ಪರಿಸರ ಸಂರಕ್ಷಣೆ ಮತ್ತು ಮಾಲಿನ್ಯ ನಿಯಂತ್ರಣ ಕ್ರಮಗಳು (Environment protection and measures to control environment pollution):

ಪರಿಸರ ಸಂರಕ್ಷಣೆ ಎಲ್ಲಾ ಸಮಾಜಗಳ ಹಾಗೂ ವ್ಯಕ್ತಿಗಳ ಸಾಮೂಹಿಕ ಜವಾಬ್ದಾರಿಯಾಗಿದೆ. ಪರಿಸರ

ಮಾಲಿನ್ಯದಿಂದ ಆಗುತ್ತಿರುವ ಅನಾಹುತವನ್ನು ಮನಗಂಡ ಭಾರತ ಸಂವಿಧಾನ, ಕೇಂದ್ರ ಸರ್ಕಾರವು ಹಲವು

ಕ್ರಮಗಳನ್ನು ಕೈಗೊಂಡಿದೆ.

1. ಪರಿಸರ ಮತ್ತು ಭಾರತ ಸಂವಿಧಾನ : ಪರಿಸರಿ ಸಂಕ್ಷಣೆಯು ಸಂವಿಧಾನದ ಆಶಯ ಮತ್ತು ದೇಶದ ಆದ್ಯ ಕರ್ತವ್ಯವಾಗಿದೆ. ಸಂವಿಧಾನದ 21ನೇ ವಿಧಿಯ ಜೀವಿಸುವ ಹಕ್ಕು ಎಂಬುದನ್ನು ಸರ್ವೋಚ್ಛ ನ್ಯಾಯಾಲಯವು ಪರಿಸರದ ಪ್ರತಿಯೊಂದು ಜೀವಿಗಳಿಗೂ ಅನ್ವಯವಾಗುತ್ತದೆ ಎಂಬುದನ್ನು ತೀರ್ಪು ನೀಡಿದೆ.

ಸಂವಿಧಾನದ ವಿಧಿ 48(ಎ) ವಿಧಿಯು ರಾಜ್ಯಗಳಿಗೆ ಪರಿಸರ ರಕ್ಷಣೆಗೆ ನಿರ್ದೇಶನವನ್ನು ನೀಡಿದೆ. ರಾಜ್ಯವು

ದೇಶದ ಅರಣ್ಯಗಳು ಮತ್ತು ವನ್ಯಜೀವಿಗಳ ರಕ್ಷಣೆಯನ್ನು ಮಾಡುವುದಲ್ಲದೇ ಪರಿಸರವನ್ನು ಸಂರಕ್ಷಿಸಿ ಸುಧಾರಿಸಲು

ಕಟಿಬದ್ಧವಾಗಬೇಕು. ಸಂವಿಧಾನದ ವಿಧಿ 51ನೇ (ಎ) ಮತ್ತು (ಬಿ) ಪ್ರಕಾರ:- ನೈಸರ್ಗಿಕ ಸಂಪನ್ಮೂಲಗಳಾದ

ಆರಣ್ಯಗಳು, ಕೆರೆಗಳು, ನದಿಗಳು ಹಾಗೂ ವನ್ಯ ಜೀವಿಗಳನ್ನು ರಕ್ಷಿಸಿ ಸುಧಾರಿಸುವುದು ಹಾಗೂ ಅನುಕಂಪವನ್ನು ಹೊಂದದೆ.

 ಪರಿಸರ ಸಂರಕ್ಷಣೆಗಾಗಿ ಕೈಗೊಂಡಿರುವ ಶಾಸನಾತ್ಮಕ ಕ್ರಮಗಳು (Legislative measures to protect environment):

