ಸಮಾಜಶಾಸ್ತ್ರದ ಅಧ್ಯಯನ ವಿಷಯ (Subject Matter of Sociology)



ಸಮಾಜಶಾಸ್ತ್ರವು ಬಹಳ ಕಿರಿಯ ಸಮಾಜ ವಿಜ್ಞಾನವೆನಿಸಿಕೊಂಡಿದ್ದರೂ ಅದು ತನ್ನದೇ ಆದ ಅಧ್ಯಯನ ವಿಷಯ ಹಾಗೂ ಅಧ್ಯಯನ ಕ್ಷೇತ್ರವನ್ನು ಹೊಂದಿದೆ. "ಸಮಾಜಶಾಸ್ತ್ರ" ಎಂಬ ಪದವೇ ಸೂಚಿಸುವಂತೆ ಸಮಾಜವನ್ನು ಅಧ್ಯಯನ ಮಾಡುವುದೇ ಅದರ ಕಾರ್ಯ, ಮತ್ತು ಮಾನವನ ಸಾಮಾಜಿಕ ಜೀವನದ ಅಧ್ಯಯನವೇ ಅದರ ಗುರಿ. ಮಾನವನ ಸಾಮಾಜಿಕ ಜೀವನವು ಸಂಕೀರ್ಣವಾದುದು ಬೇರೆ-ಬೇರೆ ಸಮಾಜ ವಿಜ್ಞಾನಗಳು ಈ ಸಾಮಾಜಿಕ ಜೀವನದ ಬೇರೆ-ಬೇರೆ ಅಂಶಗಳನ್ನು ಕುರಿತು ಆಳವಾಗಿ ಅಧ್ಯಯನವನ್ನು ಮಾಡುತ್ತವೆ. ಉದಾಹರಣೆಗೆ: ರಾಜ್ಯಶಾಸ್ತ್ರವು ಮಾನವನ ರಾಜಕೀಯ ಚಟುವಟಿಕೆಗಳನ್ನು ಅಧ್ಯಯನ ಮಾಡುವುದಾದರೆ ಆರ್ಥಶಾಸ್ತ್ರವು ಆತನ ಆರ್ಥಿಕ ಚಟುವಟಿಕೆಯನ್ನು ಅಭ್ಯಾಸ ಮಾಡುತ್ತದೆ. ಆದರೆ ಸಮಾಜಶಾಸ್ತ್ರವು ಮಾತ್ರ ಮಾನವನ ಸಾಮಾಜಿಕ ಜೀವನದ ಸಮಗ್ರ ಅಧ್ಯಯನವನ್ನು ಮಾಡುವುದರಿಂದ ಸಮಾಜಶಾಸ್ತ್ರದ ಅಧ್ಯಯನ ಕ್ಷೇತ್ರವು ಬಹಳ ವಿಸ್ತಾರವಾದುದು.

ಸಮಾಜಶಾಸ್ತ್ರದ ಅಧ್ಯಯನವು ಸರ್ವವ್ಯಾಪಕವಾಗಿ ಬೆಳೆಯುತ್ತಿದೆ. ಮತ್ತು ಅದರ ಅಧ್ಯಯನದ ಕ್ಷೇತ್ರ ಕೂಡ ವಿಸ್ತಾರಗೊಳ್ಳುತ್ತಿದೆ. ಸಮಾಜಶಾಸ್ತ್ರದ ಅಧ್ಯಯನ ವಿಷಯಗಳ ಬಗ್ಗೆ ಅಲೆಕ್ಸ್ ಇಂಕಲ್ಪರವರು “ವಾಟ್ ಈಸ್ ಸೋಸಿಯಾಲಜಿ?" ಎಂಬ ಕೃತಿಯಲ್ಲಿ ಅವರು ನೀಡಿರುವ ವಿವರಣೆಯ ಆಧಾರದ ಮೇಲೆ ಸಮಾಜಶಾಸ್ತ್ರದ ಮುಖ್ಯವಾದ ಅಧ್ಯಯನ ವಿಷಯಗಳನ್ನು ಈ ಕೆಳಕಂಡಂತೆ ಪಟ್ಟಿ ಮಾಡಬಹುದು.

