ಅನ್ನಭಾಗ್ಯ ಯೋಜನೆ

         ರಾಜ್ಯದಲ್ಲಿ ಜುಲೈ 2013 ರಿಂದ ‘ಅನ್ನಭಾಗ್ಯ’ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯ ಜಾರಿಯಿಂದಾಗಿ ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಪ್ರತಿ ಬಿಪಿಎಲ್ ಕುಟುಂಬಗಳಿಗೆ ವಿತರಿಸಲಾಗುವ ಪಡಿತರ ಪ್ರಮಾಣವನ್ನು ಹೆಚ್ಚಿಸಲಾಯಿತು. ಈ ಮೊದಲು ಬಿಪಿಎಲ್ ಕುಟುಂಬದ ಒಬ್ಬ ಸದಸ್ಯನಿಗೆ ಕನಿಷ್ಟ 4 ಕೆ.ಜಿ ಅಕ್ಕಿ ಮತ್ತು 1 ಕೆ.ಜಿ ಗೋಧಿಯಂತೆ ಒಂದು ಕುಟುಂಬಕ್ಕೆ ಗರಿಷ್ಟ 20 ಕೆ.ಜಿ ಅಕ್ಕಿ ಮತ್ತು 3 ಕೆ.ಜಿ ಗೋಧಿಯನ್ನು ವಿತರಿಸಲಾಗುತಿತ್ತು. ಸರ್ಕಾರದ ಆದೇಶ ಸಂಖ್ಯೆ: ಆನಾಸ/43/ಡಿಆರ್ಎ/2013, ದಿನಾಂಕ: 15.06.2013 ರನ್ವಯ ಹೊಸ ಯೋಜನೆಯಡಿ ಅರ್ಹ ಬಿಪಿಎಲ್ ಏಕ ಸದಸ್ಯ ಕುಟುಂಬಗಳಿಗೆ 10 ಕೆ.ಜಿ, ದ್ವಿ ಸದಸ್ಯ ಕುಟುಂಬಗಳಿಗೆ 20 ಕೆ.ಜಿ, 3 ಮತ್ತು ಹೆಚ್ಚಿನ ಸದಸ್ಯರನ್ನು ಹೊಂದಿರುವ ಕುಟುಂಬಗಳಿಗೆ 30 ಕೆ.ಜಿ ಆಹಾರಧಾನ್ಯವನ್ನು ಪ್ರತಿ ಕೆ.ಜಿ.ಗೆ ರೂ. 1/- ರ ದರದಲ್ಲಿ ಹಂಚಿಕೆಯನ್ನು ಜುಲೈ-2015ರ ಮಾಹೆಯಿಂದ ಪ್ರಾರಂಬಿಸಲಾಗಿರುತ್ತದೆ. ಸರ್ಕಾರದ ಆದೇಶ ಸಂಖ್ಯೆ:ಆನಾಸ/20/ಆರ್ಪಿಆರ್/2013, ದಿನಾಂಕ: 31.10.2013ರನ್ವಯ 07 ಮತ್ತು ಹೆಚ್ಚಿನ ಸದಸ್ಯರಿರುವ ಕುಟುಂಬಗಳಿಗೆ ಅನ್ವಯವಾಗುವಂತೆ ಪ್ರತಿ ಹೆಚ್ಚುವರಿ ಸದಸ್ಯರಿಗೆ 05 ಕೆ.ಜಿ ಆಹಾರಧಾನ್ಯವನ್ನು ನವೆಂಬರ್-1, 2013 ರಿಂದ ಜಾರಿಗೆ ಬರುವಂತೆ ಅನುಷ್ಠಾನಗೊಳಿಸಲಾಯಿತು.


ಅಂತ್ಯೋದಯ ಅನ್ನ ಯೋಜನೆ (ಎ.ಎ.ವೈ):

ಕೇಂದ್ರ ಸರ್ಕಾರವು ಎರಡು ಹೊತ್ತು ಊಟಕ್ಕೆ ಗತಿಯಿಲ್ಲದ ಅತ್ಯಂತ ಕಡು ಬಡವರಿಗಾಗಿ ಅಂತ್ಯೋದಯ ಅನ್ನ ಯೋಜನೆಯನ್ನು ಜಾರಿಗೆ ತಂದಿದ್ದು, ರಾಜ್ಯದಲ್ಲಿ ಸದರಿ ಯೋಜನೆಯನ್ನು ಆಗಸ್ಟ್ 2002 ರಿಂದ ಜಾರಿಗೊಳಿಸಲಾಗಿದೆ. ಬಡತನ ರೇಖೆಯಲ್ಲಿ ಅತ್ಯಂತ ಕೆಳಗಿನ ಸ್ತರದ ಕುಟುಂಬಗಳಾದ ಭೂ ರಹಿತ ಕೃಷಿ ಕಾರ್ಮಿಕರು, ವಿಧವೆಯು ಮುಖ್ಯಸ್ಥರಾಗಿರುವ ಕುಟುಂಬಗಳು, ಯಾವುದೇ ನಿರ್ದಿಷ್ಟ ವರಮಾನವಿಲ್ಲದ ಹೆಚ್.ಐ.ವಿ. ಪೀಡಿತರು/ಬಾಧಿತರು ಇರುವ ಕುಟುಂಬಗಳು, ಯಾವುದೇ ನಿಗದಿತ ವರಮಾನವಿಲ್ಲದ ವೃದ್ಧರು ಮುಖ್ಯಸ್ಥರಾಗಿರುವ ಕುಟುಂಬಗಳು ಈ ಯೋಜನೆಯ ವ್ಯಾಪ್ತಿಗೆ ಸೇರ್ಪಡೆಯಾಗಿರುತ್ತಾರೆ. ಇಂತಹ ಫಲಾನುಭವಿಗಳನ್ನು ಗ್ರಾಮ ಪಂಚಾಯ್ತಿಯವರು ಗ್ರಾಮ ಸಭೆಯಲ್ಲಿ ಗುರುತಿಸಿ ಶಿಫಾರಸ್ಸು ಮಾಡಿರುತ್ತಾರೆ. ಈ ಯೋಜನೆಯಡಿ ಜುಲೈ-2019 ಮಾಹೆಯಲ್ಲಿದ್ದಂತೆ 7,69,570 ಕುಟುಂಬಗಳನ್ನು ಗುರುತಿಸಲಾಗಿದ್ದು, ಆ ಕುಟುಂಬಗಳಿಗೆ ಪ್ರತಿ ಮಾಹೆ 35 ಕೆಜಿ ಆಹಾರಧಾನ್ಯವನ್ನು ಉಚಿತವಾಗಿ p.


ಆದ್ಯತಾ ಕುಟುಂಬ (ಬಿ.ಪಿ.ಎಲ್) ಪಡಿತರ ಸದಸ್ಯರಿಗೆ ಆಹಾರಧಾನ್ಯ ವಿತರಣೆ:

ಆದ್ಯತಾ ಕುಟುಂಬ (ಬಿ.ಪಿ.ಎಲ್) ಪಡಿತರ ಚೀಟಿದಾರರನ್ನು ಗುರುತಿಸಲು ಸರ್ಕಾರದ ಆದೇಶ ಸಂಖ್ಯೆ: ಆನಾಸ/80/ಡಿ.ಆರ್.ಎ./2012, ದಿನಾಂಕ 24.08.2012ರನ್ವಯ 14 ಅಂಶಗಳ ಮಾನದಂಡವನ್ನು ನಿಗಧಿಪಡಿಸಲಾಗಿತ್ತು. ಸದರಿ ಮಾನದಂಗಳನ್ನು ಸಡಿಲಗೊಳಿಸಿ ಸರ್ಕಾರದ ಆದೇಶ ಸಂಖ್ಯೆ: ಆನಾಸ/116/ಡಿ.ಆರ್.ಎ./2015, ದಿನಾಂಕ: 25.03.2017 ರಲ್ಲಿ 04 ಅಂಶಗಳ ಮಾನದಂಡಗಳನ್ನು ಕೆಳಕಂಡಂತೆ ನಿಗಧಿಪಡಿಸಲಾಗಿರುತ್ತದೆ.

ವೇತನವನ್ನು ಗಣನೆಗೆ ತೆಗೆದುಕೊಳ್ಳದೆ ಎಲ್ಲಾ ಖಾಯಂ ನೌಕರರು ಅಂದರೆ ಸರ್ಕಾರದ ಅಥವಾ ಸಕಾರದಿಂದ ಅನುದಾನವನ್ನು ಪಡೆಯುತ್ತಿರುವ ಸಂಸ್ಥೆಗಳು ಅಥವಾ ಸರ್ಕಾರಿ ಪ್ರಾಯೋಜಿತ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು/ಮಂಡಳಿಗಳು/ನಿಗಮಗಳು/ಸ್ವಾಯತ್ತ ಸಂಸ್ಥೆಗಳು ಇತ್ಯಾದಿ ಒಳಗೊಂಡಂತೆ ಆದಾಯ ತೆರಿಗೆ/ಸೇವಾ ತೆರಿಗೆ/ವ್ಯಾಟ್/ವೃತ್ತಿ ತೆರಿಗೆ ಪಾವತಿಸುವ ಎಲ್ಲಾ ಕುಟುಂಬಗಳು.

