ಶಿಕ್ಷಣ Education

   ಶೈಕ್ಷಣಿಕ ಸಮಾಜಶಾಸ್ತ್ರವು ಸಮಾಜಶಾಸ್ತ್ರದ ಪ್ರಮುಖವಾದ ಕ್ಷೇತ್ರ ಮತ್ತು ಪ್ರಭಾವಶಾಲಿ ಶಾಖೆ- ಈ ಶಾಖೆಯು ಶಿಕ್ಷಣದ ತತ್ವಜ್ಞಾನ ರೂಪಿಸಿ ಅದರ ಸಂರಚನೆಯಲ್ಲಿ ಮಹತ್ವವಾದ ಪರಿವರ್ತನೆ ತರುವುದರಲ್ಲಿ ಯಶಸ್ವಿಯಾಗಿದೆ. ಶಿಕ್ಷಣವು ಸಮಾಜದ ಅತ್ಯಂತ ಮೂಲಭೂತವಾದ ಚಟುವಟಿಕೆ ಸಮಾಜದ ನಿರಂತರರತೆಗೆ ಮತ್ತು ಯುವಪೀಳಿಗೆಗಳಿಗೆ ಸಂಸ್ಕೃತಿಯ ವರ್ಗಾವಣೆ ತೀರಾ ಅಗತ್ಯವಾಗಿದೆ. ಪೂರ್ವಜರ ಜೀವನಶೈಲಿ ಮತ್ತು ಸಾಮರಸ್ಯದ ಜೀವನವನ್ನು ಪ್ರತಿಯೊಂದು ಹೊಸತಲೆಮಾರುಗಳಿಗೆ ಶಿಕ್ಷಣದ ಮಾಧ್ಯಮಗಳಿಂದ ವರ್ಗಾಯಿಸಲಾಗಿದೆ ಮತ್ತು ಭವ್ಯ ಸಂಸ್ಕೃತಿಯ ಪರಂಪರೆಯನ್ನು ಶಾಶ್ವತವಾಗಿ ಮುಂದುವರಿಸಲು ಸಾಧ್ಯವಾಗಿದೆ. ಪ್ರತಿಯೊಂದು ಸಮಾಜವೂ ತನ್ನ ಪರಿಸರದೊಂದಿಗೆ ಹೊಂದುಕೊಳ್ಳುತ್ತಾ ಸಾಮರಸ್ಯ ಜೀವನವನ್ನು ಹಲವಾರು ಶತಮಾನಗಳಿಂದ ರೂಢಿಸಿಕೊಂಡಿದೆ. ಹಾಗೆಯೇ ಪರಿವರ್ತನೆ ಸಂಭವಿಸಿದಾಗ ಪರಿಸರದೊಂದಿಗೆ ಹೊಂದುಕೊಂಡು ಅಂತಹ ಸವಾಲುಗಳನ್ನು ಎದುರಿಸುತ್ತಾ ಸಹಬಾಳ್ವೆ ನಡೆಸಿಕೊಂಡಿದೆ. ಈ ನಿಟ್ಟಿನಲ್ಲಿ ಪ್ರಕೃತಿಯೇ ನಮ್ಮ ಗುರು “Nature is our teacher" ಎಂಬ ನಾಣ್ಣುಡಿ ಅನ್ವಯಿಸುತ್ತದೆ. ಮಾನವ ಪ್ರಕೃತಿಯೊಂದಿಗೆ ಹೊಂದಿಕೊಂಡು ಫಲವನ್ನು ಅನುಭವಿಸುತ್ತಾ, ಜೀವನವನ್ನು ರೂಪಿಸಿಕೊಂಡಿದ್ದಾನೆ. “ಶಿಕ್ಷಣವು” ಕೃಷಿ, ವಿಜ್ಞಾನ, ವೈದ್ಯಕೀಯ, ತಾಂತ್ರಿಕ, ಸಸ್ಯಶಾಸ್ತ್ರ, ಇತಿಹಾಸ, ಅರ್ಥಶಾಸ್ತ್ರ, ವಾಣಿಜ್ಯಶಾಸ್ತ್ರ ಹೀಗೆ ವಿವಿಧ ವಿಜ್ಞಾನಗಳು ಪ್ರಕೃತಿ ಮತ್ತು ಸಮಾಜದ ವಿವಿಧ ಅಂಶಗಳ ಬಗ್ಗೆ ಜ್ಞಾನ ಸಂಪಾದನೆಯನ್ನು ಮಾಡಿಕೊಡುತ್ತವೆ.
ಅರ್ಥ ಮತ್ತು ವ್ಯಾಖ್ಯೆಗಳು: (Meaning and Definition):