1. 1948ರ ಕಾರ್ಖಾನೆಗಳ ಕಾಯ್ದೆಯ ಪ್ರಕಾರ ಯಾವುದೇ ಕಾರ್ಖಾನೆಗಳನ್ನು ಸ್ಥಾಪಿಸಲು ವಿಸ್ತರಿಸಲು ಮಂಜೂರಾತಿ ಸಮಿತಿಗಳ ಅನುಮೋದನೆಯನ್ನು ಪಡೆಯುವುದು ಕಡ್ಡಾಯವಾಗಿರುತ್ತದೆ. ಕೈಗಾರಿಕೆಗಳಿಗೆ ನಿರ್ದೇಶನ ನೀಡುವ ಈ ಕಾಯ್ದೆಯಿಂದ ಕಾರ್ಖಾನೆಗಳು ಹೊರ ಬಿಡಬಹುದಾದ ರಾಸಾಯನಿಕ ವಸ್ತುಗಳ ಬಗ್ಗೆ ಸಂಪೂರ್ಣ ಮಾಹಿತಿ ದೊರೆಯುತ್ತದೆ.

2.

1962ರ ಅಣುಶಕ್ತಿ ಕಾಯ್ದೆ ಪ್ರಕಾರ : ಅಣುಶಕ್ತಿಗೆ ಸಂಬಂಧಿಸಿದ ಪ್ರತಿಯೊಂದು ವಿಷಯವು ನೇರವಾಗಿ

ಕೇಂದ್ರ ಸರ್ಕಾರದ ಅಧೀನಕ್ಕೊಳಪಟ್ಟಿದೆ. ಈ ಕಾಯ್ದೆಯು ಅಣುಶಕ್ತಿಗೆ ಸಂಬಂಧಿಸಿದ ವಿಷಯಗಳನ್ನು

ನಿಯಂತ್ರಿಸಿ ನಿರ್ದೇಶಿಸುತ್ತದೆ.

3. 1972 ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯು ವನ್ಯಪ್ರಾಣಿಗಳಿಗೆ ಮತ್ತು ಪಕ್ಷಿಗಳಿಗೆ ಸಂಪೂರ್ಣ ರಕ್ಷಣೆ ಒದಗಿಸುತ್ತದೆ. ಈ ಕಾಯ್ದೆಯ ನಿರ್ದೇಶನದಂತೆ ಪ್ರತಿಯೊಂದು ರಾಜ್ಯ ಸರ್ಕಾರ ಹಾಗೂ ಕೇಂದ್ರಾಡಳಿತ ಪ್ರದೇಶನಗಳು ವನ್ಯಜೀವಿ ಸಲಹಾ ಮಂಡಳಿಯನ್ನು ರಚಿಸಬೇಕು. ಈ ಕಾಯ್ದೆಯು ವನ್ಯಜೀವಿಗಳ ಬೇಟೆಯನ್ನು ಪ್ರತಿಬಂಧಿಸುತ್ತದೆ. ನಿಯಮವನ್ನು ಉಲ್ಲಂಘಿಸಿದವರಿಗೆ ಶಿಕ್ಷೆಯನ್ನು ವಿಧಿಸುವುದು.

4. ಜಲಮಾಲಿನ್ಯ ತಡೆ ಮತ್ತು ನಿಯಂತ್ರಣ ಕಾಯ್ದೆ (1974) (Control & prevention of Water) ಯನ್ನು ಜಾರಿಗೊಳಿಸಿ ಜಲಮಾಲಿನ್ಯಕ್ಕೆ ಕಾನೂನಿನ ನಿಷೇಧ ಹೇರಲಾಗಿದೆ. 198] ರ ವಾಯುಮಾಲಿನ್ಯ ತಡೆ ಮತ್ತು ನಿಯಂತ್ರಣ ಕಾಯ್ದೆಯ (Control & prevention of air pollution) ಮೂಲಕ ವಾಯುಮಾಲಿನ್ಯಕ್ಕೆ ತಡೆ ಹಾಕಲಾಗಿದೆ.