ಗ್ರಾಮೀಣ ಪ್ರದೇಶಗಳಲ್ಲಿ 03 ಹೆಕ್ಟೇರ್ ಒಣಭೂಮಿ ಅಥವಾ ತತ್ಸಮಾನ ನೀರಾವರಿ ಭೂಮಿ ಹೊಂದಿರುವ ಕುಟುಂಬಗಳು ಅಥವಾ ಗ್ರಾಮೀಣ ಪ್ರದೇಶವನ್ನು ಹೊರತುಪಡಿಸಿ ನಗರ ಪ್ರದೇಶಗಳಲ್ಲಿ 1000 ಚದರ ಅಡಿಗಿಂತಲೂ ಹೆಚ್ಚಿನ ವಿಸ್ತೀರ್ಣದ ಪಕ್ಕಾ ಮನೆಯನ್ನು ಸ್ವಂತವಾಗಿ ಹೊಂದಿರುವ ಕುಟುಂಬಗಳು.

ಜೀವನೋಪಾಯಕ್ಕಾಗಿ ಸ್ವತಃ ಓಡಿಸುವ ಒಂದು ವಾಣಿಜ್ಯ ವಾಹನವನ್ನು ಅಂದರೆ ಟ್ರಾಕ್ಟರ್, ಮ್ಯಾಕ್ಸಿಕ್ಯಾಬ್, ಟ್ಯಾಕ್ಸಿ ಇತ್ಯಾದಿಗಳನ್ನು ಹೊಂದಿದ ಕುಟುಂಬವನ್ನು ಹೊರತುಪಡಿಸಿ ನಾಲ್ಕು ಚಕ್ರದ ವಾಹನಗಳನ್ನು ಹೊಂದಿರುವ ಎಲ್ಲಾ ಕುಟುಂಬಗಳು.

ಕುಟುಂಬದ ವಾರ್ಷಿಕ ಆದಾಯವು ರೂ. 1.20 ಲಕ್ಷಗಳಿಗಿಂತಲೂ ಹೆಚ್ಚು ಇರುವ ಕುಟುಂಬಗಳು.

ಮೇಲಿನಂತೆ ಅರ್ಹರಿರುವ ಕುಟುಂಬಗಳು ಪಿ.ಹೆಚ್.ಹೆಚ್. ಪಡಿತರ ಚೀಟಿ ಪಡೆಯಲು ಅನರ್ಹರು ಎಂದು "ಹೊರಗಿಡುವ ಮಾನದಂಡವನ್ನು (Exclusion Criteria)" ಸರ್ಕಾರವು ನಿಗಧಿಗೊಳಿಸಿತು.


ಸರ್ಕಾರದ ಆದೇಶ ಸಂಖ್ಯೆ: ಆನಾಸ/204/ಡಿ.ಆರ್.ಎ./2015ರನ್ವಯ ಅನ್ನಭಾಗ್ಯ ಯೋಜನೆಯಡಿ ಮೇ-2015 ರಿಂದ ಅನ್ವಯಿಸುವಂತೆ ಯೂನಿಟ್ ಪದ್ಧತಿಯನ್ನು ಜಾರಿಗೊಳಿಸಿದ್ದು, ಅದರನ್ವಯ ಆದ್ಯತಾ ಕುಟುಂಬದ(PHH) ಪ್ರತಿ ಸದಸ್ಯರಿಗೆ 05 ಕೆ.ಜಿ ಆಹಾರಧಾನ್ಯ ಹಂಚಿಕೆಯನ್ನು ಪ್ರಾರಂಭಿಸಲಾಯಿತು ಹಾಗೂ ಪಡಿತರ ವಿತರಣೆಯಲ್ಲಿ ಅಕ್ಕಿ ಹಂಚಿಕೆಯನ್ನು ಉಚಿತವಾಗಿ ವಿತರಣೆ ಮಾಡಲು ಆದೇಶಿಸಲಾಯಿತು.


ಇದರಂತೆ ಸದರಿ ಆದೇಶದನ್ವಯ ಪ್ರತಿ ಎಎವೈ ಮತ್ತು ಪಿ.ಹೆಚ್.ಹೆಚ್. ಪಡಿತರ ಕುಟುಂಬಕ್ಕೆ ಪ್ರತಿ ಮಾಹೆ 01 ಲೀಟರ್ ತಾಳೆ ಎಣ್ಣೆ ಮತ್ತು 01 ಕೆ.ಜಿ. ಅಯೋಡಿನ್ ಉಪ್ಪನ್ನು ಕ್ರಮವಾಗಿ ರೂ. 25/- ಮತ್ತು ರೂ. 2/-ರ ರಿಯಾಯಿತಿ ದರದಲ್ಲಿ ವಿತರಣೆಯನ್ನು ಮೇ -2015 ರಿಂದ ಜಾರಿಗೊಳಿಸಲಾಯಿತು.

ಸರ್ಕಾರದ ಆದೇಶ ಸಂಖ್ಯೆ: ಆನಾಸ/136/ಡಿಆರ್‍ಎ/2016, ದಿನಾಂಕ: 14.07.2016ರನ್ವಯ ಅಕ್ಟೋಬರ್-2016ರ ಮಾಹೆಯಿಂದ ಜಾರಿಗೆ ಬರುವಂತೆ ಪ್ರತಿ ಎಎವೈ ಮತ್ತು ಪಿಹೆಚ್‍ಹೆಚ್ ಪಡಿತರ ಕುಟುಂಬಕ್ಕೆ ಪ್ರತಿ ಮಾಹೆ ರಿಯಾಯಿತಿ ದರದಲ್ಲಿ ಅಯೋಡಿನ್ ಮತ್ತು ಕಬ್ಬೀಣಾಂಶಯುಕ್ತ 01 ಕೆ.ಜಿ ದ್ವಿಗುಣ ಬಲವರ್ಧಿತ ಉಪ್ಪನ್ನು ವಿತರಿಸಲು ಪ್ರಾರಂಭಿಸಲಾಯಿತು.


ಸರ್ಕಾರದ ಆದೇಶ ಸಂಖ್ಯೆ:ಆನಾಸ/136/ಡಿಆರ್ಎ/2016, ದಿನಾಂಕ: 29.07.2016ರನ್ವಯ ಅಕ್ಟೋಬರ್-2016ರ ಮಾಹೆಯಿಂದ ಜಾರಿಗೆ ಬರುವಂತೆ ಎಎವೈ ಮತ್ತು ಪಿಹೆಚ್ಹೆಚ್ ಕುಟುಂಬಗಳಿಗೆ ಪ್ರತಿ ಮಾಹೆ ರಿಯಾಯಿತಿ ದರದಲ್ಲಿ ವಿಟಮಿನ್ ‘ಎ’ ಮತ್ತು ‘ಡಿ’ ಒಳಗೊಂಡ ಒಂದು ಲೀಟರ್ ಬಲವರ್ಧಿತ ತಾಳೆ ಎಣ್ಣೆ ವಿತರಣೆಯನ್ನು ಪ್ರಾರಂಭಿಸಲಾಯಿತು. ಇದಲ್ಲದೆ ಸರ್ಕಾರದ ಆದೇಶ ಸಂಖ್ಯೆ:ಆನಾಸ/281/ಡಿಆರ್ಎ/2016, ದಿನಾಂಕ: 24.11.2016ರನ್ವಯ ಬೆಂಗಳೂರು ನಗರ ಜಿಲ್ಲೆ, ಬೆಂಗಳೂರ ಅನೌಪಚಾರಿಕ ಪಡಿತರ ಪ್ರದೇಶ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನವರಿ-2017ರ ಮಾಹೆಯಿಂದ 01 ಲೀಟರ್ ಸೂರ್ಯಕಾಂತಿ ಎಣ್ಣೆಯನ್ನು ರೂ. 40/-ರ ರಿಯಾಯಿತಿ ದರದಲ್ಲಿ ಹಂಚಿಕೆ ಮಾಡಲಾಗಿರುತ್ತದೆ. ಸರ್ಕಾರದ ಸೇರ್ಪಡೆ ಆದೇಶ ಸಂಖ್ಯೆ:ಆನಾಸ/150/ಡಿಆರ್ಎ/2017, ದಿನಾಂಕ: 15.05.2017ರನ್ವಯ 2017-18ನೇ ಸಾಲಿನಿಂದ ತಾಳೆಎಣ್ಣೆ ಮತ್ತು ಉಪ್ಪಿನ ಹಂಚಿಕೆಯನ್ನು ಸ್ಥಗಿತಗೊಳಿಸಲಾಗಿರುತ್ತದೆ.


