ಆಮ್ಲ ಮಳೆ acid rain

ಕೈಗಾರಿಕೆ ಹಾಗೂ ವಾಹನಗಳಿಂದ ಗಂಧಕ ಹಾಗೂ ಸಾರಜನಕದ ಆಕ್ಸೆಡ್‌ಗಳು ವಿಸರ್ಜನೆಯಾಗುತ್ತದೆ. ಇವು ವಾತಾವರಣದಲ್ಲಿ ಬಹು ಧೀರ್ಘ ಕಾಲ ಉಳಿಯುತ್ತವೆ. ರಾಸಾಯನಿಕ ಮತ್ತು ಛಾಯಾ ರಾಸಾಯನಿಕ ಪ್ರತಿಕ್ರಿಯೆಗಳ ಮೂಲಕ ಗಂಧಕಾಮ್ಲ ಮತ್ತು ನೈಟಿಕ್ ಆಮ್ಲವಾಗಿ ಗುಂಪುಗೊಳ್ಳುತ್ತವೆ. ವಾತಾವರಣ ತೇವಾಂಶದೊಡನೆ ಕೂಡಿ ಆಮ್ಲ ಹನಿಗಳಾಗಿ ಸುರಿಯುವುದನ್ನು ಆಮ್ಲದ ಮಳೆ ಎನ್ನಲಾಗಿದೆ.

, ಸಾಮಾನ್ಯವಾಗಿ ಮಳೆ ಆಥವಾ ಮಂಜು ಭೂಮಿಗೆ ಬಿದ್ದಾಗ ಅದರ ಅಮ್ಲ ಗುಣ (ಪಿಹೆಚ್) ಏನಾದರೂ 5.6 ಕ್ಕಿಂತ ಕಡಿಮೆ ಇದ್ದಲ್ಲಿ ಅಂತಹ ಮಳೆಯನ್ನು ಆಮ್ಲ ಮಳೆ ಎಂದು ಕರೆಯಲಾಗಿದೆ. ಮಲಿನಕಾರಿ ವಸ್ತುಗಳಾದ ಗಂಧಕದ ಆಕ್ಸೆಡ್‌ಗಳು ಹಾಗೂ ಸಾರಜನಕದ ಆಕ್ಸಿಡ್‌ಗಳು ಕಲ್ಲಿದ್ದಲು, ಪೆಟ್ರೋಲಿಯಂ ಆಧಾರಿತ ಇಂಧನಗಳನ್ನ ಉರಿಸಿದಾಗ ಹೊರ ಬರುವ ಹೊಗೆ ಮುಂತಾದುವುಗಳೂ ಆಮ್ಲ ಮಳೆಗೆ ಕಾರಣವಾಗಿವೆ. ಆಮ್ಲ ಮಳೆಯ ಪರಿಣಾಮವಾಗಿ ಶಿಲೆಗಳು ಕರಗುತ್ತವೆ. ಕಾಡಿನ ಮರಗಳ ಎಲೆ ಉದುರತ್ತವೆ. ಆ ನೀರು ಎಲೆಯ ಮೇಲೆ ಬಿದ್ದಾಗ ಜೀವ ಕೋಶಗಳು ನಾಶವಾಗುತ್ತವೆ. ಜಲಚರಗಳ ಮೇಲೆ ಪರಿಣಾಮ ಬೀರುವ ಆಮ್ಲ ಮಳೆಯ ಭೂಮಿಯ ಫಲವತ್ತತೆಯನ್ನು ನಾಶ ಮಾಡುತ್ತದೆ. ಕೆಲವು ಲೋಹಗಳು ತುಕ್ಕು ಹಿಡಿಯುತ್ತವೆ. ತಾಜ್‌ಮಹಾಲ್‌ನ ಅಮೃತ ಶಿಲೆಯ ಬಿಳುಪು ಮಾಯವಾಗುತ್ತಿದೆ. ವರ್ಣ ಚಿತ್ರ, ಗಾಜು, ಆಭರಣಗಳು ತಮ್ಮ ಹೊಳಪಿನ ಗುಣವನ್ನು ಕಳೆದುಕೊಂಡು ಮಸುಕಾಗುತ್ತವೆ. (ಇದನ್ನು ಶಿಲಾ ಅರ್ಬುದ ಆಥವ ಶಿಲಾಕುಷ್ಟ ಎಂದು ಕರೆಯುತ್ತಾರೆ.) ಒಂದು ದೇಶದಲ್ಲಿ ವಿಸರ್ಜಿತವಾಗುವ ತ್ಯಾಜ್ಯದ ಪರಿಣಾಮಗಳು ಮತ್ತೊಂದು ರಾಷ್ಟ್ರದ ಮೇಲೆ ಆಮ್ಲ ಮಳೆಯಾಗಿ ಸುರಿಯುತ್ತವೆ. ಉದಾಹರಣೆಗೆ ಕೈಗಾರಿಕೆಗಳು ಹಾಗೂ ವಾಹನಗಳ ಉಗುಳುವಿಕೆಯಿಂದ ವಾಯು ಮಂಡಲ ಸೇರುವ ಗಂಧಕ ಹಾಗೂ ಇಂಗಾಲದ ಡೈ ಆಕ್ಸೆಡ್‌ಗಳು ನೆರೆಯ ರಾಷ್ಟ್ರದ ಮೇಲೆ ಆಮ್ಲ ಮಳೆಯಾಗಿ ಸುರಿಯಬಹುದು. ಹೀಗೆ ಆಮ್ಲ ಮಳೆಯ ದುಷ್ಟಪರಿಣಾಮಗಳು ರಾಷ್ಟ್ರೀಯ ಗಡಿಯನ್ನು ಮೀರುವಂಥದ್ದು.