(“Education") ಎಜುಕೇಷನ್ ಎಂಬ ಪದವೂ ಲ್ಯಾಟಿನ್ ಭಾಷೆಯ “ಎಜುಕೇರ್" (Educare) ನಿಂದ ಉತ್ಪತ್ತಿಯಾಗಿದ್ದು, ಅದರ ಮೂಲ ಅರ್ಥ “ಬೆಳೆಸು” ಮೇಲೆತ್ತು ಎಂಬುದನ್ನು ಸೂಚಿಸುತ್ತದೆ. ಶಿಕ್ಷಣದ ಉದ್ದೇಶ ವಿವಿಧ ಜ್ಞಾನಭಂಡಾರವನ್ನು ಕಲಿತು ಮುಂದಿನ ಭವಿಷ್ಯವನ್ನು ಸಮರ್ಪಕವಾಗಿ ಎದುರಿಸಲುಬೇಕಾದ ಆತ್ಮವಿಶ್ವಾಸವನ್ನು ಮೂಡಿಸುವುದಾಗಿದೆ.

ಎಮಿಲಿ ಡರ್ಖೀಮ್ ರವರ ಪ್ರಕಾರ ಯುವ ಪೀಳಿಗೆಯನ್ನು ಸಾಮಾಜೀಕರಣಗೊಳಿಸುವ ನಿರಂತರ ಪ್ರಕ್ರಿಯೆಯಾಗಿ, ಆಲೋಚನೆ, ಭಾವನೆ ಮತ್ತು ಕ್ರಿಯೆಯನ್ನು ಬೆಳೆಸುವುದೇ ಶಿಕ್ಷಣ,

2. ಡಬ್ಲ್ಯೂ.ಜಿ.ಸಮ್ಮರ್ ರವರ ಪ್ರಕಾರ ಶಿಕ್ಷಣವು ಮಕ್ಕಳಿಗೆ ಸಮುದಾಯದ ನೀತಿ-ನಿಯಮಗಳನ್ನು ವರ್ಗಾಯಿಸುವ ಕ್ರಿಯೆ. ಆ ಮೂಲಕ ಸರಿ-ತಪ್ಪುಗಳನ್ನು ಗ್ರಹಿಸುವುದು.

3, ಎ.ಡಬ್ಲ್ಯೂ ಗ್ರೀನ್ ರವರ ಅಭಿಪ್ರಾಯದಲ್ಲಿ ಶಿಕ್ಷಣವು ಯುವ ಪೀಳಿಗೆಯನ್ನು ಪ್ರಜ್ಞಾಪೂರ್ವಕವಾಗಿ ತರಬೇತಿ ನೀಡಿ ವಯಸ್ಕರ ಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸುವ ಕ್ರಿಯೆ ಮತ್ತು ಶಾಲೆಯಂತಹ ಔಪಚಾರಿಕ ಸಂಘಟನೆಯಿಂದ ಪಡೆಯುವ ತರಬೇತಿ ಎಂದಿದ್ದಾರೆ.