ಸರ್ಕಾರದ ಆದೇಶ ಸಂಖ್ಯೆ:ಆನಾಸ/279/ಡಿಆರ್ಎ/2016, ದಿನಾಂಕ: 07.10.2016ರನ್ವಯ ಜನವರಿ-2017ರಿಂದ ಮಾರ್ಚ್-2017ರ ಮೂರು ಮಾಹೆಗಳಿಗೆ ಎಎವೈ ಮತ್ತು ಪಿಹೆಚ್ಹೆಚ್ ಪಡಿತರ ಕುಟುಂಬಕ್ಕೆ 01 ಕೆ.ಜಿ ಬೇಳೆಕಾಳು ವಿತರಿಸಲು ಆದೇಶಿಸಿದಂತೆ ಫೆಬ್ರವರಿ ಮತ್ತು ಮಾರ್ಚ್-2017ರ ಮಾಹೆಗಳಲ್ಲಿ 01 ಕೆ.ಜಿ ಹೆಸರುಕಾಳನ್ನು ಸರ್ಕಾರದ ಪತ್ರ ಸಂಖ್ಯೆ:ಆನಾಸ/279/ಡಿಆರ್ಎ/2016, ದಿನಾಂಕ: 17.12.2016ರನ್ವಯ ಪ್ರತಿ ಕೆ.ಜಿಗೆ ರೂ. 33/-ರ ರಿಯಾಯಿತಿ ದರದಲ್ಲಿ ಹಂಚಿಕೆ ಮಾಡಲಾಗಿರುತ್ತದೆ.


ಸರ್ಕಾರದ ಆದೇಶ ಸಂಖ್ಯೆ:ಆನಾಸ/150/ಡಿಆರ್ಎ/2017, ದಿನಾಂಕ: 22.04.2017ರನ್ವಯ ಏಪ್ರಿಲ್-2017 ರಿಂದ ಜಾರಿಗೆ ಬರುವಂತೆ ಎಎವೈ ಮತ್ತು ಪಿಹೆಚ್ಹೆಚ್ ಪಡಿತರ ಕುಟುಂಬಕ್ಕೆ 01 ಕೆ.ಜಿ ತೊಗರಿಬೇಳೆಯನ್ನು ಸರ್ಕಾರದ ಪತ್ರ ಸಂಖ್ಯೆ:ಆನಾಸ/279/ಡಿಆರ್ಎ/2016, ದಿನಾಂಕ:03.03.2017ರಲ್ಲಿ ನಿಗಧಿಪಡಿಸಿದಂತೆ ಪ್ರತಿ ಕೆ.ಜಿಗೆ ರೂ. 38/-ರ ದರದಲ್ಲಿ ವಿತರಿಸಲು ಕ್ರಮ ಕೈಗೊಳ್ಳಲಾಯಿತು. ಪ್ರಸ್ತುತ ಸದರಿ ಹಂಚಿಕೆ ಜಾರಿಯಲ್ಲಿದೆ.


ಸರ್ಕಾರದ ಆದೇಶ ಸಂಖ್ಯೆ:ಆನಾಸ/150/ಡಿಆರ್ಎ/2017, ದಿನಾಂಕ: 22.04.2017ರನ್ವಯ 2017-18ನೇ ಸಾಲಿನ ಏಪ್ರಿಲ್-2017 ರ ಮಾಹೆಯಿಂದ ಆದ್ಯತಾ ಕುಟುಂಬ ಪಡಿತರ ಚೀಟಿಯ ಪ್ರತಿ ಸದಸ್ಯರಿಗೆ 5 ಕೆ.ಜಿ. ಆಹಾರಧಾನ್ಯದೊಂದಿಗೆ ಹೆಚ್ಚುವರಿ 2 ಕೆ.ಜಿ. ಆಹಾರಧಾನ್ಯ ಸೇರಿಸಿ ಒಟ್ಟು 7 ಕೆ.ಜಿ ಆಹಾರಧಾನ್ಯವನ್ನು ವಿತರಿಸಲಾಗುತ್ತಿದೆ. ಈ ಹೆಚ್ವುವರಿ ಪ್ರಮಾಣದ ಮಾಹೆಯಾನ ಬೇಡಿಕೆಯನ್ನು ಭಾರತ ಆಹಾರ ನಿಗಮದಿಂದ OMSS (D) [(Open Market Sales Scheme (Domestic)] ಹರಾಜಿನಲ್ಲಿ ಅಕ್ಕಿ ಮತ್ತು ಗೋಧಿ ಖರೀದಿಸಿ ಪೂರೈಸಲಾಗುತ್ತಿದೆ.


ಆದ್ಯತೇತರ ಕುಟುಂಬ (ಎ.ಪಿ.ಎಲ್) ಪಡಿತರ ಸದಸ್ಯರಿಗೆ ಆಹಾರಧಾನ್ಯ ವಿತರಣೆ:

ಪ್ರತಿ ಮಾಹೆ ಪಡಿತರ ಪಡೆದುಕೊಳ್ಳಲು ತಮ್ಮ ಸಹಮತಿ ಸೂಚಿಸಿದಂತಹ ಎಪಿಎಲ್ ಪಡಿತರ ಚೀಟಿದಾರರಿಗೆ ಕನಿಷ್ಠ 5 ಕೆ.ಜಿ. ಮತ್ತು ಗರಿಷ್ಠ 10 ಕೆ.ಜಿ. ಆಹಾರಧಾನ್ಯವನ್ನು ವಿತರಿಸಲಾಗುತ್ತಿದೆ. ಎಂದರೆ, ಏಕ ಸದಸ್ಯ ಕುಟುಂಬಕ್ಕೆ 5 ಕೆ.ಜಿ. ಅಕ್ಕಿ ಮತ್ತು ಇಬ್ಬರು ಮತ್ತು ಹೆಚ್ಚಿನ ಸದಸ್ಯರಿರುವ ಕುಟುಂಬಕ್ಕೆ 10 ಕೆ.ಜಿ. ಅಕ್ಕಿಯನ್ನು ಪ್ರತಿ ಕೆ.ಜಿ. ಗೆ ರೂ.15/- ರ ದರದಲ್ಲಿ ವಿತರಿಸಲಾಗುತ್ತಿದ್ದು, ಈ ರೀತಿ ಹಂಚಿಕೆಗೆ ಅಗತ್ಯ ಇರುವ ಅಕ್ಕಿ ಪ್ರಮಾಣವನ್ನು ಕೇಂದ್ರ ಸರ್ಕಾರದ ಓಎಂಎಸ್ಎಸ್ (ಡಿ) ಯೋಜನೆಯಡಿ ಭಾರತ ಆಹಾರ ನಿಗಮದಿಂದ ನಡೆಸಲಾಗು ಇ-ಹರಾಜಿನಲ್ಲಿ ಖರೀದಿಸಲಾಗುತ್ತಿದೆ.


ಸೀಮೆಎಣ್ಣೆ ವಿತರಣೆ:

ರಾಜ್ಯಾದ್ಯಂತ ಏಕರೂಪದ ಸೀಮೆಎಣ್ಣೆ ವಿತರಣಾ ದರವನ್ನು ಜಾರಿಗೊಳಿಸಲಾಗಿದೆ. ಪ್ರಸ್ತುತ ಅನಿಲ ರಹಿತ ಆದ್ಯತಾ ಮತ್ತು ಅಂತ್ಯೋದಯ ಪಡಿತರ ಚೀಟಿಗಳಿಗೆ ಪ್ರತಿ ಮಾಹೆ 3 ಲೀಟರ್ನಂತೆ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಗ್ರಾಮ ಪಂಚಾಯತಿಗಳಲ್ಲಿ ನೋಂದಣಿಗೊಂಡಿರುವ ಅನಿಲ ಸಂಪರ್ಕ ಹೊಂದಿರುವ ಯಾವುದೇ ವರ್ಗದ ಪಡಿತರ ಚೀಟಿದಾರರಿಗೆ ಒಂದು ಲೀಟರ್ ಸೀಮೆಎಣ್ಣೆಯನ್ನು ಪ್ರತಿ ಲೀಟರ್ಗೆ ರೂ.35/-ರ ದರದಲ್ಲಿ ವಿತರಿಸಲಾಗುತ್ತಿದೆ.


ಪ್ರಸ್ತುತ ಕೇಂದ್ರ ಸರ್ಕಾರದಿಂದ ವಿಶೇಷ ಉದ್ದೇಶಗಳಾದ ಜಾತ್ರೆ, ಪ್ರವಾಹ, ಮೀನುಗಾರಿಕೆ ಇತ್ಯಾದಿಗಳಿಗೆ ಹಂಚಿಕೆ ನೀಡಲಾಗುವ ಸಹಾಯಧನ ರಹಿತ ದರದಲ್ಲಿ ಖರೀದಿಸಬೇಕಾದ ಸೀಮೆಎಣ್ಣೆಯನ್ನು ಮೀನುಗಾರಿಕಾ ಉದ್ದೇಶಕ್ಕಾಗಿ ಜಿಲ್ಲಾಧಿಕಾರಿಗಳು ನೀಡುವ ಪರ್ಮಿಟ್ನ ಆಧಾರದ ಮೇಲೆ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಹಂಚಿಕೆ ನೀಡಲಾಗುತ್ತಿದೆ. ಪ್ರತಿ ದೋಣಿಗೆ 300 ಲೀ.ನಂತೆ ಪ್ರತಿ ಮಾಹೆ 1355 ಕೆ.ಎಲ್ ಸೀಮೆಎಣ್ಣೆಯನ್ನು ಮೀನುಗಾರಿಕಾ ಋತುವಿನಲ್ಲಿ ನೀಡಲಾಗುತ್ತಿದೆ.