5. 1986 ರ ಪರಿಸರ ಸಂರಕ್ಷಣಾ ಕಾಯ್ದೆ (The Environment protection Act 1986) : ಈ ಕಾಯ್ದೆಯು ಪರಿಸರವನ್ನು ರಕ್ಷಿಸುವ ಮತ್ತು ಸುಧಾರಿಸುವ ಗುರಿಯನ್ನು ಹೊಂದಿದೆ. ರಾಷ್ಟ್ರವ್ಯಾಪಿ ಕಾರ್ಯಕ್ರಮವನ್ನು ಯೋಜಿಸಿ ಅನುಷ್ಠಾನಗೊಳಿಸುತ್ತದೆ ಹಾಗೂ ಪರಿಸರ ಮಾಲಿನ್ಯಕ್ಕೆ ಸಂಬಂಧಿಸಿದ ಸಂಶೋಧನೆಗಳನ್ನು ಪ್ರೋತ್ಸಾಹಿಸುವುದು.

6. 1988 ರ ಮೋಟಾರು ವಾಹನ ಕಾಯಿದೆಯು (Motor vehicle Act 1988) ಮೋಟಾರು ವಾಹನಗಳ ಸಂಚಾರದಿಂದ ಉಂಟಾಗುವ ವಾಯುಮಾಲಿನ್ಯಕ್ಕೆ ನಿಯಂತ್ರಣ ಹೇರುತ್ತದೆ.

7. 1989 ರ ಶಬ್ದಮಾಲಿನ್ಯ ಕಾಯ್ದೆ (The Noise pollutionAct 1989) : ಈ ಕಾಯ್ದೆಯು ಶಬ್ದಗಳ ಪ್ರಮಾಣಗಳ ಮೇಲೆ ನಿಯಂತ್ರಣ ಹೇರುತ್ತದೆ. ವಸತಿ ಪ್ರದೇಶ, ಶಾಲೆ-ಕಾಲೇಜು, ಆಸ್ಪತ್ರೆ, ನ್ಯಾಯಾಲಯ ಮುಂತಾದ ಪ್ರದೇಶಗಳನ್ನು ಶಾಂತಿ ವಲಯ (Silent Zone) ಎಂದು ಘೋಷಿಸಿ ಇಂತಹ ಪ್ರದೇಶಗಳಲ್ಲಿ ಅತಿಯಾದ ಶಬ್ದ, ಧ್ವನಿವರ್ಧಕಗಳು ಮತ್ತು ಪಟಾಕಿಗಳನ್ನು ಸಿಡಿಸುವುದನ್ನು ಪ್ರತಿಬಂಧಿಸುತ್ತದೆ.

& 1991 ರ ಸಾರ್ವಜನಿಕ ಹೊಣೆಗಾರಿಕಾ ಭದ್ರತೆ ಕಾಯ್ದೆ ಪ್ರಕಾರ : ಭಾರತ ಸರ್ಕಾರವು 1991 ರಲ್ಲಿ ಈ ಕಾಯ್ದೆಯನ್ನು ಜಾರಿಗೆ ತಂದಿದೆ. ಈ ಕಾಯ್ದೆಯು ಪರಿಸರ ಪರಿಹಾರ ನಿಧಿಯನ್ನು ಸ್ಥಾಪಿಸಲು ಸೂಚಿಸಿ, ಸಾರ್ವಜನಿಕರಿಗೆ ಭದ್ರತೆ ಒದಗಿಸಿದೆ ಹಾಗೂ ತಪ್ಪಿತಸ್ಥರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಅವಕಾಶ ಕಲ್ಪಿಸಿದೆ.

9. ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗಳು (State pollution control Boards) ರಾಜ್ಯಮಟ್ಟದಲ್ಲಿ ಕ್ರಿಯಾಶೀಲವಾಗಿದ್ದು, ರಾಷ್ಟ್ರಮಟ್ಟದ ಕೇಂದ್ರಿಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ (Central pollution control Board) ಸಹಯೋಗದೊಂದಿಗೆ ಪರಿಸರ ಸಂರಕ್ಷಣೆಯ ಕಾರ್ಯದಲ್ಲಿ ತೊಡಗಿದೆ. ಪರಿಸರ ಇಲಾಖೆಯು ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಅನೇಕ ಕಾರ್ಯಗಳನ್ನು ಹಾಗೂ ಯೋಜನೆಗಳನ್ನು ಸಮನ್ವಯಗೊಳಿಸುತ್ತದೆ.
Post a Comment (0)
Previous Post Next Post