Which is the longest river in South India?

ದಕ್ಷಿಣ ಭಾರತದ ಅತೀ ಉದ್ದವಾದ ನದಿ ಯಾವುದು?

ಎ) ಕಾವೇರಿ

ಬಿ) ಗೋದಾವರಿ

ಸಿ) ಕೃಷ್ಣಾ

ಡಿ) ತುಂಗಭದ್ರಾ

ಉತ್ತರ: ಗೋದಾವರಿ

ವಿವರಣೆ:- ದಕ್ಷಿಣ ಭಾರತದ ಅತೀ ಉದ್ದವಾದ ನದಿ ಗೋದಾವರಿ, ಇದು ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ತ್ರಯಂಬಕ್‌ನಲ್ಲಿ ಉಗಮವಾಗಿ ಆಂಧ್ರಪ್ರದೇಶದ ಕಾಕಿನಾಡ, ಬಳಿ ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ಇದರ ಮುಖ್ಯ ಉಪನದಿಗಳು : ಇಂದ್ರಾವತಿ, ಬಿಂದುಸಾರ ಮತ್ತು ಶಬರಿ, ಕರ್ನಾಟಕದ ಬೀದರ್‌ನಲ್ಲಿ ಮಾಂಜ್ರಾ ನದಿಯು ಹರಿಯುತ್ತಿದ್ದು, ಇದು ಗೋದಾವರಿ ನದಿಯ ಉಪನದಿಯಾಗಿದೆ.

ಕೃಷ್ಣಾ ನದಿಯು ಭಾರತ ದೇಶದ 7 ಪವಿತ್ರ ನದಿಗಳಲ್ಲಿ ಒಂದಾಗಿದ್ದು, ಪಶ್ಚಿಮಘಟ್ಟದ ಮಹಾಬಲೇಶ್ವರದಲ್ಲಿ ಉಗಮವಾಗುತ್ತದೆ. ನದಿಗೆ ಆಂಧ್ರಪ್ರದೇಶದ ನಂದಿಗೊಂಡ ಗ್ರಾಮದ ಅಡ್ಡಲಾಗಿ ನಾಗಾರ್ಜುನ ಸಾಗರ ಅಣೆಕಟ್ಟನ್ನು ನಿರ್ಮಿಸಲಾಗಿದೆ. ಕೃಷ್ಣಾ ನದಿಗೆ ವಿಜಯಪುರ ಬಳಿ ಆಲಮಟ್ಟಿ ಅಣೆಕಟ್ಟು (ಲಾಲ್ ಬಹದ್ದೂರ್ ಶಾಸ್ತ್ರಿ), ಯಾದಗಿರಿ ಜಿಲ್ಲೆಯಲ್ಲಿ ನಾರಾಯಣಪುರ ಅಣೆಕಟ್ಟು (ಬಸವಸಾಗರ) ನಿರ್ಮಿಸಲಾಗಿದೆ.
ಕೃಷ್ಣಾ ನದಿಯು ಕರ್ನಾಟಕದಲ್ಲಿ ಉದ್ದವಾದ ಹರಿಯುವ ಮತ್ತು ಹೆಚ್ಚು
ನೀರಾವರಿಯನ್ನು ಒದಗಿಸುವ ನದಿಯಾಗಿದೆ. ಕೃಷ್ಣಾ
ನದಿಯ ಉಪನದಿಗಳೆಂದರೆ ತುಂಗಭದ್ರ, ಘಟಪ್ರಭ,
ಮಲಪ್ರಭ, ಭೀಮ, ದೋಣಿ. ಕೃಷ್ಣಾ ನದಿಯ ಅತಿ ದೊಡ್ಡ ಉಪ ನದಿ ಮತ್ತು ಕರ್ನಾಟಕದ ಈಶಾನ್ಯಕ್ಕೆ ಹರಿಯುವ ತುಂಗಭದ್ರಾ ನದಿಯು ಚಿಕ್ಕಮಗಳೂರು ಜಿಲ್ಲೆಯ ಗಂಗಾ ಮೂಲದಲ್ಲಿ ಉಗಮವಾಗುತ್ತದೆ.

* ಕರ್ನಾಟಕ ಮತ್ತು ತಮಿಳುನಾಡಿನ ಜೀವ ನದಿ ಎನಿಸಿದ ಕಾವೇರಿ ನದಿಯು ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಉಗಮವಾಗುತ್ತದೆ. ಈ ನದಿಯು ತಮಿಳುನಾಡಿನ ಹೊಗೇನಕಲ್ ಜಲಪಾತವನ್ನು ಸೃಷ್ಟಿಸುತ್ತದೆ. ಕಾವೇರಿ ನದಿಗೆ ಅಡ್ಡಲಾಗಿ ಮಂಡ್ಯ ಜಿಲ್ಲೆಯಲ್ಲಿ ಕೃಷ್ಣರಾಜಸಾಗರ ಅಣೆಕಟ್ಟು ಮತ್ತು ತಮಿಳುನಾಡಿನಲ್ಲಿ ಮೆಟ್ಟೂರು ಅಣೆಕಟ್ಟನ್ನು ನಿರ್ಮಿಸಲಾಗಿದೆ. 2018ರ ಜೂನ್ 1 ರಂದು ಕೇಂದ್ರ ಸರ್ಕಾರವು ಕಾವೇರಿ ಜಲಾನಯನ ಪ್ರದೇಶದ ನದಿ ನೀರು ನಿರ್ವಹಣೆಗೆ ಸಂಬಂಧಿಸಿದಂತೆ ಸದಸ್ಯರನ್ನೊಳಗೊಂಡ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ರಚನೆಗೆ ಗೆಜೆಟ್‌ ಅಧಿಸೂಚನೆ ಹೊರಡಿಸಿದೆ.

0/Post a Comment/Comments

Stay Conneted

WhatsApp Group Join Now
Telegram Group Join Now
Instagram Group Join Now
WhatsApp Group Join Now
Telegram Group Join Now
Instagram Group Join Now