ಹಸಿರು ಮನೆ ಪರಿಣಾಮ ಎಂಬ ವಿದ್ಯಮಾನವು ಪರಿಸರಕ್ಕೆ ಸಂಬಂಧಿಸಿದ ಗಂಭೀರ ಸವಾಲಾಗಿದೆ. ಬೊಜ್ಜರ ಎಂದು ಕರೆಯಲ್ಪಡುವ ಈ ಮಾನವ ನಿರ್ಮಿಕ ಸಮಸ್ಯೆ ಭವಿಷ್ಯದಲ್ಲಿ ದೊಡ್ಡ ಗಂಡಾಂತರ ತರುತ್ತದೆ. ಅರಣ್ಯನಾಶವೇ ಈ ಸಮಸ್ಯೆಗೆ ಮೂಲ ಕಾರಣವಾಗಿದೆ. ಕಾರ್ಬನ್ ಡೈ ಆಕ್ಸೆಡ್, ಮಿಥೇನ್, ಕಾರ್ಬನ್ ಮೊನಾಕ್ಸೆಡ್, ನೈಟಿಕ್ ಆಕ್ಸಿಡ್ ಮುಂತಾದವುಗಳಿಂದ ಭೂಮಿಯ ಉಷ್ಣತೆ ಹೆಚ್ಚುತ್ತದೆ. ಇದನ್ನು ಕಂಡು ಹಿಡಿದ ವಿಜ್ಞಾನಿ ಜೋಸೆಫ್ ಪ್ಯೂರಿಯರ್ ಎಂಬಾತನು ಹಸಿರು ಮನೆ ಪರಿಣಾಮ ಎಂದು ಕರೆದಿದ್ದಾನೆ. ಪರಿಸರ ತಜ್ಞರು ಹೇಳುವಂತೆ ವಾತಾವರಣದಲ್ಲಿ ಕಾರ್ಬನ್ ಡೈ ಆಕ್ಸೆಡ್ ನಿರಂತರವಾಗಿ ಸೋರಿಕೆಯಾಗುತ್ತಿರುವುದರಿಂದ ಭೂಮಿಯ ಸರಾಸರಿ ಉಷ್ಣತೆಯಲ್ಲಿ ಹೆಚ್ಚಳವಾಗುವುದು, ಜೋಸೆಫ್ ಪ್ಯೂರಿಯರ್ ಹಸಿರು ಮನೆಯ ದುಷ್ಪರಣಾಮಗಳ ಬಗ್ಗೆ ಜಗತ್ತಿಗೆ ಎಚ್ಚರಿಕೆ ನೀಡಿದ್ದಾನೆ.
ಸೂರ್ಯನ ಬೆಳಕು ಭೂಮಿಯನ್ನು ತಲುಪಿದಾಗ ಸಸ್ಯಗಳಲ್ಲಿ ದ್ಯುತಿ ಸಂಶ್ಲೇಷಣೆ ಆಗುವಿಕೆ, ನೀರು ಆವಿಯಾಗುವಿಕೆ, ಭೂಮೇಲೆ ಬಿಸಿಯಾಗುವಿಕೆ ಮುಂತಾದುವುಗಳು ಘಟಿಸುತ್ತವೆ. ಇಂತಾಹ ಕ್ರಿಯೆಗಳಿಗೆ ಸೂರ್ಯನ ಬೆಳಕು ಅತ್ಯಗತ್ಯ ಸಾಮಾನ್ಯವಾಗಿ ಭೂಮಿಗೆ ತಲುಪುವ ಶಾಖವು ಆಗಸಕ್ಕೆ ವಾಪಾಸಾಗಿ ಹರಡುತ್ತದೆ. ಆದರೆ ಭೂಮಿಗೆ ಬಂದ ಅತಿನೇರಳೆ ಕಿರಣಗಳನ್ನು ವಾತಾವಾರಣದಲ್ಲಿಯ ಇಂಗಾಲದ ಡೈ ಆಕ್ಸೆಡ್ ಹೀರಿಕೊಂಡು ಹೊರಗೆ ಬಿಡುವುದಿಲ್ಲ. ಇಂತಹ ಪ್ರಕ್ರಿಯೆಯಿಂದ ಭೂಮಿಯ ತಾಪಮಾನ ಹೆಚ್ಚುತ್ತದೆ.
