Which districts does not share a border with Kerala?

ಕೆಳಗಿನವುಗಳಲ್ಲಿ ಯಾವ ಜಿಲ್ಲೆಯು ಕೇರಳದೊಂದಿಗೆ ಗಡಿಯನ್ನು ಹಂಚಿಕೊಂಡಿಲ್ಲ?

ಎ) ದಕ್ಷಿಣ ಕನ್ನಡ 

ಬಿ) ಕೊಡಗು

ಸಿ) ಉಡುಪಿ

ಡಿ) ಚಾಮರಾಜನಗರ

ಉತ್ತರ:- ಉಡುಪಿ

ವಿವರಣೆ:- ಚಾಮರಾಜನಗರ ಜಿಲ್ಲೆಯು ಕರ್ನಾಟಕದ ದಕ್ಷಿಣ ಭಾಗದ ಕಟ್ಟ ಕಡೆಯ ಜಿಲ್ಲೆ. ಜನಸಂಖ್ಯೆಯಲ್ಲಿ ಕೊಡಗು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ನಂತರದ 3ನೇ ಸ್ಥಾನದಲ್ಲಿದೆ. ಇದು ಕೇರಳ ಮತ್ತು ತಮಿಳುನಾಡು ರಾಜ್ಯಗಳೊಂದಿಗೆ ಗಡಿ ರೇಖೆಯನ್ನು ಹೊಂದಿದೆ.

* ಕೊಡಗು ಜಿಲ್ಲೆಯು ಕರ್ನಾಟಕದ ಸ್ಕಾಟ್‌ಲ್ಯಾಂಡ್, ಕರ್ನಾಟಕದ ಕಾಶ್ಮೀರ, ಎನಿಸಿದ್ದು, ರಾಜ್ಯದ ಜನಸಂಖ್ಯೆ, ಮತ್ತು ಜನ ಸಾಂದ್ರತೆಯಲ್ಲಿ ಕೊನೆಯ ಸ್ಥಾನದಲ್ಲಿದೆ. ಇದು ಕೇರಳ ರಾಜ್ಯದೊಂದಿಗೆ ಗಡಿಯನ್ನು ಹೊಂದಿದೆ. ಅಂದ ರೆ, ಕೊಡಗು ಜಿಲ್ಲೆಯ ಪಶ್ಚಿಮಕ್ಕೆ ಕೇರಳದ ಕಾಸರಗೋಡು ಜಿಲ್ಲೆಯ ಗಡಿಯನ್ನು ಹೊಂದಿದೆ. ಮತ್ತು ದಕ್ಷಿಣಕ್ಕೆ ಕೇರಳದ ವಾಲ್ನಾಡ್ ಜಿಲ್ಲೆ ಹೊಂದಿದೆ.

* ಉಡುಪಿ (1,094) ಜಿಲ್ಲೆಯು ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚು ಲಿಂಗಾನುಪಾತ ಹೊಂದಿದ ಜಿಲ್ಲೆಯಾಗಿದೆ. ಇದರ ಉತ್ತರಕ್ಕೆ ಉತ್ತರ ಕನ್ನಡ, ದಕ್ಷಿಣಕ್ಕೆ ದಕ್ಷಿಣ ಕನ್ನಡ, ಈಶಾನ್ಯಕ್ಕೆ ಶಿವಮೊಗ್ಗ, ಪೂರ್ವಕ್ಕೆ ಚಿಕ್ಕಮಗಳೂರು ಹಾಗೂ ಪಶ್ಚಿಮಕ್ಕೆ ಅರಬ್ಬಿ ಸಮುದ್ರವಿದೆ.

* ದಕ್ಷಿಣ ಕನ್ನಡ ಜಿಲ್ಲೆಯನ್ನು ಕರ್ನಾಟಕದ ಬ್ಯಾಂಕಿಂ ಗ್ ಚಳುವಳಿಯ ತೊಟ್ಟಿಲು" ಎನ್ನುವರು. ಇದರ ಪೂರ್ವ ಭಾಗಕ್ಕೆ ಪಶ್ಚಿಮ ಘಟ್ಟಗಳು, ಪಶ್ಚಿಮಕ್ಕೆ ಅರಬ್ಬಿ ಸಮುದ್ರ ಉತ್ತರಕ್ಕೆ ಉಡುಪಿ, ಈಶಾನ್ಯಕ್ಕೆ ಚಿಕ್ಕಮಗಳೂರು, ಪೂರ್ವಕ್ಕೆ ಹಾಸನ, ಆನ್ನೇಯಕ್ಕೆ ಕೊಡಗು ಮತ್ತು ದಕ್ಷಿಣಕ್ಕೆ ಕೇರಳದ
ಕಾಸರಗೋಡು ಜಿಲ್ಲೆಯ ಗಡಿಯನ್ನು ಹೊಂದಿದೆ.
Post a Comment (0)
Previous Post Next Post