್ರಿ.ಶ 19ನೇ ಶತಮಾನದ ಅರ್ನೆಸ್ಟ್ ಹೇಕಲ್ (Ernest Haeckel) ಏಂಬ ಜರ್ಮನಿಯ ಪ್ರಸಿದ್ಧ ಸೇ ಶಾಸ್ತ್ರಜ್ಞನು ಪ್ರಥಮ ಬಾರಿಗೆ "Ecology" ಎಂಬ ಪರಿಕಲ್ಪನೆಯನ್ನು ಬಳಸಿದನು. ಪರಿಸರವು ಪ್ರಾಣಿ ಸಮುದಾಯದ ಮೇಲೆ ಬೀರುವ ಪ್ರಭಾವವನ್ನು ಸಂಕೇತಿಸಲು ಈ ಪದವನ್ನು ಸೂಚಿಸಿದನು. Ian Robertson ಹೇಳುವಂತೆ “ಪರಿಸರ ಮತ್ತು ಜೀವಿಗಳ ನಡುವಿನ ಅಂತರ್ ಸಂಬಂಧದ ಅಧ್ಯಯನವೇ ಜೀವಪರಿಸರಶಾಸ್ತ್ರ",

ಸೃಷ್ಟಿಯ ಎಲ್ಲ ಜೀವಿಗಳು ಮತ್ತು ಪರಿಸರದೊಂದಿಗಿನ ಸಂಬಂಧವನ್ನು ಅಧ್ಯಯನ ಮಾಡುವ ಜೀವಶಾಸ್ತ್ರದ

ಗಿಯೇ ಜೀವಪರಿಸರಶಾಸ್ತ್ರ. ಜೀವಪರಿಸರಶಾಸ್ತ್ರ ವಿಚಾರಗಳು ಪ್ರಾಣಿಶಾಸ್ತ್ರ, ಸಸ್ಯಶಾಸ್ತ್ರ ಮತ್ತು ಸಮಾಜಶಾಸ್ತ್ರದ ಕ್ಷೇತ್ರಗಳ ಮೇಲೆ ಪ್ರಭಾವ ನೀಗಿಸುವುದರಿಂದ ಪ್ರಾಣಿ ಜೀವಪರಿಸರಶಾಸ್ತ್ರ (Animal ecology), ಸಸ್ಯ ಜೀವಪರಿಸರಶಾಸ್ತ್ರ(plant ecology) ಇಾಜಿಕ ಅಥವಾ ಮಾನವ ಜೀವಪರಿಸರಶಾಸ್ತ್ರ (Social or Human ecology) ಎಂಬ ಜ್ಞಾನದ AM'ಗಳು ಆವಿಷ್ಕಾರಗೊಂಡಿವೆ. ಮರೆ ಬುಕ್‌ಚಿನ್‌ (Murray Boockchin) ಎಂಬ ರಾಜಕೀಯ ತತ್ವಜ್ಞಾನಿಯು ಸಾಮಾಜಿಕ ಜೀವ ಪರಿಸರಶಾಸ್ತ್ರದ ಸಂಸ್ಥೆ"ಯನ್ನೆ ಹುಟ್ಟು ಹಾಕಿದ್ದಾನೆ.

ಸಮಾಜಶಾಸ್ತ್ರದ ಒಂದು ಶಾಖೆಯಾಗಿರುವ ಮಾನವ ಜೀವಪರಿಸರಶಾಸ್ತ್ರವು ಮಾನವನ ಜೀವಿಗಳು ತಮ್ಮ ಪರಿಸರದೊಂದಿಗೆ ಹೇಗೆ ನಿರಂತರವಾಗಿ ಹೊಂದಾಣಿಕೆಯನ್ನು ಮಾಡಿಕೊಳ್ಳುತ್ತವೆ ಎಂಬುದನ್ನು ಅಧ್ಯಯನ ಮಾಡುವುದು. ಪಾರ್ಕ್ ಮತ್ತು ಬರ್ಗೆಸ್, ಮೆಕೆಂಜಿ ಮತ್ತು ಅವರ 'ಚಿಕಾಗೋ ವಿಚಾರ ವೇದಿಕೆ'ಯು (Chicago

Lohool) ಸಾಮಾಜಿಕ ಪರಿಸರಶಾಸ್ತ್ರವನ್ನು ಸಮಾಜಶಾಸ್ತ್ರದ ಒಂದು ಶಾಖೆಯಾಗಿ ಬೆಳೆಯುವಂತೆ ಮಾಡಿತು.