ಶಿಕ್ಷಣದ ಕಾರ್ಯಗಳು (Functions of Education) ಶಿಕ್ಷಣ ಸಂಸ್ಥೆಗಳು ಸಮಾಜದ ಎಲ್ಲಾ ವರ್ಗಗಳಿಗೆ ಅನ್ವಯಿಸುವಂತೆ ತೀರಾ ಅಗತ್ಯವಾದ ಕನಿಷ್ಠ ಕೌಶಲ್ಯ ತರಬೇತಿ ನೀಡುತ್ತಾ ಅಕ್ಷರ ಜ್ಞಾನದ ಮೂಲಕ ಸೈದ್ಧಾಂತಿಕ ವಿಚಾರಧಾರೆಗಳನ್ನು ಯುವಜನತೆಗೆ ಅರಿವು ಮೂಡಿಸುವ ಉದ್ದೇಶ ಹೊಂದಿವೆ. ಒಟ್ಟಾರೆ, ಮುಂದಿನ ಸಾಮಾಜಿಕ ಸ್ಥಿತಿ-ಗತಿಗಳ ಬಗ್ಗೆ ವಾಸ್ತವಿಕ ಮಾಹಿತಿಗಳನ್ನು ನೀಡುತ್ತಾ ಮತ್ತು ಅಂತಹ ಸ್ಥಿತಿ-ಗತಿಗಳನ್ನು ಎದುರಿಸುವ ಮಾಹಿತಿ ನೀಡುವ ಕರ್ತವನ್ನು ಶಿಕ್ಷಣ ನಿಭಾಯಿಸಬೇಕಾಗಿದೆ. ಉದಾ:- ಕಂಪ್ಯೂಟರ್ ಬಳಕೆ, ಆಧುನಿಕ ವಾಹನಗಳ ಚಾಲನೆ ಮತ್ತು ದುರಸ್ತಿ, ಯಂತ್ರಗಳ ಬಳಕೆ, ಮುದ್ರಣಾಲಯ ಮುಂತಾದವುಗಳು.

ಪ್ರಸಕ್ತ ಸಾಮಾಜಿಕ ವ್ಯವಸ್ಥೆಯಲ್ಲಿ ಹೊಸ ವಿಜ್ಞಾನ ಮತ್ತು ತಂತ್ರಜ್ಞಾನ ವ್ಯಾಪಕವಾಗಿ ಬೆಳೆಯುತ್ತಿದೆ. ಶಿಕ್ಷಣ ಇಂದಿನ ಯುವಜನತೆಗೆ ತಮ್ಮ ಮುಂದಿನ ಭವಿಷ್ಯ ರೂಪಿಸಿಕೊಳ್ಳಲು ಸೂಕ್ತ ಎನ್ನಿಸುವ ಹೊಸ ಮಾದರಿ ಶಿಕ್ಷಣ ನೀಡಬೇಕಾಗಿದೆ. ಇಂತಹ ಶಿಕ್ಷಣದಿಂದಲೇ ವಿವಿಧ ಉದ್ಯೋಗಾವಕಾಶಗಳನ್ನು ಸಮರ್ಪಕವಾಗಿ ನಿರ್ವಹಿಸುವ ಜವಾಬ್ದಾರಿ ಇದೆ. ಇಂದಿನ ರಾಜಕೀಯ ವ್ಯವಸ್ಥೆಯು ಕೂಡ ಶಿಕ್ಷಣವನ್ನು ಹೊಸಪೀಳಿಗೆಗಳಿಗೆ ಹೊಸ ಜ್ಞಾನವನ್ನು ಕಲ್ಪಿಸುತ್ತಾ ಮುಂದಿನ ಭವಿಷ್ಯದಲ್ಲಿ “ದುಡಿಮೆಯ ಸಮೂಹ ನಿರೂಪಿಸುವ ಕಡೆಗೆ ಕಾಳಜಿ ವಹಿಸಿದೆ. ಸಂರಕ್ಷಣಾತ್ಮಕವಾಗಿ ಆರ್ಥಿಕ, ರಾಜಕೀಯ, ಸಾಮಾಜಿಕ, ತಾಂತ್ರಿಕ ಮತ್ತು ವೈದ್ಯಕೀಯ ಹೀಗೆ ಎಲ್ಲವನ್ನು ಪೂರೈಸುವುದು ಶಿಕ್ಷಣದ ಹೊಣೆಗಾರಿಕೆಯಾಗಿದೆ. ಶಿಕ್ಷಣದ ಪ್ರಮುಖ ಕಾರ್ಯವಿಧಾನಗಳನ್ನು ಕೆಳಕಂಡ ಅಂಶಗಳ ಮೂಲಕ ವಿಶ್ಲೇಷಿಸಲಾಗಿದೆ.