ರಾಜ್ಯದಲ್ಲಿ ಶಿವಮೊಗ್ಗ ಜಿಲ್ಲೆ, ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಬೆಂಗಳೂರು ಅನೌಪಚಾರಿಕ ಪಡಿತರ ಪ್ರದೇಶಗಳಲ್ಲಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ನಗರ ಪ್ರದೇಶಗಳಲ್ಲಿ ಪಡಿತರ ಸೀಮೆಎಣ್ಣೆ ವಿತರಣೆಯನ್ನು ಸ್ಥಗಿತಗೊಳಿಸಿ ಸೀಮೆಎಣ್ಣೆ ಮುಕ್ತ ಪ್ರದೇಶಗಳನ್ನಾಗಿ ಪರಿವರ್ತಿಸಲಾಗಿದೆ.


ಅನ್ನಭಾಗ್ಯ ಯೋಜನೆಯಡಿ ನ್ಯಾಯಬೆಲೆ ಅಂಗಡಿ ಮಾಲೀಕರ ಆರ್ಥಿಕ ಸ್ಥಿತಿ ಸುಧಾರಣೆಗಾಗಿ ಚಿಲ್ಲರೆ ಲಾಭಾಂಶ ಮತ್ತು ಸಾಗಾಣಿಕೆ ಪರಿಷ್ಕರಣೆ:

ಸರ್ಕಾರದ ಆದೇಶ ಸಂಖ್ಯೆ: ಆನಾಸ/36/ಆರ್ಪಿಆರ್/2016 ದಿ: 6/10/2016 ರನ್ವಯ ಚಿಲ್ಲರೆ ಸಾಗಾಣಿಕೆ ಮಾಡುತ್ತಿರುವ ನ್ಯಾಯಬೆಲೆ ಅಂಗಡಿಯವರಿಗೆ ಸಾಗಾಣಿಕೆ ದರ 0-10 ಕಿ.ಮೀ ರವರೆಗೆ (ಣo & ಜಿಡಿo) ಕನಿಷ್ಠ ದರ ಪ್ರತಿ ಕ್ವಿಂಟಾಲ್ ಪ್ರತಿ ಕಿಲೋ ಮೀಟರ್ಗೆ ರೂ. 14/- ರಂತೆ ಹಾಗೂ 11ನೇ ಕಿ.ಮೀ.ನಿಂದ ನಂತರ ಕ್ರಮಿಸುವ ದೂರಕ್ಕೆ ಪ್ರತಿ ಕ್ವಿಂಟಾಲ್ಗೆ ಪ್ರತಿ ಕಿ.ಮೀ.ಗೆ ರೂ.1.40/- ರಂತೆ ಸಾಗಾಣಿಕೆ ವೆಚ್ಚ ನೀಡಲಾಗುತ್ತಿದೆ. ಅದೇ ರೀತಿ ಆಹಾರಧಾನ್ಯಗಳ ಲೋಡಿಂಗ್ ಮತ್ತು ಅನ್ಲೋಡಿಂಗ್ ಹಮಾಲಿ ದರ ಪ್ರತಿ ಕ್ವಿಂಟಾಲ್ಗೆ ರೂ. 14/- ನೀಡಲಾಗುತ್ತಿದೆ.

ಸರ್ಕಾರದ ಆದೇಶ ಸಂಖ್ಯೆ:ಆನಾಸ/13/ಡಿಆರ್ಎ/2016, ದಿನಾಂಕ: 21.07.2016ರಲ್ಲಿ ಚಿಲ್ಲರೆ ಲಾಭಾಂಶ ಮೊತ್ತವನ್ನು ಪ್ರತಿ ಕ್ವಿಂಟಲ್ಗೆ ರೂ. 36/- ರಿಂದ ರೂ. 70/-ಕ್ಕೆ ಹೆಚ್ಚಿಸಿ ಆಗಸ್ಟ್-2016ರಿಂದ ಜಾರಿಗೆ ಬರುವಂತೆ ಆದೇಶಿಸಲಾಗಿರುತ್ತದೆ. ಸರ್ಕಾರದ ಆದೇಶ ಸಂಖ್ಯೆ: ಆನಾಸ 114 ಡಿರ್ಎ 2016 (ಭಾಗ-2), ದಿನಾಂಕ 05-05-2017 ರನ್ವಯ ಪಿಓಎಸ್ ಯಂತ್ರ ಅಳವಡಿಸಿಕೊಂಡು ಸದರಿ ಯಂತ್ರದ ಮುಖಾಂತರ ಪಡಿತರ ವಿತರಣೆ ಮಾಡುತ್ತಿರುವ ನ್ಯಾಯಬೆಲೆ ಅಂಗಡಿಗಳಿಗೆ ಪ್ರತಿ ಕ್ವಿಂಟಾಲ್ಗೆ ರೂ.70/- ರ ಚಿಲ್ಲರೆ ಲಾಭಾಂಶದೊಂದಿಗೆ ಪ್ರತಿ ಕ್ವಿಂಟಾಲ್ ಆಹಾರಧಾನ್ಯಗಳಿಗೆ ಹೆಚ್ಚುವರಿ ಲಾಭಾಂಶ ರೂ.17/-ಅನ್ನು ಪಾವತಿಸಲು ಕ್ರಮ ವಹಿಸಲಾಗಿದೆ.

ಸರ್ಕಾರದ ಆದೇಶ ಸಂಖ್ಯೆ: ಆನಾಸ 110 ಡಿಆರ್ಎ 2018(ಭಾ-1), ದಿನಾಂಕ 17.12.2018 ರನ್ವಯ ಚಿಲ್ಲರೆ ಲಾಭಾಂಶವನ್ನು ಪ್ರತಿ ಕ್ವಿಂಟಲ್ಗೆ ರೂ.87/- ರಿಂದ ರೂ.100/-ಕ್ಕೆ ಹೆಚ್ಚಳಗೊಳಿಸಲಾಗಿರುತ್ತದೆ. ಸರ್ಕಾರದ ಆದೇಶ ಸಂಖ್ಯೆ: ಆನಾಸ/114/ಡಿಆರ್ಎ/2016 (ಭಾಗ-2) ದಿ: 5/5/2017 ರನ್ವಯ PಔS ಯಂತ್ರಗಳನ್ನು ಅಳವಡಿಸದ ನ್ಯಾಯಬೆಲೆ ಅಂಗಡಿಗಳಿಗೆ ನೀಡಲಾಗುತ್ತಿರುವ ಚಿಲ್ಲರೆ ಲಾಭಾಂಶ ರೂ. 70/- ಕ್ವಿಂ. ಅನ್ನು ಮಾರ್ಪಡಿಸಿ, ಸದರಿ ನ್ಯಾಯಬೆಲೆ ಅಂಗಡಿಗಳು ಪಡಿತರ ವಿತರಿಸುವ ಪ್ರತಿ ಪಡಿತರ ಚೀಟಿಗೆ ರೂ. 13/- ರಂತೆ ಲಾಭಾಂಶದ ಪಾವತಿಗೆ ಕ್ರಮವಹಿಸಲಾಗಿದೆ.

ಅನ್ನಭಾಗ್ಯ ಯೋಜನೆ ಪರಿಣಾಮಕಾರಿಯಾಗಿ ಜಾರಿಗೆ ಬರಲು ಕೈಗೊಂಡ ಕ್ರಮಗಳು:

ರಾಜ್ಯ ಸರ್ಕಾರವು ಅನ್ನಭಾಗ್ಯ ಯೋಜನೆಯು ಸಮರ್ಪಕವಾಗಿ ಜಾರಿಗೆ ತರುವ ನಿಟ್ಟಿನಲ್ಲಿ ಸಮರ್ಥನೀಯವಾದ ಕ್ರಮಗಳನ್ನು ಕೈಗೊಂಡಿರುತ್ತದೆ. ಸದರಿ ಯೋಜನೆಯನ್ನು ಜವಾಬ್ದಾರಿಯುತವಾಗಿ ಹಾಗೂ ಪಾರದರ್ಶಕವಾಗಿ ನಿರ್ವಹಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಗಣನೀಯವಾದ ಕ್ರಮಗಳನ್ನು ಕೈಗೊಂಡಿರುತ್ತದೆ.


