ಸಮಾಜಶಾಸ್ತ್ರ ಮತ್ತು ಸಾಮಾನ್ಯಜ್ಞಾನ (Sociology and Commonsense) :



ಹಲವಾರು ಸಾಮಾಜಿಕ ಸಂದರ್ಭಗಳಲ್ಲಿ ಸಮಾಜಶಾಸ್ತ್ರ ನಮೆಗೆಲ್ಲ ಚಿರಪರಿಚಿವಾದ ವಿವಿಧ ಸಾಮಾಜಿಕ ಘಟನೆಗಳ ಬಗ್ಗೆ ಅಧ್ಯಯನ ಮಾಡುತ್ತದೆ ಎಂದು ಪರಿಗಣಿಸಲಾಗಿತ್ತು. ನಾವೆಲ್ಲ ದೈನಂದಿನ ಜೀವನದಲ್ಲಿ ಅನುಭವಿಸುವ ಸಾಮಾಜಿಕ ಸಂಗತಿಗಳನ್ನು ವಿಶ್ಲೇಷಿಸುತ್ತದೆ ಹಾಗೆಯೇ ಇವೆಲ್ಲಾ ಸಾಮಾಜಿಕ ಸಂಗತಿಗಳು ನಮ್ಮದೇ ಚಿರಪರಿಚಿತವಾದ ಜೀವನ ಜ್ಞಾನಭಂಡಾರವಾಗಿದೆ.ಉದಾ:- ಕೌಟುಂಬಿಕ ಒಡನಾಟ, ವೈವಾಹಿಕ ಕ್ರಿಯಾವಿಧಿಗಳು ಮತ್ತು ಸಂಬಂಧಗಳು ಧಾರ್ಮಿಕ ಆಚರಣೆಗಳು, ದೈನಂದಿನ ಸಾಮಾಜಿಕ ಸಮಸ್ಯೆಗಳು,ದುಡಿಮೆಯ ಕ್ಷೇತ್ರಗಳಲ್ಲಿ ವಿವಿಧ ಪಾತ್ರ ನಿರ್ವಹಣೆ ಹೀಗೆ ನಾನಾ ಸಾಮಾಜಿಕ ಸಂಗತಿಗಳು ಬಗ್ಗೆ ಬೆಳಕು ಚೆಲ್ಲುತ್ತದೆ. ಇವೆಲ್ಲಾ ಸಾಮಾಜಿಕ ಸಂಗತಿಗಳು ಕೆಲವೊಮ್ಮೆ ನಿಖರತೆ ಮತ್ತು ಸಮರೂಪತೆ ಆಧಾರವಾಗಿಯಿರುತ್ತದೆ, ಆದರೆ ಕೆಲವೊಮ್ಮೆ ಆದೇ ನಿಖರತೆ ಮತ್ತು ಸಮರೂಪತೆಯನ್ನು ಹೊಂದಿರದ ವಿಸ್ಮಯ ಮತ್ತು ಅಚ್ಚರಿಯನ್ನು ಮೂಡಿಸುತ್ತದೆ. ವಿವಿಧ ಸಾಮಾಜಿಕ ಸಂಗತಿಗಳ ಹೀಗೆ ಎಂಬುದು ಸಮಾಜದ ಸದಸ್ಯರ ಸಾಮಾನ್ಯವಾದ ನಂಬಿಕೆಯಾಗಿರುತ್ತದೆ ಎಂಬ ಭಾವನೆಯನ್ನು ಹಂಚಿಕೊಂಡಿರುತ್ತದೆ. ಜಗತ್ತಿನ ಭೌಗೋಳಿಕ, ಸಾಂಸ್ಕೃತಿಕ, ಧಾರ್ಮಿಕ, ಕೌಟುಂಬಿಕ, ವೈವಾಹಿಕ-ಹೀಗೆ ಹಲವಾರು ಹೀಗಿರುತ್ತದೆ. ಮತ್ತು ಹೀಗೆಯಿರಬೇಕೆಂಬ ನಂಬಿಕೆಯನ್ನು ಜನರು ಹಂಚಿಕೊಂಡಿಯಿರುವುದೇ ಸಾಮಾನ್ಯ ಜ್ಞಾನವಾಗಿದೆ. ಇವೆಲ್ಲಾ ಸಮಾಜದ ಸದಸ್ಯರು ಸರ್ವೇ ಸಾಮಾನ್ಯವಾಗಿ ಹಂಚಿಕೊಂಡಿಯಿರುವ ಸಮಗ್ರ ಮನೋಭಾವನೆಯಾಗಿದೆ. ಇಂತಹ ಸಾಮಾನ್ಯಜ್ಞಾನದಿಂದ ತಮ್ಮ ಸುತ್ತಮುತ್ತಲಿನ ನೈಸರ್ಗಿಕ ಮತ್ತು ಸಾಮಾಜಿಕ ಸಂಗತಿಗಳನ್ನು ವಿಶ್ಲೇಷಿಸಿ ಅರ್ಥೈಸಿ ಕೊಂಡಿರುತ್ತಾರೆ.