೩. ಸಂರಕ್ಷಣಾತ್ಮಕ ಕಾರ್ಯಗಳು - Preservative functions

h ಪಾತ್ರ ನಿರ್ವಹಣೆಯ ಕಾರ್ಯಗಳು - Allocative functions

೧. ಸುಧಾರಣಾತ್ಮಕ ಕಾರ್ಯಗಳು - Reformative functions


ಪ್ರತಿಯೊಂದು ಹೊಸಪೀಳಿಗೆಗಳಿಗೆ ಸಂಸ್ಕೃತಿಯ ವರ್ಗಾವಣೆಯು ತೀರಾ ಅಗತ್ಯವಾಗಿದೆ. ಈ ಪ್ರಕ್ರಿಯೆಯಿಂದಲೇ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿಕೊಳ್ಳಲು ಸಾಧ್ಯವಾಗಿದೆ. ಉದಾ:- ಮಾತೃಭಾಷೆಯ ಅಕ್ಷರಜ್ಞಾನ ಪರಿಸರ ಸಂಪನ್ಮೂಲಗಳ ಬಳಕೆ, ಆರೋಗ್ಯ ಮತ್ತು ನೈಮಲ್ಯತೆ ಸಂರಕ್ಷಣೆಯ ಅನುಕೂಲತೆ, ಮರ ಮತ್ತು ಸಸ್ಯ ವರ್ಗಗಳಿಂದ ಔಷಧಿ ತಯಾರಿಕೆ ಹೀಗೆ ಸಾವಿರಾರು ವಿಷಯಗಳ ಬಗ್ಗೆ ಯುವ ಪೀಳಿಗೆಗಳಿಗೆ ಅರಿವು ಮೂಡಿಸುವುದು ತೀರಾ ಅವಶ್ಯಕ. ಇಂತಹ ಮಾಹಿತಿಗಳನ್ನು ಹಿರಿಯರು-ಯುವ ಪೀಳಿಗೆ ರವಾನೆ ಮಾಡುವ ಪ್ರಯತ್ನವೇ ಶಿಕ್ಷಣದ ಸಂರಕ್ಷಣಾತ್ಮಕ ಕಾರ್ಯವೆಂದು ಪರಿಗಣಿಸಲಾಗಿದೆ.

ಸಾಮಾಜಿಕ ಸಂರಚನೆಯ ಸ್ಥಿರಯಿಂದ ಸಾಮಾಜಿಕ ಮೌಲ್ಯ ಮತ್ತು ಜೀವನಶೈಲಿಗಳನ್ನು ಹೊಸ ಪೀಳಿಗೆಗಳಿಗೆ ವರ್ಗಾಯಿಸಬೇಕಾಗಿದೆ. ಆದ್ದರಿಂದ ಪ್ರತಿಯೊಂದು ಸಮಾಜಗಳಲ್ಲೂ ತಮ್ಮ ಭವ್ಯ ಪರಂಪರೆಯನ್ನು ಸಂರಕ್ಷಿಸಿ ಯುವ ಪೀಳಿಗೆ ತಮ್ಮ ಸಾಂಸ್ಕೃತಿಕ ಚೌಕಟ್ಟಿನಲ್ಲಿ ಜೀವನ ರೂಪಿಸಿಕೊಳ್ಳುವಂತೆ ಮಾಡಬೇಕಾಗಿದೆ.

ಕಾಲಕ್ರಮೇಣ ಸಾಮಾಜಿಕ ಪರಿವರ್ತನೆಯಿಂದ ಶಿಕ್ಷಣವು ಮಾರ್ಪಾಡುಗೊಳ್ಳುತ್ತದೆ. ಪ್ರಸಕ್ತ ಕಾಲಕ್ಕೆ ಅನ್ವಯಿಸುವ ಜ್ಞಾನವನ್ನು ಸ್ವೀಕರಿಸಿ ಮತ್ತು ಹೊಸ ಜ್ಞಾನದ ಬಗ್ಗೆ ಅರಿವು ಮತ್ತು ಸಂಪೂರ್ಣ ನೈಋಣ್ಯತೆಯನ್ನು ಪಡೆದುಕೊಳ್ಳಲು ಶಿಕ್ಷಣವು ನೆರವು ನೀಡುತ್ತದೆ. ಶಿಕ್ಷಣ ಕೇವಲ ಆರ್ಥಿಕ ಬೇಡಿಕೆಗಳನ್ನು ಈಡೇರಿಸಿಕೊಳ್ಳುವ ಸಾಧನವಾಗಿರದೆ ರಾಜಕೀಯ, ಸಾಮಾಜಿಕ, ಕಾನೂನು ಪಾಲನೆ, ಆರೋಗ್ಯ ಮತ್ತು ಸಾಮಾಜಿಕ ಸ್ತರವಿನ್ಯಾಸದ ಅಸ್ತಿತ್ವದ ಸಂರಕ್ಷಣೆ ಮುಂತಾದ ಕಾರ್ಯಗಳನ್ನು ಮಾಡುತ್ತದೆ.

