ಜಾಗತಿಕ ತಾಪಮಾನ (Global Warming):

ಜೀವಿಗಳ ಉಗಮ ಮತ್ತು ಪೋಷಿಸುವ ಕಾರ್ಯಕ್ಕೆ ಭೂಮಿ ಮೂಲಸೆಲೆಯಾಗಿದೆ. ವಾತವರಣದಲ್ಲಿ ಸಂಗ್ರಹವಾಗುವ ನೀರಾವಿ, ಇಂಗಾಲದ ಡೈ ಆಕ್ಸೆಡ್, ಮೀಥೇನ್ ಮುಂತಾದ ಅನಿಲಗಳು ಭೂಮಿಯ ವಾತಾವರಣದೊಳಗಿನ ಶಾಖವನ್ನು ಹೊರಹೋಗಲು ಬಿಡದೆ ಮತ್ತೆ ಭೂಮಿಗೆ ವಾಪಸ್ಸು ಹೋಗುವಂತೆ ಮಾಡಿದಾಗ ಭೂಮಿಯ ತಾಪಮಾನ ಹೆಚ್ಚಾಗುತ್ತದೆ. ಜನಸಂಖ್ಯೆಯ ಹೆಚ್ಚಳ, ಪರಿಸರದ ಅಸಮರ್ಪಕ ನಿರ್ವಹಣೆ, ಸಂಪನ್ಮೂಲಗಳ ಅತಿಯಾದ ಬಳಕೆ,
ಅರಣ್ಯ ನಾಶ, ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ, ತ್ಯಾಜ್ಯಗಳನ್ನು ಭೂಮಿಯ ನೀರಿನಲ್ಲಿ ಎಸೆಯುವುದು, ಕೈಗಾರಿಕೆಗಳ ಮಾಲಿನ್ಯ, ಪೆಟ್ರೋಲಿಯಂ ಇಂಧನಗಳನ್ನು ಉರಿಸಿದಾಗ ಉಂಟಾಗುವ ವಾಯುಮಾಲಿನ್ಯ ಮುಂತಾದವು ಜಾಗತಿಕ ತಾಪಮಾನದ ಏರಿಕೆಗೆ ಕಾರಣವಾಗಿದೆ.

ಜಾಗತಿಕ ತಾಪಮಾನದಿಂದ ಸಮುದ್ರ ಮತ್ತು ನದಿಗಳ ನೀರು ಆವಿಯಾಗಿ ಮಣ್ಣಿನ ತೇವಾಂಶ ಕಡಿಮೆಯಾಗಿ ಸಸ್ಯ ಮತ್ತು ಜೀವಿ ಸಂಕುಲಕ್ಕೆ ನೀರು ಸಿಗದೇ ಸಾವನ್ನಪ್ಪುವ ಸಾಧ್ಯತೆ ಇದೆ. ಅನಿರೀಕ್ಷಿತ ಮಳೆ, ಪ್ರವಾಹಗಳು ಉಂಟಾಗಿ ಹೊಸ ಸಾಂಕ್ರಾಮಿಕ ರೋಗಗಳು ಸೃಷ್ಟಿಯಾಗುತ್ತವೆ. ಜಾಗತಿಕ ತಾಪಮಾನವು ವಾಯು ಚಲನೆ, ಸಮುದ್ರ ಮತ್ತು ವಾತಾವರಣದ ಉಷ್ಣ ಚಲನೆಯ ಮೇಲೆ ಪರಿಣಾಮ ಬೀರಿ ಇಡೀ ನೈಸರ್ಗಿಕ ವ್ಯವಸ್ಥೆಯನ್ನೇ ಗಂಡಾಂತರಕ್ಕೀಡು ಮಾಡುವುದು.

ಜಾಗತೀಕ ತಾಪಮಾನ ಮತ್ತು ಹಸಿರು ಮನೆ ಪರಿಣಾಮವನ್ನು ತಡೆಗಟ್ಟುವುದು ನಾಗರಿಕ ಜಗತ್ತಿನ ಜವಾಬ್ದಾರಿಯಾಗಿದೆ. ವಾತಾವರಣವನ್ನು ಸೇರುತ್ತಿರುವ ಹಸಿರುಮನೆ ಅನಿಲಗಳನ್ನು ಕಡಿಮೆ ಪ್ರಮಾಣದಲ್ಲಿ ಹೋಗುವಂತೆ ಮಾಡುವುದು, ಅರಣ್ಯಕರಣವನ್ನು ಅಭಿವೃದ್ಧಿ ಪಡಿಸಬೇಕು. ಇಂಧನಗಳ ಅತಿಯಾದ ಬಳಕೆಯ ಮೇಲೆ ನಿಯಂತ್ರಣ ಹೇರಬೇಕು. ಕ್ಲೋರೋಪ್ಲೋರೋ ಕಾರ್ಬನ್‌ಗಳಂತಹ ರಾಸಾಯನಿಕಗಳನ್ನು ನಿಷೇಧಿಸಬೇಕು. ಎಲ್ಲದಕ್ಕಿಂತಲೂ ಮುಖ್ಯವಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದರ ಮೂಲಕ ಜಾಗತಿಕ ತಾಪಮಾನದ ಪರಿಣಾಮವನ್ನು ನಿಯಂತ್ರಿಸುವುದು.
Post a Comment (0)
Previous Post Next Post