ಉದಾ;- ಪ್ರಾಚೀನ ಕಾಲದಲ್ಲಿ ವಿಶ್ವ" ವೂ ಚಪ್ಪಟೆಯಾಗಿದೆ ಎಂಬ ಮನೋಭಾವನೆಯನ್ನು ಹಂಚಿಕೊಂಡಿದ್ದರು. ಇಂದಿಗೂ ಕೆಲವು ಮಂದಿ ಈ ದೃಷ್ಟಿಕೋನವನ್ನು ಸಮರ್ಥಿಸಿಕೊಂಡಿದ್ದಾರೆ. ಇಂತಹ ದೃಷ್ಟಿಕೋನವನ್ನು ವೃತಗೋರಸ್ ಮತ್ತು ಅರಿಸ್ಟಾಟಲ್‌ರವರು ದಿಕ್ಕರಿಸುತ್ತಾ ವಿಶ್ವವು ದುಂಡಾಗಿದೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಸಾವಿರಾರು ವರ್ಷಗಳಿಂದ ಜನರ ಸಾಮಾನ್ಯಜ್ಞಾನ ಸಂಗ್ರಹಗೊಂಡಿದೆ. ಅವುಗಳಲ್ಲಿ ನೈಸರ್ಗಿಕ ಮತ್ತು ಸಾಮಾಜಿಕ ಸಂಗತಿಗಳ ಅಂಶವಾಗಿದೆ. ಉದಾ;- ದೊಡ್ಡ ವಸ್ತುಗಳು ಚಿಕ್ಕ ವಸ್ತುಗಳಿಕ್ಕಿಂತ ಹೆಚ್ಚು ರಭಸವಾಗಿ ಕೆಳಗೆ ಬೀಳುತ್ತದೆ. ದೈಹಿಕ ಚಳೆಯು ಶೀತಲ ವಾತಾವರಣದಿಂದ ಸಂಭವಿಸುತ್ತದೆ, ಸ್ತ್ರೀಯರಿಗೆ ಸಂತಾನ ಅಭಿಲಾಷೆ ಅಂತುಕ ಬಯಕೆಯಾಗಿದೆ. ಆಧುನಿಕ ಶಿಕ್ಷಣ ವ್ಯಾಪಕವಾಗಿ ಹರಡಿದಂತೆ ವರದಕ್ಷಿಣೆ ಮತ್ತು ಜಾತಿ, ಅಸಮಾನತೆ ಕ್ಷೀಣಿಸುತ್ತದೆ ಆದರೆ ಇಂದಿನ ಸಾಮಾಜಿಕ ಸನ್ನಿವೇಶಗಳನ್ನು ಸೂಕ್ತವಾಗಿ ಅವಲೋಕಿಸಿದಾಗ ಇಂತಹ ಮನೋಭಾವನೆಗಳು ಅಸತ್ಯವಾಗಿವೆ ಎಂಬುದು ಭರವಾಗಿದೆ. ಒಟ್ಟಾರೆ ಸಾಮಾನ್ಯಜ್ಞಾನವು ಕಾಲಕ್ರಮೇಣ ಯಾವಾಗಲೂ "ಸತ್ಯ" ಮತ್ತು "ಪ್ರಸಕ್ತ” ಎನ್ನಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬುದು ಸೂಕ್ಷ್ಮ ಆವಲೋಕನಗಳು ಸ್ಪಷ್ಟ ಪಡಿಸಿದೆ. ಸಾಮಾನ್ಯಜ್ಞಾನ ಕೆಲವೊಮ್ಮೆ ಸುಳ್ಳು ಮತ್ತು ಅಪ್ರಸಕ್ತವೆಂಬ ಫಲಿತಾಂಶಗಳನ್ನು ನೀಡುತ್ತದೆ. ಬಹುತೇಕ ಸಾಮಾನ್ಯಜ್ಞಾನಗಳ ಧೃಡೀಕರಣಗಳು,


ಊಹೆಗಳು, ಅಜ್ಞಾನ, ಪೂರ್ವಗ್ರಹ ಪೀಡಿತ, ತಪ್ಪು ವಿಶ್ಲೇಷಣೆ, ವಿಚಿತ್ರ ಆಕಸ್ಮಿಕ ಸಂಗತಿ, ಕಾಕತಾಳೀಯ ಮುಂತಾದಗಳ ಆಧಾರವಾಗಿದೆ.