ಹಸಿರು ಮನೆ ಪರಿಣಾಮದಿಂದ ಭೂಮಿಯ ತಾಪಮಾನ ಹೆಚ್ಚುತ್ತಿದ್ದು ಪರಿಸರಕ್ಕೆ ಹೊಂದಿಕೊಂಡು ಜೀವಿಸುತ್ತಿರುವ ಜೀವಿಗಳ ಅಸ್ತಿತ್ವಕ್ಕೆ ಧಕ್ಕೆ ಉಂಟಾಗುತ್ತವೆ. ವಾತಾವರಣ ಮತ್ತು ಮಳೆಯ ಪ್ರಮಾಣದಲ್ಲಿ ವ್ಯತ್ಯಯಗಳು ಉಂಟಾಗಿ ರೈತರು ತೀವ್ರವಾದ ಹಾನಿಗೊಳಗಾಗುತ್ತಾರೆ. ಸಮುದ್ರದ ನೀರಿನ ಮಟ್ಟಿ, ನದಿ, ನೀರಿನ ಪ್ರಮಾಣ ಮತ್ತು ಕಾಡುಗಳ ಮೇಲೆ ಗಂಭೀರವಾದ ವ್ಯತ್ಯಾಸಗಳಾಗಿ ಮಾನವನ ಜೀವನ ಸಂಕಷ್ಟಕ್ಕೆ ಗುರಿಯಾಗಿದೆ.
ಹಸಿರು ಮನೆ ಪರಿಣಾಮದ ನಿಯಂತ್ರಣವು ಎಲ್ಲಾ ರಾಷ್ಟ್ರಗಳ ಕರ್ತವ್ಯವಾಗಿದೆ. ಈ ಬಗ್ಗೆ ವಿಶ್ವಸಂಸ್ಥೆಗೂ ತನ್ನದೇ ಆದ ಕಾಳಜಿಯಿದೆ. 1. ಹಸಿರು ಮನೆ ಅನಿಲಗಳನ್ನು ಹೀರಿಕೊಳ್ಳುವ ಅರಣ್ಯವನ್ನು ಅಭಿವೃದ್ಧಿಗೊಳಸಬೇಕು.
2. ಸಮುದ್ರ ಏರುವಿಕೆ, ತಾಪಮಾನ ಏರಿಕೆಯ ಆಪತ್ತುಗಳನ್ನು ಗುರುತಿಸಿ ರಾಷ್ಟ್ರ ಮತ್ತು ಅಂತರಾಷ್ಟ್ರೀಯ
ಮಟ್ಟದಲ್ಲಿ ಕ್ರಮ ಕೈಗೊಳ್ಳುವುದು.
3. ಯೋಜನಾ ಬದ್ಧ ಜಲ ಮತ್ತು ಕೃಷಿ ನಿರ್ವಹಣಾ ನೀತಿಯನ್ನು ರೂಪಿಸುವುದು ಜಾಗತಿಕ ತಾಪಮಾನದ ಏರಿಕೆ ಮತ್ತು ಹಸಿರು ಮನೆ ಪರಿಣಾಮಕ್ಕೆ ಮುಂದುವರೆದ ಮತ್ತು ಕೈಗಾರಿಕಾ ಪ್ರಧಾನ ದೇಶಗಳೇ ಹೊಣೆಯಾಗಿವೆ. ಸಾರ್ವಜನಿಕರು ಸರ್ಕಾರ ಮತ್ತು ಜಗತ್ತಿನ ಎಲ್ಲಾ ರಾಷ್ಟ್ರಗಳು ಈ ಬಗ್ಗೆ ಕಾರ್ಯ ಪ್ರವೃತ್ತರಾದಾಗ ಮಾತ್ರ ಈ ಸಮಸ್ಯೆಯ ದೂರಗಾಮಿ ಪರಿಣಾಮಗಳನ್ನು ನಿಯಂತ್ರಸಬಹುದು.
Post a Comment