b. ಪಾತ್ರ ನಿರ್ವಹಣೆಯ ಕಾರ್ಯಗಳು - (Allocative functions)

ಶಿಕ್ಷಣ ಹಲವಾರು ವಿಶೇಷ ಅಧ್ಯಯನಗಳನ್ನು ಹಾಗೂ ವಿವಿಧ ಹಂತಗಳ ಶಿಕ್ಷಣದ ಕ್ರಮಗಳನ್ನು ಒಳಗೊಂಡಿದೆ. ಉದಾ:- ಕಲೆ, ವಿಜ್ಞಾನ, ವಾಣಿಜ್ಯ ಎಂಬ ವಿಶಾಲ ವರ್ಗೀಕರಣದೊಂದಿಗೆ ಹಲವಾರು ಶಾಖೆಗಳನ್ನು ಒಳಗೊಂಡಿದೆ. ಶಿಕ್ಷಣದ ಅರ್ಹತೆಯಿಂದ ವಿವಿಧ ವೃತ್ತಿಗಳಲ್ಲಿ ದುಡಿದು ಅಂತಸ್ತು ಮತ್ತು ಸ್ಥಾನಮಾನವನ್ನು ಗಳಿಸುತ್ತಾರೆ. ಆಧುನಿಕ ಯುಗದಲ್ಲಿ ಶಿಕ್ಷಣದ ಪಾತ್ರದಿಂದಲೇ ಹಲವಾರು ಉದ್ಯೋಗ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗಿದೆ.

ಈ ಹಿನ್ನೆಲೆಯಲ್ಲಿ ಶಿಕ್ಷಣದ ಆಧಾರದ ಮೇಲೆ ವ್ಯಕ್ತಿಗಳಿಗೆ ನಿರ್ದಿಷ್ಟ ಉದ್ಯೋಗಾವಕಾಶಗಳು ಲಭಿಸುತ್ತವೆ, ಶಿಕ್ಷಣದ ಕೊರತೆಯಿಂದ ಹಲವರು ಕೆಳಅಂತಸ್ತು ಮತ್ತು ಸಾಧಾರಣ ಜೀವನ ಮಟ್ಟದಲ್ಲಿಯೇ ತೃಪ್ತಿಪಟ್ಟುಕೊಳ್ಳಬೇಕಾಗಿದೆ. ಈ ರೀತಿ ಶಿಕ್ಷಣದ ಯಶಸ್ಸು ಮತ್ತು ವಿಫಲತೆಯಿಂದ ಸಾಮಾಜಿಕ ಆರ್ಥಿಕ ಪ್ರಗತಿ ಮತ್ತು ಅಧಿಕಾರ ಹಂಚಿಕೆಯನ್ನು ನ್ಯಾಯಸಮ್ಮತಗೊಳಿಸಲಾಗಿದೆ. ಆದ್ದರಿಂದ ಒಂದು ಸಾಮಾಜಿಕ-ಆರ್ಥಿಕ ವ್ಯವಸ್ಥೆಯಲ್ಲಿ ಶಿಕ್ಷಣ ಮತ್ತು ಸ್ಥಾನಮಾನ ಪರಸ್ಪರ ಪೂರಕವಾಗಿದೆ.