ಆಮ್ಲ ಮಳೆಯನ್ನು ನಿಯಂತ್ರಿಸಬೇಕಾದರೆ, ಸಾರ್ವಜನಿಕರಲ್ಲಿ ಪರಿಸರ ಕಾಳಜಿ ಮತ್ತು ಜಾಗೃತಿ ಮೂಡಬೇಕು ಜಗತ್ತಿನ ಎಲ್ಲಾ ರಾಷ್ಟ್ರಗಳು ಕಾರ್ಯ ಪ್ರವೃತ್ತರಾಗಬೇಕಾಗಿದೆ. ಆಮ್ಲ ಮಳೆಗೆ ಕಾರಣವಾಗುವ ಅನಿಲಗಳು ಹೊರಸೂಸುವುದನ್ನು ನಿಯಂತ್ರಿಸಿ, ಮಾಲಿನ್ಯ ಕಡಿಮೆ ಮಾಡುವಂತಾಹ ಇಂದನಗಳನ್ನು ಬಳಸಬೇಕು ಬಹಳ ಮುಖ್ಯವಾಗಿ ಪರ್ಯಾಯ ಇಂಧನ ಮೂಲಗಳಾದ ಜೈವಿಕ, ಡೀಜಿಲ್, ಸೌರಶಕ್ತಿ ಆಣು ಶಕ್ತಿಯ ಬಳಕೆಯ ಕಡೆಗೆ ವಿಶೇಷ ಮಹತ್ವ ನೀಡಬೇಕಾಗಿದೆ.

ಜೀವ ವೈವಿಧ್ಯತೆ (Biodiversity)

ಮಾನವ ಸೇರಿದಂತೆ ಎಲ್ಲಾ ಬಗೆಯ ವಿವಿಧ ಜೀವ ಸಂಕುಲಗಳಿಗೂ ಅವಶ್ಯಕ ಪರಿಸರವನ್ನು ಒದಗಿಸವುದು ಭೂಮಿ ಮಾತ್ರವಾಗಿದೆ. ಈ ಭೂಮಿಯು ರಚಿತವಾಗಿ 460 ಕೋಟಿ ವರ್ಷಗಳಾಗಿದ್ದು, ಇದರ ಮೇಲೆ ಜೀವ ವಿಕಸನವು ಹಂತ ಹಂತವಾಗಿ ಆಗುತ್ತಲೇ ಬಂದಿದೆ.

