ಪರಿಸರ ಮಾಲಿನ್ಯವನ್ನು ತಡೆಗಟ್ಟುವಲ್ಲಿ ವ್ಯಕ್ತಿ ಮತ್ತು ಸಮಾಜದ ಪಾತ್ರ Role of Individual & society in Enviornment protection

 ಪರಿಸರ ಮಾಲಿನ್ಯವೆಂಬುದು ಆಧುನಿಕ ಕೈಗಾರಿಕಾ ಸಮಾಜಗಳಲ್ಲಿ ಕಂಡು ಬರುವ ಜಾಗತಿಕ ಸಮಸ್ಯೆಯಾಗಿದೆ.

ಇದರ ನಿವಾರಣೆ ಮತ್ತು ಸಂರಕ್ಷಣೆಯು ಎಲ್ಲಾ ಆಧುನಿಕ ಸರ್ಕಾರಗಳ ಮತ್ತು ಪಜ್ಞಾವಂತ ನಾಗರಿಕರ ಕರ್ತವ್ಯವಾಗಿದೆ.

1 ಪರಿಸರ ಸಂರಕ್ಷಣೆಗೆ ಪೂರಕವಾದ ರಾಷ್ಟ್ರೀಯ ಕೈಗಾರಿಕಾ ನೀತಿ ಮತ್ತು ಪರಿಸರ ನೀತಿಯನ್ನು ರೂಪಿಸುವುದು.

2. ನಗರ ಯೋಜನೆಯ ಮೂಲಕ ಅವೈಜ್ಞಾನಿಕ ಮತ್ತು ಅನಿಯಂತ್ರಿತ ನಗರೀಕರಣವನ್ನು ನಿಯಂತ್ರಿಸಬೇಕು. 3, ಕಾರ್ಖಾನೆಗಳು ಮತ್ತು ಗೃಹ ಬಳಕೆಯಿಂದ ಚರಂಡಿಗಳ ಮೂಲಕ ಬರುವ ಕೊಳಚೆ ನೀರನ್ನು ಸಂಸ್ಕರಿಸಿ

ನದಿ-ಸಮುದ್ರಕ್ಕೆ ಬಿಡುವುದು. 4. ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಬೇಕು ಮತ್ತು ನಿರವಯವ ತ್ಯಾಜ್ಯ ವಸ್ತುಗಳನ್ನು ದೂರ ಸಾಗಿಸಿ ಸಂಸ್ಕರಣಗೊಳಿಸಿದ ನಂತರ ಮುನರ್‌ ಬಳಕೆಗೆ ಸಾಧ್ಯವಾಗುವಂತೆ ಮಾಡುವುದು.

ಸಾರ್ವಜನಿಕರಿಗೆ ಅನುಕೂಲವಾಗುವಂತೆ ಒಣ ಕಸ ಮತ್ತು ಹಸಿ ಕಸಕ್ಕೆ ಪ್ರತ್ಯೇಕ ನಿರ್ಮಿಸುವುದು.

ಕಸದ ತೊಟ್ಟಿಗಳನ್ನು

6. ಪರಿಸರ ರಕ್ಷಣೆಯೆಂಬುದು ಸಾರ್ವಜನಿಕ ಜಾಗೃತಿ ಅಭಿಯಾನವಾಗಬೇಕು. 

7.ದೇಶದ ರಾಜಕಾರಣಿಗಳು, ನೌಕರಶಾಹಿ ಅಧಿಕಾರಿಗಳ ವರ್ಗ ಮತ್ತು ಎಲ್ಲಾ ಪಜೆಗಳು ಪರಿಸರ ಸಂರಕ್ಷಣೆಯೆಂದು ನಮ್ಮೆಲ್ಲರ ಆದ್ಯ ಕರ್ತವ್ಯ ಹೊಣೆಗಾರಿಕೆ ಹಾಗೂ ಮುಂದಿನ ತಲೆಮಾರಿಗೆ ನೀಡಬೇಕಾದ ಬಳುವಳಿ
ಎಂಬುದನ್ನು ಮನಗಾಣಬೇಕು.
8.ಯಶಸ್ವಿಯಾಗುವಂತೆ ನೋಡಿಕೊಳ್ಳುವುದು
9.ಪರಿಸರ ಸಂರಕ್ಷಣೆಯ ಸಂಶೋಧನೆಗಳಿಗೆ ಪ್ರೋತ್ಸಾಹ ನೀಡಿ ಅಗತ್ಯವಿರುವ ಹಣಕಾಸಿನ ನೆರವು ನೀಡುವುದು, ಪರಿಸರ ಮಾಲಿನ್ಯವನ್ನು ನಿಯಂತ್ರಿಸುವ ಎಲ್ಲಾ ಕಾರ್ಯ ಯೋಜನೆಗಳು ನಿಗದಿತ ಕಾಲಾವಧಿಯೊಳಗು

10. ಶೌಚಾಲಯಗಳ ಬಳಕೆಯನ್ನು ಕಡ್ಡಾಯಗೊಳಿಸಬೇಕು.


