ಪ್ರಮುಖ ಮಾಲಿನ್ಯಗಳು

ತಾಪ ಮಾಲಿನ್ಯ (Thermal Pollution):

ತಾಪ ಮಾಲಿನ್ಯ ಜೈವಿಕ ಅಸಮತೋಲನಕ್ಕೆ ಕಾರಣವಾಗುವುದು. ಕೈಗಾರಿಕೆಗಳು, ವಾಹನಗಳು ಮತ್ತು ವಿದ್ಯುತ್ ಸ್ಥಾವರಗಳಲ್ಲಿ ಯಂತ್ರಗಳ ಉಷ್ಣತೆಯನ್ನು ಕಡಿಮೆ ಮಾಡಲು ನೀರನ್ನು ಬಳಸಲಾಗುತ್ತದೆ. ಬಿಸಿಯಾದ ನೀರು ಮತ್ತು ತ್ಯಾಜ್ಯ ವಸ್ತುಗಳನ್ನು ಯಾವುದೇ ಸಂಸ್ಕರಣೆ ಇಲ್ಲದೇ ನದಿಗಳಿಗೆ ಬಿಟ್ಟರೆ ಜಲಚರಗಳ ಉಳಿವು ಮತ್ತು ಅಸ್ಥಿತ್ವಕ್ಕೆ ಅಪಾಯ ಉಂಟಾಗುವುದು. ಬಿಸಿ ನೀರಿನಿಂದ ಜಲಚರಗಳಿಗೆ ಉಂಟಾಗುವ ದುಷ್ಪರಿಣಾಮವನ್ನು ತಾಪ ಮಾಲಿನ್ಯ ಎಂದು ಕರೆಯಲಾಗಿದೆ. ಇಂತಹ ಮಾನವ ಸೃಷ್ಟಿಯ ಪಾಪಗಳಿಂದ ನೀರಿನಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆಯಾಗಿ ಜಲಚರಗಳು ಉಸಿರುಗಟ್ಟಿ ಸಾಯುತ್ತವೆ.

3 ಕ್ರಿಮಿನಾಶಕಗಳ ಮಾಲಿನ್ಯ (Pesticide pollution):

ಕೃಷಿ ಮತ್ತು ಮನೆಗಳಲ್ಲಿನ ಬ್ಯಾಕ್ಟಿರಿಯಾ, ಕ್ರಿಮಿ ಕೀಟಗಳನ್ನು ನಿಯಂತ್ರಿಸಲು ಬಳಸುವ ಕ್ರಿಮಿ ಮತ್ತು ಕೀಟ ನಾಶಕಗಳಿಂದ ಉಂಟಾಗುವ ವ್ಯತಿರಿಕ್ತ ಪರಿಣಾಮಗಳನ್ನು ಕ್ರಿಮಿನಾಶಕಗಳ ಮಾಲಿನ್ಯ ಎಂದು ಕರೆಯಲಾಗಿದೆ. ಡಿಡಿಟಿಯಂತಹ ವಿಷಕಾರಿ ಕ್ರಿಮಿನಾಶಕದ ಬಳಕೆಯನ್ನು ಅಮೇರಿಕಾ 1972ರಲ್ಲಿಯೇ ರದ್ದು ಮಾಡಿದೆ. ಆದರೆ ಆಮೇರಿಕಾ ಹೊರತುಪಡಿಸಿ ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಇದನ್ನು ಬಳಸಲಾಗುತ್ತದೆ. ಕ್ರಿಮಿ ನಾಶಕಗಳ ದೂರಗಾಮಿ ಪರಿಣಾಮಗಳನ್ನು ಊಹಿಸಲಾಗದು.