ಮಾನವ ಸಮಾಜ ಮತ್ತು ಸಂಸ್ಕೃತಿಯ ಸಮಾಜಶಾಸ್ತ್ರೀಯ ವಿಶ್ಲೇಷಣೆ:

ಸಮಾಜಶಾಸ್ತ್ರದ ಮುಖ್ಯ ಉದ್ದೇಶವು ಸಮಾಜ ಮತ್ತು ಸಂಸ್ಕೃತಿಗಳ ಬಗ್ಗೆ “ಸಮಾಜಶಾಸ್ತ್ರೀಯ ದೃಷ್ಟಿಕೋನ"

ಯಿಂದ ಕೂಡಿದ ವಿಶ್ಲೇಷಣೆಯೊಂದನ್ನು ನೀಡುವುದಾಗಿರುತ್ತದೆ. ಸಮಾಜ ಮತ್ತು ಸಂಸ್ಕೃತಿಗಳ ವಿಕಾಸಾತ್ಮಕ


ಬೆಳವಣಿಗೆ ಮತ್ತು ಈ ಬೆಳವಣಿಗೆಯ ಪ್ರಕ್ರಿಯೆಯಲ್ಲಿನ ಪ್ರಮುಖವಾದ ಹಂತಗಳ ಕುರಿತಾಗಿಯೂ ಅದು ಅಧ್ಯಯನ ಮಾಡುವುದು, ಸಮಾಜದ ಐತಿಹಾಸಿಕವಾಗಿ ರೂಪಾಂತರಗೊಳ್ಳುತ್ತಾ ಬಂದಿರುವುದಕ್ಕೆ ಕಾರಣವಾದ ಶಕ್ತಿಗಳ ಬಗ್ಗೆಯೂ ಅದು ವಿಶ್ಲೇಷಿಸುವುದು, ಸಮಾಜಶಾಸ್ತ್ರವು ಇಂತಹ ವಿಶ್ಲೇಷಣಾತ್ಮಕ ಅಧ್ಯಯನದಲ್ಲಿ ವೈಜ್ಞಾನಿಕ ವಿಧಾನವನ್ನು ಬಳಸುವುದರ ಅಗತ್ಯದ ಬಗ್ಗೆ ವಿಶೇಷ ಒತ್ತು ನೀಡುವುದು.

ಸಾಮಾಜಿಕ ಜೀವನದ ಮೂಲಭೂತ ಘಟಕಗಳ ಅಧ್ಯಯನ: ನಮ್ಮ ಸಾಮಾಜಿಕ ಜೀವನದ ಬಹು ಮುಖ್ಯವಾದ ಘಟಕಗಳೆಲ್ಲವೂ ಇಲ್ಲಿ ಅಧ್ಯಯನದ ವಿಷಯಗಳಾಗುತ್ತವೆ.

ಉದಾ: ಸಾಮಾಜಿಕ ಕ್ರಿಯೆಗಳು, ಸಾಮಾಜಿಕ ಸಂಬಂಧಗಳು, ವ್ಯಕ್ತಿಯ ವ್ಯಕ್ತಿತ್ವ, ಎಲ್ಲಾ ಬಗೆಯ ಸಮೂಹಗಳು ಗ್ರಾಮ, ನಗರ, ಹಾಗೂ ಆದಿವಾಸಿ ಸಮುದಾಯಗಳು, ಸಂಘಗಳು, ಸಂಘಟನೆಗಳು, ಮತ್ತು ಜನಸಂಖ್ಯೆ ಎಲ್ಲವೂ ಸಮಾಜಶಾಸ್ತ್ರದ ವ್ಯಾಪ್ತಿಗೆ ಬರುತ್ತದೆ.

3. ಮೂಲಭೂತ ಸಾಮಾಜಿಕ ಸಂಸ್ಥೆಗಳ ಅಧ್ಯಯನ:

ಮಾನವನ ಸಾಮಾಜಿಕ ಜೀವನಕ್ಕೆ ಆಧಾರಪ್ರಾಯವಾಗಿರುವ ಪ್ರಾಥಮಿಕ ಸಂಸ್ಥೆಗಳು, ಅವುಗಳ ಬೆಳವಣಿಗೆ, ರಚನೆ, ಮತ್ತು ಕಾರ್ಯ ಇವು ಇಲ್ಲಿನ ಅಧ್ಯಯನದ ಕೇಂದ್ರ ವಿಷಯಗಳಾಗಿರುತ್ತವೆ. ಉದಾ: ಕುಟುಂಬ ಬಂಧುತ್ವ, ಧರ್ಮ, ಆಸ್ತಿ, ಆರ್ಥಿಕ, ರಾಜಕೀಯ, ಶೈಕ್ಷಣಿಕ, ವೈಜ್ಞಾನಿಕ, ಮನೋರಂಜನಾತ್ಮಕ, ಕಾನೂನಾತ್ಮಕ ಹಾಗೂ ಸಾಮಾಜಿಕ ಕಲ್ಯಾಣಾತ್ಮಕ ರೂಪದ ಸಂಸ್ಥೆಗಳು ಈ ವಲಯದಲ್ಲಿ ಬರುತ್ತವೆ.

