ಪರಿಸರ ಮಾಲಿನ್ಯಕ್ಕೆ ಪ್ರಮುಖ ಕಾರಣಗಳು (Causes of Environment Pollution): ಪರಿಸರ ಮಾಲಿನ್ಯವು ಆಧುನಿಕ ಜಗತ್ತಿನ ಪ್ರಮುಖ ಸವಾಲಾಗಿದ್ದು, ಭವಿಷ್ಯದ ಬದುಕನ್ನು ವಿನಾಶದತ್ತ ಕೊಂಡೊಯ್ಯುವ ಅಪಾಯದ ಸ್ಥಿತಿಯಾಗಿದೆ. ಮನುಷ್ಯ ಮತ್ತು ಮಾನವ ಕೇಂದ್ರಿತ ಚಟುವಟಿಕೆಗಳೇ ಪರಿಸರವನ್ನು ಹಾಳು ಮಾಡುತ್ತವೆ. ಪರಿಸರದ ಮೇಲೆ ನಡೆಯುತ್ತಿರುವ ನಿರಂತರವಾದ ದಾಳಿ, ಆಕ್ರಮಣ ಮತ್ತು ಪಾಪಗಳ ಪರಂಪರೆಗೆ ಸಂಪೂರ್ಣವಾಗಿ ಮಾನವನೇ ಹೊಣೆಗಾರನಾಗಿದ್ದಾನೆ.
1. ಜನಸಂಖ್ಯಾ ಸ್ಫೋಟ ಮತ್ತು ಅನುಭೋಗವಾಗದ (Consumerism)
2. ನಗರ ಜನಸಾಂದ್ರತೆ ಮತ್ತು ಅವೈಜ್ಞಾನಿಕ ನಗರೀಕರಣ
3. ನಗರ ಯೋಜನೆ ಇಲ್ಲದಿರುವಿಕೆ ಮತ್ತೆ ಅವೈಜ್ಞಾನಿಕ ನಿರ್ವಹಣಾ ಕ್ರಮಗಳು
4. ಅಜ್ಞಾನ ಮತ್ತು ಮಾನವನ ದುರಾಸೆ,
5. ಒಳ ಚರಂಡಿಯ ಹೊಲಸು, ತ್ಯಾಜ್ಯ ಮಾರ್ಜಕಗಳು ಮತ್ತು ಮೃತ ದೇಹಗಳ ದಹನ.
6. ಔಷಧಿಗಳು, ಕ್ರಿಮಿನಾಶಕಗಳು ಮತ್ತು ರಾಸಾಯನಿಕ ಗೊಬ್ಬರಗಳ ಬಳಕೆ,
7. ಕಾರ್ಖಾನೆ ಮತ್ತು ವಾಹನಗಳಿಂದ ಹೊರಬರುವ ದಟ್ಟವಾದ ಹೊಗೆ ಹಾಗೂ ರಾಸಾಯನಿಕಗಳು.
8. ಅರಣ್ಯ ನಾಶ ಮತ್ತು ಮಣ್ಣಿನ ಸವೆತ
9. ಜೈವಿಕ ಮಾಲಿನ್ಯ
10. ವಿಕಿರಣ ಪದಾರ್ಥಗಳು
II. ವಿವೇಚನಾ ರಹಿತ ಕಾನೂನು ಮತ್ತು ಶಾಸನಗಳ ದುರ್ಬಲತೆ,
12. ಸಾರ್ವಜನಿಕರಲ್ಲಿ ಪರಿಸರ ಪ್ರಜ್ಞೆಯ ಕೊರತೆ ಮತ್ತು ಮಾಲಿನ್ಯದ ದುಷ್ಪರಿಣಾಮಗಳ ಬಗ್ಗೆ ಅರಿವಿಲ್ಲದಿರುವಿಕೆ,
13. ಪ್ರಬಲ ಇಚ್ಛಾಶಕ್ತಿ ಇಲ್ಲದ ಭ್ರಷ್ಟ-ಅಪರಾಧಿ ರಾಜಕಾರಣಿಗಳು, ಅಧಿಕಾರಿಗಳು ಮತ್ತು ದುರ್ಬಲ ಪರಿಸರ ಮಾಲಿನ್ಯದ ದುಷ್ಪರಿಣಾಮಗಳು: (Evil effects of Environment pollution)
ಪರಿಸರ ಮಾಲಿನ್ಯದ ದುಷ್ಪರಿಣಾಮಗಳು: (Evil effects of Environment pollution) ಪರಿಸರ ಮಾಲಿನ್ಯವು ಇಂದು ಜಾಗತಿಕ ಸಮಸ್ಯೆಯಾಗಿದೆ. ಯಾವುದೇ ಒಂದು ಪ್ರದೇಶದ ಪರಿಸರದ ಬದಲಾವಣೆಯು ವಿಶ್ವದಾದ್ಯಂತ ಪರಿಣಾಮವನ್ನು ಬೀರುವುದು,
1. * ಮಾಲಿನ್ಯವು ಮಾನವನ ಸಮಾಜ ಮತ್ತು ಸಮಸ್ತ ಜೀವ ಜಗತ್ತಿನ ಮೇಲೆ ದುಷ್ಪರಿಣಾಮಗಳನ್ನುಂಟು ಮಾಡುವುದು. ಪರಿಸರ ಮಾಲಿನ್ಯದ ವಿವಿಧ ಕರಾಳ ಮುಖದಿಂದ ಪಾಣಿ ಜಗತ್ತು ಹಾಗೂ ಸಸ್ಯ ಜಗತ್ತುಗಳು ತಮ್ಮ ಸಹಜ ಸಮತೋಲನವನ್ನು ಕಳೆದುಕೊಳ್ಳುತ್ತವೆ.
