No title

 


ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ "ಯುವ ನಿಧಿ" ಯೋಜನೆ ಅಡಿಯಲ್ಲಿ 2022-23ನೇ ಸಾಲಿನಲ್ಲಿ ಉತ್ತೀರ್ಣರಾದ ಪದವೀಧರ ನಿರುದ್ಯೋಗ ವಿದ್ಯಾರ್ಥಿಗಳಿಗೆ ನಿರುದ್ಯೋಗ ಭತ್ಯೆಯನ್ನು ಒದಗಿಸಲಾಗುವುದು. ನ್ಯಾಷನಲ್ ಅಕಾಡೆಮಿಕ್ ಡೆಪೋಸಿಟರಿ (NAD) ವೇದಿಕೆಯಲ್ಲಿ ಲಭ್ಯವಿರುವ ವಿದ್ಯಾರ್ಥಿಗಳ ಶೈಕ್ಷಣಿಕ ದಾಖಲೆಗ ಸಹಯೋಗಳೊಂದಿಗೆ, ಯುವ ನಿಧಿ ಯೋಜನೆಗೆ ತಮ್ಮ ಅರ್ಹತೆಯನ್ನು ತಿಳಿದುಕೊಳ್ಳಬಹುದಾಗಿರುತ್ತದೆ. ಪರೀಕ್ಷಾ ಫಲಿತಾಂಶ ಪ್ರಕಟವಾದ ದಿನದಿಂದ 180 ದಿನಗಳಾದ ನಂತರವು ಉದ್ಯೋಗವಕಾಶ ದೊರೆಯದ ಪದವೀಧರರು ಈ ಯೋಜನೆಗೆ ಅರ್ಹರಾಗಿರುತ್ತಾರೆ. ಈ ನಿರುದ್ಯೋಗ ಭತ್ಯೆಯನ್ನು ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳು ಮಾತ್ರ ಪಡೆಯಬಹುದು. ಈ ಯೋಜನೆಯ ಪ್ರಯೋಜನವನ್ನು ಗರಿಷ್ಠ 2 ವರ್ಷಗಳ ಅವಧಿಯವರೆಗೆ ಮಾತ್ರ ಒದಗಿಸಲಾಗುವುದು ಅಥವಾ ಅರ್ಹ ವಿದ್ಯಾರ್ಥಿಯು ಉದ್ಯೋಗವನ್ನು ಪಡೆದಿದ್ದಲ್ಲಿ ಈ ಯೋಜನಾ ಪ್ರಯೋಜನಗಳನ್ನು ಸ್ಥಗಿತಗೊಳಿಸಲಾಗುವುದು.

ಯೋಜನಾ ಅನುಷ್ಠಾನ ಇಲಾಖೆ: ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ

ಈ ಯೋಜನೆಯ ಪ್ರಯೋಜನಗಳನ್ನು ಫಲಿತಾಂಶ ಹೊರಡಿಸಿದ ದಿನಾಂಕದಿಂದ 2 ವರ್ಷಗಳ ಅವಧಿವರೆಗೆ ಅಥವಾ ಅರ್ಜಿದಾರರಿಗೆ ಉದ್ಯೋಗ ಸಿಗುವವರೆಗೆ ಜಾರಿಯಲ್ಲಿರುತ್ತದೆ. ನಿರುದ್ಯೋಗ ಭತ್ಯೆಯ ಮೊತ್ತವು ಈ ಕೆಳಗಿನಂತಿವೆ:

·         a) ಎಲ್ಲಾ ನಿರುದ್ಯೋಗ ಪದವೀಧರರಿಗೆ ಪ್ರತಿ ತಿಂಗಳು ರೂ. 3000/-

·         b) ಎಲ್ಲಾ ನಿರುದ್ಯೋಗ ಡಿಪ್ಲೋಮ ಪದವೀಧರರಿಗೆ ಪ್ರತಿ ತಿಂಗಳು ರೂ. 1500/-

 

1) ಯೋಜನೆಗೆ ಅರ್ಹತೆಯ ಮಾನದಂಡಗಳು.

  • a) ಅರ್ಜಿದಾರರು 2023ನೇ ಸಾಲಿನ ಪದವಿ / ಡಿಪ್ಲೊಮಾ ಪದವೀಧರರಾಗಿರಬೇಕು.
  • b) ಅರ್ಜಿದಾರರು ಕರ್ನಾಟಕದ ನಿವಾಸಿಯಾಗಿರಬೇಕು ಅಥವಾ ರಾಜ್ಯದಲ್ಲಿ ಕನಿಷ್ಠ 6 ವರ್ಷಗಳ ಕಾಲ ವಿಧ್ಯಾಭ್ಯಸವನ್ನು ಮಾಡಿರಬೇಕು.
  • c) ಅರ್ಜಿದಾರರು ನಿರುದ್ಯೋಗರಾಗಿರಬೇಕು.
  • d) ಅರ್ಜಿದಾರರು ಉನ್ನತ ವ್ಯಾಸಂಗ ಮಾಡುತಿರಬಾರದು.

2) ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

  • a) ಫಲಾನುಭವಿಗಳು ಸೇವಾ ಸಿಂಧು ಪೋರ್ಟಲ್ ನ ಮೂಲಕ ಯುವ ನಿಧಿ ಯೋಜನೆಗೆ ಅರ್ಜಿ ಸಲ್ಲಿಸಬಹುದು. (https://sevasindhuservices.karnataka.gov.in)
  • b) ಈ ಯೋಜನೆಯಡಿ ಒದಗಿಸಲಾದ ನಿರುದ್ಯೋಗ ಭತ್ಯೆಯನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ (ಡಿಬಿಟಿ) ವೇದಿಕೆ ಮೂಲಕ ವಿತರಿಸಲಾಗುತ್ತದೆ.
  • c) ನಿಯತಕಾಲಿಕವಾಗಿ ಯುವ ನಿಧಿ ಯೋಜನೆಯ ನಿರುದ್ಯೋಗ ಭತ್ಯೆಯನ್ನು ಪಡೆಯಲು ಫಲಾನುಭವಿಗಳು ಪ್ರತಿ ತಿಂಗಳು ತಮ್ಮ ಉದ್ಯೋಗದ ಸ್ಥಿತಿಯ ಬಗ್ಗೆ ಸ್ವಯಂ ಘೋಷಣೆಯನ್ನು ಒದಗಿಸಬೇಕು. ಅರ್ಜಿದಾರರು ಒದಗಿಸಿದ ಸ್ಥಿತಿಯಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದರೆ, ಜುಲ್ಮಾನೆಯನ್ನು ವಿಧಿಸಲಾಗುವುದು.

3) ಯುವ ನಿಧಿ ಪ್ರಯೋಜನಗಳನ್ನು ಪಡೆಯಲು ಅಗತ್ಯವಿರುವ ವಿವರ / ದಾಖಲೆಗಳು ?

  • a) ಆಧಾರ್ ಸಂಖ್ಯೆ
  • b) ಪದವಿ ಅಥವಾ ಡಿಪ್ಲೊಮಾ ನೋಂದಣಿ ಸಂಖ್ಯೆ
  • c) ಡಿಜಿಲಾಕರ್ ನಲ್ಲಿ ಕ್ಲೈಮ್ ಮಾಡಿರುವ ಪದವಿ / ಡಿಪ್ಲೊಮಾ ಪ್ರಮಾಣಪತ್ರ
  • d) ಕಂದಾಯ ಇಲಾಖೆಯಿಂದ ವಿತರಿಸಿರುವ ನಿವಾಸ / ರೆಸಿಡೆನ್ಸಿ ಪ್ರಮಾಣಪತ್ರ ಅಥವಾ ಸಂಬಂಧಪಟ್ಟ ವಿಶ್ವವಿದ್ಯಾಲಯದಿಂದ ವಿತರಿಸಿರುವ ಶೈಕ್ಷಣಿಕ ಪ್ರಮಾಣಪತ್ರ.

4) ಈ ಯೋಜನೆಗೆ ಯಾರು ಅರ್ಹರಲ್ಲ?

  • a) ಸ್ವಯಂ ಉದ್ಯೋಗಕ್ಕಾಗಿ ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರದ ಇತರ ಯೋಜನೆಗಳಿಂದ ಪ್ರಯೋಜನ ಪಡೆಯುತ್ತಿರುವವರು.
  • b) ಈಗಾಗಲೇ ಉನ್ನತ ವಿಧ್ಯಾಭ್ಯಸಕ್ಕಾಗಿ ದಾಖಲಾದವರು ಅಥವಾ ಉನ್ನತ ವಿಧ್ಯಾಭ್ಯಸವನ್ನು ಮಾಡುತ್ತಿರುವವರು.
  • c) ಶಿಷ್ಯವೇತನದಿಂದ ವೇತನ ಪಡೆಯುತ್ತಿರುವವರು.
  • d) ಸರ್ಕಾರಿ ಅಥವಾ ಖಾಸಗಿ ವಲಯದಲ್ಲಿ ಉದ್ಯೋಗದಲ್ಲಿರುವವರು.

 

Post a Comment (0)
Previous Post Next Post