ಶಿಕ್ಷಣವನ್ನು ಸಮಾಜದ ಎಲ್ಲಾ ವರ್ಗದ ಜನರು ವ್ಯಾಪಕವಾಗಿ ಅವಲಂಬಿಸಿದ್ದರಿಂದ ಅದರ ಗುಣಮಟ್ಟಕ್ಕೆ ವಿಶಿಷ್ಟ ಕಾಳಜಿ ವಹಿಸಲಾಗಿದೆ. ಈ ಎಲ್ಲಾ ಬೆಳವಣಿಗೆಯಿಂದಾಗಿ ಶಿಕ್ಷಣದ ಹಂತಗಳಲ್ಲಿ ಪ್ರಾಥಮಿಕ, ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳು ಸ್ಥಾಪನೆಗೊಂಡಿವೆ.

ಶಿಕ್ಷಣದ ಸಾರ್ವತ್ರಿಕವಾದ ಉದ್ದೇಶ ಸಾಮಾಜಿಕ ಮೌಲ್ಯಗಳನ್ನು ಎತ್ತಿಹಿಡಿಯುವುದು ಎಂದು ವಿಶ್ವ ಮಹಾಪುರುಷರಾದ ಉದಾ:- ಪ್ಲೋಟೋ, ಮಹಾತ್ಮಾಗಾಂಧಿ, ವಿವೇಕಾನಂದರು, ಡಾ|ರಾಧಾಕೃಷ್ಣನ್ ಮುಂತಾದವರು ವ್ಯಕ್ತಪಡಿಸಿದ್ದಾರೆ. ಶಿಕ್ಷಣವನ್ನು ಸಾಂಪ್ರದಾಯಿಕ ಹಿನ್ನೆಲೆಯಲ್ಲಿ ವಿಶ್ಲೇಷಿಸಿದರೆ ಸಾಮಾಜಿ ಪರಂಪರೆಯನ್ನು ವೈಭವೀಕರಿಸುವ ಸಾಧನವೇ ಶಿಕ್ಷಣ. ಆದರೆ ಪ್ರಸಕ್ತ ಸಮಾಜದಲ್ಲಿ ಶಿಕ್ಷಣದ ಉದ್ದೇಶ ಮತ್ತು ವಿಷಯದ

ಮಹತ್ವವನ್ನು ರಾಜಕೀಯ-ಆರ್ಥಿಕ ಶಕ್ತಿಗಳು ನಿರ್ಧರಿಸುತ್ತವೆ. e. ಸುಧಾರಣಾತ್ಮಕ ಕಾರ್ಯಗಳು- (Reformative function)

ಸಮಾಜದ ಅಭಿವೃದ್ಧಿ ಮತ್ತು ಪ್ರಗತಿಗೆ ಶಿಕ್ಷಣ ಮೂಲಭೂತ ಸಾಧನವಾಗಿದೆ. ಆದಾಗ್ಯೂ ಶಿಕ್ಷಣ ಸಾಮಾಜೀಕರಣದ ಪ್ರಮುಖವಾದ ನಿಯೋಗಿಯಾಗಿದೆ. ಮಾನವನ ಮನಸ್ಸನ್ನು ಗತಕಾಲ ಮತ್ತು ಭವಿಷ್ಯದ ಸಂಕೋಲೆಗಳಿಂದ ಮುಕ್ತಗೊಳಿಸಿ ವರ್ತಮಾನದಲ್ಲಿ ಜೀವಿಸುವ ವಿಧಾನಗಳ ಬಗ್ಗೆ ಶಿಕ್ಷಣ ಹೆಚ್ಚು ಕಾಳಜಿ ವಹಿಸುತ್ತದೆ. ಶಿಕ್ಷಣದಿಂದ ಸ್ಥಾಪಿತಗೊಂಡಿರುವ ಸಾಮಾಜಿಕ ನಿಯಮಗಳನ್ನು ಪ್ರಶ್ನಿಸುವ ಸಾಮರ್ಥ್ಯತೆಯನ್ನು ಹೊಸ ಪೀಳಿಗೆಗಳು ಬೆಳೆಸಿಕೊಂಡಿದ್ದಾರೆ. ಉದಾ:- ಸತಿ ಪದ್ಧತಿ, ಅಸ್ಪೃಶ್ಯತೆ, ಜೀತ ಪದ್ಧತಿ, ಸ್ತ್ರೀಯರ ಶೋಷಣೆ, ಮೂಢನಂಬಿಕೆ ಮುಂತಾದವು. ಈ ನಿಟ್ಟಿನಲ್ಲಿ ಶಿಕ್ಷಣವನ್ನು ಸಾಮಾಜಿಕ ಸುಧಾರಣೆಯ ಸಾಧನ” ಎಂದು ಕರೆಯಲಾಗಿದೆ. ಶಿಕ್ಷಣವು ಸಾಮಾಜಿಕ ಅನುವರ್ತನೆ ಮತ್ತು ಸಾಮಾಜಿಕ ಚಳುವಳಿಗಳ ಉಗಮಕ್ಕೆ ಸಹಾಯಕಾರಿಯಾಗಿ ಸಾಮಾಜಿಕ ಪರಿವರ್ತನೆಯನ್ನು ತರುತ್ತದೆ.

