ಓರೋನ್ ಪದರ ವಿನಾಶ (Ozone Depletion)

aship
0

1982 ರಲ್ಲಿ 'ಫಾರ್‌ಮನ್' ಎಂಬ ವಿಜ್ಞಾನಿಯು: ಅಂಟಾರ್ಟಿಕ್ ಭೂ ಖಂಡದ ಮೇಲಿರುವ ಓರೋನ್ ಪದರದಲ್ಲಿ ರಂಧ್ರವೊಂದು ಸೃಷ್ಟಿಯಾಗಿರುವುದನ್ನು ವರದಿ ಮಾಡಿದನು. ಭೂಮಿಯ ಸರಗೋಳ ಎಂಬ ವಾತಾವರಣ ಪ್ರದೇಶದಲ್ಲಿರುವ ಓರೋನ್ ಎಂಬ ನೈಸರ್ಗಿಕ ಅನಿಲದ ಮೊರೆ ಸೂರ್ಯನಿಂದ ಬರುವ ಹಾನಿಕಾರಕ ಅತಿ ನೇರಳೆ ಕಿರಣಗಳನ್ನು ಭೂವಾತಾವರಣ ಪ್ರವೇಶಿಸದಂತೆ ತಡೆದು ರಕ್ಷಿಸುತ್ತದೆ. ಆದರೆ ಒರೋನ್ ಪದರಕ್ಕೆ ಹಾನಿಯಾಗುತ್ತಿರುವುದರಿಂದ ವಿಜ್ಞಾನಿಗಳು ಚಿಂತಿತರಾಗಿದ್ದಾರೆ.

ಓರೋನ್ ಪದರಕ್ಕೆ ಆಗುತ್ತಿರುವ ಹಾನಿಗೆ ಮಾನವನೇ ಸಂಪೂರ್ಣ ಹೊಣೆಗಾರನಾಗಿದ್ದಾನೆ. ರೆಫ್ರಿಜರೇಟರ್, ಹವಾ ನಿಯಂತ್ರಕಗಳಲ್ಲಿ ಬಳಸುವ ಕ್ಲೋರೋಫ್ಲೋರೋ ಕಾರ್ಬನ್‌ಗಳು, ಲೋಹ ರಕ್ಷಕ ವರ್ಣಗಳಲ್ಲಿ ಸೇರಿರುವ ಹಾಲೋನ್ ಮತ್ತು ಮಿಥೇಲ್ ಕ್ಲೋರೋಪ್ಲೋರೋ ಫಾರ್ಮ ಸಾರಜನಕದ ಆಕ್ಸೆಡ್‌ಗಳು ಮತ್ತು ಮಿಥೇನ್ ಬೋಮೈಡ್ ಮುಂತಾದವುಗಳು ಓರೋನ್ ಪದರಕ್ಕೆ ಹಾನಿಯನ್ನುಂಟು ಮಾಡುತ್ತಿದೆ.

ಓರೋನ್ ಪದರಿನ ಹಾನಿಯಿಂದಾಗಿ ಜಾಗತಿಕ ತಾಪಮಾನ ಹೆಚ್ಚಾಗುತ್ತಿದೆ. ಇಡೀ ಜೀವಸಂಕುಲಕ್ಕೆ ಧಕ್ಕೆ ಉಂಟಾಗಿದೆ. ಅತಿನೇರಳೆ ಕಿರಣಗಳು ಮಾನವನ ಚರ್ಮದ ಕ್ಯಾನ್ಸರ್‌ಗೆ ಕಾರಣವಾಗಿದೆ. ರೋಗ ನಿರೋಧಕ ಶಕ್ತಿಯನ್ನು ದುರ್ಬಲಗೊಳಿಸಿ, ಸರ್ಪಸುತ್ತು, ಕಣ್ಣಿನ ದೃಷ್ಟಿ ಮಾಂದ್ಯತೆ, ಕ್ಯಾಟರಾಕ್ಸ್‌ನಂತಹ ಸಮಸ್ಯೆಗಳು ಹೆಚ್ಚಾಗುತ್ತವೆ. ಓಝೀನ್ ಪದರ ವಿನಾಶದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸೆಪ್ಟೆಂಬರ್ 16 ರಂದು ವಿಶ್ವ ಓರೋನ್ ದಿನವನ್ನಾಗಿ ಆಚರಿಸಲಾಗುತ್ತಿದೆ. ಓಜೋನ್ ಪದರದ ವಿನಾಶಕ್ಕೆ ಕಾರಣವಾಗುವ ರಾಸಾಯನಿಕಗಳ ಜಾಗತಿಕ ನಿಷೇಧಕ್ಕೆ 'ಮಾಂಟ್ರಿಯಲ್ ಒಡಂಬಡಿಕೆ' ಎಂಬ ಅಂತರಾಷ್ಟ್ರೀಯ ಒಪ್ಪಂದಕ್ಕೆ ಅನೇಕ ದೇಶಗಳು ಸಹಿ ಮಾಡಿವೆ. ಜನಸಾಮಾನ್ಯರಿಗೆ ಓಜೋನ್ ಪದರದ ಪ್ರಾಮುಖ್ಯತೆ ಮತ್ತು ಅದರ ರಕ್ಷಣೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕು.

Post a Comment

0 Comments

Post a Comment (0)

#buttons=(Ok, Go it!) #days=(20)

Our website uses cookies to enhance your experience. Check Now
Ok, Go it!