ಪಡಿತರ ವಿತರಣಾ ವ್ಯವಸ್ಥೆಯ ಸಂಪೂರ್ಣ ಗಣಕೀಕರಣ:

ಸಾರ್ವಜನಿಕ ವಿತರಣಾ ಪದ್ಧತಿಯ ಗಣಕೀಕರಣದಡಿ ಪಡಿತರ ಚೀಟಿದಾರರ ದತ್ತಾಂಶವನ್ನು ಸಿದ್ಧಪಡಿಸಲಾಗಿರುತ್ತದೆ. ಪ್ರತಿ ಫಲಾನುಭವಿಯ ಆಧಾರ್ ಸಂಖ್ಯೆಯನ್ನು ಪಡಿತರ ಚೀಟಿಯೊಂದಿಗೆ ಜೋಡಣೆಗೊಳಿಸಲಾಗಿರುತ್ತದೆ. ಏಪಿಎಲ್ ಪಡಿತರ ಚೀಟಿ ಕೋರಿ ಆನ್‍ಲೈನ್‍ನಲ್ಲಿ ಅರ್ಜಿದಾರರು ಅರ್ಜಿ ಸಲ್ಲಿಸಿ ತಮ್ಮ ಪಡಿತರ ಚೀಟಿಯ ಮುದ್ರಿತ ಪ್ರತಿಯನ್ನು ಓಟಿಪಿ ಸೃಜಿಸಿ ತಾವೇ ಪಡೆದುಕೊಳ್ಳಬಹುದಾಗಿರುತ್ತದೆ. ಪಿಹೆಚ್‍ಹೆಚ್ ಪಡಿತರ ಚೀಟಿಗಾಗಿ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸುವ ವ್ಯವಸ್ಥೆ, ಗೋದಾಮುಗಳಲ್ಲಿ ಗಣಕಯಂತ್ರಗಳ ಅಳವಡಿಕೆ ಮತ್ತು ಆನ್‍ಲೈನ್ ಬಿಲ್ಲಿಂಗ್ ಹಾಗೂ ಹಂತ ಹಂತವಾಗಿ ನ್ಯಾಯಬೆಲೆ ಅಂಗಡಿಗಳಲ್ಲಿ ಪಿಓಎಸ್ ಯಂತ್ರಗಳ ಅಳವಡಿಕೆ ಕ್ರಮಗಳನ್ನು ಕೈಗೊಳ್ಳಲಾಗಿರುತ್ತದೆ.


ಸಹಕಾರ ಸಂಘಗಳು ಮತ್ತು ಸರ್ಕಾರದ ಸಂಸ್ಥೆಗಳಿಗೆ ನ್ಯಾಯಬೆಲೆ ಅಂಗಡಿ ಮಂಜೂರಾತಿಗೆ ಆದ್ಯತೆ:

ಹೊಸ ನ್ಯಾಯಬೆಲೆ ಅಂಗಡಿಗಳನ್ನು ಮಂಜೂರು ಮಾಡುವ ಸಂದರ್ಭದಲ್ಲಿ ಸರ್ಕಾರದ ಅಧಿಸೂಚನೆ ಸಂಖ್ಯೆ: ಎಫ್‍ಸಿಎಸ್/17/ಆರ್‍ಪಿಆರ್/2011(1) ದಿನಾಂಕ:10-06-2016 ರನ್ವಯ ರಾಜ್ಯ ಸರ್ಕಾರಿ ಸ್ವಾಮ್ಯಕ್ಕೊಳಪಟ್ಟ ನಿಗಮ ಅಥವಾ ಕಂಪನಿಗಳು ಅಥವಾ ಗ್ರಾಮ ಪಂಚಾಯ್ತಿ /ನಗರ ಸ್ಥಳೀಯ ಸಂಸ್ಥೆಗಳು, ಪ್ರಾಥಮಿಕ ಕೃಷಿ ಸಹಕಾರಸಂಘ, ತೋಟಗಾರಿಕಾ ಬೆಳೆಗಾರರ ಸಹಕಾರ ಮಾರುಕಟ್ಟೆ ಮತ್ತು ಸಂಸ್ಕರಣಾ ಸಹಕಾರ ಸಂಘ ನಿಯಮಿತ, ಹಾಲು ಉತ್ಪಾದಕರ ಸಹಕಾರ ಸಂಘ (ನಿ.) ಕೆ.ಎಂ.ಎಫ್., ತಾಲ್ಲೂಕು ಕೃಷಿ ಪ್ರಾಥಮಿಕ ಸಹಕಾರ ಮಾರುಕಟ್ಟೆ ಸಂಘ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಿಂದ ಮಾನ್ಯತೆ ಪಡೆದ ಸ್ತ್ರೀಶಕ್ತಿ ಗುಂಪುಗಳು/ಸ್ವಸಹಾಯ ಸಂಘಗಳಿಗೆ ಆದ್ಯತೆ ನೀಡಲಾಗಿರುತ್ತದೆ.


ಪಡಿತರ ಖಾತರಿ ಯೋಜನೆ:

ಸರ್ಕಾರದ ಆದೇಶ ಸಂಖ್ಯೆ ಆನಾಸ 284 ಡಿಆರ್‍ಎ 2014 ದಿನಾಂಕ 26-04-2016ರ ರೀತ್ಯಾ ಪಡಿತರ ಚೀಟಿದಾರರಿಗೆ ಪಡಿತರ ವಸ್ತುಗಳನ್ನು ಸಕಾಲದಲ್ಲಿ ಪೂರೈಸುವ ಸಲುವಾಗಿ ಸರ್ಕಾರವು ಪಡಿತರ ಖಾತ್ರಿ ಯೋಜನೆಯನ್ನು ದಿನಾಂಕ: 01-05-2016 ರಿಂದ ಈ ಕೆಳಗಿನಂತೆ ಅನುಷ್ಟಾನಗೊಳಿಸಿ ಆದೇಶಿಸಿರುತ್ತದೆ. ಅದರನ್ವಯ,

ಎಲ್ಲಾ ನ್ಯಾಯಬೆಲೆ ಅಂಗಡಿಗಳು ಪಡಿತರ ಆಹಾರ ವಸ್ತುಗಳನ್ನು ಪ್ರತಿ ಮಾಹೆಯ ಮೊದಲ ದಿನದಿಂದಲೇ ವಿತರಿಸತಕ್ಕದ್ದು.

ನ್ಯಾಯಬೆಲೆ ಅಂಗಡಿಗಳು ಪ್ರತಿ ಮಾಹೆಯ ಎಲ್ಲಾ ದಿನಗಳು ಈ ಹಿಂದಿನಂತೆ ನಿಗಧಿತ ಅವಧಿಯಾದ ಬೆಳಿಗ್ಗೆ 8 ರಿಂದ ಮಧ್ಯಾಹ್ನ 12 ರವರೆಗೆ ಮತ್ತು ಸಂಜೆ 4ರಿಂದ 8 ಘಂಟೆಯವರೆಗೆ ತಪ್ಪದೇ ತೆರೆಯತಕ್ಕದ್ದು.(ಪ್ರತಿ ಮಂಗಳವಾರ ಮತ್ತು ರಾಜ್ಯ ಸರ್ಕಾರದ ಇತರೇ ರಜಾ ದಿನಗಳನ್ನು ಹೊರತುಪಡಿಸಿ)

ಪಡಿತರ ಖಾತರಿ ಯೋಜನೆ ಆದೇಶವನ್ನು ಪರಿಷ್ಕರಿಸಿ ಸರ್ಕಾರದ ಮಾರ್ಪಾಡು ಆದೇಶ ಸಂಖ್ಯೆ:ಆನಾಸ/284/ಡಿಆರ್‍ಎ/2014, ದಿನಾಂಕ: 28.06.2018ರಲ್ಲಿ ನ್ಯಾಯಬೆಲೆ ಅಂಗಡಿ ಕಾರ್ಯನಿರ್ವಹಿಸುವ ಎಲ್ಲಾ ದಿನಗಳಲ್ಲೂ ಬೆಳಿಗ್ಗೆ 07 ರಿಂದ ಮಧ್ಯಾಹ್ನ 12:00 ಗಂಟೆಯವರೆಗೆ ಮತ್ತು ಸಂಜೆ 4:00 ರಿಂದ ರಾತ್ರಿ 8:00 ಗಂಟೆಯವರೆಗೆ ತಪ್ಪದೇ ನ್ಯಾಯಬೆಲೆ ಅಂಗಡಿ ತೆರೆಯತಕ್ಕದ್ದು ಎಂದು ಆದೇಶಿಸಲಾಗಿರುತ್ತದೆ.

ಅನ್ನಭಾಗ್ಯ ಅದಾಲತ್:

ಸರ್ಕಾರದ ಆದೇಶ ಸಂಖ್ಯೆ ಆನಾಸ 125 ಡಿಆರ್‍ಎ 2014 ದಿನಾಂಕ 9-6-2014 ರನ್ವಯ ಪÀಡಿತರ ಚೀಟಿದಾರರ ಸಮಸ್ಯೆಗಳನ್ನು ಬಗೆಹರಿಸುವ ವೇದಿಕೆಯಾಗಿ ಪ್ರತಿ ತಿಂಗಳು 7ನೇ ತಾರೀಖಿನಂದು ನ್ಯಾಯಬೆಲೆ ಅಂಗಡಿ ಮಟ್ಟದ ಆಹಾರ ಅದಾಲತ್‍ಗಳನ್ನು ಓರ್ವ ಸರ್ಕಾರಿ ಅಧಿಕಾರಿಯ ಸಮಕ್ಷಮದಲ್ಲಿ ನಡೆಸಲಾಗುತ್ತಿದೆ.