4. ಘನತ್ಯಾಜ್ಯ ವಸ್ತುಗಳಿಂದ ಮಾಲಿನ್ಯ :

ಮಾನವ ಬಳಸಿ ಬಿಸಾಡುವ ಗೃಹೋಪಯೋಗಿ ವಸ್ತುಗಳು ಮತ್ತು ಅವುಗಳ ಸಂಸ್ಕರಣೆಯಿಂದ ಉಂಟಾಗುವ ಮಾಲಿನ್ಯವೇ ಘನತ್ಯಾಜ್ಯ ವಸ್ತುಗಳಿಂದಾಗುವ ಮಾಲಿನ್ಯವಾಗಿದೆ. ಪ್ರಪಂಚದಲ್ಲಿ ಬಳಸಿ ಬಿಸಾಡುವ, ಉಪಯೋಗಕ್ಕೆ ಬಾರದ ಘನ ಸ್ವರೂಪದ ತ್ಯಾಜ್ಯ ವಸ್ತುಗಳನ್ನು ಒಂದು ಕಿ.ಮೀ ವ್ಯಾಸವುಳ್ಳ ಪ್ರದೇಶದಲ್ಲಿ ಶಂಕುವಿನಾಕಾರದಲ್ಲಿ ರಾಶಿ ಹಾಕುತ್ತಾ ಬಂದರೆ ಒಂದೇ ವರ್ಷದಲ್ಲಿ ಮೌಂಟ್ ಎವರೆಸ್ಟ್ ಶಿಖರವನ್ನು ಮೀರಿಸಬಹುದು ಎಂದು ಆಂದಾಜು ಮಾಡಲಾಗಿದೆ. ವಿಶ್ವದಲ್ಲಿ ಪ್ರತಿ ವರ್ಷ 1000 ಟನ್ನುಗಳಷ್ಟು ಘನರೂಪದ ತ್ಯಾಜ್ಯ ವಸ್ತುಗಳನ್ನು ಎಸೆಯುತ್ತಿದ್ದೇವೆ.

ನಗರದ ರಸ್ತೆ, ಚರಂಡಿ, ಮೈದಾನ, ಉದ್ಯಾನವನ, ರೈಲ್ವೆನಿಲ್ದಾಣ, ಬಸ್ ನಿಲ್ದಾಣ, ಸಾರ್ವಜನಿಕ ಸಮಾರಂಭಗಳು ನಡೆಯುವ ಸ್ಥಳಗಳಲ್ಲಿ ಎಸೆಯುವ ಘನ ತ್ಯಾಜ್ಯಗಳನ್ನು ಅಂದಾಜು ಮಾಡಿದರೆ ಜಗತ್ತಿನಾದ್ಯಂತ ಪ್ರತಿ ವರ್ಷ 15,000 ಕೋಟಿ ಕ್ಯಾನ್‌ಗಳು, 8 ಕೋಟಿ ಟನ್ನುಗಳಷ್ಟು ಬಾಟಲ್‌ಗಳು, 15 ಕೋಟಿ ಟನ್ನುಗಳಷ್ಟು ಪೇಪರ್, ಪ್ಲಾಸ್ಟಿಕ್, ಮತ್ತಿತರ ತ್ಯಾಜ್ಯ ವಸ್ತುಗಳನ್ನು ಅವೈವಿಜ್ಞಾನಿಕವಾಗಿ ಎಸೆಯುವ ಮೂಲಕ ಘನ ತ್ಯಾಜ್ಯ ವಸ್ತುಗಳಿಂದ ಉಂಟಾಗುವ ಮಾಲಿನ್ಯಕ್ಕೆ ಮಾನವ ಕಾರಣನಾಗಿದ್ದಾನೆ.

ಗೃಹ ಬಳಕೆ, ಕೈಗಾರಿಕೆಗಳು, ಕೃಷಿ ಮತ್ತು ವಾಣಿಜ್ಯೋದ್ದೇಶಗಳ ಕಾರ್ಯಗಳಿಂದ ಹೊರಬೀಳುವ ಘನ ತ್ಯಾಜ್ಯ ವಸ್ತುಗಳು ಪರಿಸರಕ್ಕೆ ಹಾನಿಯಾಗದಂತೆ ಮರು ಬಳಕೆ ಮಾಡಿಕೊಳ್ಳಬೇಕಾದ ಹೊಣೆಗಾರಿಕೆಯು ಆಧುನಿಕ ಸಮಾಜದ ಮೇಲಿದೆ. ಯಾವುದೇ ವಸ್ತುಗಳ ಉತ್ಪಾದನಾ ಹಂತದಲ್ಲಿಯೇ ಘನತ್ಯಾಜ್ಯಗಳನ್ನು ನಿಯಂತ್ರಿಸಬೇಕು. ತ್ಯಾಜ್ಯಗಳನ್ನು ವಿಂಗಡಿಸಿ ಸಂಸ್ಕರಿಸುವ ಹಾಗೂ ಕಾಂಪೋಸ್ಟ್ ತಯಾರಿಕೆಯ ಮೂಲಕ ಮರು ಬಳಕೆಗೆ  ಪೂರಕವಾಗಿಸಿಕೊಳ್ಳಬೇಕು. ಅನುಪಯುಕ್ತ ಘನ ತ್ಯಾಜ್ಯಗಳನ್ನು ಹಾನಿಕಾರಕವಾಗದ ರೀತಿಯಲ್ಲಿ ವಿಲೇವಾರಿ ಮಾಡುವಂತಹ ತಾಂತ್ರಿಕತೆಯನ್ನು ಅಭಿವೃದ್ಧಿ ಪಡಿಸಬೇಕು.

