ಶಿಕ್ಷಣದ ಪ್ರಕಾರಗಳು (Types of Education}

   ಶಿಕ್ಷಣವೆಂಬುದು ನಿರಂತರವಾದ ಪ್ರಕ್ರಿಯೆಯಾಗಿದೆ. ಇದು ಮಾನವನಲ್ಲಿ ಸದಾ ಸಾಮಾಜಿಕ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ಸಮಾಜದ ಚೌಕಟ್ಟಿನಲ್ಲಿಯೇ ವ್ಯಕ್ತಿತ್ವ ವಿಕಾಸ, ಹಿರಿಯರ ಸಂಸ್ಕೃತಿಯನ್ನು ಹೊಸಪೀಳಿಗೆಗಳಿಗೆ ವರ್ಗಾವಣೆ, ಮಾನವನ ಸಾಮಥ್ಯತೆ ಬಗ್ಗೆ ಸ್ವಯಂಪ್ರೇರಿತವಾದ ಪ್ರಶಂಸೆ, ಹೊಸ ಜ್ಞಾನಗಳು ಮತ್ತು ವಿಷಯಗಳ ಅವಿಷ್ಕಾರಗಳು ಮುಂತಾದ ವಿಷಯಗಳ ಶಿಕ್ಷಣವನ್ನು ಎರಡು ಪ್ರಕಾರಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ - ಅನೌಪಚಾರಿಕ ಮತ್ತು ಔಪಚಾರಿಕ ಶಿಕ್ಷಣ.


1.ಅನೌಪಚಾರಿಕ ಶಿಕ್ಷಣ (Informal Education):- ಇದೊಂದು ಸಮಾಜಿಕ ಶಿಕ್ಷಣವಾಗಿದ್ದು, ಉದ್ದೇಶಪೂರ್ವಕವಲ್ಲದ, ನಿರಂತರವಾಗಿ ಸಮವಯಸ್ಕರ ಸಮೂಹ ಹಾಗೂ ದುಡಿಮೆಯ ಜಾಗದಲ್ಲಿ ಹಲವಾರು ವಿಷಯಗಳನ್ನು ಕಲಿಯುವ ಪ್ರಕ್ರಿಯೆಯಾಗಿದೆ. ಈ ರೀತಿಯ ಶಿಕ್ಷಣವು, ಕುಟುಂಬ, ನೆರೆಹೊರೆ, ಧರ್ಮದಿಂದ ಲಭ್ಯವಾಗುತ್ತದೆ. ಉದಾಹರಣೆಗೆ ಕುಟುಂಬದಿಂದ ನವಜಾತ ಶಿಶುಗಳು ತಮ್ಮ ಸಮೂಹದ ಭಾಷೆ, ಆಚಾರ-ವಿಚಾರ, ಸಂಸ್ಕೃತಿ, ಸುತ್ತ-ಮುತ್ತಲಿನ ಪರಿಸರದ ಪ್ರಾಮುಖ್ಯತೆ - ಹೀಗೆ ಜೀವಿಸಲು ಅಗತ್ಯವಾದ ವಿಷಯಗಳನ್ನು ಅರಿತುಕೊಳ್ಳುತ್ತಾರೆ. ಕಾಲಕ್ರಮೇಣ ಕುಟುಂಬದ ಹೊರಗೆ - ಸಮ ವಯಸ್ಕರು, ರಕ್ತ ಸಂಬಂಧಿಗಳು, ಾಧ್ಯಮಗಳಿಂದ ವೈವಿಧ್ಯಮಯವಾದ ಹಾಗೂ ಹಲವಾರು ವಿಚಾರಧಾರೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿಕೊಳ್ಳುತ್ತಾರೆ.

2. ಔಪಚಾರಿಕ ಶಿಕ್ಷಣ (Formal Education) :- ಪೂರ್ವ ಯೋಜಿತ, ಉದ್ದೇಶಪೂರ್ವಕ ಮತ್ತು ಸ್ಥಾಪಿತ ನಿಯಮಗಳಿಂದ ವ್ಯವಸ್ಥಿತವಾಗಿರುವ ಶಿಕ್ಷಣ ವ್ಯವಸ್ಥೆಯೇ ಔಪಚಾರಿಕ ಶಿಕ್ಷಣ. ಪಠ್ಯಕ್ರಮ ಮತ್ತು ಪರೀಕ್ಷೆಯ ಮೂಲಕ ವಿದ್ಯಾರ್ಥಿಗಳಿಗೆ ನಾಲ್ಕು ಗೋಡೆ ಒಳಗೆ ವಿಚಾರಗಳ ಎನಿಮಯ ನಡೆಸುವುದೇ ಔಪಚಾರಿಕ ಶಿಕ್ಷಣ,

ಈ ಔಪಚಾರಿಕ ಶಿಕ್ಷಣವನ್ನು ಪ್ರಾಥಮಿಕ, ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ಎಂದು ವರ್ಗೀಕರಿಸಲಾಗಿದೆ. ಈ ವರ್ಗೀಕರಣವೂ ವಯೋಮಾನದ ಆಧಾರವಾಗಿದೆ ಹಾಗೆಯೇ ಉನ್ನತ ಶಿಕ್ಷಣದಲ್ಲಿ ಕಲೆ, ವಾಣಿಜ್ಯ ಮತ್ತು ವಿಜ್ಞಾನ ಹಾಗೂ ತಾಂತ್ರಿಕ ಶಿಕ್ಷಣವೆಂದು ವರ್ಗೀಕರಿಸಲಾಗಿದ್ದು, ಉನ್ನತ ಶಿಕ್ಷಣವನ್ನು ಸಾವಿರಾರು ಶಾಖೆಗಳಾಗಿ

ವಿಂಗಡಿಸಲಾಗಿದೆ. ಪ್ರತಿಯೊಂದು ಶಾಖೆಗಳಲ್ಲಿ ವಿಶಿಷೀಕರಣ ಮತ್ತು ವಿಶೇಷ ಪರಿಣತಿ ಕಡೆಗೆ ಗಮನ ಹರಿಸಲಾಗಿದೆ.

Post a Comment (0)
Previous Post Next Post