11. ಮಾನವನು ಬಳಸುವ ಔಷಧಿಗಳು, ಕೃಷಿಯಲ್ಲಿ ಬಳಸುವ ಕೀಟನಾಶಕ ಮತ್ತು ಕ್ರಿಮಿನಾಶಕಗಳ, ಪಾರ್ಶ್ವ ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. 12. ಸಾವಯವ ಕೃಷಿಯನ್ನು ಉತ್ತೇಜಿಸುವುದು,

ಭಾರತದ ಪರಿಸರ ಸಂರಕ್ಷಣೆಯಲ್ಲಿ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳೆರಡು ಮಹತ್ತರವಾದ ಪಾತ್ರವನ್ನು ವಹಿಸಿವೆ. ಭಾರತ ಮಾಡಿದ ಮನವಿಯಿಂದ 1969ರಲ್ಲಿ ಪ್ರಕೃತಿಯ ರಕ್ಷಣೆಯ ಸಲುವಾಗಿ ಜಾಗತಿಕ ನಿಧಿ ಅನುಷ್ಠಾನಗೊಂಡಿದೆ. 1980ರಲ್ಲಿ ಪರಿಸರ ಇಲಾಖೆ, 1985ರಲ್ಲಿ ಪರಿಸರ, ಅರಣ್ಯ ಮತ್ತು ವನ್ಯಜೀವಿ ಇಲಾಖೆಯು ಸ್ಥಾಪಿಸಲ್ಪಟ್ಟಿತು. ಭಾರತವು ಜಗತ್ತಿನ ಅವಸಾನದಂಚಿನಲ್ಲಿರುವ ಸಸ್ಯ ಮತ್ತು ಪ್ರಾಣಿಗಳನ್ನು ರಕ್ಷಿಸುವ ಸಂವೇದನಾಶೀಲತೆಯನ್ನು ಹೊಂದಿದೆ. 1983ರಲ್ಲಿ ಸ್ಥಾಪನೆಗೊಂಡ 'ಬಾಂಬೆ ಪ್ರಾಕೃತಿಕ ಇತಿಹಾಸ ಸಮಾಜವು ಭಾರತದ ಸಸ್ಯ ಮತ್ತು ಪ್ರಾಣಿ ಪ್ರಭೇದಗಳ ಮಾದರಿಗಳನ್ನು ಸಂಗ್ರಹಿಸುತ್ತಿದೆ. ಭಾರತೀಯ ವನ್ಯ ಮೃಗಗಳ ಸಂಸ್ಥೆ ಪರಿಸರ ವಿಜ್ಞಾನ ಕೇಂದ್ರವು ಈ ನಿಟ್ಟಿನಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತಿದೆ.

ಮಾನವನ ಚಟುವಟಿಕೆಗಳಿಂದ ಕಲುಷಿತಗೊಳ್ಳುತ್ತಿರುವ ಪರಿಸರ ಸಂರಕ್ಷಣೆಗಾಗಿ 1973ರಲ್ಲಿ ಶ್ರೀ ಸುಂದರ್

ಲಾಲ್ ಬಹುಗುಣ ರವರ ನಾಯಕತ್ವದ ಚಿಕ್ಕೋ ಚಳುವಳಿ, 1983ರಲ್ಲಿ ಆರಂಭವಾದ ಅಪ್ಪಿಕೋ ಚಳುವಳಿ,

ಬಾಬಾ ಆಮ್ಲ ಮತ್ತು ಮೇಧಾ ಪಾಟ್ಕರ್‌ರವರ ನರ್ಮದಾ ಬಚಾವೋ ಆಂದೋಲನ, ಡಾ. ಶಿವರಾಮ ಕಾರಂತ

ಮತ್ತು ಇತರೆ ಬುದ್ಧಿಜೀವಿಗಳಿಂದ ಆರಂಭವಾದ ಕೈಗಾ ವಿರೋಧಿ ಚಳುವಳಿಗಳು ಮುಂತಾದ ಪರಿಸರ ಚಳುವಳಿಗಳ

ಹೋರಾಟ ಮತ್ತು ಪ್ರಯತ್ನಗಳು ಇಲ್ಲಿ ಉಲ್ಲೇಖನೀಯ ಪರಿವರ್ತನೆ ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ಪರಿಸರದ

ಮೇಲೆ ನಿರಂತರವಾಗಿ ಆಕ್ರಮಣ ಹಾಗೂ ಪ್ರಕೃತಿಯ ಶೋಷಣೆ ನಡೆಯುತ್ತಲೇ ಇದೆ. ಮಾಲಿನ್ಯ ನಿಯಂತ್ರಣದ

ಬಗ್ಗೆ ಸರ್ಕಾರ, ರಾಜಕಾರಣಿಗಳು ಹಾಗೂ ಸಾರ್ವಜನಿಕರು ಮತ್ತು ಅಧಿಕಾರಿಗಳು ಗಂಭೀರವಾಗಿ ಕಾರ್ಯ

ಪ್ರವೃತ್ತರಾಗುವ ಭರವಸೆ ಇಲ್ಲದಿರುವುದು ಆತಂಕಕ್ಕೆ ಕಾರಣವಾಗಿದೆ.

ಪರಿಸರ ಸಂರಕ್ಷಣೆಯಲ್ಲಿ ಪ್ರತಿಯೊಬ್ಬ ನಾಗರಿಕನು ನಿಸ್ವಾರ್ಥ ಮತ್ತು ಸಮರ್ಪಣಾ ಭಾವನೆಯಿಂದ ತನ್ನನ್ನು ತೊಡಗಿಸಿಕೊಳ್ಳಬೇಕು. ಪರಿಸರ ಸಂರಕ್ಷಣೆಗೆ ಇರುವ ಯೋಜನೆಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಲು ಜನಜಾಗೃತಿ ಮೂಡಿ ಬರಬೇಕು. ಸರ್ಕಾರಿ ಮತ್ತು ಸರ್ಕಾರೇತರ ಸ್ವರೂಪದ ಕಾರ್ಯಕ್ರಮಗಳು ಪ್ರಾಮಾಣಿಕವಾಗಿ ಕ್ರಿಯಾಶೀಲವಾದಾಗ ಗುಣಾತ್ಮಕ ಬದಲಾವಣೆಯನ್ನು ಕಾಣಬಹುದಾಗಿದೆ.
Post a Comment (0)
Previous Post Next Post