2. ಕೈಗಾರಿಕೆಗಳು ಮತ್ತು ವಾಹನಗಳಿಂದ ಹೊರ ಬರುವ ಹೊಗೆಯು ಇಂಗಾಲದ ಡಯಾಕ್ಸೆಡ್, ಮೊನಾಕ್ಸೆಡ್, ಸಾರಜನಕದ ಆಕ್ಸೆಡ್, ಜಲಜನಕ, ಇಂಗಾಲದ ಸಂಯುಕ್ತಗಳು ಮುಂತಾದವು ಮಾನವನ ಆರೋಗ್ಯವನ್ನು ಹಾಳು ಮಾಡಿ ಕ್ಷಯ, ಅಸ್ತಮಾ, ರಕ್ತಹೀನತೆ, ಕಣ್ಣಿನ ಸಮಸ್ಯೆಗಳು, ಕ್ಯಾನ್ಸರ್, ಚರ್ಮರೋಗ ಇತ್ಯಾದಿ ಕಾಯಿಲೆಗಳ ಹೆಚ್ಚಿಸುತ್ತದೆ.
3. ವಿಶ್ವದ ಉಷ್ಣಾಂಶದ ಹೆಚ್ಚಳ ಮತ್ತು ಆಮೀಯ ಮಳೆಯಿಂದ ಅರಣ್ಯ ಸಂಪತ್ತು ಐತಿಹಾಸಿಕ ಸ್ಮಾರಕಗಳು,
ಕಟ್ಟಡಗಳು ವಿರೂಪಗೊಳ್ಳುತ್ತವೆ. ಹವಾಮಾನ ವ್ಯತ್ಯಯದಿಂದಾಗಿ ಅನಾವೃಷ್ಟಿ ಹಾಗೂ ಶೀತಮಾರುತಗಳು ಬೇಸಬಹುದು.
4. ಪರಿಸರ ಮಾಲಿನ್ಯದ ಕೆಟ್ಟ ಪರಿಣಾಮಗಳು ಪ್ರಸ್ತುತ ಮತ್ತು ಭವಿಷ್ಯದ ತಲೆಮಾರುಗಳ ಮೇಲೆ ವ್ಯತಿರಿಕ್ತ ಪ್ರಭಾವ ಬೀರಿ ಮನೋ ದೈಹಿಕ ವಿಕಲತೆ ಹಾಗೂ ಗುಣಪಡಿಸಲಾಗದ ಕಾಯಿಲೆಗಳನ್ನು ತಂದೊಡ್ಡುವುದು.
5. ಕಸದ ರಾಶಿ, ಕೊಳಚೆ ನೀರು ಮತ್ತು ತ್ಯಾಜ್ಯ ವಸ್ತುಗಳಿಂದ ಸಾಂಕ್ರಾಮಿಕ ರೋಗಗಳು ನೀರು ಮತ್ತು ಗಾಳಿಯ ಮೂಲಕ ವೇಗವಾಗಿ ಹರಡುತ್ತವೆ;
6, ಪರಿಸರ ಮಾಲಿನ್ಯದಿಂದ ಓಜೋನ್ ಪದರು ಘಾಸಿಗೊಂಡಿದೆ. ತೀಕ್ಷವಾದ ಅತಿ ನೇರಳೆ ಕಿರಣಗಳು ಭೂಮಿಗೆ ನೇರವಾಗಿ ತಲುಪುವುದರಿಂದ ಜೀವ ಸಂಕುಲಕ್ಕೆ ಹಾನಿಯುಂಟಾಗುತ್ತಿದೆ.
7. ಪ್ರಕೃತಿಯ ಸಹಜ ಸೃಷ್ಟಿಯಾದ ಹಳ್ಳ-ಕೊಳ್ಳ, ನದಿ ಮತ್ತು ಹರಿಯುವ ನೀರು ದೋಷಯುಕ್ತವಾಗಿ ಅಲ್ಲಿನ
ಜಲಚರಗಳು ನಾಶದತ್ತ ಸಾಗುತ್ತವೆ.
8. ಸಮುದ್ರದಲ್ಲಿ ತೈಲ ಸೋರುವಿಕೆಯಿಂದ ಜಲಚರ ಸಸ್ಯಗಳು, ಪಾಣಿಗಳು ಸಾವನ್ನಪುತ್ತವೆ. ಪ್ರತಿ ವರ್ಷ ತೈಲ ಮಾಲಿನ್ಯದಿಂದ ಸುಮಾರು 50,000 ದಿಂದ 2,50,000ಕ್ಕೂ ಹೆಚ್ಚು ಪಕ್ಷಿಗಳು ಸಾವನ್ನಪ್ಪುತ್ತವೆ ಎಂದು ಅ೦ದಾಜು ಮಾಡಲಾಗಿದೆ.
9. ಡಿಡಿಟಿಯಂತಹ ವಿಷಪೂರಿತ ಕೀಟನಾಶಕಗಳ ಸಿಂಪರಣೆಯಿಂದ ನರವ್ಯೂಹಕ್ಕೆ ತೀವ್ರತರವಾದ ಪರಿಣಾಮ ಉಂಟಾಗುತ್ತದೆ.
10. ಅಣು ವಿಕಿರಣಗಳ ಪರಿಣಾಮಗಳು ಹಲವು ತಲೆಮಾರುಗಳವರೆಗೂ ಮುಂದುವರೆಯುತ್ತವೆ.