ಜಗತ್ತಿನ ವಿವಿಧ ಸಮಾಜಗಳನ್ನು ಅಧ್ಯಯನ ನಡೆಸುವಾಗ ಸಾಮಾನ್ಯಜ್ಞಾನವನ್ನು ಸಾರ್ವತ್ರೀಕರಣೇಸಲು ಸಾಧ್ಯವಿಲ್ಲ. ಅಂತಹ ಸಂದರ್ಭಗಳಲ್ಲಿ ಹಾದಿ ತಪ್ಪಿಸುವ ಪ್ರಯತ್ನವು ನಡೆಯುತ್ತದೆ. ಏಕೆಂದರೆ ಯಾವುದೇ ವ್ಯಕ್ತಿಗಳು ತಮ್ಮ ಸಾಮಾಜಿಕ ವ್ಯವಸ್ಥೆಯ ಹಿನ್ನಲೆಯಲ್ಲಿ ಇನ್ನಿತರ ಸಮಾಜವನ್ನು ಅರ್ಥೈಸಿಕೊಳ್ಳಲು ಪ್ರಯತ್ನಿಸುತ್ತಾರೆ. ಉದಾ:- ಗೂಬೆಯನ್ನು ಶುಭಶಕುನವೆಂದು ಪರಿಗಣಿಸುವ ಸಮೂಹಗಳು, ಇಲಿಗಳನ್ನು ಆರಾಧಿಸುವ ಜನಸಮೂಹ ಹಾಗೂ ಅದಕ್ಕಾಗಿಯೇ ದೇವಾಲಯವನ್ನು ನಿರ್ವಹಿಸಿರುವ ಭಕ್ತರ ವೃಂದ, ಲೈಂಗಿಕ ಕ್ರಿಯೆಗಳಿಗೆ ಮುಕ್ತವಾಗಿರುವ ವೈವಾಹಿಕ ಪದ್ಧತಿಗಳು - ಹೀಗೆ ಹಲವಾರು ವಿಸ್ಮಯ ಸಂಗತಿಗಳು ನಮ್ಮದೇ ಸಾಮಾನ್ಯ ಜ್ಞಾನಕ್ಕಿಂತ ವಿಭಿನ್ನವಾಗಿದ್ದು, ಅಚ್ಚರಿ ಮೂಡಿಸುತ್ತದೆ. ಸಮಾಜಶಾಸ್ತ್ರಜ್ಞರು ಇನ್ನಿತರ ವಿಜ್ಞಾನಗಳಂತೆ ಯಾವುದೇ ಸಾಮಾಜಿಕ ಸಂಗತಿಯನ್ನು ಸತ್ಯಾಂಶವೆಂದು ಸುಲಭವಾಗಿ ಪರಿಗಣಿಸುವುದಿಲ್ಲ ಏಕೆಂದರೆ ಪ್ರತಿಯೊಬ್ಬರಿಗೂ ಸಾಮಾಜಿಕ ಸಂಗತಿಗಳ ವಾಸ್ತವಿಕತೆ ಬಗ್ಗೆ ಸಂಪೂರ್ಣ ಅರಿವು ಹೊಂದಿರುತ್ತಾರೆ ಆದರೆ ಪ್ರತಿಯೊಂದು ಸಾಮಾಜಿಕ ಸಂಗತಿಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದ ನಂತರ ಧೃಡೀಕರಣೆದೊಂದಿಗೆ ದಾಖಲಿಸುವ ಅನಿವಾರ್ಯಯತೆ ಇದೆ. ಸಮಾಜಶಾಸ್ತ್ರವೂ ಸಾಮಾಜಿಕದಲ್ಲಿ ಒಳಗೊಂಡಿಯಿರುವ ವಿವಿಧ ಸಾಮಾನ್ಯಜ್ಞಾನದ ಮೂಲ ಪ್ರಭವ ಮತ್ತು ಸತ್ಯಾಂಶಗಳನ್ನು ಅರ್ಥೈಸಿಕೊಂಡು ವಿಶ್ಲೇಷಿಸುವ ಹೊಣೆಗಾರಿಕೆಯನ್ನು ಹೊಂದಿದೆ.
Next Post Previous Post
No Comment
Add Comment
comment url