ವಾಯುಮಾಲಿನ್ಯದ ದುಷ್ಪರಿಣಾಮಗಳು (Impact of Air Pollution) : ವಾಯುಮಾಲಿನ್ಯವು ಬಹಳ ವಿಸ್ತ್ರತವಾದ ಸಮಸ್ಯೆಯಾಗಿದ್ದು, ಮಾನವನ ಆರೋಗ್ಯ, ಪ್ರಾಣಿಗಳು, ಸಸ್ಯಗಳ

ಮೇಲೆ ಕೆಟ್ಟ ಪರಿಣಾಮಗಳನ್ನು ಉಂಟುಮಾಡುತ್ತದೆ. 1. ಗಾಳಿಯಲ್ಲಿಯ ಗಂಧಕದ ಡೈ ಆಕ್ಸೆಡ್, ವಾಯುವಿನಲ್ಲಿಯ ಕಲ್ಲಿದ್ದಲು, ಸಿಲಿಕಾನ್, ಬೆರಿಯಂ ಮುಂತಾದವು ಶ್ವಾಸಕೋಶದ ಕ್ಯಾನ್ಸರ್, ಹೃದಯ ಮತ್ತು ರಕ್ತ ಪರಿಚಲನೆಯ ಕಾಯಿಲೆಗೆ ದಾರಿ ಮಾಡುತ್ತವೆ.

2.

ಆಧುನಿಕ ತಂತ್ರಜ್ಞಾನದ ಏಕಿರಣಗಳಿಂದ ರಕ್ತಹೀನತೆ, ಲ್ಯುಕಿಮಿಯಾ, ಕ್ಯಾನ್ಸರ್, ಶಾರೀರಿಕ ದುರ್ಬಲತೆ

ಉಂಟಾಗುವುದು.

3. ವಾಯುಮಾಲಿನ್ಯದಿಂದ ಅಮೃತಶಿಲೆಯ ಭವ್ಯ ಸ್ಮಾರಕ ಜಗತಸಿದ್ಧ ತಾಜ್‌ಮಹಲ್ ಇಂದು ಹಂತ ಹಂತವಾಗಿ ಹಾಳಾಗುತ್ತಿದ್ದು, ಆದರೆ ಅಪೂರ್ವ ಅತಿಸೂಕ್ಷ್ಮ ಕುಸುರಿಯ ಕೆಲಸ ನಾಶವಾಗುತ್ತಿದೆ.

4 ವಿವಿಧ ಇಂಧನಗಳ ಬಳಕೆಯಿಂದ ಬಿಡುಗಡೆಯಾಗುವ ಇಂಗಾಲದ ಡೈ ಆಕ್ಸೆಡ್‌ನಿಂದ ಭೂಮಿಯ ತಾಪಮಾನ ಹೆಚ್ಚುತ್ತಿದೆ. ಇದನ್ನು ಹಸಿರು ಮನೆ ಪರಿಣಾಮ ಎಂದು ಕರೆಯಲಾಗಿದೆ.