ಕಣ್ಣಿಗೆ ಕಾಣದಂತಹ ಸೂಕ್ಷ್ಮ ಜೀವಿಗಳಿಂದ ಹಿಡಿದು, ಗಾಳಿಯಲ್ಲಿ ಹಾರಾಡುವ ಚಿಟ್ಟ ಶಕ್ತಿಗಳು ನೀರಿನಲ್ಲಿರುವ ಮೀನು ತಿಮಿಂಗಲ, ಭೂಮಿಯ ದೊಡ್ಡ ದೊಡ್ಡ ಡೈನೋಸಾರ್‌ಗಳು ಬದುಕುವಂಥ ವಾಯು, ನೀರು ಹಾಗೂ ಉಷ್ಣಾಂಶಗಳು ದೊರಕುವುದೇ ಭೂಮಿಯಲ್ಲಿ ಈ ಭೂಮಿಯ ಎಲ್ಲಾ ಜೀವಿಗಳು ತಮ್ಮ ವಿಶಿಷ್ಟತೆಯನ್ನು ಮಿಲಿಯಾಂತರ ವರ್ಷಳಿಂದ ರಕ್ಷಿಸಿಕೊಂಡು ಬರಲು ಪ್ರಕೃತಿ ಸಹಾಯ ಮಾಡಿದೆ. ಹೀಗೆ ಪೃಥ್ವಿಯ ಮೇಲಿರುವ ಎಲ್ಲ ರೀತಿಯ ವೈವಿಧ್ಯಮಯ ಜೀವ ರಾಶಿಯನ್ನು ಜೀವ ವೈವಿಧ್ಯತೆ ಎನ್ನಲಾಗುತ್ತದೆ. ಜೀವಿಗಳು ಅಸ್ತಿತ್ವಕ್ಕೆ ಬರುವ ಮುನ್ನ ಪೃಥ್ವಿಯು ಮಿಥೇನ್, ಆಮೋನಿಯಾ, ಜಲಜನಕ, ಸಲೇಟ್ ಹಾಗೂ ನೀರಾವಿಯಂಥ ಅನಿಲಗಳ ತೆಳುವಾದ ಪಟ್ಟಿಯನ್ನೊಂದಿದ ಬರಡಾದ ಶಿಲೆಗಳಿಂದ ಕೂಡಿತ್ತು. ಈ ಅಜೈವಿಕ ಭೂಮಂಡಲದ ಮೇಲೆ ಮೇಲೆ ಸೂರ್ಯನ ಶಕ್ತಿ ಅವಿರತವಾಗಿ ಹರಿಯುತ್ತಿದ್ದರಿಂದ ಲಕ್ಷಾಂತರ ವರ್ಷಗಳ ರಾಸಾಯನಿಕ ಮತ್ತು ಭೌತಿಕ ಕ್ರಿಯೆಗಳಿಂದಾಗಿ ಜೀವಿಗಳು ಬೆಳೆಯುವ ಸೂಚನೆಗಳು ಕಾಣಿಸಿಕೊಂಡಿತು. ಕಾಲಾಂತರಗಳಲ್ಲಿ ಜೀವ ಮಂಡಲ ಬೆಳೆಯುತು. ಈ ಬದಲಾವಣೆ ಪ್ರಕ್ರಿಯೆಯೇ ಜೈವಿಕ ವಿಕಾಸ ಎನ್ನಲಾಗಿದೆ

ಆದರೆ ಮಾನವನ ಚಟುವಟಿಕೆಗಳು, ಏರುತ್ತಿರುವ ಜನಸಂಖ್ಯೆ ನಗರೀಕರಣ ಕೈಗಾರೀಕರಣ ರಾಸಾಯನಿಕ ಬಳಕೆಯಿಂದಾಗಿ ಜೀವ ವೈವಿಧ್ಯತೆಗೆ ಧಕ್ಕೆ ಉಂಟಾಗುತ್ತದೆ. ಜೈವಿಕ ವೈವಿಧ್ಯಗಳ ನಾಶವೆಂಬುದು ಬಹು ಗಂಭೀರವಾದ ಪರಿಸರದ ಸಮಸ್ಯೆಯಾಗಿದೆ. ಇದರ ಬಗ್ಗೆ ತುರ್ತು ಗಮನ ಹರಿಸಬೇಕಾದ ಅವಶ್ಯಕತೆಯಿದೆ. ವೈವಿಧ್ಯಮಯ ಆಹಾರ, ರೋಗನಿವಾರಕ ಗುಣಗಳುಳ್ಳ ಸಸ್ಯ ಮತ್ತು ಪ್ರಾಣಿಗಳ ಪೂರೈಕೆ ಹಾಗೂ ಪ್ರಕೃತಿಯ ಸೌಂದರವನ್ನು ಕಾಪಾಡಲು ಜೀವ ವೈವಿಧ್ಯತೆಯನ್ನು ರಕ್ಷಿಸಬೇಕಾಗಿದೆ. ಜೀವಿಯ ಸಂತತಿ ನಶಿಸಿ ಹೋದರೆ ಅದರ ಪುನರ್‌ಸೃಷ್ಟಿ ಅಸಾಧ್ಯ ಎಂಬುದನ್ನು ಎಲ್ಲಾ ರಾಷ್ಟ್ರಗಳು ಅರ್ಥ ಮಾಡಿಕೊಳ್ಳಬೇಕಾಗಿದೆ.
Post a Comment (0)
Previous Post Next Post