5. ಸಾಗರ ಮಾಲಿನ್ಯ (Ocean pollution):

ಸಾಗರಗಳ ನೀರು ಸಹ ಮಾಲಿನ್ಯತೆಯಿಂದ ಮುಕ್ತವಾಗಿಲ್ಲ. ಸಾಗರಗಳಿಗೆ ಸೇರುವ ಕೈಗಾರಿಕಾ ತ್ಯಾಜ್ಯಗಳು ರಾಸಾಯನಿಕಗಳು ಹಾಗೂ ಪೆಟ್ರೋಲಿಯಂ ಸಾಗಿಸುವ ಹಡಗುಗಳಿಂದ ಸೋರುವ ತೈಲಗಳು ಸಾಗರದ ಜೈವಿಕ ಪರಿಸರದ ವ್ಯವಸ್ಥೆಯನ್ನು ಅಸಮತೋಲನವನ್ನುಂಟು ಮಾಡುತ್ತದೆ. ಸಮುದ್ರದಲ್ಲಿರುವ ಜಲಚರ ಸಸ್ಯಗಳಿಗೆ ಮತ್ತು ಪಾಣಿಗಳಿಗೆ ಬದುಕಲು ಸಾಧ್ಯವಾಗದ ಪರಿಸರವಾಗಿ ಮಾರ್ಪಟ್ಟಿದೆ. ಮಾನವ ಕೇಂದ್ರಿತ

ಚಟುವಟಿಕೆಗಳ ಮೂಲಕ ಮಾಲಿನ್ಯದ ವಸ್ತುಗಳು ಸಮುದ್ರಕ್ಕೆ ಸೇರಿ ಅದರ ಸ್ವರೂಪವನ್ನು ಬದಲಾಯಿಸಿ ಜೀವಿಗಳಿಗೆ ಬದುಕಲು ಅನುಪಯುಕ್ತವಾಗಿಸುವುದೇ ಸಾಗರ ಮಾಲಿನ್ಯ ಎಂದು ಕರೆಯಲಾಗಿದೆ.

ಕೈಗಾರಿಕೆಗಳು, ಜನವಸತಿ ಪ್ರದೇಶಗಳ ಹಾಗೂ ಚರಂಡಿಯ ಮೂಲಕ ಹರಿಯುವ ತ್ಯಾಜ್ಯಗಳು ಮತ್ತು ತೈಲ ಮಾಲಿನ್ಯವು ಸಾಗರ ಮಾಲಿನ್ಯಕ್ಕೆ ಕಾರಣವಾಗಿವೆ. ಆದ್ದರಿಂದ ಕೈಗಾರಿಕೆಗಳು ಗೃಹ ಬಳಕೆ ಮತ್ತು ಚರಂಡಿಗಳ ಮೂಲಕ ಬರುವ ತ್ಯಾಜ್ಯಗಳನ್ನು ಸಾಗರಗಳಿಗೆ ಬಿಡದಂತೆ ಎಚ್ಚರಿಕೆ ವಹಿಸುವ ಮೂಲಕ ಸಾಗರ ಮಾಲಿನ್ಯವನ್ನು ತಡೆಗಟ್ಟಬಹುದು. ತೈಲ ಸಾಗಾಣಿಕೆಯ ಹಡಗುಗಳಲ್ಲಿ ತೈಲ ಸೋರದಂತೆ ಆಧುನಿಕ ರಕ್ಷಣಾ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು.



Post a Comment (0)
Previous Post Next Post