ಅನ್ನಭಾಗ್ಯ ಆದಾಲತ್‍ನಲ್ಲಿ ಈ ಕೆಳಗಿನ ಸಮಸ್ಯೆಗಳನ್ನು ಪರಿಶೀಲಿಸಿ ಬಗೆಹರಿಸಲಾಗುತ್ತಿದೆ.

ಪಡಿತರ ಚೀಟಿ ಮತ್ತು ನ್ಯಾಯಬೆಲೆ ಅಂಗಡಿಯ ಮೇಲಿನ ದೂರುಗಳು

ಪಡಿತರ ಚೀಟಿದಾರರ ಹಕ್ಕಿನಂತೆ ವಿತರಿಸಬೇಕಾದ ಪಡಿತರ ವಸ್ತುಗಳ ಗುಣಮಟ್ಟ, ದರ ಮತ್ತು ವಿತರಣಾ ಪ್ರಮಾಣಗಳನ್ನು ಕುರಿತ ದೂರುಗಳು

ಪಡಿತರ ವಸ್ತುಗಳ ತೂಕ/ಅಳತೆಗೆ ಸಂಬಂಧಿಸಿದ ದೂರುಗಳು

ನ್ಯಾಯಬೆಲೆ ಅಂಗಡಿಗಳು ನಿಗಧಿತ ವೇಳೆಯಲ್ಲಿ ಕಾರ್ಯನಿರ್ವಹಿಸದಿರುವ ಬಗೆಗಿನ ದೂರುಗಳು

ಅನರ್ಹ/ನಕಲಿ ಪಡಿತರ ಚೀಟಿಗಳು ಮತ್ತು ಪಡಿತರ ವಸ್ತುಗಳ ದುರ್ಬಳಕೆ ಕುರಿತ ದೂರುಗಳು

ನ್ಯಾಯಬೆಲೆ ಅಂಗಡಿ ಮಟ್ಟದ ಜಾಗೃತಿ ಸಮಿತಿಗಳ ಕಾರ್ಯನಿರ್ವಹಣೆ

ಅನ್ನಭಾಗ್ಯ ಅದಾಲತ್ ನಡೆಸುವ ಅಧಿಕಾರಿಯು ಅದಾಲತ್‍ನಲ್ಲಿ ಕಂಡು ಬಂದ ದೂರುಗಳ ಕುರಿತು ಸಂಬಂಧಿಸಿದ ಜಿಲ್ಲಾಧಿಕಾರಿಗಳ ಗಮನಕ್ಕೆ ತರಬೇಕಾಗುತ್ತದೆ. ಜಿಲ್ಲಾಧಿಕಾರಿಗಳು ಅನ್ನಭಾಗ್ಯ ಅದಾಲತ್ ದೂರುಗಳನ್ನು ಪರಿಹರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವರು.

ಬಹುಮಾನ ಯೋಜನೆ:

ಪಡಿತರ ಸೋರಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರ ಸಹಭಾಗಿತ್ವದಲ್ಲಿ ಅನರ್ಹ ಪಡಿತರ ಚೀಟಿಗಳನ್ನು ಪತ್ತೆ ಹಚ್ಚಲು ಬಹುಮಾನ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ಪತ್ತೆಯಾದ ಪ್ರತಿ ಅನರ್ಹ ಪಡಿತರ ಚೀಟಿಗೆ ಮಾಹಿತಿದಾರರಿಗೆ ರೂ.400/- ನಗದು ಬಹುಮಾನ ನೀಡಲಾಗುತ್ತದೆ. ಅಲ್ಲದೇ, ಅಕ್ರಮ ಸಾಗಾಣಿಕೆ/ಕಾಳಸಂತೆಯಲ್ಲಿ ಪಡಿತರ ಮಾರಾಟವನ್ನು ಪತ್ತೆ ಮಾಡಿ ಮಾಹಿತಿ ನೀಡುವ ಸಾರ್ವಜನಿಕರಿಗೆ ಪ್ರಕರಣವು ಸಾಬೀತಾದ ನಂತರ ಒಟ್ಟು ದಾಸ್ತಾನಿನ ಮೌಲ್ಯದ ಶೇಕಡ 5 ರಷ್ಟು ನಗದು ಬಹುಮಾನವನ್ನು ನೀಡುವ ಯೋಜನೆಯನ್ನು ಜಾರಿಗೊಳಿಸಲಾಗಿದೆ.


ಕಾಳಸಂತೆ ಕಾಯ್ದೆಯ ಅನುಷ್ಠಾನ:

Prevention of Black Marketing and Maintenance of Supply of Essential Commodities Act 1980 ಪರಿಣಾಮಕಾರಿ ಅನುಷ್ಠಾನಕ್ಕೆ ಅಗತ್ಯವಿರುವ ಸರ್ಕಾರದ ಆದೇಶಗಳನ್ನು ಹೊರಡಿಸಿ ಸದರಿ ಕಾಯ್ದೆಯನ್ವಯ ಕಟ್ಟುನಿಟ್ಟಿನ ಕ್ರಮ ಜರುಗಿಸಲು ಕಾರ್ಯನಿರ್ವಾಹಕ ಅಧಿಕಾರಿ/ ಸಿಬ್ಬಂದಿಗಳಿಗೆ ಸೂಚನೆ ನೀಡಿರುತ್ತದೆ.


ಎಸ್.ಎಂ.ಎಸ್ ವ್ಯವಸ್ಥೆ:

ದೇಶದಲ್ಲಿಯೇ ಪ್ರಥಮ ಬಾರಿಗೆ ಕರ್ನಾಟಕ ಸರ್ಕಾರವು ಪಡಿತರ ಚೀಟಿಗಳಿಗೆ ನೀಡಲಾಗುವ ಪಡಿತರ ಪದಾರ್ಥಗಳ ಪ್ರಮಾಣ ಹಾಗೂ ಅವುಗಳ ಒಟ್ಟು ಮೊತ್ತಗಳನ್ನು ತಿಳಿಸುವ ಮಾಹಿತಿಯನ್ನು ಎಸ್.ಎಂ.ಎಸ್ ಮೂಲಕ ಪಡಿತರ ಚೀಟಿದಾರರಿಗೆ ಉಚಿತವಾಗಿ ನೀಡುತ್ತಿದೆ.


ದೂರು ನಿವಾರಣೆಗೆ ಕ್ರಮ (Complaint Redressal):

ಅನ್ನಭಾಗ್ಯ ಯೋಜನೆಯಡಿ ಯಾವುದಾದರೂ ದೂರುಗಳಿದ್ದಲ್ಲಿ ಸದರಿ ದೂರುಗಳನ್ನು ದಾಖಲಿಸಲು “ಸಹಾಯವಾಣಿ“ ಉಚಿತ ದೂರವಾಣಿ ಸಂಖ್ಯೆ 1967 ಹಾಗೂ 1800 425 9339ಕ್ಕೆ ಕರೆ ನೀಡುವ ಸೌಲಭ್ಯವನ್ನು ಒದಗಿಸಲಾಗಿದೆ. ಇಲಾಖೆಯ ವೆಬ್ ಸೈಟ್‍ನಲ್ಲಿ ಆನ್‍ಲೈನ್ ಮೂಲಕ ಸಹ ದೂರುಗಳನ್ನು ಸಲ್ಲಿಸುವ ಅವಕಾಶ ಕಲ್ಪಿಸಲಾಗಿದೆ. ದೂರುಗಳನ್ನು ದಾಖಲಿಸಲು ಇಲ್ಲಿ ಕ್ಲಿಕ್ಕಿಸಿ


ಸಾರ್ವಜನಿಕ ವಿತರಣಾ ಪದ್ಧತಿಯ ಮೇಲ್ವಿಚಾರಣೆ, ಪರಿಣಾಮಕಾರಿ ಅನುಷ್ಠಾನ ಮತ್ತು ಕುಂದುಕೊರತೆಗಳ ನಿವಾರಣೆಗಾಗಿ ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ 2013ರನ್ವಯ ರಾಜ್ಯ ಸರ್ಕಾರವು ಕೈಗೊಂಡ ಕ್ರಮಗಳು:

ಸರ್ಕಾರದ ಆದೇಶ ಸಂಖ್ಯೆ: ಆನಾಸ 52 ಡಿಆರ್‍ಎ 2012, ದಿನಾಂಕ 05-09-2013 ರನ್ವಯ ಜಿಲ್ಲಾಧಿಕಾರಿಗಳನ್ನು ಜಿಲ್ಲಾ ಕುಂದುಕೊರತೆ ನಿವಾರಣಾ ಅಧಿಕಾರಿಗಳನ್ನಾಗಿ (ಡಿಜಿಆರ್‍ಓ) ನೇಮಿಸಲಾಗಿರುತ್ತದೆ.