ಮೂಲಭೂತ ಸಾಮಾಜಿಕ ಪ್ರಕ್ರಿಯೆಗಳ ಅಧ್ಯಯನ:

ನಮ್ಮ ಸಾಮಾಜಿಕ ಜೀವನವನ್ನು ನಾನಾ ರೂಪದ ಸಾಮಾಜಿಕ ಪ್ರಕ್ರಿಯೆಗಳು ನಿರ್ವಹಿಸುವ ಮಹತ್ತರವಾದ ಪಾತ್ರವನ್ನು ಅವಗಣಿಸುವಂತಿಲ್ಲ. ಉದಾ: ಸಹಕಾರ, ಸರ್ಧೆ, ಸಂಘರ್ಷ, ಹೊಂದಾಣಿಕೆ, ಸ್ವಾಂಗೀಕರಣ ಇವುಗಳ ಜೊತೆಗೆ ಸಂವಹನ, ಸಾಮಾಜಿಕ ಪರಿವರ್ತನೆ, ಸಾಮಾಜಿಕ ಪ್ರಭೇದ, ಮತ್ತು ಸಾಮಾಜಿಕ ಸ್ತರವಿನ್ಯಾಸ, ಸಾಮಾಜೀಕರಣ, ತತ್ವಬೋಧನೆ, ಸಾಮಾಜಿಕ ನಿಯಂತ್ರಣ, ಸಾಮಾಜಿಕ ಅಪವರ್ತನೆ, ಸಾಮಾಜಿಕ ಸಮಗ್ರತೆ ಮುಂತಾದ ಪ್ರಕ್ರಿಯೆಗಳೂ ಸಮಾಜಶಾಸ್ತ್ರೀಯ ಅಧ್ಯಯನದ ಪ್ರಮುಖ ವಿಷಯಗಳಾಗಿವೆ.

ಅಲೆಕ್ಸ್ ಇಂಕೆಲಸ್ ಉಲ್ಲೇಖಿಸಿದಂತಹ ಈ ಮೇಲಿನ ನಾಲ್ಕು ಅಂಶಗಳ ಜೊತೆಗೆ ಇನ್ನೂ ಮೂರು ವಿಷಯಗಳ ಬಗ್ಗೆಯೂ ಇತ್ತೀಚೆಗೆ ಸಮಾಜಶಾಸ್ತ್ರೀಯ ಅಧ್ಯಯನಗಳಲ್ಲಿ ವಿಶೇಷ ಒತ್ತು ನೀಡಲಾಗುತ್ತದೆ. ಅವು ಈ ಕೆಳಗಿನಂತಿವೆ.

5, ವಿಶೇಷಾಧ್ಯಯನ ಕ್ಷೇತ್ರಗಳ ಶೋಧನೆ:

ಸಮಾಜಶಾಸ್ತ್ರವು ವ್ಯಾಪಕವಾಗಿ ಬೆಳೆಯುತ್ತಿರುವ ವಿಜ್ಞಾನವಾಗಿದ್ದು, ಮಾನವನ ಸಾಮಾಜಿಕ ಜೀವನದ ಬೇರೆ-ಬೇರೆ ಕ್ಷೇತ್ರಗಳನ್ನು ತನ್ನ ಅಧ್ಯಯನದ ಬೇರೆ-ಬೇರೆ ಘಟಕಗಳನ್ನಾಗಿ ಮಾಡಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಅದು ವಿಶೇಷಾಧ್ಯಯನ ಕ್ಷೇತ್ರಗಳ ಸ್ಥಾಪನೆಗೆ ಹಾಗೂ ಬೆಳವಣಿಗೆಗೆ ಅವಕಾಶ ಕಲ್ಪಿಸಿಕೊಂಡಿದೆ. ಈಗಾಗಲೇ ಅಂತಹ ಹಲವು ಕ್ಷೇತ್ರಗಳು ಸಮಾಜಶಾಸ್ತ್ರದ ಅಧಿಕೃತ ಶಾಖೆಗಳಾಗಿ ಬೆಳವಣಿಗೆ ಹೊಂದಿದ್ದು ಸಾಕಷ್ಟು ಪ್ರಾಯೋಗಿಕ ಪ್ರಾಮುಖ್ಯತೆ ಗಳಿಸಿವೆ.

ಉದಾ: ಕುಟುಂಬ ಸಮಾಜಶಾಸ್ತ್ರ, ರಾಜಕೀಯ ಸಮಾಜಶಾಸ್ತ್ರ, ಧಾರ್ಮಿಕ ಸಮಾಜಶಾಸ್ತ್ರ, ಆರ್ಥಿಕ ಸಮಾಜಶಾಸ್ತ್ರ, ಶೈಕ್ಷಣಿಕ ಸಮಾಜಶಾಸ್ತ್ರ, ಕೈಗಾರಿಕಾ ಸಮಾಜಶಾಸ್ತ್ರ ಇವುಗಳು ಇಲ್ಲಿ ಉದಾಹರಣೆಗಳು

1 Comments

Post a Comment
Previous Post Next Post