ಅಮೇರಿಕಾದ ಸಮಾಜಶಾಸ್ತ್ರಜ್ಞ ಬೋವಾಲ್ ಮತ್ತು ಗಿನ್‌ಟಿಸ್ (Bowles and Gintis)ರವರ ಪ್ರಕಾರ ಆಧುನಿಕ ಶಿಕ್ಷಣದ ಪ್ರಮುಖ ಉದ್ದೇಶವೇನೆಂದರೆ - ಕಾರ್ಮಿಕ ಸಮೂಹದ ಸೃಷಿ: ಈ ಉದ್ದೇಶವು ಶಿಕ್ಷಣ ಸಂಸ್ಥೆಗಳ ಸುಪ್ತವಾದ ಕಾಠ್ಯಕ್ರಮದ ಪಟ್ಟಿಯಲ್ಲಿದೆ. (Hidden Curriculum), ವಿದ್ಯಾರ್ಥಿಗಳ ಪಠ್ಯಕ್ರಮಗಳು ಮತ್ತು ಪರೀಕ್ಷೆಯ ವ್ಯವಸ್ಥೆಗೆ ವ್ಯವಸ್ಥಿತ ಪ್ರವಚನಗಳು ಮತ್ತು ವಿದ್ಯಾರ್ಥಿಗಳ ಗ್ರಹಿಸುವಿಕೆ ಕಡೆಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ. ಒಟ್ಟಾರೆ ವಿದ್ಯಾರ್ಥಿಗಳು ಸಹಪಾಠಿಗಳೊಂದಿಗೆ ವ್ಯವಹರಿಸುತ್ತಾ ಮತ್ತು ದೈನಂದಿನ ಚಟುವಟಿಕೆಗಳಲ್ಲಿ ದೈಹಿಕ ಮತ್ತು ಮಾನಸಿಕವಾಗಿ ಹಾಜರಾಗುತ್ತಾ ವಿಷಯಗಳನ್ನು ಅರಿತುಕೊಳ್ಳುವುದು ಮುಖ್ಯವಾಗಿದೆ. ಪಠ್ಯಕ್ರಮಗಳು ಮತ್ತು ಪರೀಕ್ಷೆ ನೆಪಮಾತ್ರವಾಗಿದೆ.