ಕುಂದುಕೊರತೆ ನಿವಾರಣಾ ಅಧಿಕಾರಿಗಳು (ಡಿಜಿಆರ್‍ಓ) ದೂರನ್ನು ವಿಲೇವಾರಿ ಮಾಡುವ ಕುರಿತು ಸರ್ಕಾರದ ಆದೇಶ ಸಂಖ್ಯೆ: ಆನಾಸ 52 ಡಿಆರ್‍ಎ 2012 (1), ದಿನಾಂಕ 18-06-2016 ರಲ್ಲಿ ಮಾರ್ಗಸೂಚಿಗಳನ್ನು ರೂಪಿಸಲಾಗಿರುತ್ತದೆ.

ಸರ್ಕಾರದ ಆದೇಶ ಸಂಖ್ಯೆ: ಆನಾಸ 52 ಡಿಆರ್‍ಎ 2012, ದಿನಾಂಕ 05-09-2013 ಮತ್ತು 24-03-2017 ರನ್ವಯ ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಹಾಯಕ ನಿರ್ದೇಶಕರನ್ನು ಜಿಲ್ಲಾ ಮಟ್ಟದ ಮತ್ತು ತಹಶೀಲ್ದಾರರು (ಗ್ರೇಡ್ 1) ಇವರನ್ನು ತಾಲ್ಲೂಕು ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನಾಗಿ ನೇಮಕಾತಿ ಮಾಡಲಾಗಿರುತ್ತದೆ.

ನೋಡಲ್ ಅಧಿಕಾರಿಗಳ ಕರ್ತವ್ಯಗಳ ಕುರಿತು ಸರ್ಕಾರದ ಆದೇಶ ದಿನಾಂಕ 18-06-2016 ರಲ್ಲಿ ಮಾರ್ಗಸೂಚಿಗಳನ್ನು ರೂಪಿಸಲಾಗಿರುತ್ತದೆ.

ಸರ್ಕಾರದ ಆದೇಶ ಸಂಖ್ಯೆ: ಆನಾಸ 52 ಡಿಆರ್‍ಎ 2012, ದಿನಾಂಕ 10-06-2017 ರನ್ವಯ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯನ್ನು ರಾಜ್ಯ ಆಹಾರ ಆಯೋಗದ ಕರ್ತವ್ಯ ನಿರ್ವಹಿಸಲು ಆದೇಶಿಸಲಾಗಿತ್ತು. ತದನಂತರ ಸರ್ಕಾರದ ಆದೇಶ ಸಂಖ್ಯೆ: ಆನಾಸ 100 ಡಿಆರ್‍ಎ 2017, ದಿನಾಂಕ 5-7-2017 ರನ್ವಯ ಪ್ರತ್ಯೇಕ ಆಹಾರ ಆಯೋಗವನ್ನು ರಚಿಸಲಾಗಿರುತ್ತದೆ.

ನ್ಯಾಯಬೆಲೆ ಅಂಗಡಿ, ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಜಾಗೃತಿ ಸಮಿತಿಗಳ ರಚನೆಗೆ ಸಂಬಂಧಿಸಿದಂತೆ ಸರ್ಕಾರದ ಆದೇಶ ಸಂಖ್ಯೆ: ಎಫ್‍ಸಿಎಸ್ 144 ಡಿಆರ್‍ಎ 2013, ದಿನಾಂಕ 30-05-2016 ಮತ್ತು ದಿನಾಂಕ 08-11-2016 ಅನ್ನು ಹೊರಡಿಸಲಾಗಿರುತ್ತದೆ. ಅದರನ್ವಯ ನ್ಯಾಯಬೆಲೆ ಅಂಗಡಿ ವiಟ್ಟದಲ್ಲಿ ಮೂರು ಮಹಿಳಾ ಸದಸ್ಯರನ್ನೊಳಗೊಂಡಂತೆ ಜಾಗೃತ ಸಮಿತಿಯನ್ನು ರಚಿಸಲಾಗಿರುತ್ತದೆ. ಈ ಮಹಿಳಾ ಸದಸ್ಯರು ಆಯಾ ನ್ಯಾಯಬೆಲೆ ಅಂಗಡಿಗೆ ನಿಯೋಜಿಸಲಾಗಿರುವ ಪಡಿತರ ಚೀಟಿದಾರರಾಗಿದ್ದು, ಇವರನ್ನು ರ್ಯಾಂಡಮ್ ಆಗಿ ತಂತ್ರಾಂಶದ ಮುಖಾಂತರ ಎನ್.ಐ.ಸಿ. ಯವರು ಆಯ್ಕೆ ಮಾಡಿರುತ್ತಾರೆ. ಸದರಿ ಸಮಿತಿ ಸದಸ್ಯರ ಅಧಿಕಾರ ಮತ್ತು ಕಾರ್ಯ ಸೂಚಿಗಳನ್ನು ಸರ್ಕಾರದ ಆದೇಶ ಸಂಖ್ಯೆ: ಆನಾಸ 52 ಡಿಆರ್‍ಎ 2012 (5), ದಿನಾಂಕ 18-06-2016ರಲ್ಲಿ ರೂಪಿಸಲಾಗಿರುತ್ತದೆ. ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಜಾಗೃತ ಸಮಿತಿಗಳ ರಚನೆಗೆ ಕ್ರಮ ವಹಿಸಲಾಗಿರುತ್ತದೆ. ಹಾಗೂ ರಾಜ್ಯ ಮಟ್ಟದ ಜಾಗೃತ ಸಮಿತಿಯನ್ನು ರಚಿಸಲಾಗಿರುತ್ತದೆ.

ಸರ್ಕಾರದ ಆದೇಶ ಸರ್ಕಾರದ ಆದೇಶ ಸಂಖ್ಯೆ: ಆನಾಸ 52 ಡಿಆರ್‍ಎ 2012 (4), ದಿನಾಂಕ 18-06-2016ರ ಆದೇಶದನ್ವಯ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಸಾಮಾಜಿಕ ಲೆಕ್ಕಪರಿಶೋಧನಾ ನಿಯಮಗಳು 2011ರಡಿ ಸ್ಥಾಪಿಸಲಾಗಿರುವ ಸಾಮಾಜಿಕ ಲೆಕ್ಕಪರಿಶೋಧನಾ ನಿರ್ದೇಶನಾಲಯ, ಈ ಸಂಸ್ಥೆಯ ಮುಖಾಂತರ ಸಾರ್ವಜನಿಕ ವಿತರಣಾ ಪದ್ಧತಿಯಡಿ ನ್ಯಾಯಬೆಲೆ ಅಂಗಡಿಗಳ ಕಾರ್ಯ ನಿರ್ವಹಣೆಯ ಸಾಮಾಜಿಕ ಲೆಕ್ಕ ಪರಿಶೋಧನೆ ಕೈಗೊಳ್ಳಲಾಗುತ್ತಿದೆ. ಪ್ರಸಕ್ತ ಸಾಲಿನ ಏಪ್ರಿಲ್ 2017ರ ಮಾಹೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಪ್ರತಿ ತಾಲ್ಲೂಕಿನ 4 ನಾಲ್ಕ ನ್ಯಾಯಬೆಲೆ ಅಂಗಡಿಗಳಂತೆ ಒಟ್ಟು 706 ನ್ಯಾಯಬೆಲೆ ಅಂಗಡಿಗಳಲ್ಲಿ ಸಾಮಾಜಿಕ ಲೆಕ್ಕ ಪರಿಶೋಧನೆಯನ್ನು ಕೈಗೊಳ್ಳಲಾಗಿರುತ್ತದೆ.