ವಾಯುಮಾಲಿನ್ಯದ ಮೂಲಗಳ ಗಿಡಮರಗಳ ಮೇಲೆ ಶೇಖರಣೆಯಾಗಿ ಎಲೆಯಲ್ಲಿನ ಪತ್ರ-ಹರಿತು ಮುಚ್ಚಿ ದ್ಯುತಿಸಂಶ್ಲೇಷಣೆ ಕ್ರಿಯೆಯ ಸಾಮರ್ಥ್ಯ ಕಡಿಮೆಯಾಗುತ್ತಿದೆ. ಇದರಿಂದ ಗಾಳಿಯಲ್ಲಿನ ಆಮ್ಲಜನಕದ ಪ್ರಮಾಣ ಕಡಿಮೆಯಾಗುತ್ತಿದೆ. ವಾಯುಮಾಲಿನ್ಯವನ್ನು ತಡೆಗಟ್ಟುವ ವಿಧಾನಗಳು (Methods of containing Air Pollution):

ವಾಯುಮಾಲಿನ್ಯವು ಇಂದಿನ ಕೈಗಾರಿಕಾ ಯುಗದ ಮುಖ್ಯ ಸಮಸ್ಯೆಗಳಲ್ಲೊಂದಾಗಿದೆ. ಅದನ್ನು ನಿಯಂತ್ರಿಸಲು

ಹಲವು ಮಾರ್ಗೋಪಾಯಗಳಿವೆ.

1: ನೈಸರ್ಗಿಕ ಸಸ್ಯ ವರ್ಗಗಳ ಸಂರಕ್ಷಣೆ ಮಾಡುವುದರಿಂದ ನೈಸರ್ಗಿಕ ಆವರ್ತಗಳು ಯಥಾ ರೀತಿಯಲ್ಲಿ ಮುಂದುವರಿದು, ವಾಯುಮಂಡಲದ ಕತ್ತಲಗಳು ಕ್ರಮೇಣ ಪ್ರಕೃತಿಯಲ್ಲಿಯೇ ವಿಲೀನವಾಗುತ್ತವೆ.

2, ಕೈಗಾರಿಕೆಗಳನ್ನು ಜನವಸತಿಯ ಪ್ರದೇಶಗಳಿಂದ ದೂರದಲ್ಲಿ ಸ್ಥಾಪಿಸುವುದು.

3. ಪರಿಸರ ಮಾಲಿನ್ಯ ಉಂಟು ಮಾಡದಿರುವ ಕೈಗಾರಿಕೆಗಳನ್ನು ಪ್ರೋತ್ಸಾಹಿಸುವುದು.

4. ವಾಹನಗಳಲ್ಲಿ ಮಾಲಿನ್ಯ ನಿಯಂತ್ರಣ ಸಾಧನಗಳನ್ನು ಅಳವಡಿಸಿ, ಕಡಿಮೆ ಪ್ರಮಾಣದಲ್ಲಿ ಹೊಗೆ ಬಿಡುವ ವಾಹನ ಬಳಕೆಗೆ ಪ್ರೋತ್ಸಾಹಿಸುವುದು.

ಕೇವಲ ಸರ್ಕಾರಿ ಮತ್ತು ಶಾಸನೀಯ ಕ್ರಮಗಳಿಂದ ಮಾತ್ರವೇ ಮಾಲಿನ್ಯವನ್ನು ನಿಯಂತ್ರಿಸಲಾಗದು. ಈ ಬಗ್ಗೆ ಜನರಲ್ಲಿ ತಿಳುವಳಿಕೆ ಮೂಡಿಸುವುದು ಹೆಚ್ಚು ಪರಿಣಾಮಕಾರಿ. 6. ಪರಿಸರದ ಅಧ್ಯಯನವು ಶಿಕ್ಷಣದ ಎಲ್ಲಾ ಹಂತಗಳಲ್ಲಿ ಪಠ್ಯವಸ್ತುವಾಗಬೇಕು. ಸಾರ್ವಜನಿಕ ಸಂಘ

ಸಂಸ್ಥೆಗಳು ಜನಸಂಘಟನೆಗಳು ಈ ದಿಸೆಯಲ್ಲಿ ಕಾರ್ಯ ನಿರ್ವಹಿಸಬೇಕು.


Post a Comment (0)
Previous Post Next Post