ಬೊವಲ್ಸ್ (Bowles) ಮತ್ತು ಗಿನ್‌ರವರ ಪ್ರಕಾರ (Gintis) 'ಶೈಕ್ಷಣಿಕ ದೋರಣೆಯ ಸುಪ್ತ ಉದ್ದೇಶವೇನೆಂದರೆ ಭವಿಷ್ಯದಲ್ಲಿ ಮುಕ್ತ ಮತ್ತು ವೈಚಾರಿಕತೆಯಿಲ್ಲದ ದುಡಿಮೆ ವರ್ಗವನ್ನು ಸೃಷ್ಟಿಸಿಕೊಳ್ಳುವ ಒಳಸಂಚು, ವಿವೇಚನೆ ರಹಿತ, ನಿಷ್ಕ್ರಿಯ ಮತ್ತು ಗುಲಾಮತನ ಗುಣಗಳನ್ನು ಹೊಂದಿರುವ ಅತಿವಿನಯವಂತ ದುಡಿಯುವ ವರ್ಗಗಳನ್ನು ಸೃಷ್ಟಿಸಲು ಇಂದಿನ ಶಿಕ್ಷಣ ಕ್ರಮ ಸಹಾಯವಾಗಿದೆ. ಪ್ರತಿಯೊಬ್ಬ ವ್ಯಕ್ತಿಯ ಸ್ವಯಂ ಆಭಿಪ್ರಾಯ ಮತ್ತು ಸೃಜನಶೀಲತೆ ಬೆಳೆಸಿಕೊಳ್ಳದೆ ಸಂಕುಚಿತ ಮನೋಭಾವನೆಯನ್ನು ಹಂಚಿಕೊಳ್ಳಲು ಪ್ರೇರಣೆ ನೀಡಿದೆ. ಪ್ರಶ್ನೆ ಮಾಡದೆ ಮತ್ತು ವೈಚಾರಿಕತೆ ಚಿಂತನೆಯಿಲ್ಲದೆ ತಮ್ಮ ಉದ್ಯೋಗಾಪತಿ ಅಪ್ಪಣೆಯನ್ನು ನೆರವೇರಿಸುವ ವರ್ಗಗಳನ್ನು ನಿರ್ಮಿಸುತ್ತಿದೆ ಎಂದಿದ್ದಾರೆ.

ಶಾಲೆಯ ಆವರಣದಲ್ಲಿ ಆಂತರಿಕ ಕಲಿಯುವಿಕೆಗಿಂತಲೂ ಬಾಹ್ಯ ಪ್ರತಿಫಲಕ್ಕೆ ಹೆಚ್ಚು ಉತ್ತೇಜನ ನೀಡಲಾಗಿದೆ. ಏಕೆಂದರೆ ಬಂಡವಾಳ ವ್ಯವಸ್ಥೆಯಲ್ಲಿ ಬಾಹ್ಯ ಪ್ರತಿಫಲಕ್ಕೂ ಮಾನ್ಯತೆ ಕಲ್ಪಿಸಲಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಲ್ಲಿ ನಿಯಂತ್ರಣ ಕೊರತೆ ಎದ್ದು ಕಾಣುತ್ತದೆ ಹಾಗೂ ಬೋಧನಾ ಚಟುವಟಿಕೆಗಳಲ್ಲಿ ಅರ್ಪಿಸಿಕೊಳ್ಳುವ ಸಾಮರ್ಥ್ಯವನ್ನು ಕಡೆಗಣಿಸಲಾಗಿದೆ, ವಿದ್ಯಾರ್ಥಿಗಳ ಕಲಿಯುವಿಕೆಯು ಕೇವಲ “Jug and mug" ತತ್ವವನ್ನು ಅವಲಂಬಿಸಿದೆ. ಶಿಕ್ಷಕರು ವಿದ್ಯಾರ್ಥಿಗಳ ಖಾಲಿ ಖಾತೆಗೆ ಜ್ಞಾನ ಭಂಡಾರ' ಎಂಬ ನೀರನ್ನು ತುಂಬಿಸುತ್ತಾರೆ ಎಂಬ ವಾದ ಆನ್ವಯಿಸುತ್ತದೆ. ಇಂತಹ ಶಿಕ್ಷಣ ವ್ಯಕ್ತಿ ಕೇಂದ್ರೀಕೃತವಾಗಿಲ್ಲ. ಅಂದರೆ ಮಾನವನು ತನ್ನ ಆಂತರಿಕ ತೃಪ್ತಿಗಾಗಿ ದುಡಿಮೆಯಲ್ಲಿ ಭಾಗವಹಿಸುತ್ತಿಲ್ಲ. ಆದರೆ ಬಾಹ್ಯ ಒತ್ತಡದಿಂದ ಕಾರ್ಯಮಗ್ನನಾಗುತ್ತಿದ್ದಾನೆ ಮತ್ತು ಅತಿಯಾದ ಲಾಭಾಂಶ ವೃದ್ಧಿಸಿಕೊಳ್ಳುವ ಕಡೆಗೆ ಕಾಳಜಿ ನೀಡಲಾಗಿದೆ.
Post a Comment (0)
Previous Post Next Post