ಅನ್ನಭಾಗ್ಯ ಯೋಜನೆಯ ಫಲಿತಾಂಶಗಳು:

ಹಸಿವುಮುಕ್ತ ಕರ್ನಾಟಕ ನಿರ್ಮಾಣದ ಧ್ಯೇಯದೊಂದಿಗೆ ಅನ್ನಭಾಗ್ಯ ಯೋಜನೆಯನ್ನು ಜಾರಿಗೊಳಿಸಲಾಗಿರುತ್ತದೆ. ಈ ಯೋಜನೆಯಡಿ ಪಡಿತರ ಚೀಟಿದಾರರಿಗೆ ಅಕ್ಕಿ, ಗೋಧಿ, ರಾಗಿ, ಜೋಳ, ದ್ವಿಗುಣ ಸಾರವರ್ಧಿತ ಖಾದ್ಯ ತೈಲ, ದ್ವಿಗುಣ ಸಾರವರ್ಧಿತ ಉಪ್ಪು ಮತ್ತು ಬೇಳೆಕಾಳುಗಳನ್ನು ಉಚಿತವಾಗಿ/ರಿಯಾಯಿತಿ ದರದಲ್ಲಿ ವಿತರಿಸಿರುವುದರಿಂದ ಪಡಿತರ ಫಲಾನುಭವಿಗಳಿಗೆ ಅಗತ್ಯ ಪೋಷಕಾಂಶಗಳ ಬೆಂಬಲವನ್ನು ನೀಡಿ ಅನ್ನಭಾಗ್ಯ ಯೋಜನೆಯ ಧ್ಯೇಯವನ್ನು ಹೆಚ್ಚಿನ ಮಟ್ಟದಲ್ಲಿ ಸಾಧಿಸಲಾಗಿದೆ. ಅನ್ನಭಾಗ್ಯ ಯೋಜನೆಯಡಿ ಉಚಿತವಾಗಿ ಆಹಾರ ಧಾನ್ಯ ವಿತರಣೆ ಮಾಡುತ್ತಿರುವುದರಿಂದ ಫಲಾನುಭವಿ ಕುಟುಂಬಗಳ ದುಡಿಮೆಯನ್ನು ಕುಟುಂಬದ ಇತರೇ ಜೀವನಾವಶ್ಯಕ ಅಗತ್ಯಗಳಿಗಾಗಿ ಬಳಸುವುದರಿಂದ ಅವರ ಕೊಳ್ಳುವ ಶಕ್ತಿಯನ್ನು ಹೆಚ್ಚಿಸಿದೆ. ಬೆಂಬಲಬೆಲೆ ಯೋಜನೆಯಡಿ ಖರೀದಿಸುವ ರಾಗಿ ಜೋಳದಂತಹ ಒರಟು ಧಾನ್ಯಗಳು ಮತ್ತು ಬೇಳೆಕಾಳುಗಳನ್ನು ಅನ್ನಭಾಗ್ಯ ಯೋಜನೆಯಲ್ಲಿ ಬಳಸಿಕೊಳ್ಳುತ್ತಿರುವುದರಿಂದ ಸ್ಥಳೀಯ ರೈತರಿಗೆ ನಿರೀಕ್ಷಿತ ಮಾರುಕಟ್ಟೆ ಲಭಿಸುತ್ತಿದ್ದು, ರೈತರಿಗೆ ಆರ್ಥಿಕ ಭದ್ರತೆಯನ್ನು ಒದಗಿಸಿರುವುದಲ್ಲದೆ ಸ್ಥಳೀಯ ಆಹಾರ ಧಾನ್ಯಗಳಿಗೆ ಪ್ರೋತ್ಸಾಹವನ್ನು ನೀಡುತ್ತಿದೆ. ಒಟ್ಟಾರೆಯಾಗಿ ಅನ್ನಭಾಗ್ಯ ಯೋಜನೆಯು ಪಡಿತರ ಫಲಾನುಭವಿ ಕುಟುಂಬಗಳಿಗೆ ಆಹಾರ ಭದ್ರತೆ ನೀಡಿ ಜೀವನಮಟ್ಟವನ್ನು ಸುಧಾರಿಸಿ ಘನತೆಯ ಬದುಕನ್ನು ಖಾತರಿಪಡಿಸಿದೆ.


ಅನ್ನಭಾಗ್ಯ ಯೋಜನೆಯೊಂದಿಗೆ 2017-18ನೇ ಸಾಲಿನಿಂದ “ದಾಸೋಹ ಯೋಜನೆ” ಜಾರಿ:

ಸರ್ಕಾರದ ಆದೇಶ ಸಂಖ್ಯೆ: ಆನಾಸ/14/ಆನಾಸ/2017 ದಿ: 20/5/2017 ರಲ್ಲಿ ಕೇಂದ್ರ ಸರ್ಕಾರವು 2017-18 ನೇ ಸಾಲಿಗೆ OWS (Other Welfare Scheme) ಯೋಜನೆಯಡಿ ನಾರಿನಿಕೇತನ, ವೃದ್ಧಾಶ್ರಮ, ಅನಾಥಾಶ್ರಮ, ಹಾಸ್ಟ್‍ಲ್‍ಗಳು, ನಿರಾಶ್ರಿತರ/ ಭಿಕ್ಷುಕರ ಪುನರ್ವಸತಿ ಕೇಂದ್ರಗಳಂತಹ ಕಲ್ಯಾಣ ಸಂಸ್ಥೆಗಳಿಗೆ ಹಂಚಿಕೆ ನೀಡುವ ಸಲುವಾಗಿ ಬಿಪಿಎಲ್ ದರಗಳಲ್ಲಿ ರಾಜ್ಯಕ್ಕೆ ಬಿಡುಗಡೆ ಮಾಡಿರುವ ಆಹಾರಧಾನ್ಯಗಳನ್ನು ಖರೀದಿಸಿ “ದಾಸೋಹ” ಯೋಜನೆಯಡಿ ರಾಜ್ಯದ ಮೇಲ್ಕಂಡ ಕಲ್ಯಾಣ ಸಂಸ್ಥೆಗಳಿಗೆ ಉಚಿತವಾಗಿ ವಿತರಿಸಲು ಆದೇಶಿಸಿರುವ ಮೇರೆಗೆ, ಸಂಸ್ಥೆಗಳ ಪ್ರತಿ ನಿವಾಸಿಗೆ 10 ಕೆ.ಜಿ ಅಕ್ಕಿ ಹಾಗೂ 5 ಕೆ.ಜಿ ಗೋಧಿಯಂತೆ ಒಟ್ಟು 15 ಕೆ.ಜಿ ಆಹಾರಧಾನ್ಯವನ್ನು ಸೆಪ್ಟೆಂಬರ್ 2017 ರಿಂದ ಹಂಚಿಕೆ ನೀಡಲಾಗುತ್ತಿದೆ. ಹಂಚಿಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯನ್ನು ಅಳವಡಿಸುವ ಸಲುವಾಗಿ ಅರ್ಹ ಕಲ್ಯಾಣ ಸಂಸ್ಥೆಗಳ ಆನ್‍ಲೈನ್ ನೋಂದಣಿಗೆ ಕ್ರಮ ಕೈಗೊಳ್ಳಲಾಗಿದ್ದು, ನೋಂದಾಯಿತ ಸಂಸ್ಥೆಗಳಲ್ಲಿನ ನಿವಾಸಿಗಳ ಆಧಾರ್ ಮತ್ತು ಬಯೋಮೆಟ್ರಿಕ್ ಮಾಹಿತಿಯನ್ನು ಸಹ ಕಲ್ಯಾಣ ಸಂಸ್ಥೆ ಹಂಚಿಕೆಗಾಗಿ ಎನ್.ಐ.ಸಿ. ಸಂಸ್ಥೆ ಮುಖಾಂತರ ಸಿದ್ಧಪಡಿಸಲಾದ ದತ್ತಾಂಶ ದಲ್ಲಿ ಅಳವಡಿಸಲಾಗಿರುತ್ತದೆ. ಇದಲ್ಲದೇ ದೈಹಿಕ ಮತ್ತು ಮಾನಸಿಕ ಅಂಗವಿಕಲತೆ ಅಥವಾ ಇನ್ನಿತರೇ ಯಾವುದೇ ನೈಜ ಕಾರಣಗಳಿಗಾಗಿ ಆಧಾರ್ ಲಭ್ಯವಿರದ ಮತ್ತು ಬಯೋಮೆಟ್ರಿಕ್/ಐರಿಸ್ ನೀಡಲಾಗದ ನಿವಾಸಿಗಳಿಗೆ ತಂತ್ರಾಂಶದಲ್ಲಿ ವಿನಾಯಿತಿ ನೀಡಲಾಗಿರುತ್ತದೆ. ಖಚಿತ ನಿವಾಸಿಗಳನ್ನು ಒದಗಿಸಲಾಗದ ಕೆಲವು ಸಂಸ್ಥೆಗಳಾದ ಕಿದ್ವಾಯಿ ಆಸ್ಟತ್ರೆಗೆ ಸಂಬಂಧಿಸಿದ ಧರ್ಮಶಾಲೆ, ರಿಮ್ಯಾಂಡ್ ಹೋಂಗಳು, ಸಂತ್ರಸ್ತ ಮಹಿಳಾ ವಸತಿ ನಿಲಯಗಳು ಇತ್ಯಾದಿಗಳಿಗೆ ವಿನಾಯಿತಿ ಒದಗಿಸಲು ಕ್ರಮ ಕೈಗೊಳ್ಳಲಾಗಿರುತ್ತದೆ. ಡಿಸೆಂಬರ್ 2017ರ ಮಾಹೆಯಲ್ಲಿದ್ದಂತೆ ದಾಸೋಹ ಯೋಜನೆಯಡಿ ಒಟ್ಟು 413 ಸಂಸ್ಥೆಗಳ 27725 ನಿವಾಸಿಗಳಿಗೆ 277.25 ಮೆ.ಟನ್ ಅಕ್ಕಿ ಮತ್ತು 138.625 ಮೆ.ಟನ್ ಗೋಧಿ ಹಂಚಿಕೆಯನ್ನು ನೀಡಲಾಗಿರುತ್ತದೆ.

Post a Comment (0)
Previous Post Next Post