2010 ರಲ್ಲಿ ಪ್ರಪಂಚದ ಸ್ತ್ರೀ-ಪುರುಷರ ಪ್ರಮಾಣ 986 ಪ್ರತಿ ಸಾವಿರ ಪುರುಷರಿಗೆ ಇದ್ದು 2011 ರಲ್ಲಿ ಇದು 984 ಕೈ ಇಳಿದಿದೆ. ಲಾಟ್ವಿಯಾ (Latvia) ಇಸ್ಟೋನಿಯಾ(Estonia) ಪ್ರಪಂಚದಲ್ಲಿ ಅಧಿಕ ಲಿಂಗಾನುಪಾತ ಹೊಂದಿದ ರಾಷ್ಟ್ರಗಳಾಗಿವೆ ಈ ರಾಷ್ಟ್ರಗಳಲ್ಲಿ ಲಿಂಗಾನುಪಾತ ಪ್ರತಿಸಾವಿರ ಪುರಷರಿಗೆ 1174 ಸ್ತ್ರೀಯರಿರುವರು. ಇದಕ್ಕೆ ವಿರುದ್ಧವಾಗಿ ಯು.ಎ.ಇ. ಅತಿ ಕಡಿಮೆ ಲಿಂಗಾನುಪಾತ ಹೊಂದಿದ ರಾಷ್ಟ್ರವಾಗಿದೆ. ಈ ರಾಷ್ಟ್ರದಲ್ಲಿ ಪ್ರತಿ ಸಾವಿರ ಪುರುಷರಿಗೆ 468 ಸಿಯರು ಇರುವರು. ಪ್ರಪಂಚದ 139 ರಾಷ್ಟ್ರಗಳಲ್ಲಿ ಸ್ತ್ರೀಯರ ಸಂಖ್ಯೆ ಅಧಿಕವಿದ್ದು 72 ರಾಷ್ಟ್ರಗಳಲ್ಲಿ ಕಡಿಮೆ ಕಂಡುಬರುತ್ತದೆ. ಈ ಕೆಳಗಿನ ನಕ್ಷೆಯನ್ನು ವೀಕ್ಷಿಸಿದಾಗ ಯುರೋಪ್ ರಾಷ್ಟ್ರಗಳು, ಉತ್ತರ ಅಮೇರಿಕಾ, ರಶಿಯಾ, ಆಸ್ಟ್ರೇಲಿಯಾ ಮುಂತಾದ ರಾಷ್ಟ್ರಗಳಲ್ಲಿ ಲಿಂಗಾನುಪಾತ ಸೀಯರ ಪರವಾಗಿ ಕಂಡುಬಂದರೆ ಪೆಶಿಯಾ ಹಾಗೂ ಆಫ್ರಿಕಾ ಹಾಗೂ ದಕ್ಷಿಣ ಅಮೆರಿಕಾ ಖಂಡಗಳ ರಾಷ್ಟ್ರಗಳಲ್ಲಿ ಸ್ತ್ರೀಯರ ಪ್ರಮಾಣ ಪುರುಷರಿಗಿಂತ ಕಡಿಮೆ.
ಪ್ರಪಂಚದ ಲಿಂಗಾನುಪಾತ
October 26, 2021
0